Thalavan OTT Release: 80 ದಿನಗಳ ಬಳಿಕ ಒಟಿಟಿಗೆ ಬರ್ತಿದೆ ಮಲಯಾಳಂನ ಕ್ರೈಂ ಥ್ರಿಲ್ಲರ್‌ ಥಳವನ್‌ ಸಿನಿಮಾ; ವೀಕ್ಷಣೆ ಎಲ್ಲಿ, ಯಾವಾಗ?-thalavan ott release date announced where and when to watch biju menon starrer asif ali starrer thalavan check here mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Thalavan Ott Release: 80 ದಿನಗಳ ಬಳಿಕ ಒಟಿಟಿಗೆ ಬರ್ತಿದೆ ಮಲಯಾಳಂನ ಕ್ರೈಂ ಥ್ರಿಲ್ಲರ್‌ ಥಳವನ್‌ ಸಿನಿಮಾ; ವೀಕ್ಷಣೆ ಎಲ್ಲಿ, ಯಾವಾಗ?

Thalavan OTT Release: 80 ದಿನಗಳ ಬಳಿಕ ಒಟಿಟಿಗೆ ಬರ್ತಿದೆ ಮಲಯಾಳಂನ ಕ್ರೈಂ ಥ್ರಿಲ್ಲರ್‌ ಥಳವನ್‌ ಸಿನಿಮಾ; ವೀಕ್ಷಣೆ ಎಲ್ಲಿ, ಯಾವಾಗ?

ಮಲಯಾಳಂನ ಥಳವನ್‌ ಸಿನಿಮಾ ಒಟಿಟಿಗೆ ಬರುವುದು ಯಾವಾಗ ಎಂದು ವೀಕ್ಷಕರು ಕಾದಿದ್ದೇ ಬಂತೇ ವಿನಃ ಉತ್ತರ ಸಿಕ್ಕಿರಲಿಲ್ಲ. ಇದೀಗ ಥಳವನ್‌ ಚಿತ್ರ ಕೊನೆಗೂ ಒಟಿಟಿಗೆ ಆಗಮಿಸುತ್ತಿದೆ. ಸ್ಟ್ರೀಮಿಂಗ್ ದಿನಾಂಕವೂ ಬಹಿರಂಗವಾಗಿದೆ.

Thalavan OTT Release: 80 ದಿನಗಳ ಬಳಿಕ ಒಟಿಟಿಗೆ ಬರ್ತಿದೆ ಮಲಯಾಳಂನ ಕ್ರೈಂ ಥ್ರಿಲ್ಲರ್‌ ಥಳವನ್‌ ಸಿನಿಮಾ; ವೀಕ್ಷಣೆ ಎಲ್ಲಿ, ಯಾವಾಗ?
Thalavan OTT Release: 80 ದಿನಗಳ ಬಳಿಕ ಒಟಿಟಿಗೆ ಬರ್ತಿದೆ ಮಲಯಾಳಂನ ಕ್ರೈಂ ಥ್ರಿಲ್ಲರ್‌ ಥಳವನ್‌ ಸಿನಿಮಾ; ವೀಕ್ಷಣೆ ಎಲ್ಲಿ, ಯಾವಾಗ?

