ಅಪ್ಪ ಬಾಲಕೃಷ್ಣ, ಅಣ್ಣ Jr NTR ಆಶೀರ್ವಾದ ಪಡೆದು ತೆಲುಗು ಚಿತ್ರರಂಗಕ್ಕೆ ಬಲಗಾಲಿಟ್ಟ ನಂದಮೂರಿ ಮೋಕ್ಷಜ್ಞ; ನಿರ್ದೇಶಕರು ಯಾರು?-tollywood ballayya son nandamuri mokshagna is all set for his debut into telugu film industry with prashanth varma mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅಪ್ಪ ಬಾಲಕೃಷ್ಣ, ಅಣ್ಣ Jr Ntr ಆಶೀರ್ವಾದ ಪಡೆದು ತೆಲುಗು ಚಿತ್ರರಂಗಕ್ಕೆ ಬಲಗಾಲಿಟ್ಟ ನಂದಮೂರಿ ಮೋಕ್ಷಜ್ಞ; ನಿರ್ದೇಶಕರು ಯಾರು?

ಅಪ್ಪ ಬಾಲಕೃಷ್ಣ, ಅಣ್ಣ Jr NTR ಆಶೀರ್ವಾದ ಪಡೆದು ತೆಲುಗು ಚಿತ್ರರಂಗಕ್ಕೆ ಬಲಗಾಲಿಟ್ಟ ನಂದಮೂರಿ ಮೋಕ್ಷಜ್ಞ; ನಿರ್ದೇಶಕರು ಯಾರು?

ತೆಲುಗು ಚಿತ್ರೋದ್ಯಮದ ನಂದಮೂರಿ ಬಾಲಕೃಷ್ಣ ಅವರ ಪುತ್ರ ನಂದಮೂರಿ ಮೋಕ್ಷಜ್ಞ ತಮ್ಮ 30ನೇ ವಯಸ್ಸಿನಲ್ಲಿ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರದ ಫಸ್ಟ್‌ ಲುಕ್ ಸಹ ಬಿಡುಗಡೆ ಆಗಿದೆ.

ಅಪ್ಪ ಬಾಲಕೃಷ್ಣ, ಅಣ್ಣ Jr NTR ಆಶೀರ್ವಾದ ಪಡೆದು ತೆಲುಗು ಚಿತ್ರರಂಗಕ್ಕೆ ಬಲಗಾಲಿಟ್ಟ ನಂದಮೂರಿ ಮೋಕ್ಷಜ್ಞ; ನಿರ್ದೇಶಕರು ಯಾರು?
ಅಪ್ಪ ಬಾಲಕೃಷ್ಣ, ಅಣ್ಣ Jr NTR ಆಶೀರ್ವಾದ ಪಡೆದು ತೆಲುಗು ಚಿತ್ರರಂಗಕ್ಕೆ ಬಲಗಾಲಿಟ್ಟ ನಂದಮೂರಿ ಮೋಕ್ಷಜ್ಞ; ನಿರ್ದೇಶಕರು ಯಾರು?

Nandamuri Mokshagna: ಟಾಲಿವುಡ್‌ನ ಸೂಪರ್‌ಸ್ಟಾರ್‌ ನಂದಮೂರಿ ಬಾಲಕೃಷ್ಣ ಈಗಾಗಲೇ ಚಿತ್ರೋದ್ಯಮದಲ್ಲಿದ್ದು ಎರಡ್ಮೂರು ದಶಕಗಳೇ ಕಳೆದಿವೆ. ಇಷ್ಟರಲ್ಲಾಗಲೇ ಅವರ ಮಕ್ಕಳು ಚಿತ್ರೋದ್ಯಮಕ್ಕೆ ಆಗಮಿಸಬೇಕಿತ್ತು. ಆದರೆ, ಅದ್ಯಾಕೋ ಈಡೇರಿರಲಿಲ್ಲ. ಇದೀಗ ಕೊನೆಗೂ ನಂದಮೂರಿ ಬಾಲಣ್ಣನ ಮಗ ನಂದಮೂರಿ ಮೋಕ್ಷಜ್ಞ ತೆಲುಗು ಚಿತ್ರರಂಗಕ್ಕೆ ಅದ್ಧೂರಿಯಾಗಿಯೇ ಎಂಟ್ರಿಕೊಡುತ್ತಿದ್ದಾರೆ. ಸುಧಾಕರ್ ಚೆರುಕುರಿ ಅವರ ಎಸ್‌ಎಲ್‌ವಿ ಸಿನಿಮಾಸ್ ಮತ್ತು ಲೆಜೆಂಡ್ ಪ್ರೊಡಕ್ಷನ್ಸ್‌ ಜಂಟಿಯಾಗಿ ನಿರ್ಮಿಸುತ್ತಿರುವ ಸಿನಿಮಾ ಮೂಲಕ ಮೋಕ್ಷಜ್ಞ ಟಾಲಿವುಡ್‌ ಚಿತ್ರರಂಗಕ್ಕೆ ಆಗಮಿಸಲು ಸಜ್ಜಾಗಿದ್ದಾರೆ.

