ಒಂದು ಮಗು ಇರುವ ಮಹಿಳೆಗೆ ಪ್ರಪೋಸ್‌ ಮಾಡಿ ಮದುವೆಯಾದ ನಿರ್ದೇಶಕ ಎಸ್‌ಎಸ್‌ ರಾಜಮೌಳಿ; ಮಾಡರ್ನ್‌ ಮಾಸ್ಟರ್ಸ್‌ ಬಿಚ್ಚಿಟ್ಟ ಲವ್‌ ಸ್ಟೋರಿ-ott news netflix modern masters ss rajamouli documentary love story of rrr director and rama rajamouli ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಒಂದು ಮಗು ಇರುವ ಮಹಿಳೆಗೆ ಪ್ರಪೋಸ್‌ ಮಾಡಿ ಮದುವೆಯಾದ ನಿರ್ದೇಶಕ ಎಸ್‌ಎಸ್‌ ರಾಜಮೌಳಿ; ಮಾಡರ್ನ್‌ ಮಾಸ್ಟರ್ಸ್‌ ಬಿಚ್ಚಿಟ್ಟ ಲವ್‌ ಸ್ಟೋರಿ

ಒಂದು ಮಗು ಇರುವ ಮಹಿಳೆಗೆ ಪ್ರಪೋಸ್‌ ಮಾಡಿ ಮದುವೆಯಾದ ನಿರ್ದೇಶಕ ಎಸ್‌ಎಸ್‌ ರಾಜಮೌಳಿ; ಮಾಡರ್ನ್‌ ಮಾಸ್ಟರ್ಸ್‌ ಬಿಚ್ಚಿಟ್ಟ ಲವ್‌ ಸ್ಟೋರಿ

ನೆಟ್‌ಫ್ಲಿಕ್ಸ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ Modern Masters SS Rajamouli ಎಂಬ ಸಾಕ್ಷ್ಯಚಿತ್ರದಲ್ಲಿ ಎಸ್‌ಎಸ್‌ ರಾಜಮೌಳಿ ತನ್ನ ಬದುಕಿನ ಕೆಲವು ಗೊತ್ತಿಲ್ಲದ ಸಂಗತಿಗಳನ್ನು ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಮಾಡರ್ನ್‌ ಮಾಸ್ಟರ್ಸ್‌ ಡಾಕ್ಯುಮೆಂಟರಿಯಲ್ಲಿ ತನ್ನ ವೈಯಕ್ತಿಕ ಬದುಕು, ಲವ್‌ ಸ್ಟೋರಿ, ಹೆಂಡತಿ ಬಗ್ಗೆಯೂ ಸಾಕಷ್ಟು ವಿವರ ನೀಡಿದ್ದಾರೆ ರಾಜಮೌಳಿ.

ಒಂದು ಮಗು ಇರುವ ಮಹಿಳೆಗೆ ಪ್ರಪೋಸ್‌ ಮಾಡಿ ಮದುವೆಯಾದ ನಿರ್ದೇಶಕ ಎಸ್‌ಎಸ್‌ ರಾಜಮೌಳಿ; ಮಾಡರ್ನ್‌ ಮಾಸ್ಟರ್ಸ್‌ ಬಿಚ್ಚಿಟ್ಟ ಲವ್‌ ಸ್ಟೋರಿ
ಒಂದು ಮಗು ಇರುವ ಮಹಿಳೆಗೆ ಪ್ರಪೋಸ್‌ ಮಾಡಿ ಮದುವೆಯಾದ ನಿರ್ದೇಶಕ ಎಸ್‌ಎಸ್‌ ರಾಜಮೌಳಿ; ಮಾಡರ್ನ್‌ ಮಾಸ್ಟರ್ಸ್‌ ಬಿಚ್ಚಿಟ್ಟ ಲವ್‌ ಸ್ಟೋರಿ

