BBK 10: ನನ್ನನ್ನು ಎಲ್ಲರೂ ಏಕೆ ವಿರೋಧಿಸ್ತಾರೆ, ಯಾಕೆ ನನ್ನ ಇಷ್ಟಪಡಲ್ಲ; ಅಣ್ಣ ಅತ್ತಿಗೆ ಅಪ್ಪ ಅಮ್ಮನಿಂದ ಉತ್ತರ ಪಡೆದ ಸಂಗೀತಾ ಶೃಂಗೇರಿ
ಕನ್ನಡ ಸುದ್ದಿ  /  ಮನರಂಜನೆ  /  Bbk 10: ನನ್ನನ್ನು ಎಲ್ಲರೂ ಏಕೆ ವಿರೋಧಿಸ್ತಾರೆ, ಯಾಕೆ ನನ್ನ ಇಷ್ಟಪಡಲ್ಲ; ಅಣ್ಣ ಅತ್ತಿಗೆ ಅಪ್ಪ ಅಮ್ಮನಿಂದ ಉತ್ತರ ಪಡೆದ ಸಂಗೀತಾ ಶೃಂಗೇರಿ

BBK 10: ನನ್ನನ್ನು ಎಲ್ಲರೂ ಏಕೆ ವಿರೋಧಿಸ್ತಾರೆ, ಯಾಕೆ ನನ್ನ ಇಷ್ಟಪಡಲ್ಲ; ಅಣ್ಣ ಅತ್ತಿಗೆ ಅಪ್ಪ ಅಮ್ಮನಿಂದ ಉತ್ತರ ಪಡೆದ ಸಂಗೀತಾ ಶೃಂಗೇರಿ

Bigg Boss Kannada Yesterday Episode: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ನಿನ್ನೆಯ ಸಂಚಿಕೆ ಸಂಗೀತಾರ ಪಾಲಿಗೆ ವಿಶೇಷವಾಗಿತ್ತು. ಇವರ ಮನೆಯಿಂದ ಅಣ್ಣ ಅತ್ತಿಗೆ ಅಪ್ಪ ಮತ್ತು ಅಮ್ಮ ಆಗಮಿಸಿದ್ದರು. ಇವರೆಲ್ಲರಲ್ಲಿ ಹತ್ತು ಹಲವು ಪ್ರಶ್ನೆಗಳನ್ನು ಕೇಳಿದ ಸಂಗೀತಾ ಉತ್ತರ ಪಡೆದುಕೊಂಡಿದ್ದಾರೆ.

ಬಿಗ್‌ಬಾಸ್‌ ಮನೆಗೆ ಸಂಗೀತಾ ಕುಟುಂಬ ಆಗಮನ
ಬಿಗ್‌ಬಾಸ್‌ ಮನೆಗೆ ಸಂಗೀತಾ ಕುಟುಂಬ ಆಗಮನ

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಆಟ ಆಡುತ್ತಿರುವ ಸಂಗೀತಾ ಶೃಂಗೇರಿ ಅವರಿಗೆ ಬುಧವಾರದ ಎಪಿಸೋಡ್‌ ವಿಶೇಷವಾಗಿತ್ತು. ಸಂಗೀತಾ ಮನೆಯಿಂದ ಅಪ್ಪ (ಮಾಜಿ ಸೈನಿಕ) ಶಿವಕುಮಾರ್‌, ಅಮ್ಮ ಭವಾನಿ, ಸಹೋದರ ಮತ್ತು ಅತ್ತಿಗೆ ಆಗಮಿಸಿದ್ದರು. ಅತ್ತಿಗೆ ನನ್ನನ್ನು ಏಕೆ ಎಲ್ಲರೂ ವಿರೋಧಿಸ್ತಾರೆ. ನಮ್ರತಾನ ಎಲ್ಲರೂ ಇಷ್ಟಪಡೋ ರೀತಿ ನನ್ನನ್ನು ಯಾರು ಇಷ್ಟಪಡೋದಿಲ್ಲ? ಎಂದು ಪ್ರಶ್ನಿಸಿದ್ದಾರೆ. ತನ್ನ ಕುಟುಂಬದವರಿಗೆ ಸಂಗೀತಾ ಏನೆಲ್ಲ ಪ್ರಶ್ನೆ ಕೇಳಿದರು, ಅದಕ್ಕೆ ಅವರ ಉತ್ತರ ಹೇಗಿತ್ತು ಎಂದು ನೋಡೋಣ.

