Raayan OTT Release: ಈ ದಿನದಂದು ಒಟಿಟಿಗೆ ಹೆಜ್ಜೆ ಇಡಲಿದ್ದಾನೆ ರಾಯನ್‌; ಒಂದಲ್ಲ ಎರಡು ಒಟಿಟಿಗಳಲ್ಲಿ ಧನುಷ್‌ ಸಿನಿಮಾ-ott news kollywood hero dhanush starrer raayan movie likely to stream on prime video and sun nxt ott on this date mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Raayan Ott Release: ಈ ದಿನದಂದು ಒಟಿಟಿಗೆ ಹೆಜ್ಜೆ ಇಡಲಿದ್ದಾನೆ ರಾಯನ್‌; ಒಂದಲ್ಲ ಎರಡು ಒಟಿಟಿಗಳಲ್ಲಿ ಧನುಷ್‌ ಸಿನಿಮಾ

Raayan OTT Release: ಈ ದಿನದಂದು ಒಟಿಟಿಗೆ ಹೆಜ್ಜೆ ಇಡಲಿದ್ದಾನೆ ರಾಯನ್‌; ಒಂದಲ್ಲ ಎರಡು ಒಟಿಟಿಗಳಲ್ಲಿ ಧನುಷ್‌ ಸಿನಿಮಾ

ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್‌ ಹಿಟ್‌ ಪಟ್ಟ ಪಡೆದ ಧನುಷ್‌ ನಟನೆ ಮತ್ತು ನಿರ್ದೇಶನದ ತಮಿಳಿನ ರಾಯನ್‌ ಸಿನಿಮಾ, ಇನ್ನೇನು ಶೀಘ್ರದಲ್ಲಿ ಒಟಿಟಿ ಅಂಗಳ ಪ್ರವೇಶಿಸಲಿದೆ. ಅದೂ ಒಂದಲ್ಲ ಎರಡು ಒಟಿಟಿಗಳಲ್ಲಿ.

Raayan OTT Release: ಈ ದಿನದಂದು ಒಟಿಟಿಗೆ ಹೆಜ್ಜೆ ಇಡಲಿದ್ದಾನೆ ರಾಯನ್‌; ಒಂದಲ್ಲ ಎರಡು ಒಟಿಟಿಗಳಲ್ಲಿ ಧನುಷ್‌ ಸಿನಿಮಾ
Raayan OTT Release: ಈ ದಿನದಂದು ಒಟಿಟಿಗೆ ಹೆಜ್ಜೆ ಇಡಲಿದ್ದಾನೆ ರಾಯನ್‌; ಒಂದಲ್ಲ ಎರಡು ಒಟಿಟಿಗಳಲ್ಲಿ ಧನುಷ್‌ ಸಿನಿಮಾ

Raayan OTT Release: ತಮಿಳು ನಟ ಧನುಷ್ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ತಮ್ಮದೇ ಆದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಈ ನಟ. ನಟನೆ ಮಾತ್ರವಲ್ಲದೆ, ಇತ್ತೀಚೆಗೆ ರಾಯನ್‌ ಸಿನಿಮಾ ಮೂಲಕ ನಿರ್ದೇಶನದ ಅಖಾಡಕ್ಕೂ ಇಳಿದು ಗೆದ್ದು ಬೀಗಿದ್ದಾರೆ. ಜುಲೈ 26ರಂದು ತಮಿಳು ಮತ್ತು ತೆಲುಗಿನಲ್ಲಿ ತೆರೆಕಂಡ ರಾಯನ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಅಕ್ಷರಶಃ ಗೆದ್ದು ಬೀಗಿದೆ. ಹೀಗಿರುವ ಇದೇ ಚಿತ್ರದ ಒಟಿಟಿ ಬಿಡುಗಡೆಯ ಬಗ್ಗೆ ಒಂದಷ್ಟು ಹೊಸ ಅಪ್‌ಡೇಟ್‌ಗಳು ಕೇಳಿಬರುತ್ತಿವೆ. ಎರಡು ಒಟಿಟಿಗಳಲ್ಲಿ ಈ ಚಿತ್ರ ಸ್ಟ್ರೀಮ್‌ ಆಗಲಿದೆಯಂತೆ.

ರಾಯನ್‌ ಸಿನಿಮಾ ಧನುಷ್ ಅವರ ಸಿನಿಮಾ ವೃತ್ತಿ ಜೀವನದಲ್ಲಿ 50ನೇ ಚಿತ್ರವಾಗಿದೆ. ಧನುಷ್‌ ಜತೆಗೆ ಟಾಲಿವುಡ್ ಹೀರೋ ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಪ್ರಕಾಶ್ ರಾಜ್, ಎಸ್.ಜೆ. ಸೂರ್ಯ, ಸೆಲ್ವ ರಾಘವನ್, ಅಪರ್ಣಾ ಬಾಲಮುರಳಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿರುವ ಈ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ.

