ತನ್ನ ಮುಂದಿನ ಸಿನಿಮಾ ಸರ್ದಾರ್‌ 2 ಎಂದ ಆಶಿಕಾ ರಂಗನಾಥ್‌; ಶಿವಮೊಗ್ಗ, ದಾವಣಗೆರೆ, ಧಾರವಾಡ, ಮೈಸೂರು ನೆನಪಿಸಿಕೊಂಡ ಮದಗಜ ನಟಿ-sandalwood news ashika ranganath announces sardar 2 remembers shivamogga davangere dharwad mysore ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ತನ್ನ ಮುಂದಿನ ಸಿನಿಮಾ ಸರ್ದಾರ್‌ 2 ಎಂದ ಆಶಿಕಾ ರಂಗನಾಥ್‌; ಶಿವಮೊಗ್ಗ, ದಾವಣಗೆರೆ, ಧಾರವಾಡ, ಮೈಸೂರು ನೆನಪಿಸಿಕೊಂಡ ಮದಗಜ ನಟಿ

ತನ್ನ ಮುಂದಿನ ಸಿನಿಮಾ ಸರ್ದಾರ್‌ 2 ಎಂದ ಆಶಿಕಾ ರಂಗನಾಥ್‌; ಶಿವಮೊಗ್ಗ, ದಾವಣಗೆರೆ, ಧಾರವಾಡ, ಮೈಸೂರು ನೆನಪಿಸಿಕೊಂಡ ಮದಗಜ ನಟಿ

Ashika Ranganath Umcoming Movies: ಆಶಿಕಾ ರಂಗನಾಥ್‌ ಅವರು ತಮ್ಮ ಮುಂದಿನ ತಮಿಳು ಸಿನಿಮಾ ಸರ್ದಾರ್‌ 2 ಕುರಿತು ಮಾಹಿತಿ ನೀಡಿದ್ದಾರೆ. ತನ್ನ ಹುಟ್ಟುಹಬ್ಬದ ದಿನ ವೈಜಾಗ್, ಹೈದರಾಬಾದ್, ಶಿವಮೊಗ್ಗ, ದಾವಣಗೆರೆ, ಧಾರವಾಡ, ಮೈಸೂರು, ಮುಂಬೈ ಅಭಿಮಾನಿಗಳಿಗೆ ಥ್ಯಾಂಕ್ಸ್‌ ಹೇಳಿದ್ದಾರೆ.a

ತನ್ನ ಮುಂದಿನ ಸಿನಿಮಾ ಸರ್ದಾರ್‌ 2 ಎಂದ ಆಶಿಕಾ ರಂಗನಾಥ್‌; ಶಿವಮೊಗ್ಗ, ದಾವಣಗೆರೆ, ಧಾರವಾಡ, ಮೈಸೂರು ನೆನಪಿಸಿಕೊಂಡ ಮದಗಜ ನಟಿ
ತನ್ನ ಮುಂದಿನ ಸಿನಿಮಾ ಸರ್ದಾರ್‌ 2 ಎಂದ ಆಶಿಕಾ ರಂಗನಾಥ್‌; ಶಿವಮೊಗ್ಗ, ದಾವಣಗೆರೆ, ಧಾರವಾಡ, ಮೈಸೂರು ನೆನಪಿಸಿಕೊಂಡ ಮದಗಜ ನಟಿ

ಬೆಂಗಳೂರು: ಮೊನ್ನೆ ಅಂದ್ರೆ ಆಗಸ್ಟ್‌ 5ರಂದು ನಟಿ ಆಶಿಕಾ ರಂಗನಾಥ್‌ ತನ್ನ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭ ಇವರು ಕರ್ನಾಟಕದ ವಿವಿಧ ಊರುಗಳನ್ನು ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. ಕನ್ನಡ ನಟಿ ಆಶಿಕಾ ರಂಗನಾಥ್‌ಗೆ ಈಗ 28 ವರ್ಷ ವಯಸ್ಸು ಭರ್ತಿಯಾಗಿದೆ. ಈ ಕನ್ನಡ ನಟಿಗೆ ಈಗ ಪರಭಾಷೆ ಚಿತ್ರಗಳಿಂದ ಬೇಡಿಕೆ ಹೆಚ್ಚಾಗುತ್ತಿದೆ. ತನ್ನ ಹುಟ್ಟುಹಬ್ಬದ ದಿನ ತನ್ನ ಮುಂದಿನ ಸಿನಿಮಾದ ಮಾಹಿತಿಯನ್ನೂ ನೀಡಿದ್ದಾರೆ. ಕ್ರೇಜಿ ಬಾಯ್‌ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಇವರು ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಇಲ್ಲಿಯವರೆಗೆ 17 ಸಿನಿಮಾಗಳಲ್ಲಿ ನಟಿಸಿದ್ದಾರೆ.

