OTT Updates: ರುಕ್ಮಿಣಿ ವಸಂತ್ ಅಭಿನಯದ ‘ಅಪುಡೊ ಇಪುಡೊ ಎಪುಡೊ’ ತೆಲುಗು ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಇಂದಿನಿಂದ ಸ್ಟ್ರೀಮಿಂಗ್‌
ಕನ್ನಡ ಸುದ್ದಿ  /  ಮನರಂಜನೆ  /  Ott Updates: ರುಕ್ಮಿಣಿ ವಸಂತ್ ಅಭಿನಯದ ‘ಅಪುಡೊ ಇಪುಡೊ ಎಪುಡೊ’ ತೆಲುಗು ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಇಂದಿನಿಂದ ಸ್ಟ್ರೀಮಿಂಗ್‌

OTT Updates: ರುಕ್ಮಿಣಿ ವಸಂತ್ ಅಭಿನಯದ ‘ಅಪುಡೊ ಇಪುಡೊ ಎಪುಡೊ’ ತೆಲುಗು ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಇಂದಿನಿಂದ ಸ್ಟ್ರೀಮಿಂಗ್‌

ರುಕ್ಮಿಣಿ ವಸಂತ್ ಅಭಿನಯದ ‘ಅಪುಡೊ ಇಪುಡೊ ಎಪುಡೊ’ ತೆಲುಗು ಸಿನಿಮಾ ನವೆಂಬರ್ 8ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು. ಈಗ ಯಾವುದೇ ಪೂರ್ವ ಪ್ರಚಾರವಿಲ್ಲದೆ ಒಟಿಟಿಯಲ್ಲಿ ಕೂಡ ಸ್ಟ್ರೀಮಿಂಗ್ ಆರಂಭಿಸಿದೆ.

 ರುಕ್ಮಿಣಿ ವಸಂತ್ ಅಭಿನಯದ ‘ಅಪುಡೊ ಇಪುಡೊ ಎಪುಡೊ’ ತೆಲುಗು ಸಿನಿಮಾ ಒಟಿಟಿ ಬಿಡುಗಡೆ
ರುಕ್ಮಿಣಿ ವಸಂತ್ ಅಭಿನಯದ ‘ಅಪುಡೊ ಇಪುಡೊ ಎಪುಡೊ’ ತೆಲುಗು ಸಿನಿಮಾ ಒಟಿಟಿ ಬಿಡುಗಡೆ

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿರುವ ರುಕ್ಮಿಣಿ ವಸಂತ್ ಅವರು ಈಗ ಪರಭಾಷೆಯಲ್ಲೂ ಅಭಿನಯಿಸಿದ್ದಾರೆ. ಅವರು ಅಭಿನಯಿಸಿರುವ ‘ಅಪುಡೊ ಇಪುಡೊ ಎಪುಡೊ’ ಸಿನಿಮಾ ಇದೀಗ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾದಲ್ಲಿ ಟಾಲಿವುಡ್ ಯಂಗ್ ಹೀರೋ ನಿಖಿಲ್ ಸಿದ್ಧಾರ್ಥ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಕನ್ನಡದ ಚೆಲುವೆ ರುಕ್ಮಿಣಿ ವಸಂತ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಕಾರಣ ಈ ಸಿನಿಮಾ ನೋಡಲು ಸಾಕಷ್ಟು ಜನ ಕಾತರಿಂದ ಕಾಯುತ್ತಿದ್ದಾರೆ. ನವೆಂಬರ್ 08 ರಂದು ಪ್ರೇಕ್ಷಕರ ಮುಂದೆ ಈ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್‌ ಆಗಿತ್ತು.

