Bhagyalakshmi Serial: ಅಡ್ಮಿಷನ್‌ ವಾಪಸ್‌ ಪಡೆಯಲು ಭಾಗ್ಯ ಹೋರಾಟ; ವಾರದೊಳಗೆ ಸ್ಕೂಲ್‌ನಿಂದ ಓಡಿಸುವುದಾಗಿ ಕನ್ನಿಕಾ ಶಪಥ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಅಡ್ಮಿಷನ್‌ ವಾಪಸ್‌ ಪಡೆಯಲು ಭಾಗ್ಯ ಹೋರಾಟ; ವಾರದೊಳಗೆ ಸ್ಕೂಲ್‌ನಿಂದ ಓಡಿಸುವುದಾಗಿ ಕನ್ನಿಕಾ ಶಪಥ

Bhagyalakshmi Serial: ಅಡ್ಮಿಷನ್‌ ವಾಪಸ್‌ ಪಡೆಯಲು ಭಾಗ್ಯ ಹೋರಾಟ; ವಾರದೊಳಗೆ ಸ್ಕೂಲ್‌ನಿಂದ ಓಡಿಸುವುದಾಗಿ ಕನ್ನಿಕಾ ಶಪಥ

ನನ್ನನ್ನು ಸ್ಕೂಲ್‌ನಿಂದ ತೆಗೆಯುತ್ತಿರುವುದಕ್ಕೆ ಅಧಿಕೃತವಾಗಿ ಪತ್ರ ಬರೆದುಕೊಡಿ ಎಂದು ಭಾಗ್ಯ ಕನ್ನಿಕಾಗೆ ತಾಕೀತು ಮಾಡುತ್ತಾಳೆ. ಕನ್ನಿಕಾ ಕೂಡಲೇ ಲೆಟರ್‌ ಕೊಟ್ಟು ಸೈನ್‌ ಹಾಕುತ್ತಾಳೆ. ನನಗೆ ಸೀಟ್‌ ಕೊಟ್ಟದ್ದು ರಾಮ್‌ ದಾಸ್‌ ಕಾಮತ್‌, ಅವರೇ ಈ ಪತ್ರಕ್ಕೆ ಸಹಿ ಮಾಡಬೇಕು. ಇಲ್ಲದಿದ್ದರೆ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಭಾಗ್ಯ ಕ್ಲಾಸ್‌ ರೂಮ್‌ಗೆ ಹೋಗುತ್ತಾಳೆ.

ಭಾಗ್ಯಲಕ್ಷ್ಮಿ ಧಾರಾವಾಹಿ 245ನೇ ಎಪಿಸೋಡ್‌, ಕನ್ನಿಕಾ ಜೊತೆ ಭಾಗ್ಯ ವಾದ ವಿವಾದ
ಭಾಗ್ಯಲಕ್ಷ್ಮಿ ಧಾರಾವಾಹಿ 245ನೇ ಎಪಿಸೋಡ್‌, ಕನ್ನಿಕಾ ಜೊತೆ ಭಾಗ್ಯ ವಾದ ವಿವಾದ

ಭಾಗ್ಯಲಕ್ಷ್ಮಿ ಧಾರಾವಾಹಿ 243ನೇ ಎಪಿಸೋಡ್: ಓದಲು ದೊಡ್ಡ ಶಾಲೆಯಲ್ಲಿ ಸೀಟು ದೊರೆತಿದೆ. ಇನ್ಮುಂದೆ ಮಗಳ ಜವಾಬ್ದಾರಿ ನೋಡಿಕೊಳ್ಳಬಹುದು, ಅತ್ತೆ ಮಾವನ ಆಸೆ ಕೂಡಾ ನೆರವೇರಿಸಬಹುದು ಎಂಬ ಆಸೆಯಿಂದ ಭಾಗ್ಯ ಸ್ಕೂಲ್‌ಗೆ ಬಂದರೆ, ಆಕೆಯ ಅಡ್ಮಿಷನ್‌ ಕ್ಯಾನ್ಸಲ್‌ ಆಗಿದೆ. ಕನ್ನಿಕಾ ಕಾಮತ್‌ ಬಳಿ ಕೇಳಲು ಹೋದರೆ ಆಕೆ ಬೈದು ಕಳಿಸುತ್ತಾಳೆ, ರಾಮ್‌ ದಾಸ್‌ ಕಾಮತ್‌ ಬಳಿ ಹೋದರೆ ನನಗೂ ಇದಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ.

