ಚಿನ್ನುಮರಿ ಜಾಹ್ನವಿಗೆ ಮೊಲದ ಮರಿ ಗಿಫ್ಟ್‌ ಕೊಟ್ಟ ಜಯಂತ್‌, ಇದ್ನ ಕುಕ್ಕರ್‌ಗೆ ಹಾಕಿ ಕೂಗಿಸಬೇಡ ಎಂದ ವೀಕ್ಷಕರು; ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಚಿನ್ನುಮರಿ ಜಾಹ್ನವಿಗೆ ಮೊಲದ ಮರಿ ಗಿಫ್ಟ್‌ ಕೊಟ್ಟ ಜಯಂತ್‌, ಇದ್ನ ಕುಕ್ಕರ್‌ಗೆ ಹಾಕಿ ಕೂಗಿಸಬೇಡ ಎಂದ ವೀಕ್ಷಕರು; ಲಕ್ಷ್ಮೀ ನಿವಾಸ ಧಾರಾವಾಹಿ

ಚಿನ್ನುಮರಿ ಜಾಹ್ನವಿಗೆ ಮೊಲದ ಮರಿ ಗಿಫ್ಟ್‌ ಕೊಟ್ಟ ಜಯಂತ್‌, ಇದ್ನ ಕುಕ್ಕರ್‌ಗೆ ಹಾಕಿ ಕೂಗಿಸಬೇಡ ಎಂದ ವೀಕ್ಷಕರು; ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಅಕ್ಟೋಬರ್‌ 30ರ ಸಂಚಿಕೆಯಲ್ಲಿ ಭಾವನಾ , ಸಿದ್ದೇಗೌಡ್ರು ಊಟ ಮುಗಿಸಿ ವಾಪಸ್‌ ಹೋಗುತ್ತಾರೆ. ಭಾವನಾ ಮತ್ತೆ ಕೆಲಸಕ್ಕೆ ಹೋಗಲು ಶುರುಮಾಡುತ್ತಾಳೆ. ಇತ್ತ ಸೈಕೋ ಜಯಂತ್‌ ಹೆಂಡತಿ ಜಾಹ್ನವಿಗಾಗಿ ಮೊದಲ ಮರಿಯನ್ನು ಗಿಫ್ಟ್‌ ನೀಡುತ್ತಾನೆ.

 ಲಕ್ಷ್ಮೀ ನಿವಾಸ ಧಾರಾವಾಹಿ ಅಕ್ಟೋಬರ್‌ 30ರ ಸಂಚಿಕೆಯಲ್ಲಿ ಹೆಂಡತಿಗೆ ಮೊದಲ ಮರಿ ಗಿಫ್ಟ್‌ ನೀಡಿದ ಜಯಂತ್‌
ಲಕ್ಷ್ಮೀ ನಿವಾಸ ಧಾರಾವಾಹಿ ಅಕ್ಟೋಬರ್‌ 30ರ ಸಂಚಿಕೆಯಲ್ಲಿ ಹೆಂಡತಿಗೆ ಮೊದಲ ಮರಿ ಗಿಫ್ಟ್‌ ನೀಡಿದ ಜಯಂತ್‌ (PC: Zee Kannada Facebook)

Lakshmi Nivasa Serial: ಭಾವನಾ, ಸಿದ್ದೇಗೌಡ್ರು ಊಟ ಮುಗಿಸಿ ಮನೆಗೆ ವಾಪಸ್‌ ಹೊರಡುತ್ತಾರೆ. ಅಕ್ಕನನ್ನು ಮಿಸ್‌ ಮಾಡಿಕೊಂಡು ಜಾಹ್ನವಿ ಬೇಸರಗೊಳ್ಳುತ್ತಾಳೆ. ಹೆಂಡತಿ ಅಳುವುದನ್ನು ನೋಡಲಾಗದೆ ಜಯಂತ್‌ ಅವಳನ್ನು ಸಮಾಧಾನ ಮಾಡುತ್ತಾನೆ. ಮನೆ ಬಳಿ ಕಾರು ಹತ್ತಿ ಸಿದ್ದೇಗೌಡ್ರ ಪಕ್ಕ ಕೂರುವ ಭಾವನಾ ನಂತರ ಕಾರು ನಿಲ್ಲಿಸುವಂತೆ ಹೇಳಿ ಹಿಂದೆ ಕೂರುತ್ತಾಳೆ.

