‘ಚಿರು ಹೋದ ಮೇಲೆ ಮೇಘನಾ ರಾಜ್ ಗಂಡನ ಮನೆಯಲ್ಲಿಲ್ಲ, ನಾವೇ ನೋಡಿಕೊಳ್ತಿದ್ದೇವೆ’ ಕಾರಣ ತಿಳಿಸಿದ ಸುಂದರ್ ರಾಜ್
ಗಂಡ ಇಲ್ಲ ಅನ್ನೋ ಕೊರಗು ಮಾತ್ರ ಮೇಘನಾ ರಾಜ್ ಸರ್ಜಾ ಅವರನ್ನು ಇನ್ನೂ ಕಾಡುತ್ತಿದೆ. ಈ ನಡುವೆ ಕೆಲವರ ಮನದಲ್ಲೂ ಒಂದಷ್ಟು ಪ್ರಶ್ನೆ ಮೂಡಿರಬಹುದು, ಮೇಘನಾ ಸದ್ಯ ಯಾರ ಮನೆಯಲ್ಲಿದ್ದಾರೆ ಎಂದು. ಅದಕ್ಕೀಗ ತಂದೆ ಸುಂದರ್ ರಾಜ್ ಉತ್ತರಿಸಿದ್ದಾರೆ.
Sundar Raj talks about Meghana Raj: ಪತಿ ಚಿರಂಜೀವಿ ಸರ್ಜಾ ಅಕಾಲಿಕ ನಿಧನದ ಬಳಿಕ ಕುಗ್ಗಿದ ಮೇಘನಾ ರಾಜ್ ಸರ್ಜಾಗೆ, ಹೆತ್ತವರೇ ಆಸರೆಯಾಗಿ, ಶಕ್ತಿಯಾಗಿ ನಿಂತಿದ್ದಾರೆ. ಒಬ್ಬಳೇ ಮಗಳ ಜೀವನ ಹೀಗಾಯ್ತಲ್ಲ ಎಂದು ಒಳಗೊಳಗೇ ಕಣ್ಣೀರಿಟ್ಟರೂ, ಮಗಳ ಮುಂದೆ ಆ ನೋವನ್ನು ತೋರಿಸುತ್ತಿಲ್ಲ. ಇತ್ತ ಮೇಘನಾ ರಾಜ್ ಸದ್ಯ ಸಿಂಗಲ್ ಪೇರೆಂಟ್. ಪುತ್ರ ರಾಯನ್ ಜತೆಗೆ ತಮ್ಮ ಅತ್ಯಮೂಲ್ಯ ಸಮಯವನ್ನು ಕಳೆಯುತ್ತಿದ್ದಾರೆ. ಮಗ ರಾಯನ್ ಮುಖದಲ್ಲಿಯೇ ತಮ್ಮ ಭವಿಷ್ಯದ ಕನಸು ಕಾಣುತ್ತಿದ್ದಾರೆ. ಇತ್ತ ಮಗಳು ಮೇಘನಾಗೆ ಅಪ್ಪ ಸುಂದರ್ ರಾಜ್, ಅಮ್ಮ ಪ್ರಮೀಳಾ ಜೋಷಾಯ್ ಜತೆಯಾಗಿ ನಿಂತಿದ್ದಾರೆ.
ಚಿರು ಸರ್ಜಾ ನಿಧನರಾದ ಬಳಿಕ ಮನೆಯವರಷ್ಟೇ ಅಲ್ಲದೇ ಆಪ್ತ ಸ್ನೇಹಿತರೂ ಧೈರ್ಯ ತುಂಬಿದರು. ಅದರ ಪರಿಣಾಮ, ಚಿರು ನಿಧನದ ಬಳಿಕ ಸಿನಿಮಾದಿಂದ ದೂರವೇ ಉಳಿದಿದ್ದ ಮೇಘನಾ, ಮತ್ತೆ ಬಣ್ಣ ಹಚ್ಚುವ ಮೂಲಕ ನಟನೆಗೆ ವಾಪಾಸಾಗಿದ್ದರು. ತತ್ಸಮ ತದ್ಭವ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಮರಳಿದ್ದರು. ಆದರೆ, ಜತೆಯಲ್ಲಿ ಗಂಡ ಇಲ್ಲ ಅನ್ನೋ ಕೊರಗು ಮಾತ್ರ ಮೇಘನಾ ಅವರನ್ನು ಇನ್ನೂ ಕಾಡುತ್ತಿದೆ. ಈ ನಡುವೆ ಕೆಲವರ ಮನದಲ್ಲೂ ಒಂದಷ್ಟು ಪ್ರಶ್ನೆ ಮೂಡಿರಬಹುದು, ಮೇಘನಾ ಸದ್ಯ ಯಾರ ಮನೆಯಲ್ಲಿದ್ದಾರೆ ಎಂದು. ಅದಕ್ಕೀಗ ಸಂದರ್ಶನವೊಂದರಲ್ಲಿ ಸುಂದರ್ ರಾಜ್ ಉತ್ತರಿಸಿದ್ದಾರೆ.
ನಮಗಿಂತ ಹೆಚ್ಚೇ ಕಾಳಜಿ ವಹಿಸಬೇಕು..
