Devara Trailer: ಸಮುದ್ರದಾಳದಲ್ಲಿ ಜೂ. ಎನ್‌ಟಿಆರ್‌ ಸಾಹಸಗಾಥೆ; ದೇವರ ಚಿತ್ರದ ಹೊಸ ಟ್ರೇಲರ್‌ ರಿಲೀಸ್-tollywood news junior ntr jahnvi kapoor saif ali khan starrer devara movie release trailer out mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Devara Trailer: ಸಮುದ್ರದಾಳದಲ್ಲಿ ಜೂ. ಎನ್‌ಟಿಆರ್‌ ಸಾಹಸಗಾಥೆ; ದೇವರ ಚಿತ್ರದ ಹೊಸ ಟ್ರೇಲರ್‌ ರಿಲೀಸ್

Devara Trailer: ಸಮುದ್ರದಾಳದಲ್ಲಿ ಜೂ. ಎನ್‌ಟಿಆರ್‌ ಸಾಹಸಗಾಥೆ; ದೇವರ ಚಿತ್ರದ ಹೊಸ ಟ್ರೇಲರ್‌ ರಿಲೀಸ್

Devara Release Trailer: ಜೂನಿಯರ್‌ ಎನ್‌ಟಿಆರ್‌ ನಟನೆಯ ಬಹುನಿರೀಕ್ಷಿತ ದೇವರ ಸಿನಿಮಾದ ರಿಲೀಸ್‌ ಟ್ರೇಲರ್‌ ಹೊರಬಂದಿದೆ. ಈ ಟ್ರೇಲರ್‌ನಲ್ಲಿ ಸಮುದ್ರದಾಳದಲ್ಲಿ ಕಥಾನಾಯಕನ ಸಾಹಸಗಾಥೆ ಹೇಗಿರಲಿದೆ ಎಂಬುದನ್ನು ರೋಚಕವಾಗಿ ತೋರಿಸಿದ್ದಾರೆ ನಿರ್ದೇಶಕ ಕೊರಟಾಲ ಶಿವ.

ಜೂ. ಎನ್‌ಟಿಆರ್‌ ನಾಯಕನಾಗಿ ನಟಿಸಿರುವ ದೇವರ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ.
ಜೂ. ಎನ್‌ಟಿಆರ್‌ ನಾಯಕನಾಗಿ ನಟಿಸಿರುವ ದೇವರ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ.

Devara Release Trailer: ಜೂನಿಯರ್‌ ಎನ್‌ಟಿಆರ್‌ ನಾಯಕನಾಗಿ ನಟಿಸಿರುವ ದೇವರ ಸಿನಿಮಾದ ರಿಲೀಸ್‌ ಟ್ರೇಲರ್‌ ಬಿಡುಗಡೆ ಆಗಿದೆ. ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ, ಈಗಾಗಲೇ ತೆಲುಗು ನಾಡಲ್ಲಿ ದೊಡ್ಡ ಮಟ್ಟದ ಹೈಪ್‌ ಕ್ರಿಯೇಟ್‌ ಮಾಡಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಈ ಸಿನಿಮಾದಿಂದ ಇದೀಗ ಫ್ಯಾನ್ಸ್‌ಗೆ ಮತ್ತೊಂದು ಸರ್ಪ್ರೈಸ್‌ ಸಿಕ್ಕಿದೆ. ಚಿತ್ರದಲ್ಲಿ ಆಕ್ಷನ್‌ ದೃಶ್ಯಗಳು ಹೇಗಿರಲಿವೆ ಎಂಬ ಝಲಕ್‌ ತೋರಿಸುವ ಉದ್ದೇಶಕ್ಕೆ ಹೊಸ ಟ್ರೇಲರ್‌ ಹೊರತಂದಿದೆ ಚಿತ್ರತಂಡ. ಮಾಸ್‌ ಅವತಾರದಲ್ಲಿ ಜೂ. ಎನ್‌ಟಿಆರ್‌ ಎದುರಾಗಿ ಕುತೂಹಲಕ್ಕೆ ಒಗ್ಗರಣೆ ಹಾಕಿದ್ದಾರೆ.

ಏನಿದೆ ಟ್ರೇಲರ್‌ನಲ್ಲಿ?

ನಿನ್ನೆ ರಾತ್ರಿ ಒಂದು ಕೆಟ್ಟ ಕನಸು ಬಿತ್ತು ಜೋಗುಳ. ಸಮುದ್ರ ನಿಜವಾಗಲೂ ಕೆಂಪೇರಿ, ಮತ್ತೆ ಸಮುದ್ರ ಕೆಂಪಾದ ಹಾಗೆ ಕಾಣಿಸ್ತು. ಅದೂ ನನ್ನ ಕೈಯಿಂದಲೇ ಆದಂಗೆ ಕಂಡಿದೆ. ಭಯ ಹೋಗೋಕೆ ದೇವರ ಕಥೆ ಹೇಳಬೇಕು. ಭಯ ಏನು ಅಂತ ಗೊತ್ತಾಗೋಕೆ ದೇವರನ ಕಥೆ ಕೇಳಬೇಕು. ಸಮುದ್ರದ ಮೇಲೆ ಒಬ್ಬ ದೇವರ ಇರೋದೇ ಸಾಕು. ಇನ್ನೊಬ್ಬ ದೇವರನ್ನ ಇಲ್ಲಿ ತಯಾರು ಮಾಡಿದರೆ, ಅದು ನಿನಗೇ ಅಪಾಯ ಭೈರ.. ಎಂಬಂಥ ಡೈಲಾಗ್‌ಗಳು ಈ ಟ್ರೇಲರ್‌ನ ಹೈಲೈಟ್‌ ಆಗಿವೆ. ಟ್ರೇಲರ್‌ನ ಕೊನೆಯಲ್ಲಿ ಎನ್‌ಟಿಆರ್ ಅವರ ಡ್ಯಾನ್ಸ್.. ಸಮುದ್ರದಾಳದ ಸಾಹಸ ದೃಶ್ಯಗಳು ಮೈನವಿರೇಳಿಸುವಂತಿವೆ.

