ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‌ ಹೀರೋ ಆಗ್ತಾನೆ ಅಂದಾಗ ನಾವ್ಯಾರೂ ನಿದ್ದೆನೇ ಮಾಡಿರಲಿಲ್ಲ, ಎಲ್ರಿಗೂ ಟೆನ್ಷನ್! ಆ ಕ್ಷಣ ನೆನೆದ ದಿನಕರ್‌ ತೂಗುದೀಪ

ದರ್ಶನ್‌ ಹೀರೋ ಆಗ್ತಾನೆ ಅಂದಾಗ ನಾವ್ಯಾರೂ ನಿದ್ದೆನೇ ಮಾಡಿರಲಿಲ್ಲ, ಎಲ್ರಿಗೂ ಟೆನ್ಷನ್! ಆ ಕ್ಷಣ ನೆನೆದ ದಿನಕರ್‌ ತೂಗುದೀಪ

"ದರ್ಶನ್‌ ಯಾವತ್ತಿದ್ದರೂ ಪಾಸಿಟಿವ್‌ ‌ವ್ಯಕ್ತಿ . ಮೆಜೆಸ್ಟಿಕ್‌ ಮುಹೂರ್ತದ ದಿನವೇ ಅವನಿಗೆ ಮತ್ತೆರಡು ಅವಕಾಶ ಸಿಕ್ಕವು. ದೇವ್ರೆ ಫಸ್ಟ್‌ ಟೈಮ್‌ ಬಣ್ಣ ಹಚ್ಚುತ್ತಿದ್ದೇನೆ, ನೀನೇ ನನ್ನ ಕಾಪಾಡಬೇಕು ಎಂಬ ಡೈಲಾಗ್‌ ಜತೆಗೆ ಮೆಜೆಸ್ಟಿಕ್‌ ಶುರುವಾಯ್ತು. ಆವತ್ತಿನಿಂದ ಇವತ್ತಿನವರೆಗೂ ಅವ್ನು ಬಿಜಿಯಾಗಿದ್ದಾನೆ" ಎಂದು ದರ್ಶನ್‌ ಅವರ ಹಳೇ ದಿನ ನೆನೆದಿದ್ದಾರೆ ದಿನಕರ್.

ದರ್ಶನ್‌ ಹೀರೋ ಆಗ್ತಾನೆ ಅಂದಾಗ ನಾವ್ಯಾರೂ ನಿದ್ದೆನೇ ಮಾಡಿರಲಿಲ್ಲ, ಎಲ್ರಿಗೂ ಟೆನ್ಷನ್! ಆ ಕ್ಷಣ ನೆನೆದ ದಿನಕರ್‌ ತೂಗುದೀಪ
ದರ್ಶನ್‌ ಹೀರೋ ಆಗ್ತಾನೆ ಅಂದಾಗ ನಾವ್ಯಾರೂ ನಿದ್ದೆನೇ ಮಾಡಿರಲಿಲ್ಲ, ಎಲ್ರಿಗೂ ಟೆನ್ಷನ್! ಆ ಕ್ಷಣ ನೆನೆದ ದಿನಕರ್‌ ತೂಗುದೀಪ

Dinakar Thoogideepa on Darshan: ನಟ ದರ್ಶನ್‌ ಸದ್ಯ ಸ್ಯಾಂಡಲ್‌ವುಡ್‌ನ ಸ್ಟಾರ್‌ ಹೀರೋ. ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಬಾಕ್ಸ್‌ ಆಫೀಸ್‌ ಸುಲ್ತಾನ. ಸಾವಿರಾರು ಫ್ಯಾನ್ಸ್‌ ಪೇಜ್‌ಗಳನ್ನು ಹೊಂದಿರುವ ಕನ್ನಡದ ಏಕೈಕ ನಟ. ಆದರೆ, ಇದೇ ದರ್ಶನ್‌ ಓರ್ವ ಸ್ಟಾರ್‌ ಖಳನಟ ತೂಗುದೀಪ ಶ್ರೀನಿವಾಸ್ ಮಗನಾದರೂ, ಆರಂಭದ ದಿನಗಳಲ್ಲಿ ಅವಕಾಶಕ್ಕಾಗಿ ಅವರಿವರ ಮುಂದೆ ನಿಂತಿದ್ದರು. ಲೈಟ್‌ ಬಾಯ್‌ ಆಗಿಯೂ ಕೆಲಸ ಮಾಡಿದ್ದರು. ಸಿಕ್ಕ ಸಿಕ್ಕ ಸಿನಿಮಾಗಳಲ್ಲಿ ಸೈಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಇದೇ ನಟನ ಜತೆ ಸಿನಿಮಾ ಮಾಡಬೇಕು ಅಂದ್ರೆ ನಿರ್ಮಾಪಕರು ವರ್ಷಗಟ್ಟಲೇ ಕಾಯಬೇಕು.