ಸಂಗೀತಾಳನ್ನು ಎಲ್ಲರೂ ವಿರೋಧಿಸೋದು ಏಕೆ?

ಅತ್ತಿಗೆ ಸುಚಿತ್ರಾರ ಮುಂದೆ ಸಂಗೀತಾ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ನನ್ನ ಎಲ್ಲರೂ ವಿರೋಧಿಸ್ತಾರೆ. ನಾನು ಏನೇ ಮಾಡಿದರೂ ವಿರೋಧಿಸ್ತಾರೆ. ಇದರಿಂದ ದುಃಖವಾಗಿ ಅಳುತ್ತೇನೆ. ನನ್ನನ್ನು ಅವಕಾಶವಾದಿ, ನೆಗೆಟಿವ್‌ ಎಂದೆಲ್ಲ ಹೇಳುತ್ತಾರೆ. ನಾನು ನಿಜಕ್ಕೂ ಹಾಗೆ ಇದ್ದೇನಾ, ದಾರಿ ತಪ್ಪಿರುವೇನಾ? ಎಲ್ಲರೂ ನಮ್ರತಾನ ಇಷ್ಟಪಡ್ತಾರೆ, ಅದೇ ರೀತಿ ನನ್ನನ್ನು ಇಷ್ಟಪಡೋದಿಲ್ಲ. ನನಗೆ ಯಾವಾಗಲೂ ಕಳಪೆ ಸ್ಥಾನ ಸಿಗುತ್ತದೆ ಎಂದು ಸಂಗೀತ ಹೇಳಿದಾಗ ಅತ್ತಿಗೆ ಸಮಾಧಾನಪಡಿಸಿದ್ದಾರೆ.

ನೀನು ನೆಗೆಟಿವ್‌ ಆಗಿಲ್ಲ. ನೀನು ಅತ್ತರೆ ನಮಗೆ ದುಃಖವಾಗುತ್ತದೆ. ನೀನು ನಿನ್ನ ಆಟವನ್ನು ಸರಿಯಾಗಿ ಆಡುತ್ತಿದ್ದೀಯಾ. ನೀನು ತುಂಬಾ ಸ್ಟ್ರಾಂಗ್‌ ಕಂಟೆಸ್ಟೆಂಟ್‌. ನಿನ್ನಿಂದ ನನಗೆ ಸ್ಪೂರ್ತಿಯಾಗುತ್ತದೆ. ಚೆನ್ನಾಗಿ ಆಟ ಆಡು ಎಂದು ಸುಚಿತ್ರಾ ಅವರು ಹೇಳಿದ್ದಾರೆ. ಕಾರ್ತಿಕ್‌ ಮುಂದೆ ನೀನು ಝೀರೋ ಆಗಿ ಕಾಣಿಸುತ್ತಿಲ್ಲ, ಆತನಿಂದ ಫ್ರೆಂಡ್‌ಶಿಪ್‌ ನಿರೀಕ್ಷೆ ಮಾಡಿದ ಅದು ನಿನಗೆ ದೊರಕಲಿಲ್ಲ. ಅದಕ್ಕೆ ನಿನಗೆ ಝೀರೋ ರೀತಿ ಅನಿಸುತ್ತದೆ ಎಂದು ಸುಚಿತ್ರಾ ವಿವರಿಸಿದ್ದಾರೆ.

ಮನೆಯಲ್ಲಿ ಲವ್‌ ಮಾಡೋರ ರೀತಿ ಇದ್ದೇನ?