Thalavan OTT Release: ಮಲಯಾಳಂನ ‘ಥಳವನ್‌’ ಚಿತ್ರಕ್ಕೆ ಚಿತ್ರಮಂದಿಗಳಲ್ಲಿ ಪಾಸಿಟಿವ್‌ ಪ್ರತಿಕ್ರಿಯೆ ಸಿಕ್ಕಿತ್ತು. ಆಸಿಫ್ ಅಲಿ ಮತ್ತು ಬಿಜು ಮೆನನ್ ಅಭಿನಯದ ಈ ಇನ್ವೆಸ್ಟಿಗೇಟಿವ್‌ ಕ್ರೈಂ ಥ್ರಿಲ್ಲರ್ ಸಿನಿಮಾ ಮೇ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಹಿಟ್‌ ಪಟ್ಟ ಪಡೆದಿತ್ತು. ಜಿಸ್ ಜಾಯ್ ನಿರ್ದೇಶನದ ಈ ಸಿನಿಮಾ ಕಲೆಕ್ಷನ್‌ ವಿಚಾರದಲ್ಲೂ ಒಳ್ಳೆಯ ಕಮಾಯಿಯನ್ನೇ ಮಾಡಿತ್ತು. ಇತ್ತ ಈ ಸಿನಿಮಾ ಒಟಿಟಿಗೆ ಬರುವುದು ಯಾವಾಗ ಎಂದು ವೀಕ್ಷಕರು ಕಾದಿದ್ದೇ ಬಂತೇ ವಿನಃ ಉತ್ತರ ಸಿಕ್ಕಿರಲಿಲ್ಲ. ಇದೀಗ ಥಳವನ್‌ ಚಿತ್ರ ಕೊನೆಗೂ ಒಟಿಟಿಗೆ ಆಗಮಿಸುತ್ತಿದೆ. ಸ್ಟ್ರೀಮಿಂಗ್ ದಿನಾಂಕವೂ ಬಹಿರಂಗವಾಗಿದೆ.

80 ದಿನಗಳ ಬಳಿಕ ಒಟಿಟಿಗೆ

ಈ ಹಿಂದೆ, ಈ ಚಿತ್ರದ ನಿರ್ಮಾಪಕರು ಥಳವನ್‌ ಚಿತ್ರವನ್ನು ಥಿಯೇಟ್ರಿಕಲ್ ಬಿಡುಗಡೆಯಾದ 40 ದಿನಗಳಲ್ಲಿ ಒಟಿಟಿಗೆ ತರಲು ಯೋಜಿಸಿದ್ದರು. ಆದರೆ, ಥಿಯೇಟರ್ ಓಟ ಮುಂದುವರಿದಂತೆ ಈ ಸಿನಿಮಾ ಒಟಿಟಿಗೆ ಬರಲು ತಡವಾಗತೊಡಗಿತು. ಸುಮಾರು 80 ದಿನಗಳ ನಂತರ, ಥಳವನ್‌ ಚಿತ್ರ ಸೋನಿಲೈವ್‌ನಲ್ಲಿ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ.

ತಾಳವನ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಆಸಿಫ್ ಅಲಿ, ಬಿಜು ಮೆನನ್ ನಟಿಸಿದರೆ, ಮಿಯಾ ಜಾರ್ಜ್, ದಿಲಿಶ್ ಪೋತನ್, ಅನುಶ್ರೀ, ಸುಜೀತ್ ಶಂಕರ್, ಶಂಕರ್ ರಾಮಕೃಷ್ಣನ್ ಮತ್ತು ರಂಜಿತ್ ಸಹ ಇನ್ನುಳಿದ ಪಾತ್ರವರ್ಗದಲ್ಲಿದ್ದಾರೆ. ಕೊಲೆ ಪ್ರಕರಣದಲ್ಲಿ ಪೊಲೀಸರು ಭಾಗಿಯಾಗುವುದು ಮತ್ತು ತನಿಖೆಯ ಸುತ್ತ ಇಡೀ ಸಿನಿಮಾ ಸುತ್ತುತ್ತದೆ. ನಿರ್ದೇಶಕ ಝಿಸ್ ಜಾಯ್ ಕೌತುಕವಾಗಿಯೇ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ತಲವನ್ ಚಿತ್ರವನ್ನು ಅರುಣ್ ನಾರಾಯಣ್ ಮತ್ತು ಸಿಜೋ ಸೆಬಾಸ್ಟಿಯನ್ ಅವರು ಅರುಣ್ ನಾರಾಯಣ್ ಪ್ರೊಡಕ್ಷನ್ಸ್, ಲಂಡನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ದೀಪಕ್ ದೇವ್ ಸಂಗೀತ ಸಂಯೋಜಿಸಿದ್ದಾರೆ. ಸರಣ್ ವೇಲಾಯುಧನ್ ಛಾಯಾಗ್ರಹಣ ಮತ್ತು ಸೂರಜ್ ಇಎಸ್ ಸಂಕಲನ ಮಾಡಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 25 ಕೋಟಿ ಕಲೆಕ್ಷನ್ ಮಾಡಿದೆ.