ಟ್ರೆಂಡಿಂಗ್​ ಸುದ್ದಿ

2002ರಲ್ಲಿ ಮೆಜೆಸ್ಟಿಕ್‌ ಸಿನಿಮಾ ರಿಲೀಸ್‌ ಆಗಿ ದಾಖಲೆಯನ್ನೇ ಸೃಷ್ಟಿಸಿತ್ತು. ನಾಯಕನಾಗಿ ದರ್ಶನ್‌ ಅವರ ಚೊಚ್ಚಲ ಸಿನಿಮಾ ಅಂದು ಸೂಪರ್‌ ಹಿಟ್‌ ಆಗಿತ್ತು. ಆದರೆ, ಅದೇ ಸಿನಿಮಾದ ಶುರುವಿನ ಸಂದರ್ಭದಲ್ಲಿ ದರ್ಶನ್‌ ಮತ್ತವರ ಕುಟುಂಬ ಎಷ್ಟೊಂದು ಆತಂಕದಲ್ಲಿತ್ತು ಎಂಬ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಮುಹೂರ್ತದ ಹಿಂದಿನ ದಿನ ಮತ್ತು ಬೆಳಗಿನ ದಿನ ದರ್ಶನ್‌ ಮನೆಯಲ್ಲಿ ಯಾರೂ ನಿದ್ದೆ ಮಾಡಿರಲಿಲ್ಲ. ಅಷ್ಟೊಂದು ಟೆನ್ಷನ್‌, ಆತಂಕ ಇತ್ತು. ಅಂದಿನ ದಿನವನ್ನು ಕಣ್ಣಿಗೆ ಕಟ್ಟಿದಂತೆ ನೆನಪಿಸಿಕೊಂಡಿದ್ದಾರೆ ದರ್ಶನ್‌ ಸಹೋದರ ದಿನಕರ್‌ ತೂಗುದೀಪ.

ಎರಡು ದಿನ ನಾವ್ಯಾರೂ ನಿದ್ದೆ ಮಾಡಿರಲಿಲ್ಲ

“ಜೆಪಿ ನಗರ ಫಸ್ಟ್‌ ಫೇಸ್‌ನ ಫಸ್ಟ್ ಫ್ಲೋರ್‌ನಲ್ಲಿ ಒಂದು ಸಿಂಗಲ್‌ ಬೆಡ್‌ರೂಮ್‌ ಮನೆಯನ್ನು ಲೀಸ್‌ ಹಾಕಿಕೊಂಡು ಅಲ್ಲಿಯೇ ವಾಸವಿದ್ವಿ. ಆ ಸಮಯದಲ್ಲಿ ದರ್ಶನ್‌ಗೆ ಮೆಜೆಸ್ಟಿಕ್‌ ಸಿನಿಮಾದಲ್ಲಿ ಹೀರೋ ಚಾನ್ಸ್‌ ಸಿಕ್ಕಿತ್ತು. ಇನ್ನೇನು ಮುಹೂರ್ತ ಇದೆ ಎನ್ನುವಾಗ, ಎರಡ್ಮೂರು ದಿನ ನಾವ್ಯಾರೂ ನಿದ್ದೆ ಮಾಡಿರಲಿಲ್ಲ. ಅಷ್ಟೊಂದು ಟೆನ್ಷನ್‌ ಆಗಿತ್ತು. ದರ್ಶನ್‌ ಸಹ ತುಂಬ ಎಕ್ಟೈಟ್‌ ಆಗಿದ್ದ. ಇದು ಬರೀ ಘೋಷಣೆ ಅಷ್ಟೇ ಆಗುತ್ತಾ? ಸಿನಿಮಾ ಮಾಡ್ತಾರಾ? ಅನ್ನೋ ಭಯ ಕಾಡುತ್ತಿತ್ತು”

