ಭುಜ ಹಿಸುಕಿದ, ಒಂಟಿಯಾಗಿ ಸಿಗು ಎಂದ; ಸ್ಟಾರ್ ಹೀರೋನ ಆಹ್ವಾನಕ್ಕೆ ಹೇಗಿತ್ತು ‘ಸೂರ್ಯವಂಶ’ ನಟಿಯ ಉತ್ತರ
ಸಿನಿಮಾ ರಂಗದಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಈಗಾಗಲೇ ಸಾಕಷ್ಟು ನಟಿಯರು ತಮ್ಮ ಗಮನಕ್ಕೆ ಬಂದ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಖ್ಯಾತ ನಟ, ನಿರ್ದೇಶಕರು, ನಿರ್ಮಾಪಕರ ವಿರುದ್ಧ ದೂರುಗಳನ್ನು ಬಹಿರಂಗವಾಗಿ ಹೇಳಿಕೊಂಡ ಉದಾಹರಣೆಗಳೂ ಸಾಕಷ್ಟಿವೆ. ಇದೀಗ ಆ ಕಾಸ್ಟಿಂಗ್ ಕೌಚ್ ಅನುಭವವನ್ನು ತೆರೆದಿಟ್ಟಿದ್ದಾರೆ ಇಶಾ ಕೊಪ್ಪಿಕರ್.
Isha Koppikar recalls casting couch experience: ಬಹುಭಾಷಾ ನಟಿ ಇಶಾ ಕೊಪ್ಪಿಕರ್ ಒಂದೇ ಸಿನಿಮಾ ಇಂಡಸ್ಟ್ರಿಗೆ ಸೀಮಿತವಾಗಿಲ್ಲ. ದಕ್ಷಿಣ ಸಿನಿಮಾಗಳ ಜತೆಗೆ ಬಾಲಿವುಡ್‌ನಲ್ಲಿಯೂ ತಮ್ಮ ನಟನಾ ಕೌಶಲವನ್ನು ಪ್ರದರ್ಶಿಸಿದ್ದಾರೆ ಈ ನಟಿ. ಸ್ಯಾಂಡಲ್‌ವುಡ್‌ನಲ್ಲಿಯೂ ಈ ನಟಿ ಫೇಮಸ್ ಆಗಿದ್ದು ಸೂರ್ಯವಂಶ ಸಿನಿಮಾ ಮೂಲಕ. 1999ರಲ್ಲಿ ಎಸ್ ನಾರಾಯಣ್ ನಿರ್ದೇಶನದಲ್ಲಿ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ ಸೂರ್ಯವಂಶ ಸಿನಿಮಾದಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದ್ದರು. ಅದಾದ ಬಳಿಕ ಓ ನನ್ನ ನಲ್ಲೆ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡರು.
ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು, ಮರಾಠಿ, ಸಿನಿಮಾಗಳಲ್ಲಿಯೂ ಇಶಾ ನಟಿಸಿದ್ದಾರೆ. ಇತ್ತೀಚೆಗೆ ತಮಿಳಿನಲ್ಲಿ ಬಿಡುಗಡೆಯಾದ ಆಯಲನ್ ಅವರ ಹೊಸ ಸಿನಿಮಾ. ಹೀಗೆ 25 ವರ್ಷಕ್ಕೂ ಅಧಿಕ ಕಾಲದಿಂದ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ನಟಿ ಇಶಾ ಕೊಪ್ಪಿಕರ್‌ಗೆ ಸಿನಿಮಾ ಪ್ರವೇಶದ ಆರಂಭದ ದಿನಗಳಲ್ಲಿ ಒಂದಷ್ಟು ಕೆಟ್ಟ ಅನುಭವಗಳು ಎದುರಾಗಿದ್ದವು. ಸಿನಿಮಾ ಅವಕಾಶಕ್ಕಾಗಿ ಖ್ಯಾತನಾಮರು ಕಾಂಪ್ರಮೈಸ್ ಆಗುವಂತೆಯೂ ಇವರ ಬಳಿ ಕೇಳಿದ್ದರು. ಇದೀಗ ಅಂದಿನ ಆ ಕರಾಳ ದಿನಗಳನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.
