Movie Quiz: ಶಂಕರ್‌ನಾಗ್ ತ್ರಿಬಲ್ ಆಕ್ಟಿಂಗ್‌ನಲ್ಲಿ ನಟಿಸಿದ ಸಿನಿಮಾ ಯಾವುದು? ಅಪ್ಪು ಹುಟ್ಟುಹಬ್ಬ ಯಾವಾಗ? 10 ರಸಪ್ರಶ್ನೆಗಳಿಗೆ ಉತ್ತರಿಸಿ
Kannada Movie Quiz: ಸ್ಯಾಂಡಲ್‌ವುಡ್ ಸಿನಿಮಾದ ಹಳೆ ಮತ್ತು ಹೊಸ ಸಿನಿಮಾಗಳಿಗೆ ಸಂಬಂಧಪಟ್ಟಂತೆ ಹತ್ತು ರಸಪ್ರಶ್ನೆಗಳನ್ನು ಇಲ್ಲಿ ನೀಡಲಾಗಿದೆ. ಡಾ. ರಾಜ್‌ಕುಮಾರ್, ಶಂಕರ್‌ನಾಗ್, ಪುನೀತ್ ರಾಜ್‌ಕುಮಾರ್, ಹಿರಿಯ ನಟಿ ಲೀಲಾವತಿ, ವಿಷ್ಣವರ್ಧನ್, ಅಂಬರೀಶ್ ಮುಂತಾದ ನಟ-ನಟಿಯರಿಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರಿಸಿ.
ಸ್ಯಾಂಡಲ್‌ವುಡ್‌ನ ಹೊಸ ಮತ್ತು ಹಳೆಯ ಸಿನಿಮಾದ ಕುರಿತಾಗಿ ಸಾಕಷ್ಟು ಜನರು ಒಳ್ಳೆಯ ಮಾಹಿತಿ ಹೊಂದಿರುತ್ತಾರೆ. ಸಿನಿಮಾಕ್ಕೆ ಸಂಬಂಧಪಟ್ಟಂತೆ ಯಾವುದೇ ಪ್ರಶ್ನೆ ಕೇಳಿದರೂ ಥಟ್ ಎಂದು ಉತ್ತರಿಸುತ್ತಾರೆ. ಸಿನಿಮಾ ಪ್ರಿಯರಿಗಾಗಿ ಇಲ್ಲಿ ಹತ್ತು ರಸಪ್ರಶ್ನೆಗಳನ್ನು ನೀಡಲಾಗಿದೆ. ಲೇಖನದ ಕೊನೆಗೆ ಉತ್ತರವನ್ನೂ ನೀಡಲಾಗಿದೆ.
ಕನ್ನಡ ರಸಪ್ರಶ್ನೆಗಳು
1. ಡಾ. ರಾಜ್‌ಕುಮಾರ್ ಅವರ ಹೆಸರು ಮುತ್ತುರಾಜ ಎಂದು ಎಲ್ಲರಿಗೂ ಗೊತ್ತು. ಹಾಗಾದರೆ, ಮುತ್ತುರಾಜನ ತಂದೆಯ ಹೆಸರೇನು?
1. ರಾಜಸ್ವಾಮಿ
2. ಸಿಂಗನಲ್ಲೂರು ಮುತ್ತುಸ್ವಾಮಿ
3. ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ
4. ಶಿವರಾಜ್ ಪುಟ್ಟಸ್ವಾಮಯ್ಯ
2. ರಾಜ್‌ಕುಮಾರ್ ಅವರು ನಾಯಕನಟನಾಗಿ ನಟಿಸಿದ ಮೊದಲ ಸಿನಿಮಾ ಯಾವುದು?
1. ಭಕ್ತ ವಿಜಯ
2. ಹರಿಭಕ್ತ
3. ಭೂಕೈಲಾಸ
4. ಬೇಡರ ಕಣ್ಣಪ್ಪ
3. ಶಂಕರ್‌ನಾಗ್ ಅವರು ತ್ರಿಪಾತ್ರದಲ್ಲಿ (ತ್ರಿಬಲ್ ಆಕ್ಟಿಂಗ್‌ನಲ್ಲಿ ) ನಟಿಸಿದ ಮೊದಲ ಚಿತ್ರ ಯಾವುದು?
1. ಆಟೋರಾಜ
2. ಮಿಂಚಿನ ಓಟ
3. ಗೆದ್ದ ಮಗ
4. ನಿಗೂಢ ರಹಸ್ಯ
4. ಕನ್ನಡ ನಟ ಯಶ್ ಅವರು 2004ರಲ್ಲಿ ಮೂರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಈ ಮುಂದಿನ ಆಯ್ಕೆಗಳಲ್ಲಿ ಅವರು ನಟಿಸದೆ ಇದ್ದ ಸೀರಿಯಲ್ ಯಾವುವು
1. ನಂದ ಗೋಕುಲ
2. ಉತ್ತರಾಯಣ
3. ಪ್ರೀತಿ ಇಲ್ಲದ ಮೇಲೆ
4. ಸಿಲ್ಲಿ ಲಲ್ಲಿ
5. ಕೃತಿ ಕರಬಂದ ಜತೆಗೆ ಯಶ್ ನಾಯಕನಾಗಿ ನಟಿಸಿದ ಜನಪ್ರಿಯ ಸಿನಿಮಾದ ಹೆಸರೇನು?
1. ಗೂಗ್ಲಿ
2. ಡ್ರಾಮಾ
3. ಮಿಸ್ಟರ್ ಆಂಡ್ ಮಿಸ್ಸೆಸ್ ರಾಮಚಾರಿ
4. ಮೊಗ್ಗಿನ ಮನಸ್ಸು
6. ಪುನೀತ್ ರಾಜ್‌ಕುಮಾರ್ ಜನಿಸಿದ ವರ್ಷ ಯಾವುದು?
1. 17 ಮಾರ್ಚ್ 1975
2. 17 ಮಾರ್ಚ್ 1972
3. 17 ಮಾರ್ಚ್ 1978
4. 17 ಮಾರ್ಚ್ 1970
7. ಬಾಲ ಕಲಾವಿದನಾಗಿ ಪುನೀತ್ ರಾಜ್ ಕುಮಾರ್ ಅವರ ಮೊದಲ ಹಾಡು ಯಾವುದು?
1. ಕಾಣದಂತೆ ಮಾಯವಾದ
2. ರಂಗಾ ವಿಠಲಾ...
3. ಬಾನ ದಾರಿಯಲ್ಲಿ
4. ಸೂರ್ಯ ನಾರಾಯಣ
8. ಅಂಬರೀಶ್ ಅವರ ಮೊದಲ ಸಿನಿಮಾ ಯಾವುದು?
1. ರಂಗನಾಯಕಿ,
2. ನಾಗರಹಾವು
3. ಚಕ್ರವ್ಯೂಹ
4.ಒಲವಿನ ಉಡುಗೊರೆ
9. ಇವುಗಳಲ್ಲಿ ಯಾವ ಸಿನಿಮಾಗಳಲ್ಲಿ ಹಿರಿಯ ನಟಿ ಲೀಲಾವತಿ ಅಭಿನಯಸಿದ್ದಾರೆ? (ಒಂದಕ್ಕಿಂತ ಹೆಚ್ಚು ಸರಿಯುತ್ತರಗಳನ್ನು ಆಯ್ಕೆ ಮಾಡಿ)
1. ಭಕ್ತ ಪ್ರಹ್ಲಾದ
2. ನಂದಾದೀಪ
3. ಕುಲವಧು
4. ವಲರ್ ಪಿರಾಯಿ
10. ಇವುಗಳಲ್ಲಿ ಯಾವುದು ವಿಷ್ಣವರ್ಧನ್ ನಟಿಸಿದ ಸಿನಿಮಾದ ಹಾಡಲ್ಲ?
1. ಅಭಿಮಾನಿಗಳೇ ನನ್ನ ದೇವರು
2. ಕಂಡೆ ನನ್ನ ಒಲವಿನ ಹುಡುಗಿಯ
3. ತುತ್ತು ಅನ್ನ ತಿನ್ನೋಕೆ...
4. ಉಸಿರೇ ನಿಂತಿದೆ ನಿನ್ನ ಹೆಸರ ಹೇಳದೆ
ಸರಿ ಉತ್ತರಗಳು
ಪ್ರಶ್ನೆ 1 ಉತ್ತರ: ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ
ಪ್ರಶ್ನೆ 2 ಉತ್ತರ: 4. ಬೇಡರ ಕಣ್ಣಪ್ಪ
ಪ್ರಶ್ನೆ 3 ಸರಿ ಉತ್ತರ: ಗೆದ್ದ ಮಗ
ಪ್ರಶ್ನೆ 4 ಉತ್ತರ: ಉತ್ತರಾಯಣ
ಪ್ರಶ್ನೆ 4 ಉತ್ತರ: ಮೊಗ್ಗಿನ ಮನಸ್ಸು
ಪ್ರಶ್ನೆ 6 ಉತ್ತರ: 1. 17 ಮಾರ್ಚ್ 1975
ಪ್ರಶ್ನೆ 7 ಉತ್ತರ: ಬಾನ ದಾರಿಯಲ್ಲಿ
ಪ್ರಶ್ನೆ 8 ಉತ್ತರ: ನಾಗರಹಾವು
ಪ್ರಶ್ನೆ 9 ಸರಿಯುತ್ತರ: ಎಲ್ಲಾ ಆಯ್ಕೆಗಳು ಸರಿ
ಪ್ರಶ್ನೆ 10 ಸರಿ ಉತ್ತರ: ಉಸಿರೇ ನಿಂತಿದೆ ನಿನ್ನ ಹೆಸರ ಹೇಳದೆ