ಚಿನ್ನುಮರಿ ಜಾಹ್ನವಿಗೆ ಮೊಲ ಗಿಫ್ಟ್‌ ಮಾಡಿದ ಜಯಂತ್

ಇತ್ತ ಜಯಂತ್‌ ಹಾಗೂ ಜಾಹ್ನವಿ ಕೂಡಾ ಮನೆಗೆ ಹೊರಡಲು ಸಿದ್ದರಾಗುತ್ತಾರೆ. ತಂಗಿಯನ್ನು ಕಳಿಸಲು ಇಷ್ಟಪಡದ ವೆಂಕಿ ಕಣ್ಣೀರಿಡುತ್ತಾನೆ. ಅವನನ್ನು ನೋಡಿ ಜಯಂತ್‌, ನಾವು ಇನ್ಮುಂದೆ ಈ ಮನೆಗೆ ವಾಪಸ್‌ ಬರುವುದಿಲ್ಲವಂತೆ ವರ್ತಿಸುತ್ತಿದ್ಧಾರೆ. ಚಿಕ್ಕಂದಿನಲ್ಲೂ ಅಷ್ಟೇ ಯಾರಾದರೂ ಕ್ಲೋಸ್‌ ಆದ್ರೆ ಅವರನ್ನು ಬಿಟ್ಟಿರಲು ಇವನಿಗೆ ಆಗುತ್ತಿರಲಿಲ್ಲ ಎಂದು ಬಾಲ್ಯವನ್ನು ನೆನಪಿಸಿಕೊಳ್ಳುತ್ತಾನೆ. ನೀವು ಹೋಗ್ತಿರೋದು ನನಗೂ ಬೇಸರವಾಗುತ್ತಿದೆ ಎಂದು ವೆಂಕಿ ಹೆಂಡತಿ ಕೂಡಾ ಹೇಳುತ್ತಾಳೆ. ಏನು ಮಾಡೋದು ನನಗೆ ವೆಂಕಿ ಅಣ್ಣನಂತೆ ಅದೃಷ್ಟ ಇಲ್ಲ. ನೀವು ಮದುವೆ ಆದರೂ ಅಪ್ಪ ಅಮ್ಮನ ಜೊತೆ ಇರಬಹುದು. ಆದರೆ ನಮಗೆ ಆ ರೀತಿ ಅಲ್ಲ ಗಂಡನ ಮನೆಗೆ ಹೋಗಲೇಬೇಕು ಎನ್ನುತ್ತಾಳೆ.

ಗಂಡನ ಮನೆಯಲ್ಲಿ ಜಾಹ್ನವಿಗೆ ಒಂಟಿತನ ಕಾಡುತ್ತಿರುತ್ತದೆ. ಜಯಂತ್‌ ಆಫೀಸಿಗೆ ಹೋದ ನಂತರವಂತೂ ಏನು ಮಾಡಲು ತೋಚದೆ ಮನೆಯವರಿಗೆ, ಫ್ರೆಂಡ್‌ಗಳಿಗೆ ಕಾಲ್‌ ಮಾಡಿ ಮಾತನಾಡುತ್ತಾಳೆ. ಅದರೆ ಜಯಂತನಿಗೆ ಜಾಹ್ನವಿ ಯಾರ ಬಳಿಯೂ ಮಾತನಾಡುವುದು ಇಷ್ಟವಾಗುವುದಿಲ್ಲ. ಅದಕ್ಕಾಗೆ ಪ್ರೀತಿಯ ಹೆಂಡತಿಗೆ ಏನಾದರೂ ಗಿಫ್ಟ್‌ ಕೊಡಬೇಕು ಎಂದುಕೊಳ್ಳುತ್ತಾನೆ. ನಾನು ಆಫೀಸಿಗೆ ಹೋದಾಗ ನೀವು ಒಂಟಿಯಾಗುತ್ತೀರಿ, ಅದಕ್ಕೆ ನಿಮಗೊಂದು ಪಾರ್ಟ್ನರ್‌ ತಂದಿದ್ದೇನೆ ಎಂದು ಮೊಲದ ಮರಿಯನ್ನು ಜಾಹ್ನವಿ ಮುಂದೆ ಹಿಡಿಯುತ್ತಾನೆ. ಅದನ್ನೂ ನೋಡಿ ಜಾಹ್ನವಿ ಖುಷಿಯಾಗುತ್ತಾಳೆ.‌

