ಕನ್ನಡ ಸುದ್ದಿ  /  ಮನರಂಜನೆ  /  ಮಾನಹಾನಿ, ದುಷ್ಕ್ರತ್ಯಗಳ ಪ್ರಯೋಗ! ನಿಜವಾಯ್ತು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದ ದರ್ಶನ್‌ ಭವಿಷ್ಯ

ಮಾನಹಾನಿ, ದುಷ್ಕ್ರತ್ಯಗಳ ಪ್ರಯೋಗ! ನಿಜವಾಯ್ತು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದ ದರ್ಶನ್‌ ಭವಿಷ್ಯ

ದರ್ಶನ್‌ ಇಂಥ ಪರಿಸ್ಥಿತಿ ಎದುರಿಸಿಯೇ ತೀರುತ್ತಾರೆ ಎಂದು ಕಳೆದ ಮೂರು ತಿಂಗಳ ಹಿಂದಷ್ಟೇ ಕಾಲಜ್ಞಾನ ಮಠದ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದರು. ಇದೀಗ ಆ ಸ್ಫೋಟಕ ಭವಿಷ್ಯ ನಿಜವಾಗಿದೆ. ಸ್ವಾಮೀಜಿಗಳು ಪ್ರಕಟಿಸಿದ್ದ ಭವಿಷ್ಯವಾಣಿಯಲ್ಲಿನ ಪ್ರತಿ ಪದಗಳೂ ದರ್ಶನ್‌ ಅವರ ಈಗಿನ ಬೆಳವಣಿಗೆಗಳನ್ನು ಹೇಳುತ್ತಿವೆ.

ಮಾನಹಾನಿ, ದುಷ್ಕ್ರತ್ಯಗಳ ಪ್ರಯೋಗ! ನಿಜವಾಯ್ತು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದ ದರ್ಶನ್‌ ಭವಿಷ್ಯ
ಮಾನಹಾನಿ, ದುಷ್ಕ್ರತ್ಯಗಳ ಪ್ರಯೋಗ! ನಿಜವಾಯ್ತು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದ ದರ್ಶನ್‌ ಭವಿಷ್ಯ

Siddalinga Shivacharya Swamiji Prediction: ನಟ ದರ್ಶನ್‌ ಕೊಲೆ ಕೇಸ್‌ನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಗೆಳತಿ ಪವಿತ್ರಾ ಗೌಡ ಅವರಿಗೆ ಅಸಭ್ಯವಾಗಿ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದಿಂದ ಬೆಂಗಳೂರಿಗೆ ಅಪಹರಣ ಮಾಡಿ ಕರೆತಂದು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿ, ಮೋರಿಗೆ ಬಿಸಾಕಲಾಗಿತ್ತು. ಇದೀಗ ಇದೇ ಪ್ರಕರಣ ಬರೀ ಕರ್ನಾಟಕ ಮಾತ್ರವಲ್ಲದೆ ದೇಶದ ಗಮನ ಸೆಳೆದಿದೆ. ಕೃತ್ಯದ ಸಾಕ್ಷ್ಯಗಳು ಪೊಲೀಸರ ಕೈ ಸೇರಿದ್ದು, ದರ್ಶನ್‌ಗೆ ಜೈಲೇ ಗತಿ ಎಂದೂ ಹೇಳಲಾಗುತ್ತಿದೆ. ಈ ನಡುವೆ ದರ್ಶನ್‌ ಬಗ್ಗೆ ಮಾರ್ಚ್‌ನಲ್ಲಿ ಸ್ವಾಮೀಜಿಯೊಬ್ಬರು ನುಡಿದ ಭವಿಷ್ಯ ಇದೀಗ ನಿಜ ಎನಿಸುತ್ತಿದೆ.

