ಸಂವಿಧಾನದ ಪರವಾದ ಏಕೈಕ ಪಕ್ಷ ಬಿಜೆಪಿ ಎಂದ ಸಂಸದ ಯದುವೀರ್‌ ಒಡೆಯರ್‌, ಎಂಥ ಸುಳ್ಳು ಎಂದು ಅಣಕಿಸಿದ ಚೇತನ್‌ ಅಹಿಂಸಾ-sandalwood news actor chetan ahimsa countered mysore kodagu mp yaduveer wadiyar who spoke about the constitution mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸಂವಿಧಾನದ ಪರವಾದ ಏಕೈಕ ಪಕ್ಷ ಬಿಜೆಪಿ ಎಂದ ಸಂಸದ ಯದುವೀರ್‌ ಒಡೆಯರ್‌, ಎಂಥ ಸುಳ್ಳು ಎಂದು ಅಣಕಿಸಿದ ಚೇತನ್‌ ಅಹಿಂಸಾ

ಸಂವಿಧಾನದ ಪರವಾದ ಏಕೈಕ ಪಕ್ಷ ಬಿಜೆಪಿ ಎಂದ ಸಂಸದ ಯದುವೀರ್‌ ಒಡೆಯರ್‌, ಎಂಥ ಸುಳ್ಳು ಎಂದು ಅಣಕಿಸಿದ ಚೇತನ್‌ ಅಹಿಂಸಾ

ಸಂವಿಧಾನದ ಪರವಾದ ಏಕೈಕ ಪಕ್ಷ ಬಿಜೆಪಿ ಎಂದು ಮೈಸೂರು-ಕೊಡಗು ಸಂಸದ ಯದುವೀರ ಒಡೆಯರ್ ಹೇಳುತ್ತಿದ್ದಂತೆ, ಸಂಸದರ ಈ ಹೇಳಿಕೆಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಪ್ರತಿಕ್ರಿಯಿಸಿದ್ದಾರೆ. ಯದುವೀರ ಅವರು ನಮ್ಮ ನ್ಯಾಯ ಮಾದರಿಯಾದ ಕೃಷ್ಣರಾಜ ಒಡೆಯರ್ ಕೊಡುಗೆಗಳನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಸಂವಿಧಾನದ ಪರವಾದ ಏಕೈಕ ಪಕ್ಷ ಬಿಜೆಪಿ ಎಂದು ಮೈಸೂರು-ಕೊಡಗು ಸಂಸದ ಯದುವೀರ ಒಡೆಯರ್ ಹೇಳಿದ್ದಾರೆ. ಸಂಸದರ ಈ ಹೇಳಿಕೆಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಟಾಂಗ್‌ ಕೊಟ್ಟಿದ್ದಾರೆ.
ಸಂವಿಧಾನದ ಪರವಾದ ಏಕೈಕ ಪಕ್ಷ ಬಿಜೆಪಿ ಎಂದು ಮೈಸೂರು-ಕೊಡಗು ಸಂಸದ ಯದುವೀರ ಒಡೆಯರ್ ಹೇಳಿದ್ದಾರೆ. ಸಂಸದರ ಈ ಹೇಳಿಕೆಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಟಾಂಗ್‌ ಕೊಟ್ಟಿದ್ದಾರೆ.

Chetan Ahimsa on Yaduveer Wadiyar: ಸೋಷಿಯಲ್‌ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ. ರಾಜಕೀಯ, ಸಾಮಾಜಿಕ, ಪ್ರಸ್ತುತ ಆಗುಹೋಗುಗಳ ಬಗ್ಗೆ ತಮ್ಮ ಜಾಲತಾಣದ ಪುಟದಲ್ಲಿ ಬರಹಗಳನ್ನು ಪ್ರಕಟಿಸುತ್ತಲೇ ಇರುತ್ತಾರೆ. ಸಿನಿಮಾ ನಟರ ಬಗ್ಗೆ, ರಾಜಕಾರಣಿಗಳ ಬಗ್ಗೆಯೂ ಅನಿಸಿಕೆ ಅಭಿಪ್ರಾಯಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮೈಸೂರು- ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೂ ಟಕ್ಕರ್‌ ಕೊಟ್ಟಿದ್ದಾರೆ.

ಸಂವಿಧಾನದ ಪರವಾದ ಏಕೈಕ ಪಕ್ಷ ಬಿಜೆಪಿ ಎಂದು ಮೈಸೂರು-ಕೊಡಗು ಸಂಸದ ಯದುವೀರ ಒಡೆಯರ್ ಹೇಳಿದ್ದಾರೆ. ಸಂಸದರ ಈ ಹೇಳಿಕೆಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಟಾಂಗ್‌ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಮೈಸೂರಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿದ್ದ ಬಿಜೆಪಿ ಸಂಸದ ಯದುವೀರ್‌ ಒಡೆಯರ್‌, ಸಂವಿಧಾನದ ಪರವಾದ ಏಕೈಕ ಪಕ್ಷ ಬಿಜೆಪಿ. ಇಡೀ ವಿಶ್ವವೇ ಭಾರತದ ಕಡೆ ಹೊರಳಿದೆ ಎಂದರೆ ಅದಕ್ಕೆ ಪ್ರಧಾನಿ ಮೋದಿ ಕಾರಣ ಎಂದಿದ್ದರು. ಇದೀಗ ಇದೇ ಹೇಳಿಕೆಗೆ ಚೇತನ್‌ ಅಹಿಂಸಾ ಪ್ರತಿಕ್ರಿಯಿಸಿದ್ದಾರೆ.

ಚೇತನ್‌ ಅಹಿಂಸಾ ಪೋಸ್ಟ್‌

“ಸಂವಿಧಾನದ ಪರವಾದ ಏಕೈಕ ಪಕ್ಷ ಬಿಜೆಪಿ ಎಂದು ಮೈಸೂರು-ಕೊಡಗು ಸಂಸದ ಯದುವೀರ ಒಡೆಯರ್ ಹೇಳಿದ್ದಾರೆ, ಎಂಥ ಸುಳ್ಳು. ಭ್ರಾತೃತ್ವವು ನಮ್ಮ ಸಂವಿಧಾನದ ಪೀಠಿಕೆಯ ಅವಿಭಾಜ್ಯ ಆದರ್ಶವಾಗಿದೆ. ಮುಸ್ಲಿಂ ವಿರೋಧಿ ಮತ್ತು ಕ್ರಿಶ್ಚಿಯನ್ ವಿರೋಧಿ ನೀತಿಗಳನ್ನು ಸಾಂಸ್ಥಿಕವಾಗಿ ಜಾರಿಗೆ ತರುವ ಹಿಂದುತ್ವವು ಸ್ಪಷ್ಟವಾಗಿ ಭ್ರಾತೃತ್ವಕ್ಕೆ ವಿರುದ್ಧವಾಗಿದೆ. ಯದುವೀರ ಅವರು ನಮ್ಮ ನ್ಯಾಯ ಮಾದರಿಯಾದ ಕೃಷ್ಣರಾಜ ಒಡೆಯರ್ ಕೊಡುಗೆಗಳನ್ನು ಅಧ್ಯಯನ ಮಾಡಬೇಕು” ಎಂಬ ಪೋಸ್ಟ್ ಹಂಚಿಕೊಂಡಿದ್ದಾರೆ.

ಕಾಸ್ಟಿಂಗ್‌ ಕೌಚ್‌ ಬಗ್ಗೆಯೂ ಚೇತನ್‌ ಪ್ರತಿಕ್ರಿಯೆ

ಮಲಯಾಳಂನಲ್ಲಿ ಹೇಮಾ ಸಮಿತಿ ರೀತಿಯಲ್ಲಿ ಕನ್ನಡ ಚಿತ್ರೋದ್ಯಮಕ್ಕೂ ಅಂಥ ಒಂದು ಸಮಿತಿ ಬೇಕು ಎಂದು FIRE ಆಗ್ರಹಿಸಿತ್ತು. ಅದರ ಮುಂದುವರಿದ ಭಾಗವಾಗಿ ಸಿಎಂಗೂ ಮನವಿ ಸಲ್ಲಿಸಿದ್ದರು ಫೈರ್‌ ಸದಸ್ಯರು. ಈ ಬಗ್ಗೆ ಚೇತನ್‌ ಅಹಿಂಸಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

‘ಕಾಸ್ಟಿಂಗ್ ಕೌಚ್’ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. ಫೈರ್ ಸಂಸ್ಥೆಯು ಲಕ್ಷೀ ಹೆಬ್ಬಾಳ್ಕರ್ ಅವರ ಹೇಳಿಕೆ ಶ್ಲಾಘನೆ ವ್ಯಕ್ತಪಡಿಸುತ್ತದೆ. ಇದನ್ನು ಸಾಕಾರಗೊಳಿಸುವ ಪ್ರಜಾಸತ್ತಾತ್ಮಕ ಮಾರ್ಗಗಳ ಬಗ್ಗೆ ಚರ್ಚಿಸಲು ಸಚಿವರನ್ನು ಭೇಟಿ ಮಾಡಲು ಫೈರ್ ಉದ್ದೇಶಿಸಿದೆ. ಕೇರಳದಲ್ಲಿ ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯಂತಹ ಸಮಿತಿಯ ವರದಿಗಾಗಿ ನಮ್ಮ ಉದ್ದೇಶಕ್ಕೆ ಒಗ್ಗಟ್ಟನ್ನು ತೋರಿಸಿದ್ದಕ್ಕಾಗಿ ಬಿಜೆಪಿಯ ಮಂಜುಳಾ ಸಿ ಮತ್ತು ಕಾಂಗ್ರೆಸ್ ನ ಸೌಮ್ಯ ರೆಡ್ಡಿ ಅವರಿಗೆ ಫೈರ್ ಸಂಸ್ಥೆಯು ಕೃತಜ್ಞತೆ ಸಲ್ಲಿಸುತ್ತದೆ.

mysore-dasara_Entry_Point