ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಡ್ರಗ್ಸ್‌ ಹಾವಳಿ; ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಆರೋಪಿಯ ಮೊಬೈಲ್‌ನಲ್ಲಿ ಕನ್ನಡ ನಟನಟಿಯರ ಹೆಸರು
ಕನ್ನಡ ಸುದ್ದಿ  /  ಮನರಂಜನೆ  /  ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಡ್ರಗ್ಸ್‌ ಹಾವಳಿ; ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಆರೋಪಿಯ ಮೊಬೈಲ್‌ನಲ್ಲಿ ಕನ್ನಡ ನಟನಟಿಯರ ಹೆಸರು

ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಡ್ರಗ್ಸ್‌ ಹಾವಳಿ; ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಆರೋಪಿಯ ಮೊಬೈಲ್‌ನಲ್ಲಿ ಕನ್ನಡ ನಟನಟಿಯರ ಹೆಸರು

Sandalwood drugs case: ಹೊಸ ವರ್ಷದ ಪಾರ್ಟಿಗಾಗಿ ಮಾದಕ ವಸ್ತು ಸಂಗ್ರಹಿಸಿದ್ದ ನೈಜೀರಿಯಾ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆತ ಸ್ಯಾಂಡಲ್‌ವುಡ್‌ನ ಕೆಲವು ನಟನಟಿಯರು, ಕಿರುತೆರೆ ಕಲಾವಿದರರ ಜತೆಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಆರೋಪಿಯ ಮೊಬೈಲ್‌ನಲ್ಲಿ ಕನ್ನಡ ನಟನಟಿಯರ ಹೆಸರು
ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಆರೋಪಿಯ ಮೊಬೈಲ್‌ನಲ್ಲಿ ಕನ್ನಡ ನಟನಟಿಯರ ಹೆಸರು

ಕನ್ನಡ ಚಿತ್ರರಂಗದ, ಕಿರುತೆರೆಯ ಕೆಲವು ನಟರು, ನಟಿಯರು ಡ್ರಗ್ಸ್‌ ಪ್ರಕರಣದಲ್ಲಿ ವಿಚಾರಣೆ, ಬಂಧನ ಎದುರಿಸಲಿದ್ದಾರೆಯೇ? ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಡ್ರಗ್ಸ್‌ ವ್ಯವಹಾರ ಆರಂಭವಾಗಿದೆಯೇ? ಹೌದು ಎನ್ನುತ್ತಿದ್ದಾರೆ ಪೊಲೀಸರು. ಇತ್ತೀಚೆಗೆ ಸಿಸಿಬಿ ಪೊಲೀಸರು ಬಂಧಿಸಿರುವ ನೈಜೀರಿಯಾ ಪ್ರಜೆಯೊಬ್ಬನ ಮೊಬೈಲ್‌ನಲ್ಲಿ ಕನ್ನಡದ ಕೆಲವು ನಟನಟಿಯರ ಮೊಬೈಲ್‌ ಸಂಖ್ಯೆಗಳು ದೊರಕಿದ್ದು, ಇಂತಹ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇತ್ತೀಚೆಗೆ ಬೆಂಗಳೂರಿನ ಸಿಸಿಬಿ ಪೊಲೀಸರು ನೈಜೀರಿಯಾ ಡ್ರಗ್ಸ್‌ಕೋರನೊಬ್ಬನನ್ನು ಬಂಧಿಸಿದ್ದಾರೆ. ಬೆಂಗಳೂರು ನಗರದಲ್ಲಿ ಮತ್ತು ಹೊರವಲಯದಲ್ಲಿ ಹೊಸ ವರ್ಷ 2024ರ ಸಂಭ್ರಮಾಚರಣೆಗಾಗಿ ಆತ ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ.