ಕೋಪದ ಕೈಗೆ ಬುದ್ಧಿಕೊಟ್ಟು ಕೆಟ್ಟ ದರ್ಶನ್

ನಟ ದರ್ಶನ್‌ ಸಿನಿಮಾ ಕೆರಿಯರ್‌ ಜತೆಗೆ ಅವರ ವೈಯಕ್ತಿಕ ಜೀವನದ ಹಾದಿಯಲ್ಲೂ ಸಾಕಷ್ಟು ಏರಿಳಿತ ಕಂಡಿದ್ದಾರೆ. ಸ್ಟಾರ್‌ಡಮ್‌ ಎಂಬ ಕಿರೀಟ ಶಿರ ಏರುತ್ತಿದ್ದಂತೆ, ಅದನ್ನು ನಿಭಾಯಿಸುವಲ್ಲಿ ದರ್ಶನ್‌ ಎಡವಿದ್ದಾರೆ. ಸದಾ ಒಂದಿಲ್ಲೊಂದು ಕಾಂಟ್ರವರ್ಸಿಗಳನ್ನೇ ಹೊದ್ದು ಸರಣಿ ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಕೋಪದ ಕೈಗೆ ಬುದ್ಧಿಕೊಟ್ಟು, ಜತೆಗಿರುವವರ ಉಡಾಫೆ ಮಾತುಗಳಿಗೆ ಕಿವಿಗೊಟ್ಟು ಇದೀಗ ಅದೇ ಅಡಕತ್ತರಿಗೆ ತಮ್ಮದೇ ಕುತ್ತಿಗೆ ಕೊಟ್ಟಿದ್ದಾರೆ. ಯಾರ ಮಾತನ್ನೂ ಕೇಳದೇ, ಆನೆ ನಡೆದಿದ್ದೇ ದಾರಿ ಎಂಬಂತೆ, ಅಭಿಮಾನಿಗಳ ಬೆಂಬಲದೊಂದಿಗೆ ಮುನ್ನಡೆದ ದರ್ಶನ್‌ ಇದೀಗ ಮೇಲೆಳಾಗದಷ್ಟು ಆಳಕ್ಕೆ ಬಿದ್ದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವರ್ಷಾರಂಭದಿಂದ ವಿವಾದಗಳ ಸುರಿಮಳೆ..

ದರ್ಶನ್‌ ಇಂಥ ಪರಿಸ್ಥಿತಿ ಎದುರಿಸಿಯೇ ತೀರುತ್ತಾರೆ ಎಂದು ಕಳೆದ ಮೂರು ತಿಂಗಳ ಹಿಂದಷ್ಟೇ ಕಾಲಜ್ಞಾನ ಮಠದ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದರು. ಇದೀಗ ಆ ಸ್ಫೋಟಕ ಭವಿಷ್ಯ ನಿಜವಾಗಿದೆ. ಸ್ವಾಮೀಜಿಗಳು ಪ್ರಕಟಿಸಿದ್ದ ಭವಿಷ್ಯವಾಣಿಯಲ್ಲಿನ ಪ್ರತಿ ಪದಗಳೂ ದರ್ಶನ್‌ ಅವರ ಈಗಿನ ಬೆಳವಣಿಗೆಗಳನ್ನು ಹೇಳುತ್ತಿವೆ. ಈ ವರ್ಷದ ಆರಂಭದಿಂದ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ಅವರ ನಡುವಿನ ಸೋಷಿಯಲ್‌ ಮೀಡಿಯಾ ಸಮರದಿಂದ ಶುರುವಾದ ಈ ಕಾಳಗ, ದರ್ಶನ್‌ ಫ್ಯಾನ್ಸ್‌ಗಳಿಂದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಅವಹೇಳನವೂ ಭಾರೀ ಚರ್ಚೆಗೆ ತುಪ್ಪ ಸುರಿದಿತ್ತು. ಇದೀಗ ಕೊಲೆ ಕೇಸ್‌ ಮೇಲೆ ಅಂದರ್‌ ಆಗಿದ್ದಾರೆ ದರ್ಶನ್.

