Kollywood News: ಪ್ರೀತಿಸಿದಷ್ಟು ಸಮಯ ಜೊತೆಯಾಗಿ ಬದುಕಲಿಲ್ಲ,ಮದುವೆಯಾಗಿ ವರ್ಷ ಕಳೆಯಿತು ಅಷ್ಟೇ; ಖ್ಯಾತ ನಟಿ ಶ್ರುತಿ ಷಣ್ಮುಗಪ್ರಿಯ ಪತಿ ನಿಧನ
ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಅರವಿಂದ್ ಎಂಬುವರನ್ನು ಹಿರಿಯರ ಸಮ್ಮುಖದಲ್ಲಿ ಶ್ರುತಿ, ಕಳೆದ ವರ್ಷ ಮೇನಲ್ಲಿ ಮದುವೆ ಆಗಿದ್ದರು. ಅರವಿಂದ್ ಬಾಡಿ ಬಿಲ್ಡರ್ ಹಾಗೂ ವೇಟ್ ಲಾಸ್ ಕೋಚ್ ಆಗಿ ಕೆಲಸ ಮಾಡುತ್ತಿದ್ದರು.
ಕಾಲಿವುಡ್ ಖ್ಯಾತ ನಟಿ ಶ್ರುತಿ ಷಣ್ಮುಗಪ್ರಿಯ ಪತಿ ಅರವಿಂದ್ ಶೇಖರ್ ಹೃದಯಾಘಾತದಿಂದ ನಿಧನಾಗಿದ್ದಾರೆ. ಶ್ರುತಿ ಹಾಗೂ ಅರವಿಂದ್ ಕೆಲವು ವರ್ಷಗಳಿಂದ ಪ್ರೀತಿಸಿ ಕಳೆದ ವರ್ಷ ಮದುವೆ ಆಗಿದ್ದರು. ಕಳೆದ ಮೇನಲ್ಲಿ ಈ ಜೋಡಿ ಮೊದಲೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಇನ್ನೂ ಬಾಳಿ ಬದುಕಬೇಕಿದ್ದ ಅರವಿಂದ್ ಇಷ್ಟು ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿರುವ ವಿಚಾರ ಕೇಳಿ ಶ್ರುತಿ ಅಭಿಮಾನಿಗಳು, ಸ್ನೇಹಿತರು ಆಘಾತ ವ್ಯಕ್ತಪಡಿಸಿದ್ದಾರೆ.
ರಂಗಭೂಮಿ ಕಲಾವಿದೆ
ಶ್ರುತಿ ಷಣ್ಮುಗಪ್ರಿಯ ರಂಗಭೂಮಿ ಕಲಾವಿದೆ. ನಂತರ ಕಿರುತೆರೆಗೆ ಬಂದ ಅವರು ವಾಣಿ ರಾಣಿ, ಕಲ್ಯಾಣ ಪರಿಸು, ಪೊಣ್ಣುಂಚಲ್, ಭಾರತಿ ಕಣ್ಣಮ್ಮ ಸೇರಿ ಅನೇಕ ಹಿಟ್ ಧಾರಾವಾಹಿಗಳ ಪ್ರಮುಖ ಪಾತ್ರಗಳಲ್ಲಿ ನಟಿಸಿದರು. ಶ್ರುತಿ ಅವರಿಗೆ ತಮಿಳಿನಲ್ಲಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಇದ್ದಾರೆ. ತಾವು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಅರವಿಂದ್ ಎಂಬುವರನ್ನು ಹಿರಿಯರ ಸಮ್ಮುಖದಲ್ಲಿ ಶ್ರುತಿ, ಕಳೆದ ವರ್ಷ ಮೇನಲ್ಲಿ ಮದುವೆ ಆಗಿದ್ದರು. ಅರವಿಂದ್ ಬಾಡಿ ಬಿಲ್ಡರ್ ಹಾಗೂ ವೇಟ್ ಲಾಸ್ ಕೋಚ್ ಆಗಿ ಕೆಲಸ ಮಾಡುತ್ತಿದ್ದರು.
ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಶ್ರುತಿ, ಅರವಿಂದ್
ಪ್ರೀತಿಸಿ ಕೈ ಹಿಡಿದ ಹುಡುಗಿ ಜೊತೆ ನೂರಾರು ವರ್ಷ ಬಾಳಿ ಬದುಕಬೇಕಿದ್ದ ಅರವಿಂದ್, ಆಗಸ್ಟ್ 2 ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದೆ ನೋವು ಕಾಣಿಸಿಕೊಂಡ ಕೂಡಲೇ ಅರವಿಂದ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ ಅಷ್ಟರಲ್ಲಿ ಅರವಿಂದ್ ನಿಧನರಾಗಿದ್ದಾರೆ. ಶ್ರುತಿ ಹಾಗೂ ಅರವಿಂದ್ ಇಬ್ಬರಿಗೂ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ಫ್ಯಾನ್ ಫಾಲೋವರ್‌ಗಳಿದ್ದರು. ಇಬ್ಬರೂ ಜೊತೆಯಾಗಿ ರೀಲ್ಸ್ ಮಾಡುತ್ತಿದ್ದರು. ಇವರನ್ನು ಕ್ಯೂಟ್ ಕಪಲ್ ಎಂದೇ ಜನರು ಕರೆಯುತ್ತಿದ್ದರು. ಈಗ ಅರವಿಂದ್ ನಿಧನದ ಸುದ್ದಿ ತಿಳಿದು ಎಲ್ಲರೂ ಶಾಕ್ ಆಗಿದ್ದಾರೆ.
ಭಾವುಕ ಪೋಸ್ಟ್ ಹಂಚಿಕೊಂಡ ಶ್ರುತಿ ಷಣ್ಮುಗಪ್ರಿಯ
ಪತಿ ಜೊತೆಗಿನ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ನಟಿ ಶ್ರುತಿ ಷಣ್ಮುಗಪ್ರಿಯ, ''ನೀನು ನನ್ನಿಂದ ದೈಹಿಕವಾಗಿ ಮಾತ್ರ ದೂರಾಗಿದ್ದೀಯ. ಆದರೆ ನಿನ್ನ ಆತ್ಮ ನನ್ನನ್ನು ಸುತ್ತುವರೆದು ಯಾವಾಗಲೂ ಕಾಯುತ್ತಿರುತ್ತದೆ. ಪ್ರೀತಿಯ ಅರವಿಂದ್ ನಿನ್ನ ಆತ್ಮಕ್ಕೆ ಶಾಂತಿ ದೊರೆಯಲಿ. ನಿನ್ನ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚುತ್ತಿದೆ. ನನಗೆ ನೂರಾರು ನೆನಪುಗಳನ್ನು ಬಿಟ್ಟುಹೋಗಿದ್ದೀಯ, ಅದರನ್ನು ಜೀವನದ ಕೊನೆ ಕ್ಷಣದವರೆಗೂ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಮಿಸ್ ಯೂ'' ಎಂದು ನೋವಿನಿಂದ ಬರೆದುಕೊಂಡಿದ್ದಾರೆ. ಶ್ರುತಿ ಪೋಸ್ಟ್‌ಗೆ ನೆಟಿಜನ್ಸ್ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ಹೇಳುತ್ತಾ ಕಾಂಮೆಂಟ್ ಮಾಡುತ್ತಿದ್ದಾರೆ.