ಈ ಚಿತ್ರ ಇದೀಗ OTTಯಲ್ಲಿ ಬಿಡುಗಡೆಯಾಗಿದೆ. ನೀವು ಅಮೆಜಾನ್‌ ಪ್ರೈಂನಲ್ಲಿ ಈ ಸಿನಿಮಾ ನೋಡಬಹುದು. ಈ ಸಿನಿಮಾ ಥಿಯೇಟರ್‌ನಲ್ಲಿ ಅಷ್ಟೊಂದು ರೆಸ್ಪಾನ್ಸ್‌ ಪಡೆದಿಲ್ಲ. ಆದರೆ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಕಾರಣ ಕೆಲವು ಸಿನಿಮಾಗಳು ಥಿಯೇಟರ್‌ನಲ್ಲಿ ಪ್ಲಾಪ್ ಆದರೂ ಒಟಿಟಿಯಲ್ಲಿ ಓಡುತ್ತವೆ. ಈ ಸಿನಿಮಾ ಕೂಡ ಅದೇ ನಿರೀಕ್ಷೆಯನ್ನು ಹೊತ್ತಿದೆ.

ಯಾವುದೇ ಪೂರ್ವ ಅಧಿಕೃತ ಘೋಷಣೆ ಇಲ್ಲದೆ ಒಂದೇ ಬಾರಿಗೆ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಇಂದಿನಿಂದಲೇ ಅಂದರೆ ನವೆಂಬರ್ 27ರಿಂದಲೇ ಈ ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆಯಾಗಿದೆ. ಈ ಹಿಂದೆ ಛತ್ರಪತಿ, ಡಾರ್ಲಿಂಗ್, ಅತ್ತಾರಿಂಟಿಕಿ ದಾರೇದಿ ಮುಂತಾದ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ಮಿಸಿದ್ದ ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಪ್ರೊಡಕ್ಷನ್ಸ್‌ನಲ್ಲಿ ಬಿವಿಎಸ್‌ಎನ್ ಪ್ರಸಾದ್ ಅವರು 'ಅಪ್ಪುಡೋ ಇಪ್ಪುಡೋ ಎಪುಡೋ' ನಿರ್ಮಿಸಿದ್ದಾರೆ.

ನಿರ್ದೇಶಕ ಸುಧೀರ್ ವರ್ಮಾ ತಮ್ಮ ವೃತ್ತಿ ಜೀವನದಲ್ಲಿ ಹೆಚ್ಚಾಗಿ ಕ್ರೈಂ ಕಾಮಿಡಿ ಚಿತ್ರಗಳನ್ನು ಮಾಡಿದ್ದರು. ಕ್ರೈಂ ಕಾಮಿಡಿ ಅಂಶಗಳು ಮತ್ತು ಲವ್ ಸ್ಟೋರಿ ಮಿಕ್ಸ್ ಮಾಡಿ ಈ ಸಿನಿಮಾ ತೆರೆಕಂಡಿದೆ. ಚಿತ್ರದ ಸೆಟ್‌ಅಪ್, ನಟನೆ, ಲೊಕೇಶನ್‌ಗಳು ಮತ್ತು ಹಾಸ್ಯ ಚೆನ್ನಾಗಿದೆ ಆದರೆ ಕಥೆ ಹಳೆಯದಾಗಿದೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದರು. ಚಿತ್ರಕಥೆ ನೀರಸವಾಗಿದ್ದು ಹಾಡುಗಳು ಸಹ ಕೆಲವು ಕಡೆ ಕಿರಿಕಿರಿ ಉಂಟು ಮಾಡುತ್ತವೆ ಎಂದು ಹೇಳಿದ್ದಾರೆ. ಈ ಚಿತ್ರಕ್ಕೆ ಅಷ್ಟೊಂದು ಪ್ರಚಾರವನ್ನೂ ಮಾಡಿಲ್ಲ. ಈ ಸಿನಿಮಾವನ್ನು ನೋಡುತ್ತಿದ್ದರೆ ಹಿಂದಿನ ಎಷ್ಟೋ ಸಿನಿಮಾಗಳು ನೆನಪಾಗುತ್ತವೆ ಎಂದು ಜನರು ಕಾಮೆಂಟ್ ಮಾಡಿದ್ದರು. ಈಗ ಒಟಿಟಿಯಲ್ಲಿ ಈ ಸಿನಿಮಾ ಹೇಗೆ ಸದ್ದು ಮಾಡಲಿದೆ? ಜನರಿಗೆ ಇಷ್ಟವಾಗುತ್ತಾ? ಎಂದು ಕಾದು ನೋಡಬೇಕಿದೆ.

Whats_app_banner