ಕನ್ನಡಕ್ಕಿಂತ ತಮಿಳು ಚಿತ್ರೋದ್ಯಮದಲ್ಲಿಯೇ ಹೆಚ್ಚು ಸಕ್ರಿಯರಾಗಿದ್ದಾರೆ ಕರ್ನಾಟಕದ ಕುಳ್ಳ ದ್ವಾರಕೀಶ್‌ ಕಿರಿ ಮಗ ಗಿರಿ ದ್ವಾರಕೀಶ್‌
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡಕ್ಕಿಂತ ತಮಿಳು ಚಿತ್ರೋದ್ಯಮದಲ್ಲಿಯೇ ಹೆಚ್ಚು ಸಕ್ರಿಯರಾಗಿದ್ದಾರೆ ಕರ್ನಾಟಕದ ಕುಳ್ಳ ದ್ವಾರಕೀಶ್‌ ಕಿರಿ ಮಗ ಗಿರಿ ದ್ವಾರಕೀಶ್‌

ಕನ್ನಡಕ್ಕಿಂತ ತಮಿಳು ಚಿತ್ರೋದ್ಯಮದಲ್ಲಿಯೇ ಹೆಚ್ಚು ಸಕ್ರಿಯರಾಗಿದ್ದಾರೆ ಕರ್ನಾಟಕದ ಕುಳ್ಳ ದ್ವಾರಕೀಶ್‌ ಕಿರಿ ಮಗ ಗಿರಿ ದ್ವಾರಕೀಶ್‌

Giri Dwarakish: ಕರ್ನಾಟಕದ ಕುಳ್ಳ ದ್ವಾರಕೀಶ್‌ ಅವರ ಕಿರಿ ಮಗ ಗಿರಿ ದ್ವಾರಕೀಶ್‌ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಕನ್ನಡದ ಬದಲು ತಮಿಳಿನ ಎರಡು ಸಿನಿಮಾಗಳ ಪೈಕಿ ಒಂದು ಸಿನಿಮಾ ಬಿಡುಗಡೆಯ ಹತ್ತಿರ ಬಂದರೆ, ಇನ್ನೊಂದು ಸಿನಿಮಾ ಶೂಟಿಂಗ್‌ ಹಂತದಲ್ಲಿದೆ.

ಕರ್ನಾಟಕದ ಕುಳ್ಳ ದ್ವಾರಕೀಶ್‌ ಕಿರಿ ಮಗ ಗಿರಿ ತಮಿಳು ಚಿತ್ರೋದ್ಯಮದಲ್ಲಿಯೇ ಹೆಚ್ಚು ಸಕ್ರೀಯರು
ಕರ್ನಾಟಕದ ಕುಳ್ಳ ದ್ವಾರಕೀಶ್‌ ಕಿರಿ ಮಗ ಗಿರಿ ತಮಿಳು ಚಿತ್ರೋದ್ಯಮದಲ್ಲಿಯೇ ಹೆಚ್ಚು ಸಕ್ರೀಯರು

Giri Dwarakish: ಕರ್ನಾಟಕದ ಕುಳ್ಳ ದ್ವಾರಕೀಶ್‌ ಅವರ ಕಿರಿ ಮಗ ಗಿರಿ ದ್ವಾರಕೀಶ್‌ ಕೇವಲ ಒಂದೇ ಪ್ಯಾಟರ್ನ್‌ಗೆ ಸೀಮಿತವಾದ ನಟನಲ್ಲ. ಕಿರುತೆರೆಗೂ ಸೈ, ಹಿರಿತೆರೆಗೂ ಸೈ, ವೆಬ್‌ಸಿರೀಸ್‌ಗಳಲ್ಲೂ ಅವರೀಗ ಸಕ್ರಿಯರು. ಬಗೆ ಬಗೆ ಪಾತ್ರಗಳ ಮೂಲಕವೇ ತಮ್ಮನ್ನು ತಾವೇ ಸಾಣೆ ಹಿಡಿದುಕೊಳ್ಳುತ್ತಿದ್ದಾರೆ. ಸಿನಿಮಾಗಳಲ್ಲಿ ಹಾಸ್ಯ ಸ್ವಭಾವದ ಪೊಲೀಸ್‌ ಆಗಿಯೂ ಕಂಡಿರುವ ಗಿರಿ, ಮೋಟಿವೇಷನಲ್‌ ಸ್ಪೀಕರ್‌ ಆಗಿಯೂ ಪಾತ್ರ ನಿರ್ವಹಿಸುತ್ತಿದ್ದಾರೆ. ಇದೀಗ ಹೊಸ ಪಾತ್ರದ ಮೂಲಕ ಅವರ ಆಗಮನವಾಗುತ್ತಿದೆ.

ಕನ್ನಡದಲ್ಲಿ ಮಜ್ನು, ಚೌಕ, ಆಯುಷ್ಮಾನ್‌ಭವ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಗಿರಿ ದ್ವಾರಕೀಶ್‌, ಕನ್ನಡಿಗರಿಗೂ ಚಿರಪರಿಚಿತ. ಆದರೆ, ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಅವರು ಬೇರಾವ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಇದೀಗ ಪಕ್ಕದ ಕಾಲಿವುಡ್‌ನಲ್ಲಿ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಂತೆ ಇದೀಗ ತಮಿಳಿನಲ್ಲಿಯೇ ಸಕ್ರಿಯರಾಗಿದ್ದಾರೆ. ಬ್ಯಾಕ್‌ ಟು ಬ್ಯಾಕ್‌ ಎರಡು ಸಿನಿಮಾಗಳಲ್ಲಿ ಗಿರಿ ದ್ವಾರಕೀಶ್‌ ಅವರು ನಟಿಸುತ್ತಿದ್ದಾರೆ. 