ತನ್ನ ಹುಟ್ಟುಹಬ್ಬದ ದಿನ ಸೋಷಿಯಲ್‌ ಮೀಡಿಯಾದಲ್ಲಿ ಆಶಿಕಾ ರಂಗನಾಥ್‌ ಹೀಗೆ ಬರೆದಿದ್ದಾರೆ. "ನನ್ನೊಂದಿಗೆ ಪ್ರಯಾಣಿಸಿದ, ನನ್ನನ್ನು ಭೇಟಿಯಾದ, ನನ್ನ ಸಿನಿಮಾಗಳನ್ನು ನೋಡಿದ ಜನರಿಗೆ ವಿಶೇಷ ಘೋಷಣೆ ಮಾಡಲು ಬಯಸುವೆ. ನಿಮ್ಮ ಪ್ರೀತಿ ನಿಜಕ್ಕೂ ವಿನಮ್ರವಾಗಿದೆ. ನಿಮ್ಮೆಲ್ಲರನ್ನೂ ಭೇಟಿಯಾದದ್ದು ನನಗೆ ತುಂಬಾ ಸಂತೋಷ ತಂದಿದೆ. ವೈಜಾಗ್, ಹೈದರಾಬಾದ್, ಶಿವಮೊಗ್ಗ, ದಾವಣಗೆರೆ, ಧಾರವಾಡ, ಮೈಸೂರು, ಮುಂಬೈ ಹೀಗೆ ಹಲವು ಕಡೆಗಳಿಂದ ಅಭಿಮಾನಿಗಳು ನನಗೆ ವಿಶ್‌ ಮಾಡಿದ್ದೀರಿ. ನಿಮ್ಮೆಲ್ಲರ ಪ್ರೀತಿಯನ್ನು ಪಡೆಯುವ ಆಶೀರ್ವಾದ ನನಗೆ ದೊರಕಿದೆ" ಎಂದು ಆಶಿಕಾ ರಂಗನಾಥ್‌ ಬರೆದಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಇವರಿಗೆ ಹುಟ್ಟುಹಬ್ಬದಂದು ವಿವಿಧ ಕಡೆಗಳಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ. ಈ ಕ್ಷಣವನ್ನು ಸಂಭ್ರಮಿಸಿದ ನಟಿಯು ಸೋಷಿಯಲ್‌ ಮೀಡಿಯಾದಲ್ಲಿ ತುಸು ಸುದೀರ್ಘ ಪೋಸ್ಟ್‌ ಹಂಚಿಕೊಂಡಿದ್ದಾರೆ.

"ನೀವೆಲ್ಲರೂ ನನ್ನನ್ನು ವೈಯಕ್ತಿಕವಾಗಿ ಭೇಟಿಯಾಗಿ ಮಾತನಾಡಿದ ಬಳಿಕ ನೀವೆಲ್ಲರೂ ನನ್ನನ್ನು ಎಷ್ಟು ಪ್ರೀತಿಸುತ್ತೀರಿ ಎಂದು ತಿಳಿಯಿತು. ನಾನು ಮಾಡಿದ ಕೆಲಸಗಳನ್ನು ನೀವು ಹತ್ತಿರದಿಂದ ನೋಡಿದ ಆ ಕ್ಷಣಗಳು ನೆನಪಿಗೆ ಬರುತ್ತವೆ. ಇವು ನನ್ನನ್ನು ಇನ್ನಷ್ಟು ಸಾಧನೆ ಮಾಡಲು ಪ್ರೇರೇಪಿಸುತ್ತವೆ" ಎಂದು ತನ್ನ ಹಿಂದಿನ ಸಿನಿಜರ್ನಿಯ ದಿನಗಳನ್ನು ಆಶಿಕಾ ನೆನಪಿಸಿಕೊಂಡಿದ್ದಾರೆ. "ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಮಾಡಿದ ನಿಮಗೆ ಧನ್ಯವಾದಗಳು" ಎಂದು ಆಶಿಕಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

