ಮಹಿಳೆಗೆ ಕಚ್ಚಿದ ದರ್ಶನ್‌ ಮನೆಯ ಸಾಕು ನಾಯಿಗಳು; ದರ್ಶನ್ ಸೇರಿ‌ ಹಲವರ ವಿರುದ್ಧ ಕಂಪ್ಲೆಂಟ್!
ಕನ್ನಡ ಸುದ್ದಿ  /  ಮನರಂಜನೆ  /  ಮಹಿಳೆಗೆ ಕಚ್ಚಿದ ದರ್ಶನ್‌ ಮನೆಯ ಸಾಕು ನಾಯಿಗಳು; ದರ್ಶನ್ ಸೇರಿ‌ ಹಲವರ ವಿರುದ್ಧ ಕಂಪ್ಲೆಂಟ್!

ಮಹಿಳೆಗೆ ಕಚ್ಚಿದ ದರ್ಶನ್‌ ಮನೆಯ ಸಾಕು ನಾಯಿಗಳು; ದರ್ಶನ್ ಸೇರಿ‌ ಹಲವರ ವಿರುದ್ಧ ಕಂಪ್ಲೆಂಟ್!

ನಟ ದರ್ಶನ್‌ ಅವರ ರಾಜರಾಜೇಶ್ವರಿ ನಗರದ ಮನೆಯಲ್ಲಿನ ನಾಯಿಗಳು ಮಹಿಳೆಗೆ ಕಚ್ಚಿದ ಹಿನ್ನೆಲೆಯಲ್ಲಿ, ಗಾಯಗೊಂಡ ಮಹಿಳೆ ದರ್ಶನ್‌ ವಿರುದ್ಧ ದೂರು ನೀಡಿದ್ದಾರೆ.

ಮಹಿಳೆಗೆ ಕಚ್ಚಿದ ದರ್ಶನ್‌ ಮನೆಯ ಸಾಕು ನಾಯಿಗಳು; ದರ್ಶನ್ ಸೇರಿ‌ ಹಲವರ ವಿರುದ್ಧ ಕಂಪ್ಲೆಂಟ್!
ಮಹಿಳೆಗೆ ಕಚ್ಚಿದ ದರ್ಶನ್‌ ಮನೆಯ ಸಾಕು ನಾಯಿಗಳು; ದರ್ಶನ್ ಸೇರಿ‌ ಹಲವರ ವಿರುದ್ಧ ಕಂಪ್ಲೆಂಟ್!

Darshan: ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅವರ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯಲ್ಲಿ ಸಾಕಿದ್ದ ನಾಯಿ, ಮಹಿಳೆಯೊಬ್ಬರಿಗೆ ಕಚ್ಚಿದೆ. ಈ ಹಿನ್ನೆಲೆಯಲ್ಲಿ ನಾಯಿಯಿಂದ ಕಚ್ಚಿಸಿಕೊಂಡು ಗಾಯಗಳಾದ ಮಹಿಳೆ ಆರ್‌ಆರ್‌ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಅಂದಹಾಗೆ, ಆರ್‌ಆರ್‌ ನಗರದಲ್ಲಿನ ಸ್ಪರ್ಶ ಆಸ್ಪತ್ರೆಗೆ ಕಾರ್ಯಕ್ರಮವೊಂದರ ನಿಮಿತ್ತ ಬಂದಿದ್ದಾಗ, ದರ್ಶನ್‌ ಅವರ ಮನೆ ಬಳಿಯಲ್ಲಿಯೇ ವೈದ್ಯೆ ಅಮಿತಾ ತಮ್ಮ ಕಾರನ್ನು ನಿಲ್ಲಿಸಿದ್ದರು. ತಮ್ಮ ಕೆಲಸ ಮುಗಿದ ಬಳಿಕ ಕಾರ್‌ ಏರಿ ಹೋಗಬೇಕು ಎನ್ನುವಷ್ಟರಲ್ಲಿ ಕಾರ್‌ ಬಳಿ ದರ್ಶನ್‌ ಅವರಿಗೆ ಸೇರಿದ ನಾಯಿಗಳಿದ್ದವು. ಅವುಗಳನ್ನು ಕರೆದೊಯ್ಯಿರಿ ಎಂದು ದರ್ಶನ್ ಮನೆ ಕೆಲಸದವರಿಗೆ ಹೇಳಿದ್ದಾರೆ.

ಹೀಗಿರುವಾಗಲೇ ಮನೆಯ ಕೆಲಸಗಾರರಿಗೂ ಮತ್ತು ಮಹಿಳೆ ನಡುವೆ ಮಾತಿಗೆ ಮಾತು ಜೋರಾಗಿದೆ. ನೀವು ಅಲ್ಲಿ ಕಾರ್‌ ನಿಲ್ಲಿಸುವಂತಿಲ್ಲ ಎಂದೂ ಕೆಲಸಗಾರರು ಮಹಿಳೆಗೆ ತಿಳಿಸಿದ್ದಾರೆ. ಹೀಗಿರುವಾಗಲೇ ಅಲ್ಲೇ ಇದ್ದ ನಾಯಿ ಮಹಿಳೆ ಮೇಲೆ ದಾಳಿ ಮಾಡಿ, ಗಾಯಗೊಳಿಸಿವೆ.

ಇದರಿಂದ ರೋಸಿಹೋದ ಮಹಿಳೆ ನೇರವಾಗಿ ಆರ್‌ಆರ್‌ ನಗರ ಪೊಲೀಸ್‌ ಠಾಣೆಗೆ ತೆರಳಿ ದರ್ಶನ್‌ ಮನೆಯ ಕೆಲಸಗಾರರು ಮತ್ತು ದರ್ಶನ್‌ ಮೇಲೆ ದೂರು ನೀಡಿದ್ದಾರೆ. ದೂರು ಪಡೆದ ಪೊಲೀಸರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ಘಟನೆ ನಡೆದ ವೇಳೆ ದರ್ಶನ್‌ ಮನೆಯಲ್ಲಿ ಇರಲಿಲ್ಲ ಎಂಬುದು ತಿಳಿದುಬಂದಿದೆ.

Whats_app_banner