Kotee OTT release: ಒಟಿಟಿಗೆ ಬಂತು ಕೋಟಿ ಸಿನಿಮಾ; ಡಾಲಿ ಧನಂಜಯ್‌ ನಟನೆಯ ಫ್ಯಾಮಿಲಿ ಡ್ರಾಮಾವನ್ನು ಮನೆಯಲ್ಲೇ ನೋಡಿ-ott news daali dhananjaya kotee movie released in ott watch param directorial debut family drama in online ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Kotee Ott Release: ಒಟಿಟಿಗೆ ಬಂತು ಕೋಟಿ ಸಿನಿಮಾ; ಡಾಲಿ ಧನಂಜಯ್‌ ನಟನೆಯ ಫ್ಯಾಮಿಲಿ ಡ್ರಾಮಾವನ್ನು ಮನೆಯಲ್ಲೇ ನೋಡಿ

Kotee OTT release: ಒಟಿಟಿಗೆ ಬಂತು ಕೋಟಿ ಸಿನಿಮಾ; ಡಾಲಿ ಧನಂಜಯ್‌ ನಟನೆಯ ಫ್ಯಾಮಿಲಿ ಡ್ರಾಮಾವನ್ನು ಮನೆಯಲ್ಲೇ ನೋಡಿ

Kotee OTT release date: ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾ ಒಟಿಟಿಗೆ ಆಗಮಿಸಿದೆ. ಈ ಸಿನಿಮಾದ ಮೂಲಕ ಕಲರ್ಸ್‌ ಕನ್ನಡದ ಮನರಂಜನೆ ಚಾನೆಲ್‌ ಹೆಡ್‌ ಆಗಿದ್ದ ಪರಮೇಶ್ವರ ಗುಂಡ್ಕಲ್‌ ಅವರು ನಿರ್ದೇಶಕರಾಗಿ ಹೊರಹೊಮ್ಮಿದ್ದರು. ಈ ಸಿನಿಮಾವನ್ನು ಈಗ ಆನ್‌ಲೈನ್‌ನಲ್ಲಿ ನೋಡಬಹುದು.

Kotee OTT release: ಒಟಿಟಿಗೆ ಬಂತು ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾ
Kotee OTT release: ಒಟಿಟಿಗೆ ಬಂತು ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾ

ಬೆಂಗಳೂರು: ಡಾಲಿ ಧನಂಜಯ್‌ ನಟನೆಯ ಈ ವರ್ಷದ ಮೊದಲ ಸಿನಿಮಾ ಕೋಟಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಕಲರ್ಸ್‌ ಕನ್ನಡ ಚಾನೆಲ್‌ನ ಎಂಟರ್‌ಟೇನ್‌ಮೆಂಟ್‌ ಹೆಡ್‌ ಆಗಿದ್ದ ಪರಮೇಶ್ವರ ಗುಂಡ್ಕಲ್‌ ಈ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ಈ ಫ್ಯಾಮಿಲಿ ಡ್ರಾಮಾ ಬಾಕ್ಸ್‌ ಆಫೀಸ್‌ನಲ್ಲಿ ತಕ್ಕಮಟ್ಟಿಗೆ ಗಳಿಕೆ ಮಾಡಿತ್ತು. ಇದೀಗ ಈ ಚಿತ್ರ ಎರಡು ತಿಂಗಳ ಬಳಿಕ ಒಟಿಟಿಗೆ ಎಂಟ್ರಿ ನೀಡಿದೆ. ಈ ಸಿನಿಮಾವನ್ನು ಈ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಸಮಯದಲ್ಲಿ ಮನೆಯಲ್ಲೇ ನೋಡಬಹುದು. ಇದು ಜಿಯೋ ಸ್ಟುಡಿಯೋಸ್‌ನಿಂದ ನಿರ್ಮಾಣವಾದ ಮೊದಲ ಕನ್ನಡ ಸಿನಿಮಾವಾಗಿದೆ.

ಕೋಟಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ

ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾ ಆಗಸ್ಟ್‌ 14ರಂದು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಹೌದು, ಇಂದೇ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಆಸಕ್ತರು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಈ ಸಿನಿಮಾವನ್ನು ನೋಡಬಹುದು. ಇಂದು ಬಿಡುವಿಲ್ಲದೆ ಇದ್ದರೆ ನಾಳೆ ಸ್ವಾತಂತ್ರ್ಯ ದಿನದ ರಜೆಯ ಸಮಯದಲ್ಲಿ ನೋಡಬಹುದು. ನಾಳೆ ಕೃಷ್ಣಂ ಪ್ರಣಯ ಸಖಿ, ಗೌರಿ, ತಂಗಲಾನ್‌ನಂತಹ ಸಿನಿಮಾಗಳು ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಸಾಕಷ್ಟು ಜನರು ಚಿತ್ರಮಂದಿರಗಳಲ್ಲೂ ನಾಳೆ ಚಿತ್ರಪ್ರೇಮಿಗಳು ಹೆಚ್ಚಿರಲಿದ್ದಾರೆ.

ಡಾಲಿ ಧನಂಜಯ್‌ ನಟನೆಯ ಈ ಸಿನಿಮಾದ ಕುರಿತು ಕೊನೆಯವರೆಗೂ ಪರಮ್‌ ಮಾಹಿತಿ ನೀಡಿರಲಿಲ್ಲ. ಗುಟ್ಟಾಗಿಯೇ ಶೂಟಿಂಗ್‌ ನಡೆಸಿದ್ದರು. ಸಿನಿಮಾದ ಟೀಸರ್‌ ಬಿಡುಗಡೆ ಮಾಡುವ ಮೂಲಕ ಎಲ್ಲರಿಗೂ ಈ ಕುರಿತು ಮಾಹಿತಿ ನೀಡಿದ್ದರು. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಬಳಿಕ ಈ ಕೋಟಿ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ, ಪ್ರೇಕ್ಷಕರ ನಿರೀಕ್ಷೆಯನ್ನು ಮುಟ್ಟುವಲ್ಲಿ ಚಿತ್ರ ವಿಫಲವಾಗಿತ್ತು.

ಕೋಟಿ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾದ ಎರಡು ತಿಂಗಳ ಬಳಿಕ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಸಿನಿಮಾ ಜಿಯೋ ಸಿನಿಮಾದಲ್ಲಿ ರಿಲೀಸ್‌ ಆಗಲಿದೆ ಎಂದುಕೊಳ್ಳಲಾಗಿತ್ತು. ಯಾಕೆಂದರೆ, ಜಿಯೋ ಸಿನಿಮಾಕ್ಕೆ ಸಂಬಂಧಪಟ್ಟ ಅಂಗಸಂಸ್ಥೆ ಈ ಚಿತ್ರ ನಿರ್ಮಿಸಿತ್ತು. ಆದರೆ, ಈ ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಿದೆ.

ಕೋಟಿ ಸಿನಿಮಾದಲ್ಲಿ ಡಾಲಿ ಧನಂಜಯ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರು ಯುವ ಕ್ಯಾಬ್‌ ಚಾಲಕನ ಪಾತ್ರದಲ್ಲಿ ನಟಿಸಿದ್ದಾರೆ. ಪ್ಯಾಕರ್ಸ್‌ ಆಂಡ್‌ ಮೂವರ್ಸ್‌ ಕೆಲಸವನ್ನೂ ಮಾಡುತ್ತಾರೆ. ಈತ ದೊಡ್ಡ ಮೊತ್ತದ ಸಾಲದಲ್ಲಿ ಬೀಳುತ್ತಾರೆ. ಈ ಸಾಲದಿಂದ ಹೊರಬರಲು ಸ್ಥಳೀಯ ಡಾಲ್‌ ದಿನೋ ಸಾಹುಕಾರನ ನೆರವು ಪಡೆಯುತ್ತಾರೆ. ಆದರೆ, ಸಾಹುಕಾರ ಹೇಳಿರುವ ಕೆಲಸವು ಕೋಟಿಯ ನೈತಿಕತೆಗೆ ವಿರುದ್ಧವಾಗಿರುತ್ತದೆ. ಮುಂದೇನಾಗುತ್ತದೆ ಎನ್ನುವುದೇ ಸಿನಿಮಾದ ಕಥೆ.