ಇದೇ ಸಂದರ್ಭದಲ್ಲಿ ಅಮ್ಮ ಭವಾನಿ ಬಳಿಯೂ ಸಂಗೀತಾ ಹಲವು ಪ್ರಶ್ನೆ ಕೇಳಿದ್ದಾರೆ. "ಅಮ್ಮ ನಿಮ್ಮ ತಲೆ ತಗ್ಗಿಸುವಂತಹ ಕೆಲಸ ನಾನು ಮಾಡುತ್ತಿದ್ದೇನೆಯೇ, ಇಲ್ಲಿ ಯಾರ ಜತೆ ಲವ್‌ ಮಾಡೋ ರೀತಿ ಕಾಣಿಸುತ್ತ ಇದ್ದೇನಾ?" ಎಂದೆಲ್ಲ ಪ್ರಶ್ನಿಸಿದ್ದಾರೆ. "ಇಲ್ಲಮ್ಮ ನೀನು ತಲೆ ತಗ್ಗಿಸೋ ಕೆಲಸ ಮಾಡಿಲ್ಲ. ಮೊದಲು ಲವ್‌ ಮಾಡೋ ರೀತಿ ಕಾಣಿಸ್ತು, ಅದನ್ನು ಸ್ನೇಹದ ದೃಷ್ಟಿಯಲ್ಲೇ ನಾನು ನೋಡಿದೆ" ಎಂದು ಸಂಗೀತಾರಿಗೆ ಅಮ್ಮ ಭವಾನಿ ಹೇಳಿದರು.

ಅಣ್ಣನ ಜತೆಯೂ ಸಂಗೀತಾ ಮುಕ್ತವಾಗಿ ಮಾತನಾಡಿದ್ದಾರೆ. ನೀನು ಅಷ್ಟೊಂದು ಅಳೋದ್ಯಾಕೆ ಎಂದು ಕೇಳಿದಾಗ ಅಣ್ಣನಿಗೆ ಎಲ್ಲರೂ ನನ್ನ ವಿರೋಧ ಮಾಡ್ತಾರೆ, ಅಳು ಬರದೆ ಇನ್ನೇನಾಗುತ್ತೆ ಎಂದಿದ್ದಾರೆ. ಸಂಗೀತಾರ ಅಣ್ಣ ಬಂದಾಗ ತುಕಾಲಿ ಸಂತು, ಮೈಕಲ್‌, ವಿನಯ್‌ ಬೇರೆ ಕಡೆ ಇದ್ದರು. ಸಂಗೀತಾ ಅಣ್ಣ ಬಂದಿರೋದಕ್ಕೆ ಹೀಗೆ ಬೇರೆ ಕಡೆ ಕುಳಿತುಕೊಂಡಿರುವುದಾಗಿ ಆ ನಾಲ್ವರು ಚರ್ಚಿಸಿದ್ದಾರೆ. ಸಂಗೀತಾ ಶೃಂಗೇರಿಯ ಸಹೋದರ ವಿನಯ್‌ ಬಳಿ ತುಂಬಾ ಆತ್ಮೀಯವಾಗಿ ಮಾತನಾಡಿದ್ದಾರೆ. "ನಾನು ನಿಮ್ಮ ಫ್ಯಾನ್‌. ನಿಮ್ಮ ಆಟ ಒಮ್ಮೊಮ್ಮೆ ನೆಗೆಟಿವ್‌, ಒಮ್ಮೊಮ್ಮೆ ಪಾಸಿಟೀವ್‌ ಆಗಿ ಕಾಣುತ್ತದೆ. ಇತ್ತೀಚೆಗೆ ಅಗ್ರೀಸಿವ್‌ ಸ್ವಲ್ಪ ಹೆಚ್ಚಾದಂತೆ ಇದೆ. ಸಂಗೀತಾ ಕೂಡ ಇದೇ ರೀತಿ ಮಾಡುತ್ತಿದ್ದಾರೆ. ನಿಮ್ಮ ತಂತ್ರ ಚೆನ್ನಾಗಿದೆ, ಚೆನ್ನಾಗಿ ಆಡ್ತಾ ಇದ್ದೀರಿ" ಎಂದು ವಿನಯ್‌ ಜತೆ ಮಾತನಾಡಿದ್ದಾರೆ.

