ಬಿಗ್‌ಬಾಸ್‌ ಕನ್ನಡ 11: ಉಗ್ರಂ ಮಂಜು ಜೊತೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ಬ್ರೇಕ್‌; ತ್ರಿವಿಕ್ರಮ್‌ ವಿಶೇಷ ಅಧಿಕಾರ ಕಸಿದುಕೊಂಡ ಬಿಗ್‌ಬಾಸ್‌
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ 11: ಉಗ್ರಂ ಮಂಜು ಜೊತೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ಬ್ರೇಕ್‌; ತ್ರಿವಿಕ್ರಮ್‌ ವಿಶೇಷ ಅಧಿಕಾರ ಕಸಿದುಕೊಂಡ ಬಿಗ್‌ಬಾಸ್‌

ಬಿಗ್‌ಬಾಸ್‌ ಕನ್ನಡ 11: ಉಗ್ರಂ ಮಂಜು ಜೊತೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ಬ್ರೇಕ್‌; ತ್ರಿವಿಕ್ರಮ್‌ ವಿಶೇಷ ಅಧಿಕಾರ ಕಸಿದುಕೊಂಡ ಬಿಗ್‌ಬಾಸ್‌

Bigg Boss Kannada 11: ಕಳೆದ ವಾರ ತಾನು ಕ್ಯಾಪ್ಟನ್‌ ಆಗಲು ಉಗ್ರಂ ಮಂಜು ಜೊತೆ ತ್ರಿವಿಕ್ರಮ್‌ ಮಾಡಿಕೊಂಡಿದ್ದ ಒಪ್ಪಂದಕ್ಕೆ ಬಿಗ್‌ಬಾಸ್‌ ಬ್ರೇಕ್‌ ಹಾಕಿದ್ದಾರೆ. ಈ ವಾರ ನಾಮಿನೇಷನ್‌ ಪ್ರಕ್ರಿಯೆಯಿಂದ ಕ್ಯಾಪ್ಟನ್‌ ತ್ರಿವಿಕ್ರಮ್‌ ಹೊರಗೆ ಉಳಿದಿದ್ದಾರೆ. ಮನೆಯಿಂದ ಹೊರ ಹೋಗಲು ಯಾವ ಸ್ಪರ್ಧಿ ನೇರ ನಾಮಿನೇಟ್‌ ಆಗಲಿದ್ದಾರೆ ಮಂಗಳವಾರ ತಿಳಿಯಲಿದೆ.

ಬಿಗ್‌ಬಾಸ್‌ ಕನ್ನಡ 11: ಉಗ್ರಂ ಮಂಜು ಜೊತೆ ತ್ರಿವಿಕ್ರಮ್ ಮಾಡಿಕೊಂಡಿದ್ದ ಒಪ್ಪಂದಕ್ಕೆ ಬ್ರೇಕ್‌ ಹಾಕಿದ ಬಿಗ್‌ಬಾಸ್
ಬಿಗ್‌ಬಾಸ್‌ ಕನ್ನಡ 11: ಉಗ್ರಂ ಮಂಜು ಜೊತೆ ತ್ರಿವಿಕ್ರಮ್ ಮಾಡಿಕೊಂಡಿದ್ದ ಒಪ್ಪಂದಕ್ಕೆ ಬ್ರೇಕ್‌ ಹಾಕಿದ ಬಿಗ್‌ಬಾಸ್ (PC: Jio Cinema)