ಈಗಾಗಲೇ ಎನ್‌ಟಿಆರ್‌ ಕುಟುಂಬದಿಂದ ಬಾಲಣ್ಣ, ಜೂನಿಯರ್‌ ಎನ್‌ಟಿಆರ್‌ ಮತ್ತು ಕಲ್ಯಾಣ್‌ ರಾಮ್‌ ಪ್ರಸ್ತುತ ಚಾಲಲ್ತಿಯಲ್ಲಿರುವ ನಟರು. ಇದೀಗ ಈ ಸಾಲಿಗೆ ನಂದಮೂರಿ ತಾರಕ ರಾಮರಾವ್ ಅವರ ಮೊಮ್ಮಗ ಮತ್ತು ನಂದಮೂರಿ ಬಾಲಕೃಷ್ಣ ಅವರ ಪುತ್ರ ನಂದಮೂರಿ ಮೋಕ್ಷಜ್ಞ ತೆಲುಗು ಚಿತ್ರೋದ್ಯಮಕ್ಕೆ ಧುಮುಕುತ್ತಿದ್ದಾರೆ. ಅಪ್ಪನಂತೆ ಮಾಸ್‌ ಅವತಾರದಲ್ಲಿಯೇ ಚೊಚ್ಚಲ ಸಿನಿಮಾ ಮೂಲಕ ಪರಿಚಿತಗೊಳ್ಳಲಿದ್ದಾರೆ ಮೋಕ್ಷಜ್ಞ.

ಹನುಮಾನ್‌ ನಿರ್ದೇಶಕರ ಸಿನಿಮಾ

ಮೋಕ್ಷಜ್ಞ ಸಿನಿಮಾರಂಗಕ್ಕೆ ಬರುವುದು ಯಾವಾಗ, ಅವರ ಲಾಂಚ್‌ ಯಾವಾಗ? ನಿರ್ದೇಶಕರು ಯಾರು? ನಿರ್ಮಾಪಕರು ಯಾರು ಎಂಬಿತ್ಯಾದಿ ಪ್ರಶ್ನೆಗಳಿದ್ದವು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಸೆ. 06 ಮೋಕ್ಷಜ್ಞ ಅವರ ಬರ್ತಡೇ. ಈ ನಿಮಿತ್ತ ಪುರಾಣ ಹಿನ್ನೆಲೆಯ ಕಥೆ ಆಧರಿಸಿದ ಸಿನಿಮಾ ಘೋಷಣೆಯಾಗಿದೆ. ಚಿತ್ರದ ಫಸ್ಟ್‌ ಲುಕ್‌ ಸಹ ಬಿಡುಗಡೆ ಆಗಿದೆ. ಇತ್ತೀಚಿನ ಹನುಮಾನ್‌ ಸಿನಿಮಾ ಮೂಲಕ ಯಶಸ್ಸು ಪಡೆದ ನಿರ್ದೇಶಕ ಪ್ರಶಾಂತ್‌ ವರ್ಮಾ ಮೋಕ್ಷಜ್ಞ ಅವರ ಚೊಚ್ಚಲ ಸಿನಿಮಾಕ್ಕೆ ಆಕ್ಷನ್‌ ಕಟ್ ಹೇಳಲಿದ್ದಾರೆ. ಈ ಸಿನಿಮಾಕ್ಕೆ ಸಿಂಬಾ ಇಸ್‌ ಕಮಿಂಗ್‌ ಎಂಬ ಶೀರ್ಷಿಕೆ ಅಂತಿಮವಾಗಿದೆ ಎಂದೇ ಹೇಳಲಾಗುತ್ತಿದೆ.