ಹರಿಹರದ ಕಾಲಜ್ಞಾನ ಮಠದ ಸ್ವಾಮೀಜಿ

ನಟ ದರ್ಶನ್‌ ಅವರಿಗೆ ಈ ವರ್ಷ ಸಮಸ್ಯೆಗಳೇ ಹೆಚ್ಚು. ಶತ್ರುಗಳಿಂದ ಸಮಸ್ಯೆಗಳು ಎದುರಾದರೆ, ಆರೋಗ್ಯದಲ್ಲೂ ಏರುಪೇರಾಗಲಿದೆ. ಇದಷ್ಟೇ ಅಲ್ಲ ಮಾನಹಾನಿಯಂಥ ಘಟನೆಗಳೂ ತುಸು ಹೆಚ್ಚೇ ಘಟಿಸಲಿವೆ ಎಂದು ಹರಿಹರದ ಶ್ರೀ ಸಿದ್ಧಲಿಂಗೇಶ್ವರ ಗದ್ದುಗೆ ಮಠದ (ಕಾಲಜ್ಞಾನ ಮಠ) ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮೂರು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದರು. ‌ ಅಷ್ಟಕ್ಕೂ ಸ್ವಾಮೀಜಿ ನುಡಿದ ಭವಿಷ್ಯದಲ್ಲಿ ಏನಿತ್ತು? ಇಲ್ಲಿದೆ.

ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದ ಭವಿಷ್ಯ

"ನಮ್ಮ ಕರ್ನಾಟಕದ ಖ್ಯಾತ ನಟರಾದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ರವರು ಬಹಳ ಕಷ್ಟದಿಂದ ಮೇಲೆ ಬಂದಿರುವವರು. ಅವರ ಪ್ರತಿಭೆ ಹಾಗೂ ಅವರು ಪಡೆದಿರುವ ಪ್ರಸಿದ್ಧಿ ನಮ್ಮೆಲ್ಲರಿಗೂ ಸಂತೋಷದಾಯಕವಾದ ಮತ್ತು ಹೆಮ್ಮೆಯ ವಿಷಯವಾಗಿದೆ. ಆದರೆ, ಈ ವರ್ಷ ಅವರಿಗೆ ಅನೇಕ ರೀತಿಯಿಂದ ಶತ್ರುಗಳ ತೊಂದರೆ, ಅನಾರೋಗ್ಯ ಬಾಧೆ, ಮಾನಹಾನಿಗಳು, ಅನೇಕ ರೀತಿಯ ದುಷ್ಕ್ರತ್ಯಗಳ ಪ್ರಯೋಗದಿಂದ ನೆಮ್ಮದಿ ಹಾಳಾಗಲಿದೆ. ಆದ್ದರಿಂದ ಎಚ್ಚರಿಕೆ ವಹಿಸುವುದು ಅತ್ಯವಶ್ಯವಾಗಿದೆ. ಮತ್ತು ನಿಮ್ಮ ರಕ್ಷಣಾ ವಲಯವನ್ನು ಹೆಚ್ಚು ಮಾಡಿಕೊಳ್ಳುವುದು ಸೂಕ್ತ" ಎಂದು ಶ್ರೀ ಸಿದ್ಧಲಿಂಗೇಶ್ವರ ಗದ್ದುಗೆ ಮಠದ (ಕಾಲಜ್ಞಾನ ಮಠ) ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಮೂರು ತಿಂಗಳ ಹಿಂದೆ ನುಡಿದಿದ್ದ ಭವಿಷ್ಯದ ಪ್ರತಿ

ಮೂರು ತಿಂಗಳ ಹಿಂದೆಯೇ ದರ್ಶನ್‌ ಬಗ್ಗೆ ಭವಿಷ್ಯ ನುಡಿದಿದ್ದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ
ಮೂರು ತಿಂಗಳ ಹಿಂದೆಯೇ ದರ್ಶನ್‌ ಬಗ್ಗೆ ಭವಿಷ್ಯ ನುಡಿದಿದ್ದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