Bigg Boss Kannada 11: ಬಿಗ್‌ಬಾಸ್‌ ಕನ್ನಡ 11 ಆರನೇ ವಾರಕ್ಕೆ ಕಾಲಿಟ್ಟಿದೆ. ಈ ಬಾರಿ ತ್ರಿವಿಕ್ರಮ್‌ ಕ್ಯಾಪ್ಟನ್‌ ಆಗಿದ್ದಾರೆ. ಕಳೆದ ವಾರ ಧನರಾಜ್‌ ಹಾಗೂ ಭವ್ಯಾಗೌಡ ಇಬ್ಬರೂ ಡೇಂಜರಸ್‌ ಝೋನ್‌ನಲ್ಲಿದ್ದರು. ಕೊನೆಯ ಹಂತದಲ್ಲಿ ಧನರಾಜ್‌ ಸೇಫ್‌ ಆದರು. ಭವ್ಯಾಗೌಡ ಎಲಿಮಿನೇಟ್‌ ಆಗಿ ಮನೆಯಿಂದ ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಬಿಗ್‌ಬಾಸ್‌ ಟ್ವಿಸ್ಟ್‌ ಕೊಟ್ಟಿದ್ದರು.

ಎಲಿಮಿನೇಷನ್‌ನಿಂದ ಪಾರಾಗಿದ್ದ ಭವ್ಯಾಗೌಡ

ಕಳೆದ ವಾರ ಯಾವುದೇ ಎಲಿಮಿನೇಷನ್‌ ಇರಲಿಲ್ಲ. ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್‌, ಒಬ್ಬೊಬ್ಬರನ್ನೇ ಸೇಫ್‌ ಮಾಡುತ್ತಾ ಬಂದರು. ಕೊನೆಗೆ ಧನರಾಜ್‌ ಹಾಗೂ ಭವ್ಯಾಗೌಡ ಇಬ್ಬರು ಉಳಿದುಕೊಂಡರು. ಧನರಾಜ್‌ ಸೇಫ್‌ ಆಗಿ ನಿಟ್ಟುಸಿರು ಬಿಟ್ಟರು. ಭವ್ಯಾಗೌಡ ತಮ್ಮ ಲಗ್ಗೇಜ್‌ ಹಿಡಿದುಕೊಂಡು ಮನೆಯ ಮುಖ್ಯದ್ವಾದರವರೆಗೂ ಬಂದು ಹೊರ ಹೋಗಲು ಕಾಯುತ್ತಾ ನಿಂತರು. ಅದರೆ ಎಷ್ಟು ಹೊತ್ತಾದರೂ ಬಾಗಿಲು ತೆರೆಯಲೇ ಇಲ್ಲ. ಕೊನೆಗೆ ಈ ವಾರ ಎಲಿಮಿನೇಷನ್‌ ಇಲ್ಲ ಎಂದು ಬಿಗ್‌ಬಾಸ್‌ ಹೇಳಿದಾಗ ಭವ್ಯಾ ಸಂತೋಷಕ್ಕೆ ಪಾರವೇ ಇರಲಿಲ್ಲ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂಬಂತೆ ಭವ್ಯಾ ಗೌಡ ಎಲಿಮಿನೇಷನ್‌ನಿಂದ ಪಾರಾಗಿದ್ದಾರೆ. ಮುಂದಿನ ವಾರ ಅವರು ಟಾಸ್ಕ್‌ನಲ್ಲಿ ಯಾವ ರೀತಿ ಫರ್ಫಾಮ್‌ ಮಾಡಲಿದ್ದಾರೆ ಕಾದು ನೋಡಬೇಕು.

