ಮತ್ತೆ ಸಂಗೀತಾ ವಿನಯ್‌ ಜಗಳ; ಮೈಂಡ್‌ನಿಂದ ನನ್ನ ಹೆಸರು ಡಿಲೀಟ್‌ ಮಾಡು ಎಂದ ವಿನಯ್‌, ಸ್ಟೋರ್‌ ಆಗಿದ್ರೆ ತಾನೇ ಎಂದು ಕೌಂಟರ್‌ ಕೊಟ್ಟ ಸಂಗೀತಾ
ಕನ್ನಡ ಸುದ್ದಿ  /  ಮನರಂಜನೆ  /  ಮತ್ತೆ ಸಂಗೀತಾ ವಿನಯ್‌ ಜಗಳ; ಮೈಂಡ್‌ನಿಂದ ನನ್ನ ಹೆಸರು ಡಿಲೀಟ್‌ ಮಾಡು ಎಂದ ವಿನಯ್‌, ಸ್ಟೋರ್‌ ಆಗಿದ್ರೆ ತಾನೇ ಎಂದು ಕೌಂಟರ್‌ ಕೊಟ್ಟ ಸಂಗೀತಾ

ಮತ್ತೆ ಸಂಗೀತಾ ವಿನಯ್‌ ಜಗಳ; ಮೈಂಡ್‌ನಿಂದ ನನ್ನ ಹೆಸರು ಡಿಲೀಟ್‌ ಮಾಡು ಎಂದ ವಿನಯ್‌, ಸ್ಟೋರ್‌ ಆಗಿದ್ರೆ ತಾನೇ ಎಂದು ಕೌಂಟರ್‌ ಕೊಟ್ಟ ಸಂಗೀತಾ

Bigg Boss Kannada Season 10: ದೊಡ್ಮನೆ ರಣರಂಗವಾಗಿದೆ. ದಿನೇ ದಿನೆ ಸ್ಪರ್ಧಿಗಳ ನಡುವೆ ಜಗಳ ತಾರಕಕ್ಕೆ ಏರುತ್ತಿದೆ. ಸಣ್ಣ ಪುಟ್ಟ ವಿಚಾರಕ್ಕೂ ಸಂಗೀತಾ ಹಾಗೂ ವಿನಯ್‌ ಜಗಳ ದೊಡ್ಡದಾಗುತ್ತಲೇ ಇದೆ.

ತಾರಕಕ್ಕೆ ಏರಿದ ಸಂಗೀತಾ ವಿನಯ್‌ ಜಗಳ
ತಾರಕಕ್ಕೆ ಏರಿದ ಸಂಗೀತಾ ವಿನಯ್‌ ಜಗಳ (PC: JioCinema)

Bigg Boss Kannada Season 10: ಹರ ಹರ ಮಹಾದೇವ ಧಾರಾವಾಹಿಯಲ್ಲಿ ಜೊತೆಯಾಗಿ ನಟಿಸಿದ್ದ ವಿನಯ್‌ ಹಾಗೂ ಸಂಗೀತಾ ಬಿಗ್‌ ಬಾಸ್‌ ಮನೆಯಲ್ಲಿ ಸಹಸ್ಪರ್ಧಿಗಳಾಗಿದ್ದಾರೆ. ಮೊದಲ ದಿನವೇ ನಾಮಿನೇಶನ್‌ ವಿಚಾರವಾಗಿ ವಿನಯ್‌ ಹಾಗೂ ಸಂಗೀತಾ ನಡುವೆ ಜಗಳ ನಡೆದಿತ್ತು. ಇದೀಗ ಅವರಿಬ್ಬರ ನಡುವಿನ ಅಂತರ ಹೆಚ್ಚಾಗಿದೆ. ಇಬ್ಬರ ನಡುವಿನ ಜಗಳ ತಾರಕಕ್ಕೆ ಏರಿದೆ.