ಅಣ್ಣನಿಂದ ಬಂತು ಶುಭಾಶಯ

ಮೋಕ್ಷಜ್ಞ ಟಾಲಿವುಡ್‌ ಚಿತ್ರರಂಗಕ್ಕೆ ಆಗಮಿಸುತ್ತಿದ್ದಂತೆ, ಸೋಷಿಯಲ್‌ ಮೀಡಿಯಾ ಟ್ವಿಟ್ಟರ್‌ನಲ್ಲಿ ಫಸ್ಟ್‌ ಲುಕ್‌ ಪೋಸ್ಟರ್‌ ಶೇರ್‌ ಮಾಡಿದ ಜೂನಿಯರ್‌ ಎನ್‌ಟಿಆರ್‌, ಸಿನಿಮಾ ಜಗತ್ತಿಗೆ ಮೊದಲ ಸಲ ಎಂಟ್ರಿಕೊಡುತ್ತಿರುವ ನಿನಗೆ ಅಭಿನಂದನೆಗಳು. ಈ ನಿನ್ನ ಹೊಸ ಅಧ್ಯಾಯಕ್ಕೆ ತಾತನ ಆಶೀರ್ವಾದ ಮತ್ತು ಎಲ್ಲ ದೈವದ ಆಶೀರ್ವಾದವೂ ನಿನ್ನ ಮೇಲಿರಲಿ. ಹ್ಯಾಪಿ ಬರ್ತ್‌ಡೇ ಮೋಕ್ಷು" ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಚಿನ್ನದ ಗಣಿಯ ಕಥೆ

“ಮೋಕ್ಷಜ್ಞ ಅವರನ್ನು ಚಿತ್ರರಂಗಕ್ಕೆ ಕರೆತರುವ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಬಾಲಕೃಷ್ಣ ಅವರು ನನ್ನ ಮತ್ತು ನನ್ನ ಕಥೆಯ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಸದಾ ಚಿರಋಣಿ. ಈ ಸ್ಕ್ರಿಪ್ಟ್ ನಮ್ಮ ಇತಿಹಾಸದಿಂದ ಸ್ಫೂರ್ತಿ ಪಡೆದಿದೆ, ಚಿನ್ನದ ಗಣಿಯ ಕುರಿತ ಸಿನಿಮಾ ಇದು" ಎಂದಿದ್ದಾರೆ ನಿರ್ದೇಶಕ ಪ್ರಶಾಂತ್ ವರ್ಮಾ.

"ಮೋಕ್ಷಜ್ಞ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದಕ್ಕೆ ಖುಷಿಯಿದೆ. ಈ ಸುವರ್ಣ ಅವಕಾಶ ನೀಡಿದ ಬಾಲಕೃಷ್ಣ ಅವರಿಗೆ ಧನ್ಯವಾದಗಳು. ಮೋಕ್ಷಜ್ಞ ಅವರ ಚೊಚ್ಚಲ ಚಿತ್ರಕ್ಕೆ ಪ್ರಶಾಂತ್ ವರ್ಮಾ ಸರಿಹೊಂದುವ ರೋಚಕ ಸ್ಕ್ರಿಪ್ಟ್‌ನೊಂದಿಗೆ ಬಂದಿದ್ದಾರೆ. ಈ ಚಿತ್ರದ ಬಗ್ಗೆ ನಾವೆಲ್ಲರೂ ಉತ್ಸುಕರಾಗಿದ್ದೇವೆ" ಎಂಬುದು ನಿರ್ಮಾಪಕ ಸುಧಾಕರ್ ಚೆರುಕುರಿ ಮಾತು.

 

mysore-dasara_Entry_Point