ರೇಣುಕಾ ಸ್ವಾಮಿ ಮರ್ಡರ್‌ ಕೇಸ್‌: ವಿಡಿಯೋ ಕಾನ್ಫರೆನ್ಸ್‌ ವಿಚಾರಣೆಯಿಂದಾಗಿ ನಟ ದರ್ಶನ್‌ಗೆ ಇಂದು ಆಗಲಿದೆ 1 ಪ್ರಮುಖ ನಷ್ಟ
ಕನ್ನಡ ಸುದ್ದಿ  /  ಮನರಂಜನೆ  /  ರೇಣುಕಾ ಸ್ವಾಮಿ ಮರ್ಡರ್‌ ಕೇಸ್‌: ವಿಡಿಯೋ ಕಾನ್ಫರೆನ್ಸ್‌ ವಿಚಾರಣೆಯಿಂದಾಗಿ ನಟ ದರ್ಶನ್‌ಗೆ ಇಂದು ಆಗಲಿದೆ 1 ಪ್ರಮುಖ ನಷ್ಟ

ರೇಣುಕಾ ಸ್ವಾಮಿ ಮರ್ಡರ್‌ ಕೇಸ್‌: ವಿಡಿಯೋ ಕಾನ್ಫರೆನ್ಸ್‌ ವಿಚಾರಣೆಯಿಂದಾಗಿ ನಟ ದರ್ಶನ್‌ಗೆ ಇಂದು ಆಗಲಿದೆ 1 ಪ್ರಮುಖ ನಷ್ಟ

ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಇತರರ ನ್ಯಾಯಾಂಗ ಬಂಧನ ಅವಧಿ ಇಂದು ಮುಗಿದಿದೆ. ಇಂದು ದರ್ಶನ್‌ ಮತ್ತು ಇತರೆ ಆರೋಪಿಗಳನ್ನು ಕೋರ್ಟ್‌ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಲಿದೆ.

ರೇಣುಕಾ ಸ್ವಾಮಿ ಮರ್ಡರ್‌ ಕೇಸ್‌: ನಟ ದರ್ಶನ್‌ಗೆ ವಿಡಿಯೋ ಕಾನ್ಫರೆನ್ಸ್‌ ವಿಚಾರಣೆ
ರೇಣುಕಾ ಸ್ವಾಮಿ ಮರ್ಡರ್‌ ಕೇಸ್‌: ನಟ ದರ್ಶನ್‌ಗೆ ವಿಡಿಯೋ ಕಾನ್ಫರೆನ್ಸ್‌ ವಿಚಾರಣೆ

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಇತರರ ನ್ಯಾಯಾಂಗ ಬಂಧನ ಅವಧಿ ಇಂದು ಮುಗಿದಿದೆ. ಇಂದು ದರ್ಶನ್‌ ಮತ್ತು ಇತರೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಬೇಕಿತ್ತು. ಆದರೆ, ಇವರೆಲ್ಲರು ಇಂದು ನೇರವಾಗಿ ನ್ಯಾಯಾಲಯಕ್ಕೆ ಆಗಮಿಸುವುದಿಲ್ಲ. ಕೋರ್ಟ್‌ ಇವರನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಲಿದೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ದರ್ಶನ್‌ ವಿಚಾರಣೆ

ಜುಲೈ 4 ಅಂದರೆ ಇಂದು ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಪೂರ್ಣಗೊಳ್ಳುತ್ತಿದೆ. ಇಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ ವಿಚಾರಣೆ ನಡೆಸಲಿದೆ. ದರ್ಶನ್‌ ಸ್ಟಾರ್‌ ನಟ ಆಗಿರುವುದರಿಂದ ನ್ಯಾಯಾಲಯದ ಮುಂದೆ ಹಾಜರುಪಡಿಸುವಾಗ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಮಾಧ್ಯಮದವರೂ ಇರುತ್ತಾರೆ. ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಬೇಕಾಗುತ್ತದೆ. ಜತೆಗೆ, ಆರೋಪಿಗಳು ಜೈಲಿನಿಂದ ಹೊರಕ್ಕೆ ಬಂದರೆ ಸಾಕ್ಷ್ಯ ನಾಶದ ಪ್ರಯತ್ನವೂ ಆಗಬಹುದು. ಇಂತಹ ಕಾರಣಗಳಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ದರ್ಶನ್‌ ಮತ್ತು ಇತರರನ್ನು ಇಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ಮಾಡಲು ಉದ್ದೇಶಿಸಲಾಗಿದೆ ಎನ್ನಲಾಗುತ್ತಿದೆ.