ಸಂಗೀತಾ ಬಿಟ್ಟು ಬರುವಂತೆ ಕಾರ್ತಿಕ್‌ಗೆ ಹೇಳಿದ್ದ ವಿನಯ್‌

ಬುಧವಾರದ ಎಪಿಸೋಡ್‌ನಲ್ಲಿ ವಿನಯ್‌, ಕಾರ್ತಿಕ್‌ ಬಳಿ ಹೋಗಿ ನೀನು ಯಾವಾಗಲೂ ಸಂಗೀತ ಜೊತೆ ಇರ್ತೀಯ ನಿನಗೆ 16 ಜನರಲ್ಲಿ ಬೇರೆ ಯಾರೂ ಕಾಣಿಸಲಿಲ್ವಾ? ನಾನಾ ಅಥವಾ ಅವಳಾ ಎಂದು ಕೇಳುತ್ತಾರೆ. ಇದರ ಬೆನ್ನಲ್ಲೇ ಮತ್ತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನನ್ನನ್ನು ಎಲ್ಲರೂ ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ನಿನ್ನೆ ಸಂಗೀತಾ ಕಣ್ಣೀರು ಹರಿಸಿದ್ದರು. ಆದರೆ ಇಂದು ವಿನಯ ಪಾಳಿ. ಇದುವರೆಗೂ ಸ್ಟ್ರಾಂಗ್ ಆಗಿಯೇ ಇದ್ದ ವಿನಯ್‌ ಕಣ್ಣುಗಳಲ್ಲಿ ಇಂದು ನೀರು ಉಕ್ಕಿದೆ. ಹಾಗೆಯೇ ಅವರ ಧ್ವನಿಯೂ ಜೋರಾಗಿದೆ. ಅವಳು ನನ್ನಿಂದ ಡಿಪ್ರೆಶನ್‌ಗೆ ಹೋಗ್ತಿದಾಳೆ ಅಂತಾರೆ. ಅವ್ಳು ನೋಡಿದ್ರೆ ನನ್ನಿಂದ ಥ್ರೆಟ್ ಇದೆ ಅಂತಿದಾಳೆ. ಯಾರಿಗ್ ಏನ್ ಮಾಡಿದೀನಿ ನಾನು? ಎಂದು ವಿನಯ್, ಕಾರ್ತಿಕ್ ಬಳಿ ಕೂಗಾಡಿದ್ದಾರೆ.

ತಾರಕಕ್ಕೆ ಏರಿದ ಇಬ್ಬರ ಜಗಳ

ವಿನಯ್‌ ಮಾತುಗಳನ್ನು ಕೇಳಿದ ಸಂಗೀತಾ ಶೃಂಗೇರಿ ನೇರವಾಗಿ ವಿನಯ್ ಎದುರಿಗೇ ಬಂದು ಕೂತು, ‘ನಿಮ್ಮಿಂದ ನನಗೆ ಡೇಂಜರ್‌ ಅಂತ ನಂಗೆ ಅನಿಸುತ್ತದೆ’ ಎಂದು ಕೂಲ್‌ ಆಗೇ ಹೇಳಿದ್ದಾರೆ. ಆದರೆ ವಿನಯ್ ಸಂಗೀತಾ ಜೊತೆ ಮಾತನಾಡದೆ ಕಾರ್ತಿಕ್ ಬಳಿ ತಿರುಗಿ, ನನ್ನ ವಾಯ್ಸ್‌ ಕೇಳಿದ್ರೆ ಕಿವಿ ಮುಚ್ಕೊಳೋಕೆ ಹೇಳು. ಇಲ್ಲಾ ದೂರ ಇರೋಕೆ ಎಂದು ಹೇಳಿ ಸಂಗೀತಾ ಕಡೆಗೆ ತಿರುಗಿ ಪ್ಲೀಸ್ ಡಿಲೀಟ್‌ ಮೀ ಇನ್ ಯುವರ್ ಹೆಡ್ ಎಂದಿದ್ದಾರೆ. ಸ್ಟೋರಿ ಆಗಿದ್ರೆ ತಾನೇ ಡಿಲೀಟ್‌ ಮಾಡೋದು ಎಂದು ಸಂಗೀತಾ ಹೇಳಿದಾಗ ವಿನಯ್‌ ಮತ್ತೆ ಕೋಪದಿಂದ ಅರಚಾಡಿದ್ದಾರೆ. ಯಾರ್ ಹೆಂಗಾದ್ರೂ ಸತ್ರೆ, ವೈ ಶುಡ್ ಐ ಕೇರ್ ಎಂದು ಕಿರುಚಿದ್ದಾರೆ.

ದೊಡ್ಮನೆ ರಣರಂಗವಾಗಿದೆ. ದಿನೇ ದಿನೆ ಸ್ಪರ್ಧಿಗಳ ನಡುವೆ ಜಗಳ ತಾರಕಕ್ಕೆ ಏರುತ್ತಿದೆ. ಸಂಗೀತಾ ವಿನಯ್‌ ನಡುವಿನ ಜಗಳ ಹೀಗೇ ಮುಂದುವರೆಯುತ್ತಾ? ಯಾರಾದರೂ ಇಬ್ಬರ ನಡುವೆ ರಾಜಿ ಮಾಡಲು ಮುಂದೆ ಬರುತ್ತಾರಾ?ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಕ್ಕಾಗಿ JioCinemaದಲ್ಲಿ ಬಿಗ್‌ಬಾಸ್‌ ಕನ್ನಡ 24ಗಂಟೆ ಉಚಿತ ಪ್ರಸಾರವನ್ನು ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಗೆ ವೀಕ್ಷಿಸಿ.

Whats_app_banner