ಕೋಟಿ ಸಿನಿಮಾದ ವಿಮರ್ಶೆ

“ಒಳ್ಳೆಯವನಾಗಿರುವುದು ಕಷ್ಟ. ಸಿನಿಮಾದಲ್ಲಂತೂ ಅದು ಇನ್ನೂ ಕಷ್ಟ! ಅವನೆಷ್ಟು ಒಳ್ಳೆಯವನು ಎಂಬುದಕ್ಕಾಗಿ ಅರ್ಧ ಸಿನಿಮಾ, ಒಳ್ಳೆಯವನಾಗಿಯೇ ಉಳಿದ್ನಾ ಇಲ್ಲವಾ ಎಂಬುದಕ್ಕಾಗಿ ಮತ್ತರ್ಧ ಸಿನಿಮಾ! ಹೀಗೆ ಭಾಗಮಾಡಿಕೊಂಡು ನೋಡಬಹುದಾದ ಸಿನಿಮಾ ಕೋಟಿ. ಇದು ನಿರ್ದೇಶಕರ ಮೊದಲನೇ ಸಿನಿಮಾ ಅನ್ನಿಸುವುದೇ ಇಲ್ಲ. ಅಷ್ಟು ಸೊಗಸಾದ ನಿರ್ದೇಶನ. ಧಾರಾವಾಹಿ ಕ್ಷೇತ್ರದ ಅಧಿಪತಿಯಾಗಿದ್ದಕ್ಕೋ ಏನೋ ಚಿತ್ರಕಥೆ ಹಲಸೂರಿನ ಕೆರೆಯಲ್ಲಿ ದೋಣಿ ವಿಹಾರ ಮಾಡಿದಂತೆ ಅನ್ನಿಸುತ್ತೆ. ಚೂರು ವೇಗ ಬೇಕಿತ್ತು. ದೋಣಿಯನ್ನು ಹರಿವ ನೀರಿಗಿಳಿಸಿದಿದ್ದರೆ ಅದರ ಮಜಾನೇ ಬೇರೆ ಇರ್ತಿತ್ತು. ಹಾಗಂತ ಸಿನಿಮಾ ಚೆನ್ನಾಗಿಲ್ಲ ಅಂತಲ್ಲ! ಖಂಡಿತವಾಗಿಯೂ ಸಿನಿಮಾ ಚೆನ್ನಾಗಿದೆ. ಚೂರು ಸಹನೆ ಬೇಡುತ್ತೆ ಅಷ್ಟೇ. ಮುಲಾಜಿಲ್ಲದೆ ಹದಿನೈದು ನಿಮಿಷ ಕಡಿಮೆ ಮಾಡಬಹುದು ಅನ್ನಿಸಿತು. ಡಾಲಿ ಅವರ ಅಭಿನಯವಂತೂ ಸೀದಾ ಎದೆಗಿಳಿದುಬಿಡುತ್ತೆ. ಈ ಹಿಂದಿನ ನಾಲ್ಕಾರು ಚಿತ್ರಗಳಿಗೆ ಹೋಲಿಸಿದರೆ ಇದು ಅವರ ಅತ್ಯುತ್ತಮ ಅಭಿನಯದ ಸಿನಿಮಾ. ಡಾಲಿ ಅಭಿನಯ ಅದೆಷ್ಟು ಚೆಂದವಿದೆ ಅಂದ್ರೆ ಡಾಲಿ ನಕ್ಕಾಗ ನಮ್ಮ ತುಟಿಗಳು ಅರಳಿ, ಅತ್ತಾಗ ಕಣ್ಣುಗಳು ತುಂಬಿಕೊಳ್ಳುತ್ತವೆ” ಎಂದು ಸೋಷಿಯಲ್‌ ಮೀಡಿಯಾದಲ್ಲಿ ವೀರಕಪುತ್ರ ಎಂ ಶ್ರೀನಿವಾಸ ವಿಮರ್ಶೆ ಮಾಡಿದ್ದಾರೆ.