ಸಿನಿಮಾ ರಂಗದಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಈಗಾಗಲೇ ಸಾಕಷ್ಟು ನಟಿಯರು ತಮ್ಮ ಗಮನಕ್ಕೆ ಬಂದ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಖ್ಯಾತ ನಟ, ನಿರ್ದೇಶಕರು, ನಿರ್ಮಾಪಕರ ವಿರುದ್ಧ ದೂರುಗಳನ್ನು ಬಹಿರಂಗವಾಗಿ ಹೇಳಿಕೊಂಡ ಉದಾಹರಣೆಗಳೂ ಸಾಕಷ್ಟಿವೆ. ಇದೀಗ ಆ ಕಾಸ್ಟಿಂಗ್ ಕೌಚ್ ಅನುಭವವನ್ನು ತೆರೆದಿಟ್ಟಿದ್ದಾರೆ ಇಶಾ ಕೊಪ್ಪಿಕರ್.
ಇಶಾ ಕೊಪ್ಪಿಕರ್ 1998ರಲ್ಲಿಯೇ ತಮ್ಮ 22 ನೇ ವಯಸ್ಸಿನಲ್ಲಿ ತೆಲುಗಿನ ಚಂದ್ರಲೇಖಾ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರು. ತೆಲುಗಿನ ನಂತರ ತಮಿಳು ಮತ್ತು ಕನ್ನಡದಲ್ಲಿ ಕೆಲಸ ಮಾಡಿದ ಇಶಾಗೆ ಹಿಂದಿಯ ಏಕ್ ಥಾ ದಿಲ್ ಏಕ್ ಥಿ ಧಡ್ಕನ್ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅವರು ದಿಲ್ ಕಾ ರಿಶ್ತಾ, ಕಯಾಮತ್, ಎಲ್‌ಒಸಿ ಕಾರ್ಗಿಲ್ ಮತ್ತು ಕ್ಯಾ ಕೂಲ್ ಹೇ ಹಮ್‌ನಂತಹ ಸಿನಿಮಾಗಳು ಜನಪ್ರಿಯತೆ ತಂದುಕೊಟ್ಟವು.
18ನೇ ವಯಸ್ಸಿನಲ್ಲಿ ಕಾಸ್ಟಿಂಗ್ ಕೌಚ್ ನೋವು
ಇಶಾ ಕೊಪ್ಪಿಕರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾವು ಸಿನಿಮಾರಂಗದ ಆರಂಭದಲ್ಲಿ ಕಾಸ್ಟಿಂಗ್ ಕೌಚ್ ಎದುರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. "ನಟನ ಸೆಕ್ರೆಟರಿ ಮತ್ತು ನಟರೊಬ್ಬರು ಕಾಸ್ಟಿಂಗ್ ಕೌಚ್‌ಗಾಗಿ ನನ್ನನ್ನು ಸಂಪರ್ಕಿಸಿದಾಗ ನನಗೆ 18 ವರ್ಷ. ಕೆಲಸ ಸಿಗಬೇಕೆಂದರೆ ನಟರ ಜೊತೆ ‘ಫ್ರೆಂಡ್ಲಿ’ ಆಗಿರಬೇಕು ಅಂತ ಹೇಳಿದ್ರು. ನಾನು ತುಂಬಾ ಸ್ನೇಹಜೀವಿ, ಆದರೆ 'ಸ್ನೇಹಿ' ಎಂದರೆ ಯಾವ ರೀತಿ? ಎಂದು ಪ್ರಶ್ನೆ ಮಾಡಿದ್ದರು.
