ಸೆಟ್‌ನಲ್ಲಿ ಲೈಟ್‌ ಬಾಯ್‌ ಸಾವು ಪ್ರಕರಣ; ಮನದ ಕಡಲು ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌ಗೆ ಪೊಲೀಸರಿಂದ ‌ಬುಲಾವ್-sandalwood news crew member mohan kumar death case notice to manada kadalu director yogaraj bhat and others mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸೆಟ್‌ನಲ್ಲಿ ಲೈಟ್‌ ಬಾಯ್‌ ಸಾವು ಪ್ರಕರಣ; ಮನದ ಕಡಲು ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌ಗೆ ಪೊಲೀಸರಿಂದ ‌ಬುಲಾವ್

ಸೆಟ್‌ನಲ್ಲಿ ಲೈಟ್‌ ಬಾಯ್‌ ಸಾವು ಪ್ರಕರಣ; ಮನದ ಕಡಲು ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌ಗೆ ಪೊಲೀಸರಿಂದ ‌ಬುಲಾವ್

Yogaraj Bhat: ಮನದ ಕಡಲು ಸಿನಿಮಾ ಸೆಟ್‌ನಲ್ಲಿ ಲೈಟ್‌ ಬಾಯ್‌ ಮೋಹನ್‌ ಕುಮಾರ್‌ 30 ಅಡಿ ಮೇಲಿಂದ ಬಿದ್ದ ನಿಧನರಾದ ಬೆನ್ನಲ್ಲೇ, ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌ ಸೇರಿ ಮೂವರ ವಿರುದ್ಧ ದೂರು ದಾಖಲಾಗಿತ್ತು. ಇದೀಗ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌ ರವಾನೆಯಾಗಿದೆ.

ಸೆಟ್‌ನಲ್ಲಿ ಲೈಟ್‌ ಬಾಯ್‌ ಸಾವು ಪ್ರಕರಣ; ನಿರ್ದೇಶಕ ಯೋಗರಾಜ್‌ ಭಟ್‌ಗೆ ನೋಟೀಸ್‌ ನೀಡಿದ ಮಾದನಾಯಕನಹಳ್ಳಿ ಠಾಣೆ ಪೊಲೀಸರು.
ಸೆಟ್‌ನಲ್ಲಿ ಲೈಟ್‌ ಬಾಯ್‌ ಸಾವು ಪ್ರಕರಣ; ನಿರ್ದೇಶಕ ಯೋಗರಾಜ್‌ ಭಟ್‌ಗೆ ನೋಟೀಸ್‌ ನೀಡಿದ ಮಾದನಾಯಕನಹಳ್ಳಿ ಠಾಣೆ ಪೊಲೀಸರು.

Manada Kadalu Director Yogaraj Bhat: ಮನದ ಕಡಲು ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಲೈಟ್‌ ಬಾಯ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌ ಸೇರಿ ಮೂವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕರು ಸೇರಿ ಮೂವರಿಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಿಂದ ವಿಚಾರಣೆಗೆ ನೋಟೀಸ್‌ ರವಾನೆಯಾಗಿದೆ. ಸೆಪ್ಟೆಂಬರ್ 3ರ ಮಂಗಳವಾರ ಸಂಜೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಡಕಮಾರನಹಳ್ಳಿ ಬಳಿ ಸಿನಿಮಾ ಚಿತ್ರೀಕರಣದ ವೇಳೆ ನಡೆದ ದುರಂತದಲ್ಲಿ ಮೋಹನ್‌ ಕುಮಾರ್‌ ಸಾವನ್ನಪ್ಪಿದ್ದರು.

ಪೊಲೀಸ್ ವರದಿಗಳ ಪ್ರಕಾರ, ಮೋಹನ್ ಕುಮಾರ್ ಎಂಬ 24 ವರ್ಷದ ಲೈಟ್ ಟೆಕ್ನಿಷಿಯನ್ ಸೆಟ್‌ನಲ್ಲಿ ಕೆಲಸ ಮಾಡುವಾಗ 30 ಅಡಿ ಏಣಿಯಿಂದ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾನೆ. ಮೇಲಿಂದ ಬಿದ್ದಿದ್ದಕ್ಕೆ ತೀವ್ರವಾಗಿ ಗಾಯಗೊಂಡ ಮೋಹನ್ ಕುಮಾರ್ ಅವರನ್ನು ‌ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೋಹನ್ ಸಾವನ್ನಪ್ಪಿದರು. ಮೋಹನ್‌ ಅವರ ಸಹೋದರ ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಯೋಗರಾಜ್‌ ಭಟ್, ಚಿತ್ರದ ಸಹಾಯಕ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಕೇಸ್‌ ದಾಖಲಿಸಿಕೊಂಡಿದ್ದರು.

ಎಫ್‌ಐಆರ್‌ನಲ್ಲಿ ನಿರ್ದೇಶಕ ಯೋಗರಾಜ್‌ ಭಟ್‌, ನಿರ್ಮಾಪಕ ಅಡಕಮಾರನಹಳ್ಳಿಯ ಈ.ಕೆ. ಕೃಷ್ಣಪ್ಪ, ಸೇರಿ ಇನ್ನೊಬ್ಬರ ಹೆಸರು ಇರುವುದರಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದ್ದು, ಸದ್ಯ ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದವರಿಗೆ ನಾವು ನೋಟಿಸ್ ನೀಡಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

FIRE ಸಂಸ್ಥೆಯಿಂದ ಸಂತಾಪ

ಇದೇ ಘಟನೆ ಬಗ್ಗೆ FIRE (ಫಿಲಂ ಇಂಡಸ್ಟ್ರಿ ಫಾರ್‌ ರೈಟ್ಸ್‌ ಅಂಡ್‌ ಇಕ್ವಾಲಿಟಿ) ಸಂತಾಪ ಸೂಚಿಸಿದೆ. 2017ರಲ್ಲಿ ಕನ್ನಡ ಚಿತ್ರೋದ್ಯಮದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಮತ್ತು ವಂಚಿತರಾದ ನ್ಯಾಯ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಪ್ರಾರಂಭವಾಯಿತು. ಇದೀಗ ಲೈಟ್‌ ಮ್ಯಾನ್‌ ಮೋಹನ್‌ ಕುಮಾರ್‌ ಎಂಬುವವರು ಕನ್ನಡ ಚಲನಚಿತ್ರ ಚಿತ್ರೀಕರಣದ ಸಮಯದಲ್ಲಿ 30 ಅಡಿ ಎತ್ತರದಿಂದ ಬಿದ್ದು ನಿಧನರಾಗಿದ್ದಾರೆ. ಮೋಹನ್‌ ಕುಮಾರ್‌ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಫೈರ್‌ ಸಂಸ್ಥೆಯು ಸಂತಾಪವನ್ನು ಸೂಚಿಸುತ್ತದೆ. ನಮ್ಮ ಚಿತ್ರೋದ್ಯಮದಲ್ಲಿ ಯಾವುದೇ ಸಾವು ಬಂದರೂ ಅದು ನಮ್ಮೆಲ್ಲರಿಗೂ ಒಂದು ನಷ್ಟವೇ ಎಂದಿದೆ.

mysore-dasara_Entry_Point