ಲಿಯೋನಾರ್ಡ್‌ ಹೆಸರಿನ ಈ ನೈಜೀರಿಯಾ ಪ್ರಜೆಯು ಹಲವು ಸ್ಯಾಂಡಲ್‌ವುಡ್‌ನ ನಟಿಯರು, ನಟರ ಹೆಸರನ್ನು ವಿಚಾರಣೆ ವೇಳೆ ಬಾಯ್ಪಿಟ್ಟಿದ್ದಾನೆ ಎಂದು ವರದಿಗಳು ತಿಳಿಸಿವೆ. ಇದೀಗ ಪೊಲೀಸರು ಲಿಯನಾರ್ಡೋ ಜತೆಗೆ ಸಂಪರ್ಕದಲ್ಲಿದ್ದ ನಟರು, ನಟಿಯರನ್ನು ಪತ್ತೆಹಚ್ಚುವ ಕಾರ್ಯದಲ್ಲಿದ್ದಾರೆ. ಈಗಾಗಲೇ ನೈಜೀರಿಯಾ ಪ್ರಜೆಯ ಮೊಬೈಲ್‌ನಲ್ಲಿ ಕೆಲವು ನಟಿಯರು, ನಟರ ಮೊಬೈಲ್‌ ಸಂಖ್ಯೆಯೂ ಪತ್ತೆಯಾಗಿವೆ.

ನೈಜೀರಿಯಾ ಪ್ರಜೆಯ ಸಂಪರ್ಕದಲ್ಲಿ ಸ್ಯಾಂಡಲ್‌ವುಡ್‌ನ ನಟ-ನಟಿಯರಿಗಿಂತ ಕಿರುತೆರೆಯ ನಟಿ-ನಟರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾಗಿದೆ. ರಾಮಮೂರ್ತಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ ಲಿಯಾನಾರ್ಡೋ ಮನೆಗೆ ಇತ್ತೀಚೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಎಂಡಿಎಂಎ ಕ್ರಿಸ್ಟಲ್‌, ಕೊಕೆನ್‌ ಪತ್ತೆಯಾಗಿತ್ತು. ದೆಹಲಿಯ ಕಿಂಗ್‌ಪಿನ್‌ಗಳಿಂದ ಈತ ಡ್ರಗ್ಸ್‌ಗಳನ್ನು ಸೋಪ್‌ಬಾಕ್ಸ್‌, ಚಾಕೋಲೇಟ್‌ ಬಾಕ್ಸ್‌ಗಳಲ್ಲಿ ತರಿಸುತ್ತಿದ್ದ ಎಂದು ವರದಿಗಳು ತಿಳಿಸಿವೆ.

ಹೊಸ ವರ್ಷದ ಪಾರ್ಟಿಗಾಗಿ ನೈಜೀರಿಯಾ ಪ್ರಜೆಯು ಇವುಗಳನ್ನು ಸಂಗ್ರಹಿಸಿದ್ದ. ಈತನ ಜತೆ ಹಲವು ನಟಿಯರು, ನಟರು ಸಂಪರ್ಕದಲ್ಲಿದ್ದರು. ಆದರೆ, ಹೊಸ ವರ್ಷಾಚರಣೆಗೆ ಮುನ್ನವೇ ಸಿಸಿಬಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಈ ಹಿಂದೆಯೂ ಬೆಂಗಳೂರಿನಲ್ಲಿ ಕೆಲವು ಸಿನಿಮಾ, ಸೀರಿಯಲ್‌ ಕಲಾವಿದರು ಮಾದಕ ದ್ರವ್ಯ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದರು. ಇದರೊಂದಿಗೆ ಹಿರಿಯ ನಟರ ಪುತ್ರರ ಹೆಸರೂ ಕೇಳಿಬಂದಿತ್ತು. ನ್ನಡದಲ್ಲಿ ರಾಗಿಣಿ, ಸಂಜನಾ ಸೇರಿದಂತೆ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಕಲಾವಿದರು ಜೈಲು ಶಿಕ್ಷೆ ಅನುಭವಿಸಿದ್ದರು. ಹಲವು ಕಲಾವಿದರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಕೆಲವು ತಿಂಗಳ ಹಿಂದೆ ತೆಲುಗು ನಟ ನವದೀಪ್‌ ಮನೆಗೆ ಮೇಲೆ ಡ್ರಗ್ಸ್‌ ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿದ್ದರು. ಇದಕ್ಕೂ ಮುನ್ನ ಹೋಟೆಲ್‌ವೊಂದರ ಮೇಲೆ ದಾಳಿ ಮಾಡಿ ಸಿನಿಮಾ ನಿರ್ಮಾಪಕರು ಸೇರಿದಂತೆ ಹಲವು ಜನರನ್ನು ಬಂಧಿಸಲಾಗಿತ್ತು.

Whats_app_banner