ವೇಟ್ಟೈಯನ್ ಸಿನಿಮಾದ ಬಜೆಟ್ ಎಷ್ಟು ಗೆಸ್ ಮಾಡ್ತೀರಾ; ಕ್ಲೂ ಕೊಡ್ಲಾ.. ಪುಷ್ಪಾ1 ಫಿಲಂ ಕಲೆಕ್ಷನ್ ಆಸುಪಾಸು
ಭಾರತದ ಉದ್ದಗಲಕ್ಕೂ ಇಂದು ಸೂಪರ್ ಸ್ಟಾರ್ ರಜನೀಕಾಂತ್ ಹವಾ. ಬಹುನಿರೀಕ್ಷಿತ ಸಿನಿಮಾ ವೇಟ್ಟೈಯನ್ ಸಿನಿಮಾ ತೆರೆಕಂಡಿದೆ. ಎಲ್ಲರಿಗೂ ಕುತೂಹಲ ಇರುವ ವಿಷಯ ಇದು. ವೇಟ್ಟೈಯನ್ ಸಿನಿಮಾದ ಬಜೆಟ್ ಎಷ್ಟು ಗೆಸ್ ಮಾಡ್ತೀರಾ; ಕ್ಲೂ ಕೊಡ್ಲಾ, ಪುಷ್ಪಾ1 ಫಿಲಂ ಕಲೆಕ್ಷನ್ ಆಸುಪಾಸು. ವೇಟ್ಟೈಯನ್ ಬಜೆಟ್ ಎಷ್ಟೆಂದು ನಿರ್ದೇಶಕ ಟಿಜೆ ಜ್ಞಾನವೇಲ್ ಹೇಳಿದ್ದಾರೆ. ಆ ವಿವರ ಇಲ್ಲಿದೆ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ವೇಟ್ಟೈಯನ್ ಇಂದು (ಅಕ್ಟೋಬರ್ 10) ತೆರೆ ಕಂಡಿದೆ. ಇದು ಆಕ್ಷನ್ ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗಿದ್ದು, ಜೈ ಭೀಮ್ ಖ್ಯಾತಿಯ ನಿರ್ದೇಶಕ ಟಿಜೆ ಜ್ಞಾನವೇಲ್ ನಿರ್ದೇಶಿಸಿದ್ದಾರೆ. ರಜನಿಕಾಂತ್ ಅಭಿಮಾನಿಗಳಿಗೆ ಈ ಸಿನಿಮಾ ರಸದೌತಣ ಎಂದು ಬಿಂಬಿಸಲಾಗಿದೆ. ವಿಶೇಷ ಎಂದರೆ ಟಿಜೆ ಜ್ಞಾನವೇಲ್ ಮತ್ತು ರಜನೀಕಾಂತ್ ಕಾಂಬಿನೇಷನ್‌ನ ಮೊದಲ ಸಿನಿಮಾ ಇದು. ಘಟಾನುಘಟಿಗಳ ಈ ಸಿನಿಮಾದ ಬಜೆಟ್ ಎಷ್ಟು ಎಂಬ ಕುತೂಹಲ ಸಹಜವಾಗಿಯೇ ಇತ್ತು. ಆ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ನಿರ್ದೇಶಕ ಟಿಜೆ ಜ್ಞಾನವೇಲ್ ಅವರು ವೇಟ್ಟೈಯನ್ ಬಜೆಟ್ ಎಷ್ಟು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ವೇಟ್ಟೈಯನ್ ಬಜೆಟ್ ಎಷ್ಟು
ಕಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿರುವ ಸಿನಿಮಾ ವೆಟ್ಟೈಯಾನ್. ಇದರ ಬಜೆಟ್ ಎಷ್ಟು ಎಂಬುದು ಬಹಳಷ್ಟು ಜನ ತಲೆ ಕೆಡಿಸಿಕೊಂಡ ವಿಚಾರವಾಗಿತ್ತು. ರಜನೀಕಾಂತ್ ಅಭಿಮಾನಿಗಳಂತೂ ವೇಟ್ಟೈಯನ್ ಬಜೆಟ್ ಕುರಿತೇ ಬೆಟ್ ಕೂಡ ಕಟ್ಟಿಕೊಂಡಿದ್ದರು. ನಿರ್ದೇಶಕ ಟಿಜೆ ಜ್ಞಾನವೇಲ್ ಅವರು ವೇಟ್ಟೈಯನ್ ಬಜೆಟ್ ಎಷ್ಟು ಎಂಬುದನ್ನು ಹೇಳಿರುವ ಕಾರಣ ಆ ಕುತೂಹಲ ಸ್ವಲ್ಪ ತಣಿದಿದೆ.
ಹೌದು, ವೇಟ್ಟೈಯನ್ ಬಜೆಟ್ ಎಷ್ಟು ಎಂಬುದನ್ನು ಗೆಸ್ ಮಾಡಿದ್ರಾ? ಹೆಡ್ಡಿಂಗ್‌ನಲ್ಲಿ ಕ್ಲೂ ಕೊಟ್ಟಿದ್ದೆ. ಪುಷ್ಪಾ 1 ಸಿನಿಮಾದ ಕಲೆಕ್ಷನ್ (302 ಕೋಟಿ ರೂ. -imdb ಮಾಹಿತಿ) ಆಸುಪಾಸು ಅಂತ. ಹೌದು, ವೇಟ್ಟೈಯನ್ ಸಿನಿಮಾ ನಿರ್ದೇಶಕ ಟಿಜೆ ಜ್ಞಾನವೇಲ್ ಹೇಳಿದ್ದೂ ಅದನ್ನೇ 300 ಕೋಟಿ ರೂಪಾಯಿ ಅಂತ. ರಜನೀಕಾಂತ್ ಅಭಿಮಾನಿಗಳು ಮತ್ತು ಸಿನಿ ರಸಿಕರು ಈ ಮೊತ್ತ ಗಮನಿಸಿ ಹುಬ್ಬೇರಿಸಿಕೊಂಡಿದ್ದಾರೆ ಎಂದು ಒಟಿಟಿ ಪ್ಲೇ ವರದಿ ಹೇಳಿದೆ.
