OTT Releases This Week: ಈ ವಾರ ಒಟಿಟಿಗೆ ಬರ್ತಿವೆ ಮಲಯಾಳಂನ ಮನೋರಥಂಗಳ್ ಸೇರಿ ಹಲವು ಸಿನಿಮಾ, ವೆಬ್‌ಸಿರೀಸ್‌ಗಳು-ott news manorathangal to darling ott movies and web series releases in this week zee5 hotstar jio cinema ott mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Ott Releases This Week: ಈ ವಾರ ಒಟಿಟಿಗೆ ಬರ್ತಿವೆ ಮಲಯಾಳಂನ ಮನೋರಥಂಗಳ್ ಸೇರಿ ಹಲವು ಸಿನಿಮಾ, ವೆಬ್‌ಸಿರೀಸ್‌ಗಳು

OTT Releases This Week: ಈ ವಾರ ಒಟಿಟಿಗೆ ಬರ್ತಿವೆ ಮಲಯಾಳಂನ ಮನೋರಥಂಗಳ್ ಸೇರಿ ಹಲವು ಸಿನಿಮಾ, ವೆಬ್‌ಸಿರೀಸ್‌ಗಳು

ಈ ವಾರ ಒಟಿಟಿ ಪ್ರಿಯರಿಗೆ ಹಬ್ಬ. ಸಾಲು ಸಾಲು ಸಿನಿಮಾ ಮತ್ತು ವೆಬ್‌ಸರಣಿಗಳು ಒಟಿಟಿಗೆ ಆಗಮಿಸಲು ಅಣಿಯಾಗಿವೆ. ಅದರಲ್ಲೂ ಬಹುನಿರೀಕ್ಷೆ ಹುಟ್ಟುಹಾಕಿರುವ ಮಲಯಾಳಂನ ಆಂಥಾಲಜಿ ವೆಬ್‌ಸಿರೀಸ್‌ ಸಹ ಜೀ5ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

OTT Releases This Week: ಈ ವಾರ ಒಟಿಟಿಗೆ ಬರ್ತಿವೆ ಮಲಯಾಳಂನ ಬಹುತಾರಾಗಣದ ಮನೋರಥಂಗಳ್ ಸೇರಿ ಹಲವು ಸಿನಿಮಾ, ವೆಬ್‌ಸಿರೀಸ್‌ಗಳು
OTT Releases This Week: ಈ ವಾರ ಒಟಿಟಿಗೆ ಬರ್ತಿವೆ ಮಲಯಾಳಂನ ಬಹುತಾರಾಗಣದ ಮನೋರಥಂಗಳ್ ಸೇರಿ ಹಲವು ಸಿನಿಮಾ, ವೆಬ್‌ಸಿರೀಸ್‌ಗಳು

OTT Releases This Week: ಸಾಲು ಸಾಲು ಸಿನಿಮಾ ಮತ್ತು ವೆಬ್ ಸರಣಿಗಳು ಈ ವಾರ (ಆಗಸ್ಟ್ ಮೂರನೇ ವಾರ) ವಿವಿಧ OTT ಪ್ಲಾಟ್‌ಫಾರ್ಮ್‌ಗಳಿಗೆ ಬರಲಿವೆ. ಅವುಗಳಲ್ಲಿ ಕೆಲವು ಸಿನಿಮಾಗಳು ನೇರವಾಗಿ ಒಟಿಟಿಗೆ ಎಂಟ್ರಿಯಾಗುತ್ತಿವೆ. ಇದರ ನಡುವೆ ಮಲಯಾಳಂನ ಬಹುನಿರೀಕ್ಷಿತ ಆಂಥಾಲಜಿ ಸರಣಿ ಸಹ ಈ ವಾರ ಒಟಿಟಿಗೆ ಆಗಮಿಸಲಿದೆ.

ಮನೋರಥಂಗಳ್

ಮನೋರಥಂಗಳ್‌ ವೆಬ್ ಸರಣಿಯು ಆಗಸ್ಟ್ 15 ರಂದು ಜೀ5 OTT ಯಲ್ಲಿ ಸ್ಟ್ರೀಮ್ ಆಗಲಿದೆ. ಇದು ಮಲಯಾಳಂ ಅಲ್ಲದೆ, ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿರುತ್ತದೆ. ಈ ಆಂಥಾಲಜಿ ಸರಣಿಯಲ್ಲಿ ಸೂಪರ್‌ಸ್ಟಾರ್‌ಗಳಾದ ಕಮಲ್ ಹಾಸನ್, ಮಮ್ಮುಟ್ಟಿ, ಮೋಹನ್ ಲಾಲ್ ಮತ್ತು ಫಹಾದ್ ಫಾಜಿಲ್ ನಟಿಸಿದ್ದಾರೆ. ಇನ್ನು ಕೆಲವು ಸ್ಟಾರ್ ನಟರೂ ಇದ್ದಾರೆ. ಈ ಸರಣಿಯು 9 ಕಥೆಗಳನ್ನು ಒಳಗೊಂಡಿದೆ. 8 ನಿರ್ದೇಶಕರು ಈ ಸರಣಿಯನ್ನು ನಿರ್ದೇಶಿಸಿದ್ದಾರೆ. ಸ್ವಾತಂತ್ರ್ಯ ದಿನದಂದು ಜೀ OTT ಯಲ್ಲಿ ಪ್ರಸಾರವಾಗಲಿದೆ.

