Bhairathi Ranagal: ಶಿವರಾಜ್‌ ಕುಮಾರ್‌ ಅಭಿಮಾನಿಗಳಿಗೆ ಸಿಹಿಸುದ್ದಿ; ಭೈರತಿ ರಣಗಲ್‌ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ-sandalwood news bhairathi ranagal theatrical release date announced shivarajkumar starrer movie date pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Bhairathi Ranagal: ಶಿವರಾಜ್‌ ಕುಮಾರ್‌ ಅಭಿಮಾನಿಗಳಿಗೆ ಸಿಹಿಸುದ್ದಿ; ಭೈರತಿ ರಣಗಲ್‌ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ

Bhairathi Ranagal: ಶಿವರಾಜ್‌ ಕುಮಾರ್‌ ಅಭಿಮಾನಿಗಳಿಗೆ ಸಿಹಿಸುದ್ದಿ; ಭೈರತಿ ರಣಗಲ್‌ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ

Bhairathi Ranagal Movie Release Date: ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ನಟನೆಯ ಭೈರತಿ ರಣಗಲ್‌ ಸಿನಿಮಾದ ಕುರಿತು ಚಿತ್ರತಂಡ ಬಿಗ್‌ ಅನೌನ್ಸ್‌ಮೆಂಟ್‌ ಮಾಡಿದೆ. ಶಿವಣ್ಣನ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಸಿನಿಮಾ ನವೆಂಬರ್‌ 15ರಂದು ಬಿಡುಗಡೆಯಾಗಲಿದೆ.

 ಭೈರತಿ ರಣಗಲ್‌ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ
ಭೈರತಿ ರಣಗಲ್‌ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ

ಬೆಂಗಳೂರು: ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ನಟನೆಯ ಭೈರತಿ ರಣಗಲ್‌ ಸಿನಿಮಾದ ಕುರಿತು ಚಿತ್ರತಂಡ ಬಿಗ್‌ ಅನೌನ್ಸ್‌ಮೆಂಟ್‌ ಮಾಡಿದೆ. ಈ ಚಿತ್ರದ ಬಿಡುಗಡೆ ದಿನಾಂಕ (Bhairathi Ranagal Movie Release Date) ಪ್ರಕಟವಾಗಿದೆ. ಈ ಯಲಹಂಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸಿನಿಮಾದ ಕುರಿತು ಚಿತ್ರತಂಡ ಮಾಹಿತಿ ನೀಡಿದೆ. ಇದೀಗ ಬಂದ ವರದಿಗಳ ಪ್ರಕಾರ ಇದೇ ವರ್ಷ ನವೆಂಬರ್‌ 15ರಂದು ಭೈರತಿ ರಣಗಲ್‌ ಸಿನಿಮಾ ಬಿಡುಗಡೆಯಾಗಲಿದೆ. ನವೆಂಬರ್‌ 18ಕ್ಕೆ ಕನಕದಾಸ ಜಯಂತಿ ಇರುವುದರಿಂದ ಈ ಸಿನಿಮಾಕ್ಕೆ ಲಾಂಗ್‌ ವೀಕೆಂಡ್‌ ದೊರಕಲಿದೆ.

ಸಾಕಷ್ಟು ಜನರು ಈ ಸಿನಿಮಾ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಬಹುದು ಎಂದು ಕಾಯುತ್ತಿದ್ದರು. ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲು ಒಂದು ಸಮಸ್ಯೆ ಇತ್ತು. ಜೂನಿಯರ್‌ ಎನ್‌ಟಿಆರ್‌ ಅವರ ದೇವರ ಸಿನಿಮಾ ಆ ಸಮಯದಲ್ಲಿ ಬಿಡುಗಡೆಯಾಗುವ ಕುರಿತು ಗುಸುಗುಸು ಇದೆ. ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಬಿಡುಗಡೆ ಮಾಡುವ ಆಯ್ಕೆ ಚಿತ್ರತಂಡದ ಮುಂದಿತ್ತು. ಆದರೆ, ಇದೀಗ ಬಂದ ಮಾಹಿತಿ ಪ್ರಕಾರ ನವೆಂಬರ್‌ 15ರಂದು ಭೈರತಿ ರಣಗಲ್‌ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಶಿವರಾಜ್‌ಕುಮಾರ್‌ ಮತ್ತು ನರ್ತನ್‌ ಕಾಂಬಿನೇಷನ್‌ನ ಎರಡನೇ ಸಿನಿಮಾ ಭೈರತಿ ರಣಗಲ್‌ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ. ಮಫ್ತಿ ಸಿನಿಮಾದ ಪ್ರೀಕ್ವೆಲ್‌ ಎಂಬ ಕಾರಣಕ್ಕೆ ಮತ್ತು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ ಎಂಬ ಕಾರಣದಿಂದ ಸಿನಿಮಾದ ಕುರಿತು ನಿರೀಕ್ಷೆ ತುಸು ಹೆಚ್ಚಾಗಿಯೇ ಇದಾಗಿದೆ. ಈ ಸಿನಿಮಾ ಆಗಸ್ಟ್‌ 15ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರದಿಂದ ಬಿಡುಗಡೆ ಮುಂದಕ್ಕೆ ಹೋಗಿತ್ತು. ಸೆಪ್ಟೆಂಬರ್‌ನಲ್ಲಿ ರಿಲೀಸ್‌ ಆಗಬಹುದೇ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ದೀಪಾವಳಿ ಬಳಿಕ ಅಂದರೆ ನವೆಂಬರ್‌ 15ರಂದು ಸಿನಿಮಾ ಬಿಡುಗಡೆಯಾಗುವ ಕುರಿತು ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ.

ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸುತ್ತಿರುವ ಚಲನಚಿತ್ರ ಇದಾಗಿದೆ. ಭೈರತಿ ಸಿನಿಮಾವು ಮಫ್ತಿ ಸಿನಿಮಾದ ಕಥೆಯ ತುಣುಕಿನ ಮುಂದುವರೆದ ಭಾಗವಾಗಿದೆ. ಇದು ಮಫ್ತಿಯ ಪ್ರೀಕ್ವೆಲ್‌ ಅಲ್ಲದೆ ಇದ್ದರೂ ಅಲ್ಲಿನ ಪಾತ್ರವೊಂದು ಮತ್ತೊಂದು ಸಿನಿಮಾವಾಗಿ ಹೊರಹೊಮ್ಮುತ್ತಿದೆ. ಮಫ್ತಿ ಸಿನಿಮಾದಲ್ಲಿ ಭೈರತಿ ರಣಗಲ್‌ನ ಸಣ್ಣಕಥೆಯನ್ನು ಇಲ್ಲಿ ಬೆಳೆಸಲಾಗಿದೆ ಎಂದು ಚಿತ್ರತಂಡ ಈಗಾಗಲೇ ಅಧಿಕೃತವಾಗಿ ಮಾಹಿತಿ ನೀಡಿದೆ.