ಬೆಂಗಳೂರು: ಭಾರತದ ಜನಪ್ರಿಯ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಅವರ ಬದುಕಿನ ಕುರಿತಾದ ಸಾಕ್ಷ್ಯಚಿತ್ರ "ಮಾಡರ್ನ್‌ ಮಾಸ್ಟರ್ಸ್‌: ಎಸ್‌ಎಸ್‌ ರಾಜಮೌಳಿ ( Modern Masters: SS Rajamouli) ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಮಗಧೀರ, ಈಗ, ಆರ್‌ಆರ್‌ಆರ್‌ ಮುಂತಾದ ರಾಜಮೌಳಿ ಸಿನಿಮಾ ಇಷ್ಟಪಟ್ಟವರಿಗೆ ರಾಜಮೌಳಿ ಬದುಕಿನ ಕಥೆಯೂ ಇಷ್ಟವಾಗುತ್ತದೆ. ಈ ಸಾಕ್ಷ್ಯಚಿತ್ರದಲ್ಲಿ ರಾಜಮೌಳಿ ತನ್ನ ಬದುಕಿನ ಕೆಲವೊಂದು ಕಥೆಗಳನ್ನು ಸಂಕ್ಷಿಪ್ತವಾಗಿ ಬಿಚ್ಚಿಡುತ್ತಾ ಹೋಗುತ್ತಾರೆ. ಸಿನಿಮಾವೊಂದನ್ನು ಅದ್ಭುತವಾಗಿ ತರುವ ರಾಜಮೌಳಿ ಅವರ ಹಿಂದಿನ ಶ್ರಮ, ತುಡಿತ ಎಲ್ಲವೂ ಈ ಡಾಕ್ಯುಮೆಂಟರಿಯಲ್ಲಿ ಕಾಣಿಸಿದೆ.

ಮಾಡರ್ನ್‌ ಮಾಸ್ಟರ್ಸ್‌: ಎಸ್‌ಎಸ್‌ ರಾಜಮೌಳಿ

ಎಸ್‌ಎಸ್‌ ರಾಜಮೌಳಿ ಅವರು ಭಾರತ ಮಾತ್ರವಲ್ಲದೆ ಜಾಗತಿಕ ಪ್ರೇಕ್ಷಕರಿಗೂ ಅಚ್ಚುಮೆಚ್ಚಿನ ನಿರ್ದೇಶಕ. ಬಾಹುಬಲಿ, ಆರ್‌ಆರ್‌ಆರ್‌ ಸಿನಿಮಾಗಳು ಜಾಗತಿಕ ಮಟ್ಟದಲ್ಲಿಯೂ ದೊಡ್ಡ ಮಟ್ಟದ ಗಳಿಕೆ ಕಂಡಿವೆ. ನೆಟ್‌ಫ್ಲಿಕ್ಸ್‌ನಲ್ಲಿ ಇತ್ತೀಚೆಗೆ ಮಾಡರ್ನ್‌ ಮಾಸ್ಟರ್ಸ್‌: ಎಸ್‌ಎಸ್‌ ರಾಜಮೌಳಿ ಎಂಬ ಡಾಕ್ಯುಮೆಂಟರಿ ಬಿಡುಗಡೆಯಾಗಿದೆ. ಈ ಸಾಕ್ಷ್ಯಚಿತ್ರದಲ್ಲಿ ಹಲವು ವಿಚಾರಗಳ ಕುರಿತು ರಾಜಮೌಳಿ ಮಾತನಾಡಿದ್ದಾರೆ. ಈ ಲೇಖನದಲ್ಲಿ ರಾಜಮೌಳಿ ತನ್ನ ಪತ್ನಿ ಕುರಿತು ಏನೆಲ್ಲ ಹೇಳಿದ್ದಾರೆ ಎಂಬ ವಿವರವನ್ನಷ್ಟೇ ನೋಡೋಣ. ರಾಜಮೌಳಿ ಅವರ ಪತ್ನಿ ಹೆಸರು ರಮಾ ರಾಜಮೌಳಿ.