ಶೇಖರ್ ಹೋಮ್ಸ್

ಶೇಖರ್ ಹೋಮ್ಸ್ ವೆಬ್ ಸಿರೀಸ್ ಪತ್ತೇದಾರಿ ಡ್ರಾಮಾ ಶೈಲಿಯ ಸಿರೀಸ್.‌ ಈ ಸರಣಿಯು ಆಗಸ್ಟ್ 14 ರಂದು ಜಿಯೋಸಿನಿಮಾ OTT ಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಸರಣಿಯು 1990 ರ ದಶಕದ ಹಿನ್ನೆಲೆಯಲ್ಲಿ ಇರುತ್ತದೆ. ಕೆಕೆ ಮೆನನ್ ಈ ಸರಣಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ರಣವೀರ್ ಶೋರೆ, ರಸಿಕಾ ದುಗ್ಗಲ್ ಮತ್ತು ಕೃತಿ ಕುಲ್ಹಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರೋಹನ್ ಸಿಪ್ಪಿ ನಿರ್ದೇಶನದ ಶೇಖರ್ ಹೋಮ್ಸ್ ಸರಣಿ, ಈ ಸರಣಿಯು ಇಂಗ್ಲಿಷ್ ಪತ್ತೇದಾರಿ ಕ್ಲಾಸಿಕ್ ಷರ್ಲಾಕ್ ಹೋಮ್ಸ್‌ನಿಂದ ಪ್ರೇರಿತವಾಗಿದೆ.

ಮೈ ಫರ್ಫೆಕ್ಟ್‌ ಹಸ್ಬೆಂಡ್‌

ತಮಿಳು ಸ್ಟಾರ್ ನಟ ಸತ್ಯರಾಜ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಮೈ ಪರ್ಫೆಕ್ಟ್ ಹಸ್ಬೆಂಡ್ ವೆಬ್ ಸರಣಿಯು ಆಗಸ್ಟ್ 16 ರಂದು ಡಿಸ್ನಿ+ ಹಾಟ್‌ಸ್ಟಾರ್ OTT ಯಲ್ಲಿ ಸ್ಟ್ರೀಮ್ ಆಗಲಿದೆ. ಈ ಫ್ಯಾಮಿಲಿ ಡ್ರಾಮಾ ಸರಣಿಯು ತಮಿಳು, ತೆಲುಗು, ಕನ್ನಡ, ಹಿಂದಿ, ಮಲಯಾಳಂ, ಬೆಂಗಾಲಿ ಮತ್ತು ಮರಾಠಿ ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ. ಈ ಸರಣಿಯನ್ನು ತಾಮಿರಾ ನಿರ್ದೇಶಿಸಿದ್ದಾರೆ. ರೇಖಾ, ವರ್ಷಾ ಬೊಳ್ಳಮ್ಮ, ರಖಾನ್ ಮತ್ತು ಲಿವಿಂಗ್ ಸ್ಟೋನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಡಾರ್ಲಿಂಗ್

ನಭಾ ನಟೇಶ್ ಮತ್ತು ಪ್ರಿಯದರ್ಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಡಾರ್ಲಿಂಗ್ ಸಿನಿಮಾ ಈ ವಾರ ಆಗಸ್ಟ್ 13 ರಂದು ಡಿಸ್ನಿ+ ಹಾಟ್‌ಸ್ಟಾರ್ OTT ಯಲ್ಲಿ ಸ್ಟ್ರೀಮ್ ಆಗಲಿದೆ. ಈ ಹಾಸ್ಯಮಯ ಚಿತ್ರವು ಜುಲೈ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ನೆಗೆಟಿವ್ ಟಾಕ್‌ನಿಂದಾಗಿ ನಿರೀಕ್ಷೆಯಷ್ಟು ಕಲೆಕ್ಷನ್ ಆಗಲಿಲ್ಲ. ಈ ಚಿತ್ರವನ್ನು ಅಶ್ವಿನ್ ರಾಮ್ ನಿರ್ದೇಶಿಸಿದ್ದಾರೆ. ಆಗಸ್ಟ್ 13 ರಿಂದ ಡಾರ್ಲಿಂಗ್ ಅನ್ನು Hotstar OTT ಯಲ್ಲಿ ನೋಡಬಹುದು.

ವೀರಾಂಜನೇಯುಲು ವಿಹಾರಯಾತ್ರೆ

ವೀರಾಂಜನೇಯುಲು ವಿಹಾರಯಾತ್ರೆ ಸಿನಿಮಾ ಆಗಸ್ಟ್ 14 ರಂದು ETV Win OTT ಯಲ್ಲಿ ಸ್ಟ್ರೀಮ್ ಆಗಲಿದೆ. ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಹಿರಿಯ ನಟ ವಿ.ಕೆ.ನರೇಶ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಅನುರಾಗ್ ಪಲುತ್ಲಾ ನಿರ್ದೇಶಿಸಿದ್ದಾರೆ. ವೀರಾಂಜನೇಯು ವಿಹಾರಯಾತ್ರೆಯ ಟೀಸರ್, ಟ್ರೇಲರ್ ಈಗಾಗಲೇ ನಗು ಉಕ್ಕಿಸಿದೆ. ಈ ಚಿತ್ರದ ಬಗ್ಗೆ ಒಳ್ಳೆಯ ನಿರೀಕ್ಷೆಗಳಿವೆ. ಬ್ರಹ್ಮಾನಂದಂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕುಟುಂಬದ ಜತೆಗೆ ಗೋವಾಕ್ಕೆ ಹೋಗುವ ತಂಡ, ಅಲ್ಲಿ ಏನೆಲ್ಲ ಅನುಭವಿಸುತ್ತದೆ ಎಂಬುದೇ ಈ ಸಿನಿಮಾ ಕಥೆ.