Jothe Jotheyali:ಧಾರಾವಾಹಿಯಿಂದ ಅನಿರುದ್ಧ್ ಹೊರಬಂದ ವಿಚಾರ ಮೇಘಾಗೆ ಗೊತ್ತೇ ಇಲ್ವಂತೆ...ಆಕೆ ಹೇಳಿದ್ದೇನು..?
ಏನಾಗುತ್ತಿದೆ ಎಂಬ ವಿಚಾರ ಗೊತ್ತಿರಲಿಲ್ಲ. ಇದಕ್ಕೂ ಮುನ್ನು ಕೂಡಾ ಚಿತ್ರೀಕರಣದಲ್ಲಿ ಕೆಲವರ ನಡುವೆ ಮನಸ್ತಾಪ ಉಂಟಾಗಿತ್ತು. ಆದರೆ ರಾಜಿಯಾಗುವ ಮೂಲಕ ಎಲ್ಲವೂ ಸುಸೂತ್ರವಾಗಿ ಜರುಗುತ್ತಾ ಬಂದಿತ್ತು. ಆದರೆ ಈಗ ಈ ರೀತಿ ಆಗಿದೆ. ಆದರೆ ಇವೆಲ್ಲವೂ ಶೀಘ್ರದಲ್ಲೇ ಸರಿ ಆಗಲಿದೆ ಎಂಬ ನಂಬಿಕೆ ಇದೆ ಎಂದು ಮೇಘಾ ಪ್ರತಿಕ್ರಿಯಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಜೀ ಕನ್ನಡದ 'ಜೊತೆ ಜೊತೆಯಲಿ' ಧಾರಾವಾಹಿ ವಿಚಾರ ಭಾರೀ ಸದ್ದು ಮಾಡುತ್ತಿದೆ. ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಜತ್ಕರ್ ಅವರನ್ನು ತಂಡ ಕೈ ಬಿಟ್ಟಿದೆ. ಅನಿರುದ್ಧ್ ಕೂಡಾ ತಮ್ಮ ಮೇಲಿನ ಆರೋಪವನ್ನು ನಿರಾಕರಿಸುತ್ತಿದ್ದಾರೆ. ಜೊತೆಗೆ ಧಾರಾವಾಹಿಯಿಂದ ಹೊರಬಂದಿದ್ಧಾರೆ.
ಅನಿರುದ್ಧ್ ಧಾರಾವಾಹಿಯಿಂದ ಹೊರಬಂದಿರುವುದರಿಂದ ಟಿಆರ್‌ಪಿ ವಿಚಾರದಲ್ಲಿ ಸಮಸ್ಯೆ ಉಂಟಾಗಬಹುದಾ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ಅನಿರುದ್ಧ್ ಅವರಿಗಾಗಿ ಈ ಧಾರಾವಾಹಿ ನೋಡುತ್ತಿದ್ದೆವು ಒಂದು ಗುಂಪು ಒಂದೆಡೆ ಆದರೆ, ಅವರ ಜಾಗಕ್ಕೆ ಸೂಕ್ತ ನಟನನ್ನು ಹುಡುಕುವ ಕೆಲಸ ಧಾರಾವಾಹಿ ತಂಡಕ್ಕೆ ಇದೆ. ಕೆಲವು ಮೂಲಗಳ ಪ್ರಕಾರ, ಆರ್ಯವರ್ಧನ್ ಪಾತ್ರ ಇಲ್ಲದೆ ನಿರ್ದೇಶಕ ಆರೂರು ಜಗದೀಶ್ ಧಾರಾವಾಹಿಯನ್ನು ಮುಂದುವರೆಸುವ ಪ್ರಯತ್ನ ಮಾಡುತ್ತಿದ್ದಾರಂತೆ. ಇಷ್ಟೆಲ್ಲಾ ರಂಪ ರಾದ್ಧಾಂತ ಆದರೂ ನಟಿ ಮೇಘಾಶೆಟ್ಟಿಗೆ ಈ ವಿಚಾರ ಗೊತ್ತೇ ಇಲ್ಲವಂತೆ.