ಮಾಡರ್ನ್‌ ಮಾಸ್ಟರ್ಸ್‌: ಎಸ್‌ಎಸ್‌ ರಾಜಮೌಳಿಯಲ್ಲಿ ರಮಾ ರಾಜಮೌಳಿ ಅವರು ತಮ್ಮ ಲವ್‌ ಪ್ರಯಾಣದ ಕುರಿತು ಮಾತನಾಡಿದ್ದಾರೆ. ರಮಾ ಅವರ ಸಹೋದರಿಯ ಮದುವೆ ಸಂದರ್ಭದಲ್ಲಿ ರಾಜಮೌಳಿಯನ್ನು ಮೊದಲು ಭೇಟಿಯಾಗಿದ್ದರು. ಮೊದಲ ಭೇಟಿಯಲ್ಲಿ ಏನು ಮಾತನಾಡಿದ್ದಾರೆ ಎನ್ನುವುದು ಸದ್ಯ ನೆನಪಿಲ್ಲ. ತನ್ನ ಸೋದರ ಮಾವನ ಸಹೋದರ ಆಗಿರುವ ಕಾರಣ ಇಬ್ಬರ ನಡುವೆ ಒಂದು ಕನೆಕ್ಷನ್‌ ಏರ್ಪಟ್ಟಿತ್ತು ಎಂದು ರಮಾ ಹೇಳಿದ್ದಾರೆ. ಹಾಗಂತ, ಈಗಿನ ಸಿನಿಮಾಗಳಂತೆ ಇವರ ಲವ್‌ ಸ್ಟೋರಿಯಲ್ಲಿ ರೋಮಾನ್ಸ್‌ ಇತ್ಯಾದಿಗಳು ಇರಲಿಲ್ಲ. ಇವರಿಬ್ಬರೂ ಮೆಚ್ಯುರ್ಡ್‌ ಆಗಿರುವವರು. ಎಸ್‌ಎಸ್‌ ರಾಜಮೌಳಿ ಅವರು ಲವ್‌ ಪ್ರಪೋಸ್‌ ಮಾಡಿದಾಗ ರಮಾ ತಕ್ಷಣ "ಆಗೋಲ್ಲ" ಅಂದ್ರಂತೆ. ಈ ಪ್ರೀತಿ ಎಲ್ಲಾ ಅರ್ಥ ಇಲ್ಲದ್ದು ಅಂದ್ರಂತೆ. ಏಕೆಂದರೆ, ಆ ಸಮಯದಲ್ಲಿ ರಮಾ ಅವರು ಡಿವೋರ್ಸ್‌ ಪಡೆದ ಮಹಿಳೆಯಾಗಿದ್ದರು. ಆಕೆಗೆ ಮೊದಲ ಪತಿಯಿಂದ ಪಡೆದ ಒಬ್ಬ ಮಗನಿದ್ದ.

ಈಗಾಗಲೇ ಮದುವೆಯಾಗಿರುವುದು ಮತ್ತು ತಾಯಿಯಾಗಿ ತನ್ನ ಕರ್ತವ್ಯ ನಿರ್ವಹಿಸಲು ಇರುವ ಕಾರಣ ರಾಜಮೌಳಿ ಪ್ರಪೋಸ್‌ ಮಾಡಿದಾಗ ಆಗೋಲ್ಲ ಅಂದ್ರಂತೆ. ರಮಾ ಅವರು ಜನಪ್ರಿಯ ಕಾಸ್ಟ್ಯೂಮ್‌ ಡಿಸೈನರ್‌ ಮತ್ತು ಫಿಲ್ಮ್‌ ಸ್ಟೈಲಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದರು. ರಾಜಮೌಳಿ ಮತ್ತು ನನ್ನ ಜೋಡಿ ಸರಿಯಾಗದು ಎಂದುಕೊಂಡ್ರಂತೆ. ಆದರೆ ರಾಜಮೌಳಿ ಅಷ್ಟು ಸುಲಭದಲ್ಲಿ ಬಿಡುವ ವ್ಯಕ್ತಿಯಲ್ಲ. ಹೇಗೋ ಕಷ್ಟಪಟ್ಟು ಹಲವು ದಿನಗಳ ಕಾಲ ಪ್ರಯತ್ನಿಸಿ ರಮಾರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದ್ರಂತೆ. ಸುಮಾರು ಒಂದು ವರ್ಷಗಳ ಕಾಲ ರಮಾರನ್ನು ಕಾಡಿಬೇಡಿ ಹೇಗೋ ಮದುವೆಯಾಗಲು ಒಪ್ಪಿಸಿದ್ರಂತೆ. ಮೊದಲು ಪ್ರಪೋಸ್‌ ಮಾಡಿದ ಒಂದು ವರ್ಷದ ಬಳಿಕ ರಾಜಮೌಳಿಯನ್ನು ಮದುವೆಯಾಗಲು ರಮಾ ಒಪ್ಪಿದ್ದರಂತೆ.

ಅಂದಹಾಗೆ, ರಮಾರ ಮೊದಲ ಮಗ ಕಾರ್ತಿಕೇಯ ಕೂಡ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ. ಎಸ್‌ಎಸ್‌ ರಾಜಮೌಳಿ ಸಿನಿಮಾಗಳಲ್ಲಿ ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ ಎಸ್‌ಎಸ್‌ ರಾಜಮೌಳಿ ಮತ್ತು ರಮಾ ರಾಜಮೌಳಿಗೆ ಬೇರೆ ಮಕ್ಕಳಿಲ್ವ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಹೌದು, ಇವರಿಬ್ಬರಿಗೆ ಮಾಯೋಕಾ ಎಂಬ ಮಗಳಿದ್ದಾಳೆ. ಮಗಳ ಹೆಸರು ತುಂಬಾ ಸುಂದರವಾಗಿದೆ ಅಲ್ವಾ?.