ಈ ಕುರಿತು ಪವಿತ್ರಾ ಗೌಡ ಪರ ವಕೀಲರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. "ನ್ಯಾಯಾಂಗ ಬಂಧನ ಅವಧಿ ಇಂದು ಮುಗಿಯುತ್ತದೆ. ಆರೋಪಿಗಳು ವಿಚಾರಣೆಗೆ ಇಂದು ನ್ಯಾಯಾಲಯಕ್ಕೆ ನೇರವಾಗಿ ಆಗಮಿಸುವುದಿಲ್ಲ. ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಯಲಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಸದ್ಯ ಕೋರ್ಟ್‌ಗೆ ಚಾರ್ಜ್‌ ಶೀಟ್‌ ಸಲ್ಲಿಕೆಯಾಗಿಲ್ಲ. ಚಾರ್ಜ್‌ ಶೀಟ್‌ ಸಲ್ಲಿಕೆಯಾಗುವವರೆಗೆ ನ್ಯಾಯಾಂಗ ಬಂಧನವೇ ಮುಂದುವರೆಯವ ಸಾಧ್ಯತೆಯಿದೆ. ಚಾರ್ಜ್‌ ಶೀಟ್‌ ಸಲ್ಲಿಕೆಯಾದ ಬಳಿಕ ದರ್ಶನ್‌ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸುವ ಸೂಚನೆಯಿದೆ. ಎಲ್ಲಾದರೂ ಎಸಿಎಂಎಂ ಕೋರ್ಟ್‌ ಜಾಮೀನು ನಿರಾಕರಿಸಿದರೆ ವಕೀಲರು ಹೈಕೋರ್ಟ್‌ ಮೊರೆ ಹೋಗುವ ಸಾಧ್ಯತೆಯಿದೆ.

ವಿಡಿಯೋ ಕಾನ್ಫರೆನ್ಸ್‌ನಿಂದ ಲಾಭವೇನು?

ದರ್ಶನ್‌ ಮತ್ತು ಇತರರನ್ನು ಜೈಲಿನಿಂದ ನ್ಯಾಯಾಲಯಕ್ಕೆ ತರಲು ಪೊಲೀಸರು ಸಾಕಷ್ಟು ಬಿಗಿಬಂದೋಬಸ್ತ್‌ ಮಾಡಬೇಕಾಗುತ್ತದೆ. ದರ್ಶನ್‌ ಕೋರ್ಟ್‌ಗೆ ಬರುತ್ತಾರೆ ಎಂದು ತಿಳಿದು ಸಾಕಷ್ಟು ಅಭಿಮಾನಿಗಳು ಕೋರ್ಟ್‌ ಸುತ್ತಮುತ್ತ ನೆರೆಯುತ್ತಾರೆ. ಇದನ್ನೆಲ್ಲ ನಿಭಾಯಿಸಲು ಪೊಲೀಸರು ಶ್ರಮವಹಿಸಬೇಕಾಗುತ್ತದೆ. ಸಾಕಷ್ಟು ಸಮಯ, ಮಾನವ ಸಂಪನ್ಮೂಲ ವ್ಯರ್ಥವಾಗೋದು ತಪ್ಪುತ್ತದೆ.

ವಿಡಿಯೋ ಕಾನ್ಫರೆನ್ಸ್‌ನಿಂದ ದರ್ಶನ್‌ಗೆ ನಷ್ಟವೇನು?

ಜೈಲು ಒಂದು ಬೇರೆಯದ್ದೇ ಪ್ರಪಂಚ. ಹೊರಗಿನ ಜಗತ್ತಿನಿಂದ ಬೇರೆಯಾಗಿರುತ್ತದೆ. ಜೈಲಿನ ಅಧಿಕಾರಿಗಳು, ಪೊಲೀಸರು, ಕೈದಿಗಳು, ಬ್ಯಾರಕ್‌, ಜೈಲಿನ ವಾತಾವರಣ ಮಾತ್ರ ಇರುತ್ತದೆ. ಅದೊಂದು ಅನ್ಯಗ್ರಹದಂತೆ ಪ್ರತ್ಯೇಕವಾಗಿರುತ್ತದೆ. ಸಾಮಾನ್ಯವಾಗಿ ಜೈಲಿನಲ್ಲಿರುವವರು ಹೊರಗಿನ ಪ್ರಪಂಚ ನೋಡಲು ಹಾತೋರೆಯುತ್ತಾರೆ. ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಹದಿನಾಲ್ಕು ದಿನಗಳಿಂದ ಜೈಲಿನಲ್ಲಿರುವವರಿಗೂ ಇಂದು ಕೋರ್ಟ್‌ಗೆ ಹೋಗಲು ಇದೆ, ಹೊರಗಿನ ರಸ್ತೆ, ಜನರು, ಪ್ರಪಂಚವನ್ನು ನೋಡಬಹುದು ಎಂಬ ಕಾತರ ಇರುತ್ತದೆ. ದರ್ಶನ್‌ ಕೂಡ ಹೊರಜಗತ್ತನ್ನು ನೋಡಲು ಹಾತೋರೆಯುತ್ತ ಇರಬಹುದು. ಕೋರ್ಟ್‌ ವಿಚಾರಣೆ ನೆಪದಲ್ಲಿ ಹೊರಪ್ರಪಂಚವನ್ನು ನೋಡುವಂತಹ ಅವಕಾಶ ವಿಡಿಯೋ ಕಾನ್ಫರೆನ್ಸ್‌ನಿಂದಾಗಿ ದರ್ಶನ್‌ಗೆ ತಪ್ಪಿದೆ. ಎಲ್ಲಾದರೂ ಕೋರ್ಟ್‌ ಜಾಮೀನು ನೀಡದೆ ಇದ್ದರೆ ಮುಂದೆ ಎಷ್ಟೋ ಸಮಯ ಜೈಲಿನಲ್ಲಿಯೇ ಇರಬೇಕಾಗಬಹುದು. ಅಲ್ಲಿತನಕ ಹೊರಪ್ರಪಂಚವನ್ನು ನೋಡಲಾಗದೆ ಇರುವ ನಷ್ಟ ಈ ವಿಡಿಯೋ ಕಾನ್ಫರೆನ್ಸ್‌ನಿಂದ ಆಗಲಿದೆ.

Whats_app_banner