ನಾನು 2 ದಿನಗಳಿಂದ ನ್ಯೂಸ್ ನೋಡೇ ಇಲ್ಲ, ಏನಾಗುತ್ತಿದೆ ಎಂಬ ವಿಚಾರ ಗೊತ್ತಿರಲಿಲ್ಲ. ಇದಕ್ಕೂ ಮುನ್ನು ಕೂಡಾ ಚಿತ್ರೀಕರಣದಲ್ಲಿ ಕೆಲವರ ನಡುವೆ ಮನಸ್ತಾಪ ಉಂಟಾಗಿತ್ತು. ಆದರೆ ರಾಜಿಯಾಗುವ ಮೂಲಕ ಎಲ್ಲವೂ ಸುಸೂತ್ರವಾಗಿ ಜರುಗುತ್ತಾ ಬಂದಿತ್ತು. ಆದರೆ ಈಗ ಈ ರೀತಿ ಆಗಿದೆ. ಆದರೆ ಇವೆಲ್ಲವೂ ಶೀಘ್ರದಲ್ಲೇ ಸರಿ ಆಗಲಿದೆ ಎಂಬ ನಂಬಿಕೆ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಹೈದರಾಬಾದ್ ಚಿತ್ರೀಕರಣದಲ್ಲಿ ಮೇಘಾಶೆಟ್ಟಿಯೊಂದಿಗೆ ಕೂಡಾ ಮನಸ್ತಾಪ
ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಕೆಲವು ದಿನಗಳ ಕಾಲ ಹೈದರಾಬಾದ್‌ನಲ್ಲಿ ಧಾರಾವಾಹಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಧಾರಾವಾಹಿ ತಂಡಕ್ಕೂ ಮೇಘಾಶೆಟ್ಟಿಗೂ ಮನಸ್ತಾಪ ಉಂಟಾಗಿ ಆಕೆಯನ್ನು ಕೂಡಾ ಹೊರಕಳಿಸುವ ನಿರ್ಧಾರ ಮಾಡಿದ್ದರಂತೆ. ಆದರೆ ಮೇಘಾ, ಕ್ಷಮೆ ಕೇಳಿದ್ದರಿಂದ ಈ ಸಮಸ್ಯೆ ಅಲ್ಲೆ ಬಗೆಹರಿದಿದೆ.
ಇದೀಗ ಕೊನೆಗೂ ಅನಿರುದ್ಧ್ ಇನ್ಮುಂದೆ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮುಂದುವರೆಯುವುದಿಲ್ಲ ಎಂಬ ವಿಚಾರ ತಿಳಿದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಈ ಧಾರಾವಾಹಿ ನೋಡುತ್ತಿದ್ದೇ ಅನಿರುದ್ಧ್ ಅವರಿಗೋಸ್ಕರ. ಆದರೆ ಅವರನ್ನು ಧಾರಾವಾಹಿಯಿಂದ ಹೊರ ಕಳಿಸಿ, ಕಿರುತೆರೆಯಿಂದ ಕೂಡಾ ಬ್ಯಾನ್ ಮಾಡುತ್ತಿದ್ದಾರೆ ಎಂದ ಮೇಲೆ ಇನ್ಮುಂದೆ ಈ ಧಾರಾವಾಹಿ ನೋಡುವುದಿಲ್ಲ, ನಾವೂ ಬಹಿಷ್ಕರಿಸುತ್ತೇವೆ ಎನ್ನುತ್ತಿದ್ದಾರೆ.
ಆರ್ಯವರ್ಧನ್ ಪಾತ್ರ ಮಾಡೋರು ಯಾರು..?
ಅನಿರುದ್ಧ್ ಬದಲಿಗೆ ಅವರ ಜಾಗಕ್ಕೆ ಮತ್ತೊಬ್ಬ ನಟನನ್ನು ಕರೆತರುವುದು ಧಾರಾವಾಹಿ ತಂಡಕ್ಕೆ ಈಗ ದೊಡ್ಡ ಚಾಲೆಂಜ್ ಆಗಿದೆ. ಈ ಪಾತ್ರಕ್ಕೆ ಯಾವ ನಟ ಸೂಟ್ ಆಗಬಹುದು ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ಈ ನಡುವೆ ಕೆಲವೊಂದು ನಟರ ಹೆಸರು ಆರ್ಯವರ್ಧನ್ ಪಾತ್ರಕ್ಕೆ ಕೇಳಿಬರುತ್ತಿದೆ. ಹಿಟ್ಲರ್ ಕಲ್ಯಾಣ ಖ್ಯಾತಿಯ ದಿಲೀಪ್ ರಾಜ್, ಕಲಾಕಾರ್ ಖ್ಯಾತಿಯ ಹರೀಶ್ ರಾಜ್, ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ, ಅಶ್ವಿನಿ ನಕ್ಷತ್ರ ಖ್ಯಾತಿಯ ಜಯರಾಮ್ ಕಾರ್ತಿಕ್, ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ, ಹರ ಹರ ಮಹಾದೇವ ಖ್ಯಾತಿಯ ವಿನಯ್ ಗೌಡ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ. ಆದರೆ ಧಾರಾವಾಹಿ ತಂಡದ ಆಯ್ಕೆ ಯಾರು ಎಂಬುದು ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ.