ಕನ್ನಡ ಸುದ್ದಿ  /  ಮನರಂಜನೆ  /  ವೇದಿಕೆ ಮೇಲೆ ಅಪ್ಪ ಅಮ್ಮನ ಮುಂದೇನೇ ಸಪ್ತಮಿ ಗೌಡಗೆ ಯುವ ರಾಜ್‌ಕುಮಾರ್‌ ಹೀಗಾ ಮಾಡೋದು! ‘ಕಿರುಬೆರಳ ಆಟ’ದ Video ವೈರಲ್‌

ವೇದಿಕೆ ಮೇಲೆ ಅಪ್ಪ ಅಮ್ಮನ ಮುಂದೇನೇ ಸಪ್ತಮಿ ಗೌಡಗೆ ಯುವ ರಾಜ್‌ಕುಮಾರ್‌ ಹೀಗಾ ಮಾಡೋದು! ‘ಕಿರುಬೆರಳ ಆಟ’ದ VIDEO ವೈರಲ್‌

ಯುವ ರಾಜ್‌ಕುಮಾರ್‌- ಶ್ರೀದೇವಿ ಭೈರಪ್ಪ ನಡುವಿನ ವಿಚ್ಛೇದನ ಅರ್ಜಿ ಬೆನ್ನಲ್ಲೇ ಸಪ್ತಮಿ ಗೌಡ ಅವರ ಹೆಸರೂ ಈ ಕೇಸ್‌ನಲ್ಲಿ ತಳುಕು ಹಾಕಿಕೊಂಡಿದೆ. ಅದರಂತೆ, ಇದೀಗ ಇದೇ ಯುವ ಚಿತ್ರದ ಸುದ್ದಿಗೋಷ್ಠಿ ಸಂದರ್ಭದಲ್ಲಿನ ಯುವ ಮತ್ತು ಸಪ್ತಮಿ ನಡುವಿನ ಆಪ್ತತೆಯ ಕಿರು ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ವೇದಿಕೆ ಮೇಲೆ ಅಪ್ಪ ಅಮ್ಮನ ಮುಂದೇನೇ ಸಪ್ತಮಿ ಗೌಡಗೆ ಯುವ ರಾಜ್‌ಕುಮಾರ್‌ ಹೀಗಾ ಮಾಡೋದು! ‘ಕಿರುಬೆರಳ ಆಟ’ದ VIDEO ವೈರಲ್‌
ವೇದಿಕೆ ಮೇಲೆ ಅಪ್ಪ ಅಮ್ಮನ ಮುಂದೇನೇ ಸಪ್ತಮಿ ಗೌಡಗೆ ಯುವ ರಾಜ್‌ಕುಮಾರ್‌ ಹೀಗಾ ಮಾಡೋದು! ‘ಕಿರುಬೆರಳ ಆಟ’ದ VIDEO ವೈರಲ್‌

Yuva Rajkumar: ಸ್ಯಾಂಡಲ್‌ವುಡ್‌ನಲ್ಲಿ ಕಳೆದೊಂದು ತಿಂಗಳಿಂದ ಒಂದಾದ ಮೇಲೊಂದು ಸುದ್ದಿಗಳು ಭಾರೀ ಸದ್ದು ಮಾಡುತ್ತಿವೆ. ಚಂದನ್‌ ಶೆಟ್ಟಿ - ನಿವೇದಿತಾ ಗೌಡ ಜೋಡಿ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಟ್ಟು ವಿಚ್ಛೇದನ ಪಡೆದ ಬಳಿಕ, ದೊಡ್ಡ ಮಟ್ಟದ ಸುದ್ದಿಯಾಯ್ತು. ಅದರ ಕಾವು ಚೂರು ಕಡಿಮೆ ಆಯ್ತು ಎನ್ನುತ್ತಿದ್ದಂತೆ, ದೊಡ್ಮನೆಯಲ್ಲೂ ಬಿರುಕು ಕಾಣಿಸಿತು. ಅಂದರೆ, ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ ನಡುವಿನ ದಾಂಪತ್ಯದಲ್ಲಿಯೂ ಯಾವುದೂ ಸರಿಯಿಲ್ಲ ಎಂಬ ವಿಚಾರ ಮುನ್ನೆಲೆಗೆ ಬಂದಿತ್ತು. ವಿಚ್ಛೇದನಕ್ಕೂ ಯುವ ಕಡೆಯಿಂದ ಅರ್ಜಿ ಸಲ್ಲಿಕೆಯಾಗಿತ್ತು.

ಶ್ರೀದೇವಿ ಭೈರಪ್ಪ ವಿರುದ್ಧ ಒಂದಷ್ಟು ಆರೋಪಗಳನ್ನು ಮಾಡಿ ಕೌಟುಂಬಿಕ ಕೋರ್ಟ್‌ಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ನಟ ಯುವ ರಾಜ್‌ಕುಮಾರ್‌. ಐದು ವರ್ಷಗಳ ಪ್ರೀತಿಯಲ್ಲಿದ್ದ ಈ ಜೋಡಿ, ಬಳಿಕ 2019ರಲ್ಲಿ ಅದ್ಧೂರಿ ವಿವಾಹ ಮಾಡಿಕೊಂಡಿತ್ತು. ಹೀಗಿರುವಾಗಲೇ ಜೂನ್‌ 6ರಂದು ಯುವ ಕಡೆಯಿಂದ ಡಿವೋರ್ಸ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಪತ್ನಿ ಶ್ರೀದೇವಿ ಭೈರಪ್ಪಗೂ ಲೀಗಲ್‌ ನೋಟೀಸ್‌ ರವಾನೆಯಾಗಿತ್ತು. ಹಾಗೆ ಬಂದ ನೋಟೀಸ್‌ಗೆ ತಮ್ಮ ವಕೀಲರಿಂದಲೇ ಖಡಕ್‌ ಉತ್ತರ ಕೊಟ್ಟಿದ್ದರು ಶ್ರೀದೇವಿ.

ಟ್ರೆಂಡಿಂಗ್​ ಸುದ್ದಿ

ಒಂದೇ ರೂಮ್‌ನಲ್ಲಿ ಸಪ್ತಮಿ- ಯುವ

ಈ ನೋಟೀಸ್‌ನಲ್ಲಿ ಯುವ ಸಿನಿಮಾ ನಟಿ, ಸಪ್ತಮಿ ಗೌಡ ಮತ್ತು ಯುವ ರಾಜ್‌ಕುಮಾರ್‌ ನಡುವಿನ ಸಂಬಂಧದ ಬಗ್ಗೆಯೂ ನಮೂದಿಸಿದ್ದರು ಶ್ರೀದೇವಿ. ರೆಡ್‌ಹ್ಯಾಂಡ್‌ ಆಗಿ ಶ್ರೀದೇವಿ ಕೈಗೆ ಯುವ ಮತ್ತು ಸಪ್ತಮಿ ಸಿಕ್ಕಿಬಿದ್ದಿದ್ದರು. "ಸಪ್ತಮಿ ಗೌಡ ಅವರೊಂದಿಗೆ ಯುವ ಕಳೆದ ಒಂದು ವರ್ಷದಿಂದ ಅಫೇರ್‌ ಹೊಂದಿದ್ದಾರೆ. ಇವರಿಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದಾರೆ. 2023ರ ಡಿಸೆಂಬರ್‌ನಲ್ಲಿ ಅಮೆರಿಕಾದಿಂದ ಭಾರತಕ್ಕೆ ಮರಳಿದಾಗ ಇವರಿಬ್ಬರೂ ಖಾಸಗಿ ಹೊಟೇಲ್‌ ರೂಮ್‌ನಲ್ಲಿ ಇದ್ದರು" ಎಂದೂ ಶ್ರೀದೇವಿ ನೋಟೀಸ್‌ಗೆ ಉತ್ತರಿಸಿದ್ದರು.