ಭಾರೀ ನಿರೀಕ್ಷೆಗಳ ನಡುವೆ ಜುಲೈ 26 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ರಾಯನ್ ಚಿತ್ರಕ್ಕೆ ಸೂಪರ್ ರೆಸ್ಪಾನ್ಸ್ ಸಿಕ್ಕಿತ್ತು. ಸಹೋದರರ ನಡುವಿನ ಸಂಬಂಧದ ಹಿನ್ನೆಲೆಯಲ್ಲಿ ಸಂಪೂರ್ಣ ಆಕ್ಷನ್ ಎಂಟರ್‌ಟೈನರ್ ಆಗಿ ಧನುಷ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ತೆಲುಗಿನಲ್ಲೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಗಳಿಕೆಯಲ್ಲಿಯೂ ಒಂದಡಿ ಮುಂದೆಯೇ ಹೆಜ್ಜೆ ಇರಿಸಿದ್ದ ರಾಯನ್‌ ಸಿನಿಮಾ, 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಎರಡು ಒಟಿಟಿಗಳಲ್ಲಿ ಆಗಸ್ಟ್‌ 30ಕ್ಕೆ?

ಈಗಾಗಲೇ ಇನ್ನೂ ಹಲವೆಡೆ ಹೌಸ್ ಫುಲ್ ಪ್ರದರ್ಶನದ ಜತೆಗೆ ಒಳ್ಳೆಯ ಕಲೆಕ್ಷನ್ ಮುಂದುವರಿಸಿರುವ ರಾಯನ್‌ ಸಿನಿಮಾ ಇದೀಗ ಒಟಿಟಿ ಬಗ್ಗೆ ಹೊಸ ಅಪ್‌ಡೇಟ್‌ ಸಿಕ್ಕಿದೆ. ಅಮೆಜಾನ್ ಪ್ರೈಮ್ ವಿಡಿಯೋ ಜೊತೆಗೆ ಸನ್‌ ನೆಕ್ಸ್ಟ್‌ ಒಟಿಟಿಯಲ್ಲಿಯೂ ಧನುಷ್ ನಟನೆಯ ರಾಯನ್ ಚಿತ್ರ ಡಿಜಿಟಲ್ ಸ್ಟ್ರೀಮಿಂಗ್ ಆಗಲಿದೆ ಎಂದು ಹೇಳಲಾಗುತ್ತದೆ. ಜತೆಗೆ ಒಟಿಟಿ ಬಿಡುಗಡೆ ಯಾವಾಗ ಎಂಬುದಕ್ಕೂ ದಿನಾಂಕವೊಂದು ಕೇಳಿಬಂದಿದೆ. ಈ ಬ್ಲಾಕ್ ಬಸ್ಟರ್ ಸಿನಿಮಾ ಆಗಸ್ಟ್ 30 ರಿಂದ ಒಟಿಟಿಗೆ ಆಗಲಿಸಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲಿ ಅಧಿಕೃತ ಘೋಷಣೆ ಹೊರಬೀಳಲಿದೆ.

ಏನಿದು ರಾಯನ್‌ ಕಥೆ?

ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿರುವ ಧನುಷ್ ತನ್ನ ತಮ್ಮಂದಿರು ಮತ್ತು ತಂಗಿಯ ಜತೆಗೆ ಚೆನ್ನೈನಲ್ಲಿ ಸಣ್ಣ ಹೊಟೇಲ್‌ ನಡೆಸುತ್ತ ಜೀವನ ಸಾಗಿಸುತ್ತಿರುವಾತ. ಕೆಲವು ಅನಾಹುತಗಳಿಂದ ಧನುಷ್ ಕುಟುಂಬದ ಮೇಲೆ ಶತ್ರುಗಳ ಕಣ್ಣು ಬೀಳುತ್ತದೆ. ಸುಂದರ ಕುಟುಂಬಕ್ಕೆ ಕುತ್ತು ಬಂದೊದಗುತ್ತದೆ. ಅಲ್ಲಿಂದ ರಾಯನ್‌ ಹೇಗೆ ಗ್ಯಾಂಗ್‌ಸ್ಟರ್‌ ರೂಪ ಪಡೆದುಕೊಂಡು ಅವರೆಲ್ಲರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ? ಹೇಗೆ ರಕ್ತದೋಕುಳಿಯನ್ನೇ ಹರಿಸುತ್ತಾನೆ ಎಂಬುದೇ ರಾಯನ್‌ ಸಿನಿಮಾದ ಒಂದೆಳೆ.

ಕುಬೇರ ಸಿನಿಮಾದಲ್ಲಿ ಧನುಷ್‌

ರಾಯನ್ ಚಿತ್ರದಲ್ಲಿ ದುಷಾರ ವಿಜಯನ್ ಧನುಷ್ ಅವರ ತಂಗಿ ದುರ್ಗಾ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೆಯೇ ಕಾಳಿದಾಸ್ ಜಯರಾಂ, ವರಲಕ್ಷ್ಮಿ ಶರತ್ ಕುಮಾರ್, ಸರವಣನ್, ದಿಲೀಪನ್, ಇಳವರಸು ಮುಂತಾದವರು ವಿವಿಧ ಪಾತ್ರಗಳಲ್ಲಿ‌ ನಟಿಸಿದ್ದಾರೆ. ರಾಯನ್‌ ಸಿನಿಮಾ ಬಳಿಕ ಟಾಲಿವುಡ್‌ ನಿರ್ದೇಶಕ ಶೇಖರ್ ಕಮ್ಮುಲ ಚಿತ್ರದಲ್ಲಿಯೂ ಧನುಷ್‌ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನ್ಯಾಶನಲ್‌ ಕ್ರಶ್ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆ.