ಅಂಥ ಅಪ್ಪನ ಮುಖವನ್ನು ಆ ಮಗು ನೋಡದಿರುವುದೇ ಒಳ್ಳೆಯದು; ದರ್ಶನ್ ಪರವಾಗಿ ಬ್ಯಾಟ್ ಬೀಸಿದ ತನಿಷಾ ಕುಪ್ಪಂಡ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಮಾತನಾಡಿದ್ದಾರೆ. ನಟ ದರ್ಶನ್ ಅವರನ್ನು ಬೆಂಬಲಿಸಿ, ಕೆಟ್ಟ ಸಂದೇಶ ಕಳಿಸುವವರ ವಿರುದ್ಧ ಕಠಿಣ ಕಾನೂನು ಸೃಷ್ಟಿಯಾಗಬೇಕು ಎಂದಿದ್ದಾರೆ.

Tanisha Kuppanda: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪ ಹೊತ್ತಿರುವ ನಟ ದರ್ಶನ್ ಸೇರಿ ಇನ್ನುಳಿದ 16 ಮಂದಿಯ ನ್ಯಾಯಾಂಗ ಬಂಧನದ ಅವಧಿ ಇಂದು (ಜುಲೈ 4) ಮುಕ್ತಾಯವಾಗಿದೆ. ಈ ಬೆನ್ನಲ್ಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಆರೋಪಿಗಳ ವಿಚಾರಣೆ ನಡೆಸಲಿದೆ. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಮಾತನಾಡಿದ್ದಾರೆ. ನಟ ದರ್ಶನ್ ಅವರನ್ನು ಬೆಂಬಲಿಸಿ, ಕೆಟ್ಟ ಸಂದೇಶ ಕಳಿಸುವವರ ವಿರುದ್ಧ ಕಠಿಣ ಕಾನೂನು ಸೃಷ್ಟಿಯಾಗಬೇಕು ಎಂದಿದ್ದಾರೆ.
ನಟಿ ತನಿಷಾ ಕುಪ್ಪಂಡ ಹೇಳಿದ್ದೇನು?
"ನಾವು ದರ್ಶನ್ ಅವರನ್ನು ಸ್ಪೂರ್ತಿ ಅಂದುಕೊಂಡಿದ್ದೇವೆ. ಅವರು ಜೈಲಲ್ಲಿ ಕಾಲ ಕಳೆಯುತ್ತಿದ್ದಾರೆ ಎಂಬುದಕ್ಕೆ ಬೇಸರ ಇದೆ. ನನ್ನ ಲೈಫ್‌ನಲ್ಲಿ ಒಂದು ಪಾಲಿಸಿ ಇದೆ, ನಮ್ಮ ಸುತ್ತ ಸಾವಿರ ಘಟನೆ ನಡೆದರೆ, ಅದರಲ್ಲಿ ಒಳ್ಳೆಯದನ್ನೇ ಪಿಕ್ ಮಾಡಬೇಕು. ಅವರ ವಿಚಾರದಲ್ಲಿ ನಾನು ಅದನ್ನೇ ಮಾತನಾಡ್ತಿನಿ. ದರ್ಶನ್ ಅವರ ಬಗ್ಗೆ ನಾನು ಈ ವರೆಗೂ ಎಲ್ಲಿಯೂ ಮಾತನಾಡಿಲ್ಲ. ಇದೇ ಮೊದಲ ಬಾರಿಗೆ ಮಾತನಾಡುತ್ತಿದ್ದೇನೆ. ರೇಣುಕಾಸ್ವಾಮಿ ವಿಚಾರ ಆವಾಗ ಹೊರಬಂದಿರಲಿಲ್ಲ" ಎಂದಿದ್ದಾರೆ.
ಆ ಮಗು ತಂದೆಯ ಮುಖ ನೋಡದಿರುವುದೇ ಒಳ್ಳೇದು
"ನಮ್ಮ ಪತಿ ತಮ್ಮ ಖಾಸಗಿ ಅಂಗದ ಫೋಟೋ ತೆಗೆದು ಇನ್ನೊಂದು ಹೆಣ್ಣುಮಗಳಿಗೆ ಕಳಿಸಿದರೆ, ಅಂಥ ಪತಿಯೇ ಬೇಕಾಗಿಲ್ಲ. ಅಂಥವರ ಉಪಸ್ಥಿತಿಯೇ ನಮಗೆ ಬೇಕಿಲ್ಲ. ಆ ಮಗು ಹುಟ್ಟಿದ ಮೇಲೆ, ತಂದೆ ಎಲ್ಲಿ ಎಂದು ಕೇಳಿದಾಗ, ಆ ಹೆಂಡತಿ ಏನು ಮಾತನಾಡಬೇಕು ಎಂಬ ಪ್ರಶ್ನೆ ನನಗೆ ಎದುರಾಗುತ್ತು. ಆ ಥರದ ಸನ್ನಿವೇಷದಲ್ಲಿ ಈ ಥರದ ಕ್ಯಾರೆಕ್ಟರ್ ಇದ್ದರೆ, ಆ ತಂದೆಯ ಮುಖವನ್ನು ಆ ಮಗು ನೋಡದಿರುವುದೇ ಒಳ್ಳೆಯದು ಎಂದು ನನಗೆ ಅನಿಸುತ್ತೆ"
ಜನ ಮಾತನಾಡುವುದನ್ನು ನಿಲ್ಲಿಸಲ್ಲ..
"ಘಟನೆ ಕಹಿ ಎಂದ ತಕ್ಷಣ ಅದನ್ನು ಜೀರ್ಣ ಮಾಡಿಕೊಳ್ಳಬೇಕು, ಇಲ್ಲವಾದಲ್ಲಿಅದನ್ನು ಬಿಟ್ಟು ಮುಂದುವರಿಯಬೇಕು. ಕಾನೂನಿನ ಪ್ರಕಾರ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳಲಿದೆ. ರೇಣುಕಾಸ್ವಾಮಿ ಅಂಥವರೇ ಇಂದಿಗೂ ಸಾವಿರಾರು ಜನ ಕೆಟ್ಟದಾಗಿಯೇ ಕಾಮೆಂಟ್ ಮಾಡುತ್ತಾರೆ. ಅದಕ್ಕೆ ಮೊದಲು ಅಂಕುಶ ಹಾಕಬೇಕಿದೆ. ಆ ಬಗ್ಗೆ ನಾವು ಕಂಪ್ಲೇಂಟ್ ಮಾಡಿದ ಬಳಿಕ, ಅದೇ ವಿಚಾರವನ್ನು ನಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರೂ, ನಮಗೆ ಜಸ್ಟಿಫಿಕೇಷನ್ ಸಿಗುವುದಿಲ್ಲ. ಜನ ಅಲ್ಲಿಯೂ ಮಾತನಾಡ್ತಾರೆ"
"ಸೋ ಕಾಲ್ಡ್ ಕಾಮನ್‌ಮ್ಯಾನ್‌ಗಳು ಏನು ಮಾಡ್ತಾರೆ ಅಂದ್ರೆ, ನೀವು ಆ ರೀತಿಯ ಬಟ್ಟೆ ಹಾಕಿದ್ದಕ್ಕೆ ನಿಮಗೆ ಹೀಗಾಗಿದೆ ಎನ್ನುತ್ತಾರೆ. ನಾನೇ ಯಾವುದೋ ಒಂದು ಕಾಮೆಂಟ್‌ನಲ್ಲಿ ಹೇಳಿರ್ತಿನಿ. ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಹೀಗಾದಾಗ ಏನ್ ಮಾಡ್ತಿರಿ ಎಂದಿರ್ತಿನಿ. ಅದಕ್ಕೆ "ನಿಮ್ಮ ರೀತಿ ಬಟ್ಟೆ ಬಿಚ್ಕೊಂಡು ಕುಣಿಯಲ್ಲ ನಮ್ಮ ಮನೆಯವ್ರು" ಎಂದು ಎದುರು ಮಾತಾಡ್ತಾರೆ. ಹಾಗಾಗಿ ಈ ರೀತಿ ಕೆಟ್ಟ ಕೆಲಸ ಮಾಡೋದನ್ನ ಬಿಟ್ಟು ಏನಾದರೂ ಒಳ್ಳೆಯ ಕೆಲಸ ಮಾಡಿ" ಎಂದಿದ್ದಾರೆ ತನಿಷಾ"
ಇದಕ್ಕಾಗಿಯೇ ಹೊಸ ಕಾನೂನು ಬರಬೇಕು
"ರೇಣುಕಾಸ್ವಾಮಿ ಮಾತ್ರವಲ್ಲ ಕಿತ್ತೋದ ಫೇಕ್ ಫ್ರೊಫೈಲ್‌ಗಳಿಂದ ಸಾಕಷ್ಟು ಮೆಸೆಜ್‌ಗಳು ಬಂದಿವೆ. ಆದರೆ, ರೇಣುಕಾಸ್ವಾಮಿಯೇ ಮಾಡಿಲ್ಲ. ಈ ಘಟನೆ ಆದ ಮೇಲೆ ಇದು ಹೆಚ್ಚು ಮುನ್ನೆಲೆಗೆ ಬಂದಿದೆ. ಹಾಗಾಗಿ ಕೆಟ್ಟದಾಗಿ ಮೆಸೆಜ್ ಮಾಡುವವರಿಗೆ ಕಾನೂನಿನಲ್ಲಿ ಇಂಥದ್ದೊಂದು ಶಿಕ್ಷೆ ಇದೆ ಎಂದು ಸರ್ಕಾರ ಘೋಷಣೆ ಮಾಡಬೇಕು. ಆಗಲಾದರೂ ಕಡಿಮೆ ಆಗಬಹುದಾ ಅಂತ ಕಾದು ನೋಡಬೇಕು" ಎಂದಿದ್ದಾರೆ ತನಿಷಾ.

ವಿಭಾಗ