ಕನ್ನಡ ಸುದ್ದಿ  /  Entertainment  /  Kannada Television News Seetha Rama Serial Feb 22th Thursday Promo Highlights Zee Kannada Seetha Rama Serial Mnk

Seetha Rama Serial: ರಕ್ತ ನೀಡಿ ರಾಮನ ಜೀವ ಉಳಿಸಿದ ಸೀತೆಗೆ ಇಂದೆಂಥ ಶಿಕ್ಷೆ! ರಾಮನ ರಕ್ಷಣೆಗಾಗಿ ಚಾಂದಿನಿ ವಿರುದ್ಧ ನಿಂತ ಅಶೋಕ

ಸೀತಾ ರಾಮ ಸೀರಿಯಲ್‌ನಲ್ಲಿ ಇದೀಗ ಕೌತುಕ ಮನೆ ಮಾಡಿದೆ. ರಾಮ ಅಪಘಾತದಿಂದ ಆಸ್ಪತ್ರೆ ಪಾಲಾದರೆ, ರಕ್ತ ನೀಡಿ ಜೀವ ಉಳಿಸಿದ್ದಾಳೆ ಸೀತಾ. ಮತ್ತೊಂದೆಡೆ ರಾಮನ ಹಳೇ ಪ್ರೀತಿ ಚಾಂದಿನಿ ಸಹ ಎಂಟ್ರಿಕೊಟ್ಟಿದ್ದಾಳೆ. ಅಶೋಕ ಆಕೆಯ ಎದುರೇ ರಾಮನ ರಕ್ಷಣೆಗೆ ನಿಂತಿದ್ದಾನೆ.

Seetha Rama Serial: ಸೀತೆಗೆ ಭಾರ್ಗವಿಯಿಂದ ಅವಮಾನ, ಚಾಂದಿನಿಯ ಆಗಮನ; ರಾಮನ ರಕ್ಷಣೆಗೆ ನಿಂತೇಬಿಟ್ಟ ಅಶೋಕ!
Seetha Rama Serial: ಸೀತೆಗೆ ಭಾರ್ಗವಿಯಿಂದ ಅವಮಾನ, ಚಾಂದಿನಿಯ ಆಗಮನ; ರಾಮನ ರಕ್ಷಣೆಗೆ ನಿಂತೇಬಿಟ್ಟ ಅಶೋಕ!

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಹೊಸ ತಿರುವುಗಳು ನೋಡುಗರ ಎದೆಬಡಿತ ಹೆಚ್ಚಿಸುತ್ತಿವೆ. ಭಾರ್ಗವಿ ಮತ್ತು ಲಾಯರ್‌ ರುದ್ರಪ್ರತಾಪ್‌ ಇದೀಗ ಅಖಾಡಕ್ಕಿಳಿದು ಶ್ರೀರಾಮ ಮತ್ತು ಸೀತಾಳನ್ನು ಹಣಿಯಲು ಸಂಚು ರೂಪಿಸುತ್ತಿದ್ದಾರೆ. ಅದರಂತೆ, ರುದ್ರಪ್ರತಾಪನ ಕಡೆಯವರು ರಾಮನಿಗೆ ಕಾರ್‌ ಆಕ್ಸಿಡೆಂಟ್‌ ಮಾಡಿದ್ದಾರೆ. ಶ್ರೀರಾಮನ ಸ್ಥಿತಿ ಸದ್ಯ ಗಂಭೀರವಾಗಿದೆ. ಇತ್ತ ಆತನನ್ನು ನೋಡಲು ಓಡೋಡಿ ಬಂದಿದ್ದಾಳೆ ಸೀತಾ. ಮತ್ತೊಂದೆಡೆ ಇವನು ಸತ್ತರೆ ಸಾಕೆಂದು ಕೇಡು ಬಯಸುತ್ತಿದ್ದಾಳೆ ಭಾರ್ಗವಿ. ಈ ನಡುವೆ ಚಾಂದಿನಿಯ ಆಗಮನವೂ ಆಗಿದೆ.