ತ್ರಿವಿಕ್ರಮ್‌ನಿಂದ ವಿಶೇಷ ಅಧಿಕಾರಿ ಕಸಿದುಕೊಂಡ ಬಿಗ್‌ಬಾಸ್‌

ಇನ್ನು ಮನೆಯಲ್ಲಿ ನಾಮಿನೇಷನ್‌ ಪ್ರಕ್ರಿಯೆ ಆರಂಭವಾಗಿದೆ. ಆದರೆ ಪ್ರತಿ ಬಾರಿಯೂ ಬಿಗ್‌ಬಾಸ್‌, ಕ್ಯಾಪ್ಟನ್‌ಗೆ ನೀಡಿದ್ದ ವಿಶೇಷ ಅಧಿಕಾರವನ್ನು ಈ ಬಾರಿ ತ್ರಿವಿಕ್ರಮ್‌ನಿಂದ ಕಸಿದುಕೊಳ್ಳಲಾಗಿದೆ. ಇದಕ್ಕೆ ಕಾರಣ ಮನೆಯ ನಿಯಮ ಮುರಿದು ತ್ರಿವಿಕ್ರಮ್‌, ಉಗ್ರಂ ಮಂಜು ಜೊತೆ ಮಾಡಿಕೊಂಡಿದ್ದ ಒಪ್ಪಂದ. ಕಳೆದ ವಾರ ಕ್ಯಾಪ್ಟನ್‌ ಟಾಸ್ಕ್‌ನಲ್ಲಿ ಭವ್ಯಾಗೌಡ ಹಾಗೂ ತ್ರಿವಿಕ್ರಮ್‌ ಫೈನಲ್‌ಗೆ ತೆರಳಿದ್ದರು. ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಯಾರು ಕ್ಯಾಪ್ಟನ್‌ ಆಗಲು ಅರ್ಹರಲ್ಲಿ ಅವರ ಫೋಟೋಗೆ ಮಸಿ ಬಳಿಯಬೇಕಿತ್ತು. ಉಗ್ರಂ ಮಂಜು, ಭವ್ಯಾ ಗುಂಪಿನಲ್ಲಿದ್ದುಕೊಂಡೇ ಅವರನ್ನು 3 ಬಾರಿ ಅನರ್ಹ ಎಂದು ಅವರ ಫೋಟೋಗೆ ಮಸಿ ಬಳಿದಿದ್ದರು.

ನಾಮಿನೇಷನ್‌ ಪ್ರಕ್ರಿಯೆಯಿಂದ ತ್ರಿವಿಕ್ರಮ್‌ ಹೊರಕ್ಕೆ

ಕೊನೆಗೆ ಕ್ಯಾಪ್ಟನ್‌ ಆಗಿ ತ್ರಿವಿಕ್ರಮ್‌ ಆಯ್ಕೆ ಅದರು. ನಿನ್ನನ್ನು ಕ್ಯಾಪ್ಟನ್‌ ಆಗಿ ಆಯ್ಕೆ ಮಾಡಿದರೆ ನನ್ನನ್ನು ನೇರ ನಾಮಿನೇಷನ್‌ನಿಂದ ದೂರ ಇಡಬೇಕು ಎಂದು ತ್ರಿವಿಕ್ರಮ್‌ ಬಳಿ ಕಂಡಿಷನ್‌ ಮಾಡಿದ್ದರು. ಇದಕ್ಕೆ ತ್ರಿವಿಕ್ರಮ್‌ ಕೂಡಾ ಒಪ್ಪಿದ್ದರು. ಆದರೆ ಇದು ಮನೆಯ ನಿಯಮಕ್ಕೆ ವಿರುದ್ಧವಾದ ಒಪ್ಪಂದವಾಗಿರುವುದರಿಂದ ಬಿಗ್‌ಬಾಸ್‌, ಈ ಬಾರಿ ತ್ರಿವಿಕ್ರಮ್‌ನಿಂದ ಈ ಅಧಿಕಾರ ಕಸಿದುಕೊಂಡಿದ್ದರು. ನಾಮಿನೇಷನ್‌ ಪ್ರಕ್ರಿಯೆಯಿಂದ ತ್ರಿವಿಕ್ರಮ್‌ ದೂರ ಉಳಿಯಬೇಕಾಗಿದೆ. ಇದರ ಪ್ರಕಾರ ಮನೆಯ ಸದಸ್ಯರೆಲ್ಲಾ ಒಟ್ಟಾಗಿ ಯಾವ ಸದಸ್ಯನನ್ನು ನೇರ ನಾಮಿನೇಟ್‌ ಮಾಡಲಿದ್ದಾರೆ ಅನ್ನೋದು ಮಂಗಳವಾರದ ಎಪಿಸೋಡ್‌ನಲ್ಲಿ ತಿಳಿಯಲಿದೆ.

Whats_app_banner