ಕನ್ನಿಕಾ ಜೊತೆ ಧೈರ್ಯದಿಂದ ಮಾತನಾಡುವ ಭಾಗ್ಯ

ಭಾಗ್ಯಳಿಗೆ ತನ್ನ ಸಾಮರ್ಥ್ಯ ಏನೆಂದು ಅರ್ಥ ಮಾಡಿಸಲು ಪ್ರೊಫೆಸರ್‌ ರಾಮ್‌ದಾಸ್‌ ಕಾಮತ್‌ ನಿರ್ಧರಿಸುತ್ತಾರೆ. ಆದ್ದರಿಂದ ನಿನ್ನ ಸೀಟನ್ನು ನೀನೇ ವಾಪಸ್‌ ಕೇಳು ಎಂದು ಮಗಳ ಬಳಿ ಕಳಿಸುತ್ತಾರೆ. ಇತ್ತ ಕನ್ನಿಕಾ ಕಾಮತ್‌, ಭಾಗ್ಯಳ ಅಡ್ಮಿಷನ್‌ ಕ್ಯಾನ್ಸಲ್‌ ಮಾಡಿ ಡೊನೇಶನ್‌ ಪಡೆದು ಸೀಟು ಮಾರಾಟ ಮಾಡುವ ಯತ್ನದಲ್ಲಿದ್ದಾಳೆ. ಎನ್‌ಆರ್‌ಐ ದಂಪತಿ ಜೊತೆ ಮಾತನಾಡುವಾಗ ಭಾಗ್ಯ ಏಕಾಏಕಿ ಕನ್ನಿಕಾ ಚೇಂಬರ್‌ ಒಳಗೆ ಬರುತ್ತಾಳೆ. ಭಾಗ್ಯ ಬಂದಿದ್ದನ್ನು ನೋಡಿ ಕನ್ನಿಕಾಗೆ ಕಿರಿಕಿರಿಯಾಗುತ್ತದೆ.

ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ಹೇಳಲು ಇಲ್ಲಿಗೆ ಬಂದೆ, ಇನ್ಮುಂದೆ ನಾನು ಇದೇ ಶಾಲೆಯಲ್ಲಿ ಓದುತ್ತೇನೆ. ನಿಮ್ಮ ಹಣ ನಿಮ್ಮ ಬಳಿಯೇ ಇರಲಿ ಎಂದು ಭಾಗ್ಯ ಕನ್ನಿಕಾ ಬಳಿ ಧೈರ್ಯವಾಗಿ ಮಾತನಾಡುತ್ತಾಳೆ. ಸ್ವಲ್ಪ ಹೊತ್ತಿನ ಮುಂಚೆ ಬಾಲ ಮುದುಡಿದ ಬೆಕ್ಕಿನಂತೆ ಹೋದ ಭಾಗ್ಯ ಈಗ ಖಡಕ್‌ ಆಗಿ ಮಾತನಾಡುವುದನ್ನು ನೋಡಿ ಕನಿಕಾ ಗಾಬರಿ ಆಗುತ್ತಾಳೆ. ನನ್ನನ್ನು ಯಾವ ಕಾರಣಕ್ಕೆ ಸ್ಕೂಲ್‌ನಿಂದ ತೆಗೆಯುತ್ತಿದ್ದೀರಿ ಎಂದು ಭಾಗ್ಯ ಕಾರಣ ಕೇಳುತ್ತಾಳೆ. ಮೊದಲ ದಿನವೇ ಕ್ಲಾಸ್‌ನಿಂದ ಅರ್ಧದಲ್ಲೇ ಎದ್ದು ಹೋಗಿದ್ದಕ್ಕೆ ಎಂದು ಕನ್ನಿಕಾ ಸುಳ್ಳು ಹೇಳುತ್ತಾಳೆ. ಹಾಗಿದ್ದರೆ, ನನ್ನ ಮಗಳು ಹಾಗೂ ಬೇರೆ ಮಕ್ಕಳು ದಿನಾ ಸ್ಕೂಲ್‌ಗೆ ಚಕ್ಕರ್‌ ಹಾಕುತ್ತಿರುವ ವಿಚಾರ ನಿಮಗೆ ಏಕೆ ತಿಳಿಯುತ್ತಿಲ್ಲ ಎಂದು ಭಾಗ್ಯ ಪ್ರಶ್ನಿಸುತ್ತಾಳೆ.