ನನ್ನ ಮಗನಿಗೆ ಎಲ್ಲಿ ಗಂಟು ಬಿದ್ಲೋ ಎಂದು ಭಾವನಾಳನ್ನು ಬೈದುಕೊಂಡ ಜವರೇಗೌಡ

ಭಾವನಾಗೆ ಸೀರೆ ಗಿಫ್ಟ್‌ ಕೊಟ್ಟ ಹೆಂಡತಿ ವೀಣಾಗೆ ನಿನಗೆ ಅಷ್ಟು ದುಡ್ಡು ಎಲ್ಲಿಂದ ಬಂತು, ಆ ಸೀರೆ ಎಷ್ಟು ಎಂದು ಸಂತೋಷ್‌ ಕೇಳುತ್ತಾನೆ. ನನ್ನ ಅಮ್ಮ ಕೊಟ್ಟಿದ್ದು, ಸೀರೆ ಬೆಲೆ 2,500 ಎನ್ನುತ್ತಾಳೆ. ಅದನ್ನು ಕೇಳಿ ಸಂತೋಷನಿಗೆ ಶಾಕ್‌ ಆಗುತ್ತದೆ. ಅದರಿಂದ ನನ್ನ ಸ್ಕೂಟರ್‌ಗೆ ಒಂದು ತಿಂಗಳ ಪೆಟ್ರೋಲ್‌ ಬರುತ್ತೆ ಎಂದು ಉದ್ಘರಿಸುತ್ತಾನೆ. ರೈತ ತಾನು ಬೆಳೆದ ಬೆಳೆಯನ್ನು ತಾನೇ ತಿನ್ನುವುದಿಲ್ಲ, ಭೂಮಿತಾಯಿ ಮಳೆ ನೀರನ್ನು ಕುಡಿಯವುದಿಲ್ಲ, ಅದೇ ರೀತಿ ನಾವು ಸಂಪಾದನೆ ಮಾಡಿದ್ದನ್ನು ನಾವೇ ಇಟ್ಟುಕೊಳ್ಳಬೇಕು ಎಂಬ ಭಾವನೆ ಬಿಡಿ, ನಮ್ಮವರ ಬಳಿ ಅದನ್ನು ಹಂಚಿಕೊಳ್ಳಬೇಕು ಎನ್ನುತ್ತಾಳೆ.

ಮತ್ತೊಂದೆಡೆ ಭಾವನಾ ಮತ್ತೆ ಕೆಲಸಕ್ಕೆ ಹೊರಡುತ್ತಾಳೆ. ಅದನ್ನು ಕಂಡ ಜವರೇಗೌಡ್ರ ಹಿರಿಯ ಸೊಸೆ, ನಿಮಗೆ ಆರೋಗ್ಯ ಸರಿ ಇಲ್ಲ ಏಕೆ ಕೆಲಸಕ್ಕೆ ಹೋಗುತ್ತಿದ್ದೀರಿ, ಸಿದ್ದು ನಮ್ಮ ಮಾತು ಕೇಳುವುದಿಲ್ಲ ನೀವಾದರೂ ಕೇಳಿ ಎನ್ನುತ್ತಾಳೆ. ನನಗೆ ನನ್ನದೇ ಆದ ಜವಾಬ್ದಾರಿಗಳಿವೆ ಅದಕ್ಕಾದರೂ ಕೆಲಸಕ್ಕೆ ಹೋಗಬೇಕು ಎನ್ನುತ್ತಾಳೆ. ಇಬ್ಬರ ಮಾತನ್ನು ಕೇಳಿಸಿಕೊಳ್ಳುವ ಜವರೇಗೌಡ, ಅವಳಿಗೆ ನಾಟಕ ಮಾಡುವುದು ಚೆನ್ನಾಗಿ ಗೊತ್ತು, ಅದಕ್ಕೆ ನೀನು ಏನು ಮಾತನಾಡಿದರೂ ಸುಮ್ಮನಿದ್ದಾಳೆ ಎನ್ನುತ್ತಾನೆ. ಮಾವನ ಮಾತಿಗೆ ಭಾವನಾಗೆ ಬೇಸರವಾದರೂ ಏನೂ ಮಾತನಾಡದೆ ಸುಮ್ಮನೆ ಹೋಗುತ್ತಾಳೆ. ನನ್ನ ಮಗನಿಗೆ ಇವಳು ಎಲ್ಲಿಂದ ಗಂಟು ಬಿದ್ದಳೋ ಎಂದು ಜವರೇಗೌಡ ಗೊಣಗುತ್ತಾನೆ.

ಲಕ್ಷ್ಮೀ ನಿವಾಸ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner