Friday Release: ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳು; ಕನ್ನಡ ಹಿಂದಿ ತಮಿಳು ಮಲಯಾಳಂ ತೆಲುಗಿನಲ್ಲಿ 15 ಸಿನಿಮಾ ರಿಲೀಸ್‌
ಕನ್ನಡ ಸುದ್ದಿ  /  ಮನರಂಜನೆ  /  Friday Release: ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳು; ಕನ್ನಡ ಹಿಂದಿ ತಮಿಳು ಮಲಯಾಳಂ ತೆಲುಗಿನಲ್ಲಿ 15 ಸಿನಿಮಾ ರಿಲೀಸ್‌

Friday Release: ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳು; ಕನ್ನಡ ಹಿಂದಿ ತಮಿಳು ಮಲಯಾಳಂ ತೆಲುಗಿನಲ್ಲಿ 15 ಸಿನಿಮಾ ರಿಲೀಸ್‌

Friday Release movies in theatre: ಬ್ಯಾಚುಲರ್‌ ಪಾರ್ಟಿ, ಉಪಾಧ್ಯಕ್ಷ, ಕೇಸ್‌ ಆಫ್‌ ಕೊಂಡಾಣ ಸೇರಿದಂತೆ ಹಲವು ಕನ್ನಡ ಸಿನಿಮಾಗಳು ಕಳೆದ ವಾರ ಬಿಡುಗಡೆಯಾಗಿವೆ. ಈ ಶುಕ್ರವಾರ ಕನ್ನಡದಲ್ಲಿ ಸತ್ಯ ಶಿವಂ, ಕ್ಲಿಕ್‌ ಮತ್ತು ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗಲಿವೆ.

Friday Release: ಈ  ವಾರ ಕನ್ನಡ ಹಿಂದಿ ತಮಿಳು ಮಲಯಾಳಂ ತೆಲುಗಿನಲ್ಲಿ 15 ಸಿನಿಮಾ ರಿಲೀಸ್‌
Friday Release: ಈ ವಾರ ಕನ್ನಡ ಹಿಂದಿ ತಮಿಳು ಮಲಯಾಳಂ ತೆಲುಗಿನಲ್ಲಿ 15 ಸಿನಿಮಾ ರಿಲೀಸ್‌

ಚಿತ್ರಮಂದಿರಗಳಲ್ಲಿ ಈ ವಾರ ಪ್ರಮುಖ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಆದರೆ, ಸತ್ಯ ಶಿವಂ ಮತ್ತು ಕ್ಲಿಕ್‌ ಎಂಬ ಎರಡು ಕನ್ನಡ ಸಿನಿಮಾಗಳು ಬಿಡುಗಡೆಯಾಗಲಿವೆ. ಕಳೆದ ವಾರ ಬ್ಯಾಚುಲರ್‌ ಪಾರ್ಟಿ, ಉಪಾಧ್ಯಕ್ಷ, ಕೇಸ್‌ ಆಫ್‌ ಕೊಂಡಾಣ, ಕೋಳಿ ಎಸ್ರು, ಹದಿನೇಳೆಂಟು ಸೇರಿದಂತೆ ಹಲವು ಸಿನಿಮಾಗಳು ಬಿಡುಗಡೆಯಾಗಿದ್ದವು. ಈ ಶುಕ್ರವಾರ ಹಿಂದಿಯಲ್ಲಿ ಸೆಕ್ಷನ್‌ 108 ಎಂಬ ಸಿನಿಮಾ ಬಿಡುಗಡೆಯಾಗಲಿದೆ. ಟಾಲಿವುಡ್‌ನಲ್ಲಿ ಹ್ಯಾಪಿ ಎಂಡಿಂಗ್‌, ಗೇಮ್‌ ಆನ್‌, ಐ ಹೇಟ್‌ ಯೂ ಮತ್ತು ಮೆಕ್ಯಾನಿಕ್‌ ಎಂಬ ನಾಲ್ಕು ಸಿನಿಮಾಗಳು ರಿಲೀಸ್‌ ಆಗಲಿವೆ. ತಮಿಳು ಭಾಷೆಯಲ್ಲಿ ಚಿಸ್ಲೆಟ್ಸ್‌, ಪಂಬಾತಂ, ಡೆವಿಲ್‌ ಎಂಬ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಮಲಯಾಳಂನಲ್ಲಿ ಅಯ್ಯರ್‌ ಇನ್‌ ಅರೇಬಿಯಾ, ಎಲ್‌ಎಲ್‌ಬಿ, ರಿಥುಮ್‌- ಬಿಯಾಂಡ್‌ ದಿ ಟ್ರುಥ್‌, ಮೃದು ಭಾವೆ ಧ್ರುಡ ಕೃತ್ಯೆ, ಕಲಾನ್‌ಮುರುದೆ ವೀಡು ಎಂಬ ಸಿನಿಮಾಗಳು ರಿಲೀಸ್‌ ಆಗುತ್ತಿವೆ.