ಹೀಗಿದೆ ಬಿಡುಗಡೆ ದಿನಾಂಕ

ಥಳವನ್‌ ಚಲನಚಿತ್ರವು ಸೆಪ್ಟೆಂಬರ್ 12 ರಂದು ಸೋನಿಲಿವ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿದೆ. ಮಲಯಾಳಂ ಜೊತೆಗೆ ತೆಲುಗು, ಹಿಂದಿ, ತಮಿಳು, ಕನ್ನಡ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಲಭ್ಯವಾಗಲಿದೆ. ಸೆಪ್ಟೆಂಬರ್ 12 ರಂದು, ಸೋನಿಲಿವ್‌ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ.

ಕೊಲೆ ಸುತ್ತ ತಿರುಗುವ ಸಿನಿಮಾ..

ತಲವನ್ ಕಥೆಯು ಸಿಐ ಜಯಶಂಕರ್ (ಬಿಜು ಮೆನನ್) ಮತ್ತು ಎಸ್‌ಐ ಕಾರ್ತಿಕ್ (ಆಸಿಫ್ ಅಲಿ) ಸುತ್ತ ಸುತ್ತುತ್ತದೆ. ಸಿಐ ಜಯಶಂಕರ್ ಮನೆಯಲ್ಲಿ ಬಾಲಕಿ ಶವ ಪತ್ತೆಯಾಗುತ್ತದೆ. ಹೀಗಾಗಿ ಆತ ಆರೋಪಿಯಾಗುತ್ತಾನೆ. ಮೇಲಧಿಕಾರಿಗಳು ಈ ಪ್ರಕರಣಗಳನ್ನು ಎಸ್‌ಐ ಕಾರ್ತಿಕ್‌ಗೆ ಒಪ್ಪಿಸುತ್ತಾರೆ. ಜಯಶಂಕರ್ ನಿಜವಾಗಿಯೂ ಕೊಲೆ ಮಾಡಿದ್ದಾನಾ? ಅವನಲ್ಲದಿದ್ದರೆ ಈ ಅಪರಾಧ ಮಾಡಿದವರು ಬೇರೆ ಯಾರು? ತನಿಖೆಯಲ್ಲಿ ಇಲ್ಲದ ಸತ್ಯಗಳೇನು? ಹೀಗೆ ಥಳವನ್ ಸಿನಿಮಾ ಕುತೂಹಲದಿಂದಲೇ ನೋಡಿಸಿಕೊಂಡು ಹೋಗುತ್ತದೆ.

ಇತ್ತೀಚೆಗಷ್ಟೇ ಬಂದಿತ್ತು ಟರ್ಬೊ

ಮಲಯಾಳಂನ ಮೆಗಾಸ್ಟಾರ್ ಮಮ್ಮುಟ್ಟಿ ಅಭಿನಯದ ಟರ್ಬೊ ಸಿನಿಮಾ ಇತ್ತೀಚೆಗೆ ಸೋನಿಲಿವ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಮಾಡಲಾಗಿದೆ. ಈ ಆಕ್ಷನ್ ಡ್ರಾಮಾ ಚಿತ್ರ ಆಗಸ್ಟ್ 9 ರಂದು OTTನಲ್ಲಿ ಬಿಡುಗಡೆಯಾಯಿತು. ಸೋನಿಲೈವ್‌ನಲ್ಲಿ ಮಲಯಾಳಂ, ತೆಲುಗು, ಹಿಂದಿ, ತಮಿಳು, ಕನ್ನಡ, ಬೆಂಗಾಲಿ ಮತ್ತು ಮರಾಠಿ ಭಾಷೆಗಳಲ್ಲಿ ಟರ್ಬೋ ಸ್ಟ್ರೀಮ್ ಆಗುತ್ತಿದೆ. ಚಿತ್ರವನ್ನು ವೈಶಾಖ್ ನಿರ್ದೇಶಿಸಿದ್ದಾರೆ. ಮೇ 23 ರಂದು ಟರ್ಬೊ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಈಗ SonyLive ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.