"ನಾಳೆ ಮುಹೂರ್ತ ಅಂದ್ರೆ, ಅದರ ಹಿಂದಿನ ದಿನವೂ ಯಾರೂ ನಮಗೆ ಫೋನ್‌ ಮಾಡಿ ಹೇಳಿರಲಿಲ್ಲ. ಹಾಗಾಗಿ ನಮಗೂ ಚೂರು ಭಯ ಇತ್ತು. ಎಷ್ಟು ಗಂಟೆಗೆ ಬರಬೇಕು ಎಂದೂ ಗೊತ್ತಿಲ್ಲ. ಬೆಳಗ್ಗೆ 6 ಗಂಟೆಗೆಲ್ಲ ಬೇಗ ಎದ್ದು ಸ್ನಾನ ಮಾಡಿ ನಾನು ಅಮ್ಮ, ದರ್ಶನ್‌ ರೆಡಿಯಾಗಿ ಕಾಯ್ತಾಯಿದ್ವಿ. 9 ಗಂಟೆಯಾದ್ರೂ ಸಿನಿಮಾ ಟೀಮ್‌ನಿಂದ ಫೋನ್‌ ಬಂದಿಲ್ಲ. ಗಾಡಿಯೂ ಬಂದಿಲ್ಲ. ದರ್ಶನ್‌ಗೆ ಟೆನ್ಷನ್‌ ಆಗ್ತಾ ಇತ್ತು. ಹೀಗಿರುವಾಗಲೇ ಆಮೇಲೆ ಫೋನ್‌ ಬಂತು. ಕೆಳಗಡೆ ಗಾಡಿ ನಿಂತಿದೆ ಬನ್ನಿ ಅಂದ್ರು. ಖುಷಿಯಲ್ಲಿಯೇ ಪೂಜೆಗೆ ಹೋದ್ವಿ" ಎಂದು ನೆನಪಿಸಿಕೊಂಡಿದ್ದಾರೆ ದಿನಕರ್.‌

ಅದೃಷ್ಟವೋ, ಕಾಕತಾಳೀಯವೋ

ಮುಂದುವರಿದು ಮಾತನಾಡುವ ದಿನಕರ್‌, "ಅವ್ನ ಅದೃಷ್ಟವೋ ಏನೋ, ಕಾಕತಾಳೀಯವೋ ಏನೋ, "ದೇವ್ರೆ ಫಸ್ಟ್‌ ಟೈಮ್‌ ಬಣ್ಣ ಹಚ್ಚುತ್ತಿದ್ದೇನೆ, ನೀನೇ ನನ್ನ ಕಾಪಾಡಬೇಕು" ಎಂಬ ಮೊದಲ ಶಾಟ್‌ನ ಡೈಲಾಗ್‌ ಹೇಳಿ ಮುಗಿಸಿದ ಶಾಟ್‌ ಓಕೆ ಆಯ್ತು. ನಂಬ್ತಿರೋ ಬಿಡ್ತಿರೋ ಆವತ್ತಿನಿಂದ ಇಂದಿನವರೆಗೂ ಅವನು ಬಿಜಿಯಾಗಿದ್ದಾನೆ. ಮೂಹೂರ್ತ ಆದ ದಿನವೇ ಪ್ರೇಮ್‌ ಅವ್ರು ಬಂದು ಕರಿಯ ಸಿನಿಮಾದ ಅಡ್ವಾನ್ಸ್‌ ಕೊಟ್ರು. ಶ್ರೀನಿವಾಸ ಗೌಡ್ರು ಧ್ರುವ ಸಿನಿಮಾಕ್ಕೆ ಅಡ್ವಾನ್ಸ್‌ ಕೊಟ್ರು. ಮೆಜೆಸ್ಟಿಕ್‌ ಚಿತ್ರದ ಮುಹೂರ್ತದ ದಿನವೇ ಇನ್ನೆರಡು ಸಿನಿಮಾ ಕನ್ಫರ್ಮ್‌ ಆಯ್ತು. ದರ್ಶನ್‌ ನಿಟ್ಟುಸಿರು ಬಿಟ್ಟ"