ಈ ಶುಕ್ರವಾರ ಬಿಡುಗಡೆಯಾಗುವ ಕನ್ನಡ ಸಿನಿಮಾಗಳು

ಸತ್ಯಂ ಶಿವಂ: ನಿರ್ದೇಶಕ ಯತಿರಾಜ್ ಅವರ ಸತ್ಯಂ ಶಿವಂ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ನಾಯಕನಿಗೆ ಸತ್ಯದ ದರ್ಶನ ಮಾಡಿಸುವ ಪಕ್ಕಾ ಮಾಸ್ ಸಿನಿಮಾ. ರಾ, ರೌಡಿಸಂ, ಬ್ಲಡ್ ಎಲ್ಲವೂ ಈ ಚಿತ್ರದಲ್ಲಿ ಇರಲಿದೆ. ಇದು ಒಬ್ಬ ಸುಪಾರಿ ಕಿಲ್ಲರ್ ಕಥೆ. ಆತ ದುಡ್ಡಿಗೋಸ್ಕರ ಏನು ಬೇಕಾದರೂ ಮಾಡುವ, ಯಾವ ಮಟ್ಟಕ್ಕೆ ಬೇಕಾದರೂ ಹೋಗುವ ವ್ಯಕ್ತಿಯ ಕಥೆ ಇದರಲ್ಲಿದೆ ಎಂದು ಯತಿರಾಜ್‌ ಈ ಹಿಂದೆ ಮಾಹಿತಿ ನೀಡಿದ್ದರು.

ಕ್ಲಿಕ್‌: ರವಿ ಬಸ್ರೂರು ಅವರ ಪುತ್ರ ಚಂದನವನದಲ್ಲಿ ಬಾಲ ನಟನಾಗಿ ಕ್ಲಿಕ್‌ ಸಿನಿಮಾದಲ್ಲಿ ಈ ವಾರ ಎಂಟ್ರಿ ನೀಡಲಿದ್ದಾರೆ. ರವಿ ಬಸ್ರೂರ್ ಅವರ ಪುತ್ರ ಮಾಸ್ಟರ್ ಪವನ್ ಬಸ್ರೂರು ಈಗ ಕ್ಲಿಕ್‌ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟಿದ್ದಾರೆ. ಮಾಸ್ಟರ್ ಪವನ್ ಜೊತೆಯಲ್ಲಿ ಮತ್ತೊಬ್ಬ ಯುವ ನಟ ಕಾರ್ತಿಕ್ ಕೂಡ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಚಂದ್ರಕಲಾ ಮೋಹನ್, ರಚನಾ ದಶರತ್, ಸಂಜು ಬಸಯ್ಯ, ಸಿಲ್ಲಿಲಲ್ಲಿ ಆನಂದ್, ಸುಮನ್ ಸೇರಿ ಹಲವರು ಸಿನಿಮಾದದಲ್ಲಿದ್ದಾರೆ. ಕ್ಲಿಕ್‌ ಸಿನಿಮಾ ಈ ವಾರ ಬಿಡುಗಡೆಯಾಗಲಿದೆ.

ಈ ವಾರ ಬಿಡುಗಡೆಯಾಗುವ ಬಾಲಿವುಡ್‌ ಸಿನಿಮಾ

- ಸೆಕ್ಷನ್‌ 108

ಈ ಶುಕ್ರವಾರ ಬಿಡುಗಡೆಯಾಗುವ ತೆಲುಗು ಸಿನಿಮಾಗಳು

- ಹ್ಯಾಪಿ ಎಂಡಿಂಗ್‌

- ಗೇಮ್‌ ಆನ್‌

- ಐ ಹೇಟ್‌ ಯೂ

- ಮೆಕ್ಯಾನಿಕ್‌

ಈ ವಾರ ಬಿಡುಗಡೆಯಾಗುವ ತಮಿಳು ಸಿನಿಮಾಗಳು

- ಚಿಸ್ಲೆಟ್ಸ್‌

- ಪಂಬಾತಂ

- ಡೆವಿಲ್‌

ಶುಕ್ರವಾರ ಬಿಡುಗಡೆಯಾಗಲಿರುವ ಮಲಯಾಳಂ ಸಿನಿಮಾಗಳು

- ಅಯ್ಯರ್‌ ಇನ್‌ ಅರೇಬಿಯಾ

- ಎಲ್‌ಎಲ್‌ಬಿ

- ರಿಥುಮ್‌- ಬಿಯಾಂಡ್‌ ದಿ ಟ್ರುಥ್‌

- ಮೃದು ಭಾವೆ ಧ್ರುಡ ಕೃತ್ಯೆ

- ಕಲಾನ್‌ಮುರುದೆ ವೀಡು

ಈ ವಾರ ಇಷ್ಟು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಈ ವಾರ ಬಿಡುಗಡೆಯಾಗುವ ಸಿನಿಮಾಗಳ ಸಂಖ್ಯೆ ಕಡಿಮೆ ಇದೆ. ಆದರೆ, ಮುಂದಿನ ವಾರ ಇನ್ನಷ್ಟು ಸಿನಿಮಾಗಳು ಬಿಡುಗಡೆಯಾಗಲಿವೆ. ಪ್ರೇಮಿಗಳ ದಿನವನ್ನು ಗುರಿಯಾಗಿಸಿಕೊಂಡು ಹಲವು ಲವ್‌ ಸ್ಟೋರಿಗಳು ಬಿಡುಗಡೆಯಾಗಲು ಕಾಯುತ್ತಿವೆ. ಇದೇ ಸಮಯದಲ್ಲಿ ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಝೀ5 ಒಟಿಟಿಗಳಲ್ಲಿಯೂ ಹಲವು ಹೊಸ ಸಿನಿಮಾಗಳು ಬಿಡುಗಡೆಯಾಗಲಿವೆ.

Whats_app_banner