ಸಂಗೀತಾರ ತಂದೆ ಮಾಜಿ ಸೈನಿಕ ಬಂದಿದ್ದರು. ಮಗಳ ಜತೆ ಸಾಕಷ್ಟು ಮಾತನಾಡಿದರು. ಸ್ಪರ್ಧಿಗಳಿಗೂ ಸಂಗೀತಾಳ ಕುರಿತು ಸಾಕಷ್ಟು ವಿಚಾರಗಳನ್ನು ಹೇಳಿದರು. ಈ ವಾರ ಬಿಗ್‌ಬಾಸ್‌ ಮನೆಗೆ ಡ್ರೋನ್‌ ಪ್ರತಾಪ್‌ ಕ್ಯಾಪ್ಟನ್‌ ಆಗ ಬೇಕು ಎಂದು ಹೇಳಿ ತನ್ನ ಕುಟುಂಬದವರ ಜತೆ ಹೊರನಡೆದರು.

ಕಾರ್ತಿಕ್‌ಗೆ ವಾಂಗಿಬಾತ್‌ ತಂದ ಅಮ್ಮ ಮೀನಾಕ್ಷಿ

ನಿನ್ನೆಯ ಸಂಚಿಕೆಯಲ್ಲಿ ಕಾರ್ತಿಕ್‌ ತಾಯಿ ಕೂಡ ಆಗಮಿಸಿದ್ದರು. ಮೊದಲಿಗೆ ಕಾರ್ತಿಕ್‌ಗೆ ತಾಯಿ ಜತೆ ಮಾತನಾಡಲು ಅವಕಾಶ ಸಿಗದೆ ದುಃಖವಾಯಿತು. ಬಳಿಕ ಸಿರಿಯ ಅಕ್ಕ, ಅಕ್ಕನ ಮಗಳು ಬಂದ ಬಳಿಕ ಕಾರ್ತಿಕ್‌ ತಾಯಿ ಬಂದ್ರು. ತಾಯಿ ಬರ್ತಾರೆ ಎಂದು ಕಾರ್ತಿಕ್‌ ಅಮ್ಮನಿಗೆ ವಾಂಗಿಬಾತ್‌ ಮಾಡಲು ಸಿದ್ಧವಾಗಿದ್ದರು. ಮಗನಿಗೂ ತಾಯಿ ಮೀನಾಕ್ಷಿ ವಾಂಗೀಬಾತ್‌ ತಂದದ್ದು ಕೋ ಇನ್ಸಿಡೆಂಟ್‌ ಆಗಿತ್ತು. ನನ್ನ ಮಗ ತುಂಬಾ ತರ್ಲೆ ಎಂದು ಮೀನಾಕ್ಷಿ ಅಮ್ಮ ಸ್ಪರ್ಧಿಗಳ ಮುಂದೆ ಹೇಳಿದ್ದಾರೆ. ಸಂಗೀತಾ ಕೂಡ ಕಾರ್ತಿಕ್‌ ತಲೆ ಬೋಳಿಸಿಕೊಳ್ಳಲು ನಾನು ಕಾರಣವಾಗಿದ್ದೇನೆ ಎಂದು ಹೇಳಿ ಮೀನಾಕ್ಷಿ ಅಮ್ಮನ ಮುಂದೆ ಅತ್ತಿದ್ದಾರೆ. ಸಂಗೀತಾಳನ್ನು ಕಾರ್ತಿಕ್‌ ತಾಯಿ ಸಮಧಾನ ಮಾಡಿದ್ದಾರೆ. ಒಟ್ಟಾರೆ ಬಿಗ್‌ಬಾಸ್‌ ಮನೆಯೊಳಗೆ ಸ್ಪರ್ಧಿಗಳ ಮನೆ ಬಂದಿರುವುದು ಸಾಕಷ್ಟು ಭಾವುಕ, ಖುಷಿಯ ಕ್ಷಣಗಳಿಗೆ ಸಾಕ್ಷಿಯಾಗಿದೆ.

Whats_app_banner