ತಮಿಳು ಚಿತ್ರರಂಗದ ದೊಡ್ಡ ಬಜೆಟ್‌ನ ಚಿತ್ರ ಇದು. ಇತ್ತೀಚಿನ ವರ್ಷದಲ್ಲಿ ಇಷ್ಟು ದೊಡ್ಡ ಮೊತ್ತದ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿರಲಿಲ್ಲ. ಹೀಗಾಗಿಯೇ ರಜನೀಕಾಂತ್ ಅಭಿಮಾನಿಗಳಷ್ಟೇ ಅಲ್ಲ, ಸಿನಿಮಾ ಪ್ರಿಯರು ದಂಗಾಗಿದ್ದಾರೆ. ರಜನೀಕಾಂತ್ ಸಿನಿಮಾ ಅಂದ ಮೇಲೆ ಕಲೆಕ್ಷನ್ ಬಗ್ಗೆ ಭಯ ಇಲ್ಲ ಎಂಬ ಮಾತು ಇಂಡಸ್ಟ್ರಿಯಲ್ಲಿದೆ. ಅದೇ ವಿಶ್ವಾಸದಲ್ಲಿ ಎಲ್ಲರೂ ಇದ್ದಾರೆ.
ವೇಟ್ಟೈಯನ್- ರಜನೀಕಾಂತ್‌ಗಾಗಿಯೇ ಬರೆದ ಚಿತ್ರಕಥೆ ಆಗಿರಲಿಲ್ಲ
ವೇಟ್ಟೈಯನ್ ಕಥೆ ಸೂಪರ್‌ಸ್ಟಾರ್ ರಜನೀಕಾಂತ್ ಅವರಿಗಾಗಿ ಬರೆದ ಕಥೆ ಆಗಿರಲಿಲ್ಲ. ಆದರೆ, ರಜನೀಕಾಂತ್ ಎಂಟ್ರಿ ನಂತರ ಆಗಿತ್ತು. ನಿರ್ದೇಶಕ ಟಿಜೆ ಜ್ಞಾನವೇಲ್ ಅವರು ಕಥೆಯನ್ನು ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಮತ್ತು ಸಿನಿಮಾ ಪ್ರಿಯರಿಗೆ ಬೇಕಾದಂತೆ ತಿದ್ದುಪಡಿ ಮಾಡಿಕೊಂಡರು. ಕಥೆಯ ತಿರುಳನ್ನು ಹಾಗೆಯೇ ಉಳಿಸಿಕೊಂಡು ಮಾಡಿದ ಬದಲಾವಣೆ ಮತ್ತು ಅದರಲ್ಲಿ ಸಮತೋಲನ ಕಾಪಾಡಿದ್ದರ ಬಗ್ಗೆ ಖುಷಿ ಇದೆ. ಅದು ಸಮಾಧಾನ ಕೊಟ್ಟಿದೆ ಎಂದು ಜ್ಞಾನವೇಲ್ ಹೇಳಿದ್ದಾಗಿ ವರದಿ ವಿವರಿಸಿದೆ.
ವೇಟ್ಟೈಯನ್ ಸಿನಿಮಾ ಬಿಡುಗಡೆ ದಿನಾಂಕವನ್ನು ಲೈಕಾ ಪ್ರೊಡಕ್ಷನ್ಸ್ ತೀರ್ಮಾನಿಸಿದ್ದು, ಆ ನಿರ್ಧಾರ ಅದರದ್ದೇ ಎಂದು ಜ್ಞಾನವೇಲ್ ತಿಳಿಸಿದ್ದರು. ಈ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ವಿಶೇಷ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ನ್ಯಾಯಮೂರ್ತಿ ಸತ್ಯದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಂಜು ವಾರಿಯರ್ ಅವರು ತಾರಾ ಎಂಬ ಪಾತ್ರದಲ್ಲಿದ್ದಾರೆ. ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಡಿ ವಿಜಯನ್, ರಿತಿಕಾ ಸಿಂಗ್, ರೋಹಿಣಿ, ಅಭಿರಾಮಿ, ರಮೇಶ್ ತಿಲಕ್, ಕಿಶೋರ್, ರಕ್ಷನ್ ಮತ್ತು ಇತರರು ತಾರಾಗಣದಲ್ಲಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಿನಿಮಾಕ್ಕೆ ಪ್ಲಸ್ ಪಾಯಿಂಟ್. ಎಸ್‌ಆರ್ ಕಥಿರ್ ಛಾಯಾಗ್ರಹಣ ನಿರ್ದೇಶಕರಾಗಿ, ಫಿಲೋಮಿನ್ ರಾಜ್ ಸಂಕಲನ ಮಾಡಿದ್ದಾರೆ. ಚಿತ್ರಕಥೆಯನ್ನು ಟಿಜೆ ಜ್ಞಾನವೇಲ್ ಮತ್ತು ಬಿ ಕೀರ್ತಿಕಾ ಹಣೆದಿದ್ದಾರೆ.