ಹೈದರಾಬಾದ್‌ನಲ್ಲಿ ಪ್ರೀ ರಿಲೀಸ್‌ ಇವೆಂಟ್

ಇಂದು (ಸೆಪ್ಟೆಂಬರ್ 22) ಹೈದರಾಬಾದ್‌ನಲ್ಲಿ ದೇವರ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಆಂಧ್ರ ಸಿಎಂ, ಡಿಸಿಎಂ ಸೇರಿದಂತೆ ವಿವಿಧ ಗಣ್ಯರು ಆಗಮಿಸುವ ಸಾಧ್ಯತೆ ಇದೆ. ಜನತಾ ಗ್ಯಾರೇಜ್ ನಂತರ ಎನ್‌ಟಿಆರ್ ಮತ್ತು ಕೊರಟಾಲ ಶಿವ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿಬಂದಿದೆ. ಚಿತ್ರಕ್ಕೆ ಜ್ಯೂ ಎನ್‌ಟಿಆರ್‌ ಹಾಗೂ ಸಹೋದರ ಕಲ್ಯಾಣ್‌ ರಾಮ್‌ ಬಂಡವಾಳ ಹೂಡಿದ್ದಾರೆ.

ಟಾಲಿವುಡ್‌ಗೆ ಬಂದ ಬಾಲಿವುಡ್‌ ಜಾನ್ವಿ..

ಈ ಸಿನಿಮಾ ಮೂಲಕ ಜಾನ್ವಿ ಕಪೂರ್‌ ತೆಲುಗಿಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಖಳನಾಯಕನಾಗಿ ನಟಿಸಿದ್ದಾರೆ . ಶ್ರೀಕಾಂತ್, ಚೈತ್ರಾ ರಾಯ್, ಶೈನ್ ಟಾಮ್ ಚಾಕೋ ಮತ್ತು ಪ್ರಕಾಶ್ ರಾಜ್ ಹಾಗೂ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣುತ್ತಿದೆ. ಅನಿರುದ್ಥ್‌ ರವಿಚಂದರ್‌, ಸಂಗೀತ ನೀಡಿದ್ದಾರೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ದೇವರ ಟಿಕೆಟ್‌ ದರ ಹೆಚ್ಚಳ 

ಎಪಿ ಸರ್ಕಾರ ದೇವರ ಚಿತ್ರಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿದೆ. ಟಿಕೆಟ್ ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲು ಅನುಮತಿ ನೀಡಿದೆ. ಮಧ್ಯರಾತ್ರಿ ಶೋಗಳಿಗೂ ಅವಕಾಶ ಕಲ್ಪಿಸಿದೆ. ಬಿಡುಗಡೆಯ ದಿನ 6 ಶೋಗಳು ಇರಲಿದೆ. ಮರುದಿನದಿಂದ 5 ಶೋಗಳು ನಡೆಯಲಿವೆ. ಸಿನಿಮಾ ತೆರೆ ಕಂಡ 9 ದಿನಗಳವರೆಗೆ ಹೆಚ್ಚಿದ ದರಗಳು ಮತ್ತು ಹೆಚ್ಚುವರಿ ಪ್ರದರ್ಶನಗಳೊಂದಿಗೆ ಎಪಿಯಲ್ಲಿ ದಾಖಲೆ ಸೃಷ್ಟಿಸಲು ದೇವರ ಸಿದ್ಧವಾಗಿದೆ. ಸೆಪ್ಟೆಂಬರ್ 26ರ ಮಧ್ಯರಾತ್ರಿಯ ನಂತರ ಮೊದಲ ಪ್ರದರ್ಶನ ನಡೆಯಲಿದೆ. ಹಾಗಾಗಿ ಸೆಪ್ಟೆಂಬರ್ 27ರಂದು ಆಂಧ್ರ ರಾಜ್ಯಾದ್ಯಂತ 6 ಶೋಗಳು ನಡೆಯಲಿವೆ. ಒಂಬತ್ತು ದಿನಗಳ ಕಾಲ 5 ಶೋಗಳಿಗೆ ಸರ್ಕಾರ ಅನುಮತಿ ನೀಡಿದೆ. ಇದರಿಂದ ಚಿತ್ರತಂಡ ಫುಲ್ ಖುಷಿಯಾಗಿದೆ.

mysore-dasara_Entry_Point