Lakshmi Baramma Serial: ಅಹಂಕಾರದ ಮಾತಿಗೆ ಕಾಲದ ಪೆಟ್ಟು; ಕಾವೇರಿ ಹುಚ್ಚಾಟ ನೆಲಕಚ್ಚೋ ಸಮಯ ಬಂತು
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿಯ ಎಲ್ಲಾ ಹುಚ್ಚಾಟಗಳೂ ನಿಲ್ಲುವ ಸಮಯ ಬಂದಿದೆ. ದಾರಿಯಲ್ಲಿ ಸಿಕ್ಕ ಗೊಂಬೆ ಆಡಿಸುವವನು ಏನೆಲ್ಲ ಹೇಳಿದ್ದಾನೆ. ಅದಕ್ಕೆ ಕಾವೇರಿ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾಳೆ ನೋಡಿ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಸದಾ ಕಾಲ ಕಾವೇರಿ ತನ್ನ ಮಗ ಹಾಗೂ ಸೊಸೆಯನ್ನು ದೂರ ಮಾಡುವುದು ಹೇಗೆ ಎಂದೇ ಆಲೋಚನೆ ಮಾಡುತ್ತಾಳೆ. ಅವಳ ಹುಚ್ಚಾಟಗಳು ಒಂದೆರಡಲ್ಲ. ತನ್ನ ಮಾನಸಿಕ ಸ್ಥಿತಿಯನ್ನು ಸರಿಯಾಗಿ ಇಟ್ಟುಕೊಳ್ಳಲಾಗದ ಕಾವೇರಿ ತನ್ನ ಸೊಸೆಯನ್ನು ಹುಚ್ಚಾಸ್ಪತ್ರೆಗೆ ಸೇರಿಸಿದ್ದಾಳೆ. ಆದರೆ ಹೇಗಾದರೂ ಮಾಡಿ ಅವಳನ್ನು ಕೊಲೆ ಮಾಡಬೇಕು ಎಂದು ಆಲೋಚಿಸುತ್ತಿದ್ದಾಳೆ. ದಾರಿಯಲ್ಲಿ ಸಿಕ್ಕ ಗೊಂಬೆ ಆಡಿಸುವವನು ಕಾವೇರಿ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾನೆ. ಅವನು ಹೇಳಿದ ಯಾವ ಮಾತೂ ಇವಳಿಗೆ ಇಷ್ಟ ಆಗುವುದಿಲ್ಲ.
ಇಂದು ಎಲ್ಲ ಒಳ್ಳೆಯದೇ ಆಗುತ್ತದೆ ಎಂದು ಅವನು ಹೇಳುತ್ತಾನೆ. ಆಗ ಕಾವೇರಿಗೆ ಖುಷಿ ಆಗುತ್ತದೆ. ಎಲ್ಲ ತಾನು ಅಂದುಕೊಂಡ ಹಾಗೇ ಆಗುತ್ತದೆ ಎಂದು ಅವಳು ಅಂದುಕೊಳ್ಳುತ್ತಾಳೆ. ಆದರೆ ನಿಜಾಂಶ ಬೇರೆಯೇ ಇರುತ್ತದೆ. ಅವಳು ಅಂದುಕೊಂಡ ಹಾಗಲ್ಲ, ಅವಳು ಅಂದುಕೊಂಡಿರದ ರೀತಿ ಬದಲಾವಣೆ ಆಗುತ್ತದೆ ಎಂದು ಅವನು ಹೇಳುತ್ತಾನೆ. ನಿನ್ನ ಹುಚ್ಚಾಳಗಳೆಲ್ಲ ನೆಲಕಚ್ಚುವ ಸಮಯ ಬಂದಿದೆ ಎಂದು ಹೇಳುತ್ತಾನೆ.
ಇಲ್ಲ ಯಾವತ್ತೂ ಹಾಗೆಲ್ಲ ಆಗೋದಿಲ್ಲ. ನಾನು ಮಾಡಿದ ಪ್ಲಾನ್ ಯಾವಾಗಲೂ ಪಕ್ಕಾ ಇರುತ್ತದೆ. ನಾನು ಅಂದುಕೊಂಡಿದ್ದನ್ನು ಸಾಧಿಸುತ್ತೇನೆ ಎಂದು ಅವಳು ಹೇಳುತ್ತಾಳೆ. ಆಗ ಅವನು ನಗಾಡುತ್ತಾನೆ. ಆದರೆ ಅವನು ಯಾವಾಗ ಸಿಕ್ಕಾಗಲೂ ಅವನು ಹೇಳಿದ ಮಾತುಗಳೇ ನಿಜವಾಗಿದೆ. ಆ ಕಾರಣಕ್ಕಾಗಿ ಅವಳಲ್ಲಿ ಒಂದು ಸಣ್ಣ ಭಯವೂ ಹುಟ್ಟಿರುತ್ತದೆ. ಇನ್ನು ಅವನು ಮಾತಾಡಿ ಹೋಗುವಾಗ ಇವಳ ಹಿಂದೆ ಕೀರ್ತಿ ಬಂದು ನಿಂತಿದ್ದಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.