ಒಂದು ವಾರದೊಳಗೆ ಸ್ಕೂಲ್‌ನಿಂದ ಓಡಿಸುವುದಾಗಿ ಶಪಥ ಮಾಡಿದ ಕನ್ನಿಕಾ

ನನ್ನನ್ನು ಸ್ಕೂಲ್‌ನಿಂದ ತೆಗೆಯುತ್ತಿರುವುದಕ್ಕೆ ಅಧಿಕೃತವಾಗಿ ಪತ್ರ ಬರೆದುಕೊಡಿ ಎಂದು ಭಾಗ್ಯ ಕನ್ನಿಕಾಗೆ ತಾಕೀತು ಮಾಡುತ್ತಾಳೆ. ಕನ್ನಿಕಾ ಕೂಡಲೇ ಲೆಟರ್‌ ಕೊಟ್ಟು ಸೈನ್‌ ಹಾಕುತ್ತಾಳೆ. ನನಗೆ ಸೀಟ್‌ ಕೊಟ್ಟದ್ದು ರಾಮ್‌ ದಾಸ್‌ ಕಾಮತ್‌, ಅವರೇ ಈ ಪತ್ರಕ್ಕೆ ಸಹಿ ಮಾಡಬೇಕು. ಇಲ್ಲದಿದ್ದರೆ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಹೇಳಿ ಭಾಗ್ಯ ಅಲ್ಲಿಂದ ಕ್ಲಾಸ್‌ ರೂಮ್‌ಗೆ ಹೋಗುತ್ತಾಳೆ. ಕನ್ನಿಕಾ, ತನ್ನ ತಂದೆಗೆ ಕರೆ ಮಾಡಿ, ಅಡ್ಮಿಷನ್‌ ಕ್ಯಾನ್ಸಲ್‌ ಆಗಿರುವ ಪತ್ರಕ್ಕೆ ಸಿಗ್ನೇಚರ್‌ ಮಾಡಲು ಹೇಳುತ್ತಾಳೆ. ನಾನು ಮಾಡುವುದಿಲ್ಲ, ಇದು ನಿನ್ನ ಭಾಗ್ಯ ನಡುವಿನ ವಿಚಾರ, ನಾನು ಮಧ್ಯೆ ಬರುವುದಿಲ್ಲ ಎಂದು ರಾಮ್‌ದಾಸ್‌ ಕಾಮತ್‌ ಕಡ್ಡಿ ತುಂಡಾದಂತೆ ಹೇಳುತ್ತಾರೆ. ಇನ್ನು ಒಂದು ವಾರದೊಳಗೆ ಭಾಗ್ಯಳನ್ನು ಸ್ಕೂಲ್‌ನಿಂದ ಹೊರ ಕಳಿಸುವುದಾಗಿ ಕನ್ನಿಕಾ ಶಪಥ ಮಾಡುತ್ತಾಳೆ.

ಮತ್ತೊಂದೆಡೆ ಶ್ರೇಷ್ಠ, ತಾನು ಅರೇಂಜ್‌ ಮಾಡಿರುವ ಡೂಪ್ಲಿಕೇಟ್‌ ಅಪ್ಪ‌ ಅಮ್ಮನನ್ನು ಮೀಟ್‌ ಮಾಡಿಸಲು ತಾಂಡವ್‌ನನ್ನು ಕರೆದೊಯ್ಯುತ್ತಾಳೆ. ಅವರ ಬೆನ್ನ‌ ಹಿಂದೆಯೇ ಮಗಳೊಂದಿಗೆ ತಾಂಡವ್‌ ಆಫೀಸ್‌ ಬಳಿ ಬಂದು ಇಳಿಯುವ ಭಾಗ್ಯ ಚಿಕ್ಕಮ್ಮ ಸುನಂದಾ, ಶ್ರೇಷ್ಠ ಅಡ್ರೆಸ್‌ ಪಡೆಯಲು ಯತ್ನಿಸುತ್ತಾಳೆ. ಆದರೆ ಆಫೀಸ್‌ ರಿಸೆಪ್ಷನಿಸ್ಟ್‌ ಶ್ರೇಷ್ಠ ಅಡ್ರೆಸ್‌ ಕೊಡಲು ನಿರಾಕರಿಸುತ್ತಾರೆ.

ತಾನು ಹೇಳಿದಂತೆ ಭಾಗ್ಯಳನ್ನು ಸ್ಕೂಲ್‌ನಿಂದ ಹೊರ ಕಳಿಸಲು ಕನ್ನಿಕಾ ಏನು ಪ್ಲಾನ್‌ ಮಾಡುತ್ತಾಳೆ? ಸುನಂದಾಗೆ ಶ್ರೇಷ್ಠ ಅಡ್ರೆಸ್‌ ಸಿಗುವುದಾ? ಎಂಬುದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

Whats_app_banner