"ಒಂದು ಹೆಣ್ಣು ಎಲ್ಲವನ್ನು ಬಿಟ್ಟು ಗಂಡನ ಮನೆಗೆ ಹೋಗಿರುತ್ತಾಳೆ ಎಂದರೆ, ತಂದೆ ತಾಯಿಗಿಂತ ಹೆಚ್ಚೇ ನೋಡಿಕೊಳ್ಳಬೇಕು. ಚಿಕ್ಕ ಮಕ್ಕಳಿದ್ದಾಗ ಆಕೆಯನ್ನು ಸಾಕಿ ಸಲುಹಿ, ಅಲಂಕಾರದ ಗೊಂಬೆಯನ್ನಾಗಿ ಮಾಡಿ ಗಂಡನ ಮನೆಗೆ ಕಳಿಸಿರುತ್ತೇವೆ. ಆ ಅಲಂಕಾರವನ್ನು ಕೀಳಬಾರದು. ಹೋದ ಹೆಣ್ಣೂ ಕೂಡ ಆ ಮನೆಗೆ ಶೋಭೆ ತರುವಂತಿರಬೇಕು. ಗಲಾಟೆ ಮಾಡಿಕೊಂಡು, ಕೂಡು ಕುಟುಂಬವನ್ನು ಮುರಿಯುವ ಕೆಲಸ ಮಾಡಬಾರದು" ಎಂದಿದ್ದಾರೆ.
ಮೇಘನಾಳನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ
"ಅಲ್ಲಿಯೂ ಒಬ್ಬಳು ಹೆಣ್ಣಿರುತ್ತಾಳೆ. ಆಕೆಯೂ ಚೆನ್ನಾಗಿಯೇ ನೋಡಬೇಕು. ಅತ್ತೆಗೆ ನನ್ನ ಮಗ ನಾನು ಹೇಳಿದಂತೆ ಮಾತು ಕೇಳಬೇಕು ಅಂತಿರುತ್ತೆ. ಹೆಂಡತಿಗೆ ನಾನು ಕಟ್ಟಿಕೊಂಡು ಬಂದಿದ್ದೇನೆ. ನಾನು ಹೇಳಿದ ಮಾತು ಕೇಳಬೇಕು ಅಂತಿರುತ್ತೆ. ಪಾಪ ಇವನು ಎರಡು ಕಡೆನೂ ನೋಡಬೇಕಾಗುತ್ತದೆ. ಹೆಂಡತಿಯನ್ನು ನೋಡೋದಾ? ಅಮ್ಮನನ್ನು ನೋಡೋದಾ? ಅಂತಾಗುತ್ತೆ" ಎಂದಿದ್ದಾರೆ. "ಆದರೆ ನನ್ನ ಮಗಳಿಗೆ ಮಾತ್ರ ಆ ಪರಿಸ್ಥಿತಿ ಬರಲಿಲ್ಲ. ಆರಂಭದಲ್ಲಿಯೇ ಹೊರಟು ಹೋಯಿತು. ನಮಗೇ ಮೈನಸ್ ಆಯಿತು, ಟಾರ್ಚರ್ ಅದೂ ಇದೂ ಅನ್ನೋ ಮಾತೂ ನಾನು ಆಡಬಾರದು. ಮೇಘನಾಳನ್ನು ನಾವೇ ನೋಡಿಕೊಳ್ಳುತ್ತಿರುವುದರಿಂದ ಅವರ ಪಾತ್ರ ಏನೂ ಇಲ್ಲ" ಎಂದಿದ್ದಾರೆ.
ಮಗಳನ್ನು ಒಂಟಿ ಸಲಗ ಮಾಡಿ ಹೋಗ್ತಿವಿ..
"ನಮ್ಮ ಮಗಳ ಬಗ್ಗೆ ತುಂಬ ಕಾಳಜಿ ವಹಿಸಿದ್ದೇವೆ. ಅವಳನ್ನು ಯಾರ ಮೇಲೂ ಡಿಪೆಂಡ್ ಆಗದಂತೆ ಸ್ಟ್ರಾಂಗ್ ಮಾಡಿ ಹೋಗಬೇಕು. ನೀನು ಒಂಟಿ, ಒಂಟಿ ಸಲಗ. ಮದುವೆ ಆದ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಮದುವೆ ಆಗದೇ ಉಳಿದ ಎಲ್ಲರಿಗೂ ಇದು ಅನ್ವಯಿಸುತ್ತದೆ. ಹೆಣ್ಮಕ್ಕಳೇ ಸ್ಟ್ರಾಂಗ್ ಗುರು ಅನ್ನೋ ಮಾತು ನಿಜವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಹೆಣ್ಮಕ್ಕಳಿದ್ದಾರೆ. ನನ್ನ ಮಗಳೂ ಹಾಗೇ ಆಗಬೇಕು ಎಂದಿದ್ದಾರೆ ಮೇಘನಾ ತಂದೆ ಸುಂದರ್ ರಾಜ್. ಸದ್ಯ ಮಗನ ಆರೈಕೆಯಲ್ಲಿಯೇ ಮುಳುಗಿರುವ ಮೇಘನಾ ರಾಜ್ ಸರ್ಜಾ, ಸೋಷಿಯಲ್ ಮೀಡಿಯಾದಲ್ಲಿ ಮಗನ ಜತೆಗಿನ ಖುಷಿ ಕ್ಷಣಗಳನ್ನು ಶೇರ್ ಮಾಡುತ್ತಿರುತ್ತಾರೆ. ಯೂಟ್ಯೂಬ್ ಚಾನೆಲ್ ಸಹ ಶುರು ಮಾಡಿ, ಅಲ್ಲಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ.
ವಿಭಾಗ