ಒಬ್ಬಳೇ ಬರಬೇಕು ಎಂದ ಸ್ಟಾರ್ ನಟ
ಆಗ ಸಿನಿಮಾ ಅವಕಾಶಕ್ಕಾಗಿ ಬಾಲಿವುಡ್‌ನ ಎ-ಲಿಸ್ಟ್ ನಟರೊಬ್ಬರು ಇಶಾ ಅವರನ್ನು ಏಕಾಂಗಿಯಾಗಿ ಭೇಟಿಯಾಗಲು ಕರೆದಿದ್ದರಂತೆ. ಜತೆಗೆ ಕಾರ್ ಡ್ರೈವರ್ ಸಹ ಇರಬಾರದು ಎಂದೂ ಅವರಿಂದ ಆಜ್ಞೆಯಾಗಿತ್ತಂತೆ. ಈ ಬಗ್ಗೆ ಹೇಳುವ ಇಶಾ, "ನಾನು 23 ವರ್ಷದವಳಿದ್ದಾಗ, ಒಬ್ಬ ನಟ ನನ್ನ ಡ್ರೈವರ್ ಅಥವಾ ಬೇರೆ ಯಾರೂ ಇಲ್ಲದೆ ನನ್ನನ್ನು ಒಬ್ಬಂಟಿಯಾಗಿ ಭೇಟಿಯಾಗಲು ಕರೆದರು. ನನ್ನನ್ನು ಕರೆಸಿದ ವಿಚಾರವೂ ಯಾರಿಗೂ ಗೊತ್ತಾಗಬಾರದೆಂದು ಹೀಗೆ ಮಾಡಿದ್ದರಂತೆ. 'ನನ್ನ ಬಗ್ಗೆ ಈಗಾಗಲೇ ಸಾಕಷ್ಟು ಗಾಸಿಪ್‌ಗಳಿವೆ. ನನ್ನ ಕೆಲ ಕೆಲಸಗಾರರು ಸುಳ್ಳು ವದಂತಿ ಹಬ್ಬಿಸಿದ್ದಾರೆ. ಹಾಗಾಗಿ ಒಂಟಿಯಾಗಿ ಬರಲು ಹೇಳಿದೆ' ಎಂದು ಖ್ಯಾತ ನಟ ಸಮಜಾಯಿಷಿ ನೀಡಿದ್ದರು. ಆದರೆ ನಾನು ಅವರ ಆಹ್ವಾನವನ್ನು ನಿರಾಕರಿಸಿದೆ. ನಾನು ಒಬ್ಬಂಟಿಯಾಗಿ ಬರಲು ಸಾಧ್ಯವಿಲ್ಲ ಎಂದು ಹೇಳಿದೆ. ಆ ಸಮಯದಲ್ಲಿ ಅವರು ಹಿಂದಿ ಚಿತ್ರರಂಗದ ಎ-ಲಿಸ್ಟ್ ನಟರಾಗಿದ್ದವರು" ಎಂದಿದ್ದಾರೆ ಇಶಾ.
ಭುಜ ಹಿಸುಕಿ ಅನುಚಿತ ವರ್ತನೆ
ಸ್ಟಾರ್ ಹೀರೋಗಳ ಜತೆಗೆ ನೀನು ಯಾವಾಗಲೂ ಕ್ಲೋಸ್ ಆಗಿ ಮೂವ್ ಆಗಬೇಕು. ನಮ್ಮಗಳ ಸ್ನೇಹವನ್ನು ನೀನು ಹೊಂದಿರಬೇಕು ಎನ್ನುತ್ತಲೇ ಭುಜ ಹಿಸುಕಿ, ಅನುಚಿತವಾಗಿ ಆ ಸ್ಟಾರ್ ನಟ ನನ್ನ ಜೊತೆ ವರ್ತಿಸಿದ್ದ ಎಂದೂ ಹೇಳಿಕೊಂಡಿದ್ದಾರೆ.
ವಿಭಾಗ