ಅದರಲ್ಲಿ ಒಂದು ಸಿನಿಮಾ ಬಿಡುಗಡೆ ಹಂತಕ್ಕೂ ಬಂದಿದೆ. ಆ ಎರಡರ ಪೈಕಿ ಅವರ ಮುಂಬರುವ ತಮಿಳಿನ ಯೋಲೋ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ರೋಮ್‌ ಕಾಮ್‌ ಜಾನರ್‌ನ ಈ ಸಿನಿಮಾದಲ್ಲಿ ಹಾಸ್ಯಮಯ ಪೊಲೀಸ್ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಮಹೇಶ್ ಸೆಲ್ವರಾಜ್ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ಸಿ.ಎಸ್. ಸಾಮ್ ನಿರ್ದೇಶನ ಮಾಡಿದ್ದಾರೆ. ಸೂರಜ್ ನಲ್ಲುಸ್ವಾಮಿ ಛಾಯಾಗ್ರಹಣವಿರುವ ಈ ಚಿತ್ರ ಫ್ಯಾಂಟಸಿ ಮಿಶ್ರಿತ ಕಥೆಯೊಂದಿಗೆ ಸಾಗಲಿದೆ. ಇನ್ನೇನು ಶೀಘ್ರದಲ್ಲಿ ಪ್ರೇಕ್ಷಕರನ್ನೂ ರಂಜಿಸಲಿದೆ.

ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಜನಪ್ರಿಯ ತಮಿಳು ವೆಬ್ ಸರಣಿ "ಹಾರ್ಟ್‌ಬೀಟ್"ನಲ್ಲಿ ಡಾ. ರಾಮನಾಥನ್ ಅಲಿಯಾಸ್ ಪಾತ್ರದಲ್ಲಿ ನಟಿಸಿದ್ದ ಗಿರಿ, ಆ ಪಾತ್ರದ ಮೂಲಕವೇ ಮೆಚ್ಚುಗೆ ಪಡೆದುಕೊಂಡಿದ್ದರು. ಕಾಮಿಡಿ ಪಂಚ್‌, ಪಾತ್ರ ಮೂಡಿ ಬಂದ ರೀತಿಗೆ ನೋಡುಗರಿಂದ ಕಾಂಪ್ಲಿಮೆಂಟ್‌ ಸಿಕ್ಕಿದ್ದವು. ತಮಿಳಿನಲ್ಲಿ ಹಿಟ್‌ ಆದ ಈ ಸರಣಿ ಇದೀಗ ತೆಲುಗಿನಲ್ಲಿಯೂ ಡಬ್‌ ಆಗಿ ಇನ್ನೇನು ಶೀಘ್ರದಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

ಯೋಲೋ ಸಿನಿಮಾದ ಜೊತೆಗೆ, ವೈರಾ ಪ್ರಕಾಶ್ ನಿರ್ಮಾಣದ ಮತ್ತು ಎಸ್.ಪಿ. ಪೊನ್ ಶಂಕರ್ ನಿರ್ದೇಶನದ ತಮಿಳು ಚಿತ್ರ "ಮೇಡ್ ಇನ್ ಇಂಡಿಯಾ" ಚಿತ್ರದಲ್ಲಿಯೂ ಗಿರಿ ನಟಿಸುತ್ತಿದ್ದಾರೆ. ಭಾರತದ ಪ್ರಮುಖ ನಗರಗಳು ಮತ್ತು ಐತಿಹಾಸಿಕ ಸ್ಥಳಗಳಲ್ಲಿ ಈ ಪ್ಯಾನ್‌ ಇಂಡಿಯಾ ಸಿನಿಮಾ ಚಿತ್ರೀಕರಣಗೊಳ್ಳುತ್ತಿದೆ. "ಮೇಡ್ ಇನ್ ಇಂಡಿಯಾ" ಕೇವಲ ಲೊಕೇಷನ್‌ಗಳ ಮೂಲಕ ಮಾತ್ರವಲ್ಲದೆ, ಸಂಗೀತದಿಂದಲೂ ನೋಡುಗರಿಗೆ ರಸದೌತಣ ನೀಡಲಿದೆ. ಖ್ಯಾತ ಸಂಗೀತ ನಿರ್ದೇಶಕ ರಾಜ್ ವರ್ಮ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಮೋಟಿವೇಷನಲ್‌ ಭಾಷಣಕಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ನೀಡುವ ಗಿರಿ, "ಇಂತಹ ವೈವಿಧ್ಯಮಯ ಚಿತ್ರಗಳ ಭಾಗವಾಗಲು ನನಗೆ ಖುಷಿ ಎನಿಸುತ್ತದೆ. ಪ್ರತಿಯೊಂದು ಪಾತ್ರವೂ ಪ್ರೇಕ್ಷಕರೊಂದಿಗೆ ಹೊಸ ರೀತಿಯಲ್ಲಿ ಸಂಪರ್ಕ ಸಾಧಿಸಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಪ್ರೇಕ್ಷಕರ ಬೆಂಬಲ ಮತ್ತು ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ. ಈ ಪ್ರಾಜೆಕ್ಟ್‌ಗಳ ಯಶಸ್ಸನ್ನು ಎದುರು ನೋಡುತ್ತಿದ್ದೇವೆ" ಎಂದಿದ್ದಾರೆ. 

Whats_app_banner