 

ಆಶಿಕಾ ರಂಗನಾಥ್‌ಗೆ ಬಾಲ್ಯದಿಂದಲೂ ನಟಿಯಾಗಬೇಕೆಂದಿತ್ತಂತೆ. ತನ್ನ ಗುರಿಯನ್ನು ನಿರ್ದೇಶಕ ಮಹೇಶ್‌ ಬಾಬು ಅವರ ಮುಂದಿಟ್ಟರಂತೆ. ಸಿನಿಜಗತ್ತಿಗೆ ಕಾಲಿಡಲು ಮಹೇಶ್‌ ಬಾಬು ಇವರಿಗೆ ಸಾಕಷ್ಟು ನೆರವು ನೀಡಿದ್ದಾರೆ. ತನ್ನ ಕ್ರೇಜಿ ಬಾಯ್‌ ಸಿನಿಮಾದಲ್ಲಿ ಈಕೆಗೆ ನಾಯಕಿ ಪಾತ್ರ ನೀಡಿದ್ದರು. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ಗಳಿಸಿತ್ತು. 2018ರ ರಾಂಬೋ 2 ಸಿನಿಮಾದಲ್ಲಿ ಆಶಿಕಾ ಅವರು ಮಯೂರಿ ಪಾತ್ರದಲ್ಲಿ ನಟಿಸಿದ್ದರು. ಇದು ಕೂಡ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ಗಳಿಸಿತು.

ಆಶಿಕಾ ರಂಗನಾಥ್‌ ಮುಂಬರುವ ಸಿನಿಮಾ

ಇತ್ತೀಚೆಗೆ ಆಶಿಕಾ ರಂಗನಾಥ್‌ ಅವರು ತಮ್ಮ ಮುಂದಿನ ತಮಿಳು ಸಿನಿಮಾ ಸರ್ದಾರ್‌ 2 ಕುರಿತು ಮಾಹಿತಿ ನೀಡಿದ್ದರು. ಕಾರ್ತಿ ಮತ್ತು ನಿರ್ದೇಶಕ ಪಿಎಸ್‌ ಮಿತ್ರನ್‌ ಜತೆಗೆ ಕೆಲಸ ಮಾಡಲು ಕಾಯುತ್ತಿರುವುದಾಗಿ ಹೇಳಿದ್ದರು.

ಕನ್ನಡದಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿರುವ ಆಶಿಕಾ ರಂಗನಾಥ್‌ ಟಾಲಿವುಡ್‌ ಸಿನಿಮಾವೊಂದರಲ್ಲಿ ನಟಿಸುವ ಕುರಿತು ಕೆಲವು ದಿನಗಳ ಹಿಂದೆಯೇ ಮಾಹಿತಿ ನೀಡಿದ್ದರು. ಯುವಿ ಕ್ರಿಯೆಷನ್ಸ್‌ ಮೂಲಕ ನಿರ್ಮಾಣವಾಗುತ್ತಿರುವ ವಿಶ್ವಂಭರ ಸಿನಿಮಾದಲ್ಲಿ ಹಲವು ಪ್ರಮುಖ ನಟಿಯರು, ನಟರು ನಟಿಸುತ್ತಿದ್ದಾರೆ. 2025ರ ಜನವರಿ 10ರಂದು ವಿಶ್ವಂಭರ ಸಿನಿಮಾ ರಿಲೀಸ್‌ ಆಗಲಿದೆ. ಈ ಸಿನಿಮಾಕ್ಕೆ ಎಂಎಂ ಕೀರವಾಣಿ ಸಂಗೀತ, ಮಲ್ಲಿದಿ ವಸಿಷ್ಠ ನಿರ್ದೇಶನವಿದೆ. ಈ ಸಿನಿಮಾದಲ್ಲಿ ಆಶಿಕಾ ರಂಗನಾಥ್‌ ಕೂಡ ನಟಿಸುತ್ತಿದ್ದಾರೆ.