ಇಂದಿನ ಸಂಚಿಕೆಯ ಕೌತುಕದ ಪ್ರೋಮೋ ಬಿಡುಗಡೆಯಾಗಿದೆ. ತೀವ್ರ ಗಾಯಗಳಿಂದ ಆಸ್ಪತ್ರೆಯ ಐಸಿಯುನಲ್ಲಿ ರಾಮ ಚಿಕಿತ್ಸೆಯಲ್ಲಿದ್ದಾನೆ. ರಾಮನಿಗೆ ರಕ್ತದ ಅವಶ್ಯಕತೆ ಇತ್ತು. ರಾಮನಿಗೆ ಸ್ವತಃ ಸೀತಾ ರಕ್ತ ನೀಡಿದ್ದಾಳೆ. ಹೀಗಿರುವಾಗಲೇ ರಾಮನ ಜೀವ ಅಪಾಯದಲ್ಲಿರೋ ಹೊತ್ತಲ್ಲೇ ಆತನ ಹಳೇ ಪ್ರೀತಿ ಮತ್ತೆ ಬಂದಿದೆ. ಅಂದರೆ, ರಾಮನ ಮಾಜಿ ಪ್ರೇಯಸಿ ಚಾಂದಿನಿಯ ಎಂಟ್ರಿಯಾಗಿದೆ. ಕೈಯಲ್ಲಿ ಹೂವಿನ ಬೊಕ್ಕೆ ಹಿಡಿದು ಆಸ್ಪತ್ರೆಗೆ ಆಗಮಿಸಿದ್ದಾಳೆ. ಹಾಗೆ ಬಂದವಳೇ ಸೀತಾಳ ಮುಂದೆಯೂ ಕಂಡಿದ್ದಾಳೆ.

ಇದಕ್ಕೂ ಮುನ್ನ, ರಾಮ್‌ ಹೇಗಿದ್ದಾನೆ ಎಂದು ನೋಡುವ ಸಲುವಾಗಿ, ಸೀತಾಳನ್ನು ಐಸಿಯು ಒಳಗೆ ಕರೆದೊಯ್ದಿದ್ದಾನೆ ಅಶೋಕ. ರಾಮನ ಸ್ಥಿತಿ ಕಂಡು ಮಮ್ಮಲ ಮರುಗಿದ್ದಾಳೆ ಸೀತಾ. ಅದೇ ಸಮಯಕ್ಕೆ ಭಾರ್ಗವಿಯ ಎಂಟ್ರಿಯೂ ಆಗಿದೆ. ಸೀತಾಳನ್ನು ನೋಡುತ್ತಿದ್ದಂತೆ, ಅಶೋಕ್‌ಗೆ ಕ್ಲಾಸ್‌ ತೆಗೆದುಕೊಂಡಿದ್ದಾಳೆ. ಇಲ್ಲಿ ಮನೆಯವರು ಮಾತ್ರ ಇರಬೇಕು, ಆಫೀಸ್‌ನವರನ್ನೆಲ್ಲ ಕರೆತರೋದಲ್ಲ ಎಂದು ಗದರಿದ್ದಾಳೆ. ಅಷ್ಟೊತ್ತಿಗೆ ಸೀತಾ ಬೇಸರದಲ್ಲಿಯೇ ಹೊರನಡೆದಿದ್ದಾಳೆ.

ಹಾಗೇ ಹೊರ ನಡೆಯುತ್ತಿದ್ದಂತೆ, ಚಾಂದಿನಿಯ ಆಗಮನವಾಗಿದೆ. ಸೀತಾಗೆ ಡಿಕ್ಕಿ ಹೊಡೆದಿದ್ದಾಳೆ. ಇಬ್ಬರೂ ಮೊದಲ ಸಲ ಎದುರಾಗಿದ್ದಾರೆ. ಅದಾದ ಬಳಿಕ ಭಾರ್ಗವಿ ಬಳಿ ಬಂದು, ಚಿಕ್ಕಿ ನಾನು ರಾಮ್‌ನ ಒಂದೇ ಒಂದು ಸಲ ನೋಡ್ತಿನಿ ಎಂದಿದ್ದಾಳೆ. ಅಲ್ಲೇ ಪಕ್ಕದಲ್ಲಿ ಇದ್ದ ಅಶೋಕ ನೋ ಅದು ಸಾಧ್ಯವಿಲ್ಲ ಎಂದು ಜೋರಾಗಿ ಕೂಗಿದ್ದಾನೆ. ಅಲ್ಲಿಗೆ ಸಾವಿನ ಅಂಚಿನಲ್ಲಿದ್ದ ರಾಮನ ಜೀವಕ್ಕೆ ಸಂಚಕಾರ ಎದುರಾಗಿದೆ. ಹಾಗಾದರೆ, ಮುಂದೇ ಏನೆಲ್ಲ ಆಗಬಹುದು? ಇಂದಿನ ಸಂಚಿಕೆಯನ್ನೇ ನೋಡಬೇಕು.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಶ್ರೀನಿವಾಸ್: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

IPL_Entry_Point