ಈ ವಿಚಾರವೂ ವಿಚ್ಛೇದನದ ಕಾವು ಹೆಚ್ಚಿಸಿತ್ತು. ಇದಕ್ಕೆ ಪ್ರತಿಯಾಗಿ ನಟಿ ಸಪ್ತಮಿ ಗೌಡ ಶ್ರೀದೇವಿ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್‌ ಹಾಕಿದ್ದರು. ಶ್ರೀದೇವಿ ಭೈರಪ್ಪ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ, ಚಾರಿತ್ರ್ಯವಧೆ ಮಾಡುತ್ತಿದ್ದಾರೆ. ಈ ವಿಚಾರ ನನ್ನ ವೃತ್ತಿ ಜೀವನ ಸೇರಿ ವೈಯಕ್ತಿಕ ಬದುಕಿಗೂ ಡ್ಯಾಮೇಜ್‌ ಮಾಡಿದೆ ಎಂದು 10 ಕೋಟಿ ಪರಿಹಾರಕ್ಕೆ ಅರ್ಜಿ ಹಾಕಿದ್ದರು.

ದೊಡ್ಮನೆಯ ಬಿರುಕಿನಲ್ಲಿ ಸಪ್ತಮಿ ಗೌಡ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆ, ಯುವ ಮತ್ತು ಸಪ್ತಮಿ ನಡುವಿನ ಸಂಬಂಧದ ಬಗ್ಗೆಯೂ ಬಗೆಬಗೆ ಮಾತುಗಳು ಕೇಳಿಬಂದವು. ಶ್ರೀದೇವಿಗೆ ಡಿವೋರ್ಸ್‌ ನೀಡಿ, ಸಪ್ತಮಿಯನ್ನು ಯುವ ಮದುವೆ ಆಗಲಿದ್ದಾರೆ ಎಂಬ ಗುಸು ಗುಸು ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಕೇಳಿಬಂತು. ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಮಾತುಗಳೂ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಯ್ತು. ಇದೀಗ ಇದೆಲ್ಲದಕ್ಕೂ ಪುಷ್ಠಿ ನೀಡುವಂತೆ, ಯುವ ಸಿನಿಮಾ ಪ್ರೆಸ್‌ಮೀಟ್‌ ಸಮಯದಲ್ಲಿನ ವಿಡಿಯೋವೊಂದು ಸದ್ಯ ವೈರಲ್‌ ಆಗಿದೆ.

ಯುವ ರಾಜ್‌ಕುಮಾರ್‌ ಕಿರುಬೆರಳ ಆಟ

ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾ ಮಾರ್ಚ್‌ 29ರಂದು ಬಿಡುಗಡೆಯಾಗಿತ್ತು. ಚೊಚ್ಚಲ ಚಿತ್ರವನ್ನು ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಸಂತೋಷ್‌ ಆನಂದ್‌ರಾಮ್‌ ಈ ಸಿನಿಮಾ ನಿರ್ದೇಶಿಸಿದ್ದರು. ಇದೇ ಚಿತ್ರದ ಪತ್ರಿಕಾಗೋಷ್ಠಿಯ ಕಿರು ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಡಿಯೋ ನೋಡಿದವರು ಯುವ ಮತ್ತು ಸಪ್ತಮಿ ಗೌಡ ನಡುವೆ ಬೇರೆ ಏನೋ ನಡೆಯುತ್ತಿದೆ ಎಂದೇ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.

ವೈರಲ್ ಆ ವಿಡಿಯೋದಲ್ಲೇನಿದೆ?

ಅಪ್ಪ ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಅಮ್ಮನ ಭುಜದ ಮೇಲೆ ಯುವ ಕೈ ಹಾಕಿ ಫೋಟೋಕ್ಕೆ ಪೋಸ್‌ ಕೊಟ್ಟಿದ್ದಾರೆ. ಅಪ್ಪನ ಪಕ್ಕದಲ್ಲಿ ಸಪ್ತಮಿ ಗೌಡ ನಿಂತಿದ್ದಾರೆ. ಅಪ್ಪನ ಮೇಲೆ ಕೈ ಹಾಕುವ ನೆಪದಲ್ಲಿ ಸಪ್ತಮಿ ಅವರಿಗೂ ಕಿರುಬೆರಳಿನಲ್ಲಿಯೇ ಟೀಸ್‌ ಮಾಡಿದ್ದಾರೆ. ಯುವ ಅವರ ಈ ವರ್ತನೆಗೆ ಸಪ್ತಮಿ ಕೊಂಚ ಮುಜುಗರಕ್ಕೀಡಾದಂತೆ ವಿಡಿಯೋದಲ್ಲಿ ಕಂಡಿದೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