ನಿವೇದಿತಾ ರೀಲ್ಸ್ ಮಾಡಿದ್ರೆ, ಕೆಟ್ಟದಾಗಿ ಪ್ರೈವೇಟ್ ಪಾರ್ಟ್ ಬಗ್ಗೆನೇ ಕಾಮೆಂಟ್ ಹಾಕ್ತಾರೆ, ಇದೇನಾ ವಾಕ್ ಸ್ವಾತಂತ್ರ್ಯ? ಚಂದನ್ ಶೆಟ್ಟಿ
ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾಗೆ ಬರ್ತಿದ್ದ ಕಾಮೆಂಟ್ ನೋಡಿ ನಾನು ಅವಳನ್ನು ದೂರ ಮಾಡಿದೆ ಅನ್ನೋದು ಸುಳ್ಳು. ಆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾ ಅನ್ನೋದು ಒಂದು ರೀತಿ ಕ್ರಿಮಿ ಎಂದಿದ್ದಾರೆ ಚಂದನ್ ಶೆಟ್ಟಿ.
Chandan Shetty on ex-wife Niveditha Gowda: ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ತಮ್ಮ ನಾಲ್ಕು ವರ್ಷದ ದಾಂಪತ್ಯಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ. ಪರಸ್ಪರ ಸಹಮತದಿಂದಲೇ ಈ ಜೋಡಿ ಬೇರೆ ಬೇರೆಯಾಗಿದೆ. ಹೀಗೆ ದಿಢೀರ್ ಆಗಿ ವಿಚ್ಛೇದನ ಪಡೆಯುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿಯೂ ಸಾಕಷ್ಟು ಚರ್ಚೆಗಳು ನಡೆದವು. ನಿವೇದಿತಾ ಗೌಡ ಅವರ ರೀಲ್ಸ್ ಹುಚ್ಚಾಟ ನೋಡಿಯೇ ಚಂದನ್ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದೇ ಮಾತನಾಡಿಕೊಂಡರು. ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡುವ ಕುರಿತು ಮಾಧ್ಯಮದ ಮುಂದೆಯೂ ಬಂದು ಅಸಲಿ ವಿಚಾರವನ್ನು ಬಿಚ್ಚಿಟ್ಟಿತ್ತು. ಇದೀಗ ಮತ್ತೆ ಜೀವನದ ಕೆಟ್ಟ ದಿನಗಳ ಬಗ್ಗೆ ಮಾತನಾಡಿದ್ದಾರೆ.
ಈ ಬಗ್ಗೆ ಕಿರಿಕ್ ಕೀರ್ತಿ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಸುದೀರ್ಘವಾಗಿ ಮಾತನಾಡಿರುವ ಚಂದನ್ ಶೆಟ್ಟಿ, ಸೋಶಿಯಲ್ ಮೀಡಿಯಾದಲ್ಲಿ ಬರೋ ಪೋಸ್ಟ್‌ಗಳನ್ನ ನಾನು ನೋಡೋದಿಲ್ಲ. ತುಂಬಾ ಜನ ನಮ್ಮಿಬ್ಬರನ್ನ ಒಂದು ಮಾಡೋಕೆ ಪ್ರಯತ್ನ ಮಾಡ್ತಿದ್ದಾರೆಯಾದರೂ, ಅದು ಸಾಧ್ಯವಿಲ್ಲ. ನಾವಿಬ್ಬರೂ ಒಂದಾಗ್ತಿದ್ದೀವಿ ಅಂತಲೂ ಸಾಕಷ್ಟು ಮಂದಿ ಫೋನ್ ಮಾಡಿ ಕೇಳ್ತಿದ್ದಾರೆ. ಅವರಿಗೂ ನಾನು ಇಲ್ಲ ಎಂದೇ ಹೇಳಿದ್ದೇನೆ" ಎಂದಿದ್ದಾರೆ ಚಂದನ್.
ಇದೇನಾ ವಾಕ್ ಸ್ವಾತಂತ್ರ್ಯ?
ಇನ್ನು ಚಂದನ್ ವಿಚ್ಛೇದನಕ್ಕೆ ನಿವೇದಿತಾ ಗೌಡ ಅವರ ಇನ್‌ಸ್ಟಾ ಪೋಸ್ಟ್‌ಗಳಿಗೆ ಬರ್ತಿದ್ದ ಕಾಮೆಂಟ್‌ಗಳೇ ಕಾರಣ ಅನ್ನೋ ಮಾತಿದೆ. ಆ ಬಗ್ಗೆಯೂ ಮೌನ ಮುರಿದ ಚಂದನ್, "ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾಗೆ ಬರ್ತಿದ್ದ ಕಾಮೆಂಟ್ ನೋಡಿ ನಾನು ಅವಳನ್ನು ದೂರ ಮಾಡಿದೆ ಅನ್ನೋದು ಸುಳ್ಳು. ಆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾ ಅನ್ನೋದು ಒಂದು ರೀತಿ ಕ್ರಿಮಿ, ಕೀಟಾಣು ಥರ ಆಗಿದೆ. ಅಲ್ಲಿ ಬರೀ ನೆಗೆಟಿವ್ ಕಾಮೆಂಟ್ ತುಂಬಿರುತ್ವೆ. ಅವುಗಳನು ನೋಡಿದ್ರೆ, ವಾಕ್ ಸ್ವಾತಂತ್ರ್ಯಕ್ಕೆ ಅರ್ಥ ಏನಾದ್ರೂ ಇದೆಯಾ? ಎಂದಿದ್ದಾರೆ ಚಂದನ್.
ಪ್ರೈವೇಟ್ ಪಾರ್ಟ್ ಬಗ್ಗೆ ಓಪನ್ ಕಾಮೆಂಟ್
ಮುಂದುವರಿದು ಮಾತನಾಡುವ ಅವರು, ಈ ಸೋಷಿಯಲ್ ಮೀಡಿಯಾವನ್ನು ಹಿಡಿತಕ್ಕೆ ತೆಗೆದುಕೊಳ್ಳೋರು ಯಾರೂ ಇಲ್ವಾ? ನೆಗೆಟಿವ್ ಕಾಮೆಂಟ್‌ನ ನಾನು ಒಪ್ಕೋತೇನೆ. ಆದರೆ, ಅಶ್ಲೀಲವಾಗಿ, ಕೆಟ್ಟದಾಗಿ ಕಾಮೆಂಟ್‌ನ ಹಾಕುವುದನ್ನು ನಾನು ಒಪ್ಪೋದಿಲ್ಲ. ಹುಡುಗೀರ ಪ್ರೈವೇಟ್ ಪಾರ್ಟ್ ಬಗ್ಗೆ ಓಪನ್ ಆಗಿ ಕಾಮೆಂಟ್ ಹಾಕ್ತಾರೆ. ನಿಜಕ್ಕೂ ಅದನ್ನ ನೋಡಿದ್ರೆ ಅಸಹ್ಯ ಆಗುತ್ತೆ. ಹುಡುಗೀರ ಪ್ರೈವೇಟ್ ಪಾರ್ಟ್‌ಅನ್ನೇ ಗುರಿ ಮಾಡ್ಕೊಂಡಿದ್ದಾರೆ. ನಿಂದು ಹಾಗಿದೆ, ಇಂದು ಅಷ್ಟು ದಪ್ಪ ಆಗಿದೆಯಲ್ಲ ಎಂದೆಲ್ಲ ಕಾಮೆಂಟ್ ಹಾಕ್ತಾರೆ. ಇಡೀ ಸಮಾಜವೇ ಬೇರೆ ದಿಕ್ಕಿನಲ್ಲಿ ಹೋಗ್ತಿದೆ" ಎಂದು ಬೇಸರ ಹೊರಹಾಕಿದ್ದಾರೆ ಚಂದನ್.
ಹೊಂದಾಣಿಕೆ ಸಮಸ್ಯೆಯೇ ವಿಚ್ಛೇದನಕ್ಕೆ ಕಾರಣ
ವಿಚ್ಛೇದನಕ್ಕೆ ಕಾರಣ ಏನು ಎಂಬ ಬಗ್ಗೆಯೂ ಮಾತನಾಡಿದ್ದಾರೆ ಚಂದನ್, "ಇನ್ನೊಂದು ಸ್ಪಷ್ಟನೆ ಕೊಡೋದಾದ್ರೆ, ನನ್ನ ಮತ್ತು ನಿವೇದಿತಾ ನಡುವಿನ ವಿಚ್ಛೇದನಕ್ಕೆ ಸೋಷಿಯಲ್ ಮೀಡಿಯಾ ಕಾರಣ ಅಲ್ಲ. ಅಲ್ಲಿನ ಕಾಮೆಂಟ್‌ಗಳೂ, ಟ್ರೋಲ್ ಇದ್ಯಾವುದೂ ಕಾರಣ ಅಲ್ಲ. ನಮ್ಮಿಬ್ಬರ ನಡುವಿನ ಒಂದಷ್ಟು ವೈಯಕ್ತಿಕ ವಿಚಾರಗಳು ಸರಿ ಹೊಂದಲಿಲ್ಲ. ಆ ಕಾರಣಕ್ಕೆ ಬೇರೆ ಬೇರೆಯಾಗಿದ್ದೇವೆ" ಎಂದಿದ್ದಾರೆ ಚಂದನ್.
ಮುಂದುವರಿದು ಮಾತನಾಡುವ ಅವರು, "ನಾವು ಕಲಾವಿದರು ನಿಜ. ನಮ್ಮ ಈ ಜೀವನವನ್ನೇ ಕೆಲವರು ಎಂಟರ್ಟೇನ್ಮೆಂಟ್ ಮಾಡ್ಕೊಂಡಿದ್ದಾರೆ. ಕಾಮೆಂಟ್ ನೋಡಿ ನೋಡಿ, ಇತ್ತೀಚಿನ ದಿನಗಳಲ್ಲಿ ಕಾಮೆಂಟ್‌ಗಳನ್ನು ಓದೋದನ್ನೇ ನಾನು ಬಿಟ್ಟಿದ್ದೇನೆ. ನನ್ನ ಆಪ್ತರು ಒಂದಷ್ಟು ಸ್ಕ್ರೀನ್ ಶಾಟ್ ಕಳಿಸೋರು. ಜನರಿಗೆ ನಾಗರಿಕತೆನೇ ಇಲ್ವಾ? ಅಥವಾ ಇವರಿಗೆ ಸರಿಯಾದ ಶಿಕ್ಷಣವೇ ಸಿಕ್ಕಿಲ್ವಾ? ಅವರಂತೆ ನಮಗೂ ಮಾಡೋಕೆ ಬರುತ್ತೆ. ಆದರೆ, ಅವರ ಮಟ್ಟಕ್ಕೆ ಇಳಿಯಲು ನಮ್ಮಿಂದ ಆಗಲ್ಲ" ಎಂದಿದ್ದಾರೆ.
ವಿಭಾಗ