ರಿಲೀಸ್‌ ದಿನ ಎಲ್ಲರ ಮುಖದಲ್ಲೂ ಟೆನ್ಷನ್‌

“ದರ್ಶನ್‌ ತುಂಬ ಪಾಸಿಟಿವ್‌ ವ್ಯಕ್ತಿ. ಅವ್ನು ನೆಗೆಟಿವ್‌ ವಿಚಾರ ಮಾಡೋದೇ ಕಡಿಮೆ. ಸತತವಾಗಿ 50 ದಿನ ಎಲ್ಲೂ ಗ್ಯಾಪ್‌ ಆಗದೇ ಮೆಜೆಸ್ಟಿಕ್ ಸಿನಿಮಾ ಶೂಟಿಂಗ್‌ ನಡೀತು. ಅದೇ ರೀತಿ ಸಿನಿಮಾ ಮೂಡಿಬಂತು. ರಿಲೀಸ್‌ ಹಿಂದಿನ ದಿನವೂ ಟೆನ್ಷನ್‌ ಶುರುವಾಯ್ತು. ನಿರ್ಮಾಪಕ ರಾಮಮೂರ್ತಿ ಅವ್ರು, ನಿರ್ದೇಶಕ ಪಿ ಎನ್‌ ಸತ್ಯ ಎಲ್ಲರ ಮುಖದಲ್ಲೂ ಏನಾಗುತ್ತೋ ಅನ್ನೋ ಆತಂಕ. ಹೋಟೆಲ್‌ನಲ್ಲಿ ತಿಂಡಿ ಆರ್ಡರ್‌ ಮಾಡಿ ಕೂತಿದ್ದಾಗ, ಜನ ಇನ್ನೂ ಬರ್ತಿಲ್ಲ. ಟಿಕೆಟ್‌ ಒಂದೊಂದೆ ಹೋಗ್ತಿದೆ ಅನ್ನೋ ಮಾಹಿತಿ ಚಿತ್ರಮಂದಿರದಿಂದ ಬಂತು”

ಹೌಸ್‌ಫುಲ್‌ ಬೋರ್ಡ್‌ ನೋಡಿ ನಿರಾಳ

"ಕೊಂಚ ಬೇಸರದಲ್ಲಿ ಎಲ್ಲರೂ ಮೌನಕ್ಕೆ ಜಾರಿದ್ರು. ಆರ್ಡರ್‌ ಮಾಡಿದ ತಿಂಡಿ ಕೈಗೆ ಬಂದು, ಟೇಬಲ್‌ ಮೇಲೆ ಹೋಗಿ ಇನ್ನೇನು ತಿನ್ನಬೇಕು ಎನ್ನುವಷ್ಟರಲ್ಲಿ ಮೆಜೆಸ್ಟಿಕ್‌ನ ಮೇನಕ ಚಿತ್ರಮಂದಿರದಿಂದ ಫೋನ್‌ ಬಂತು. ಮಾರ್ನಿಂಗ್‌ ಶೋ ಹೌಸ್‌ ಫುಲ್‌ ಸರ್..‌ ಎಂದು ಹೇಳಿದರು. ತಿಂಡಿ ತಿನ್ನದೇ ಬಿಲ್‌ ಕೊಟ್ಟು ಹಳದಿ ಬಣ್ಣದ ವ್ಯಾಗನಾರ್‌ ಕಾರ್‌ ಏರಿ ಚಿತ್ರಮಂದಿರಕ್ಕೆ ಎಲ್ಲರೂ ಬಂದ್ರು. ಹೊರಗಡೆ ಹೌಸ್‌ ಫುಲ್‌ ಬೋರ್ಡ್‌ ನೋಡಿ ಖುಷಿಯೋ ಖುಷಿ. ನಾನು ಆ ಸಮಯದಲ್ಲಿ ಮೈಸೂರಿನಲ್ಲಿ ಪ್ರೇಮ ಸಿನಿಮಾದ ಅಸಿಸ್ಟಂಟ್‌ ನಿರ್ದೇಶಕನಾಗಿದ್ದೆ. ಸಿನಿಮಾ ರಿಪೋರ್ಟ್‌ ನಮಗೂ ಬಂತು" ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ ದಿನಕರ್. ‌

IPL_Entry_Point