ಅವಿವಾ ಬಿದ್ದಪ್ಪ ಸೀಮಂತಕ್ಕೆ ಕ್ಷಣಗಣನೆ, ಕನ್ನಡ ನಟ ಅಭಿಷೇಕ್‌ ಅಂಬರೀಶ್‌ ಮನೆಯಲ್ಲಿ ಬೇಬಿ ಶವರ್‌ ಕಾರ್ಯಕ್ರಮ-sandalwood news kannada actor abhishek ambareesh expecting baby soon aviva bidapa baby shower details ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅವಿವಾ ಬಿದ್ದಪ್ಪ ಸೀಮಂತಕ್ಕೆ ಕ್ಷಣಗಣನೆ, ಕನ್ನಡ ನಟ ಅಭಿಷೇಕ್‌ ಅಂಬರೀಶ್‌ ಮನೆಯಲ್ಲಿ ಬೇಬಿ ಶವರ್‌ ಕಾರ್ಯಕ್ರಮ

ಅವಿವಾ ಬಿದ್ದಪ್ಪ ಸೀಮಂತಕ್ಕೆ ಕ್ಷಣಗಣನೆ, ಕನ್ನಡ ನಟ ಅಭಿಷೇಕ್‌ ಅಂಬರೀಶ್‌ ಮನೆಯಲ್ಲಿ ಬೇಬಿ ಶವರ್‌ ಕಾರ್ಯಕ್ರಮ

ಅಭಿಷೇಕ್‌ ಅಂಬರೀಶ್‌ ಪತ್ನಿ ಅವಿವಾ ಬಿದ್ದಪ್ಪ ಸೀಮಂತ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ವರದಿಗಳ ಪ್ರಕಾರ, ಇದೇ ಆಗಸ್ಟ್‌ 15ರಂದು ಅವಿವಾ ಬಿದ್ದಪ್ಪ ಸೀಮಂತ ಶಾಸ್ತ್ರ ನಡೆಯಲಿದೆ.

ಅವಿವಾ ಬಿದ್ದಪ್ಪ ಸೀಮಂತಕ್ಕೆ ಕ್ಷಣಗಣನೆ
ಅವಿವಾ ಬಿದ್ದಪ್ಪ ಸೀಮಂತಕ್ಕೆ ಕ್ಷಣಗಣನೆ

ಬೆಂಗಳೂರು: ದಿ. ರೆಬಲ್‌ ಸ್ಟಾರ್‌ ಅಂಬರೀಶ್‌ ಮನೆಯಲ್ಲಿ ಪುಟ್ಟ ಮಗುವಿನ ಸ್ವಾಗತಕ್ಕೆ ಎಲ್ಲರೂ ರೆಡಿಯಾಗಿದ್ದಾರೆ. ಅಭಿಷೇಕ್‌ ಅಂಬರೀಶ್‌ ಅಪ್ಪನಾಗುವ ಖುಷಿಯಲ್ಲಿದ್ದಾರೆ. ಸುಮಲತಾ ಅಂಬರೀಶ್‌ ಅಜ್ಜಿಯಾಗಲಿದ್ದಾರೆ. ಅಭಿಷೇಕ್‌ ಅಂಬರೀಶ್‌ ಪತ್ನಿ ಅವಿವಾ ಬಿದ್ದಪ್ಪ ಸೀಮಂತ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ವರದಿಗಳ ಪ್ರಕಾರ, ಇದೇ ಆಗಸ್ಟ್‌ 15ರಂದು ಅವಿವಾ ಬಿದ್ದಪ್ಪ ಸೀಮಂತ ಶಾಸ್ತ್ರ ನಡೆಯಲಿದೆ.

ಸೀಮಂತ ಕಾರ್ಯಕ್ರಮವನ್ನು ಮನೆಯಲ್ಲಿ ಸರಳವಾಗಿ ನಡೆಸಲು ಉದ್ದೇಶಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಅಕ್ಟೋಬರ್‌ ವೇಳೆಗೆ ಅಭಿಷೇಕ್‌ ಮನೆಗೆ ಪಾಪು ಆಗಮನದ ನಿರೀಕ್ಷೆಯಿದೆ. ಸೀಮಂತ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಅಭಿಷೇಕ್‌ ಅಂಬರೀಶ್‌ ಅವರು ಕಳೆದ ವರ್ಷ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾದ ಮೂಲಕ ಕನ್ನಡ ಸಿನಿಪ್ರಿಯರ ಗಮನ ಸೆಳೆದಿದ್ದರು. ಸೂರಿ ಅವರು ಅಭಿಷೇಕ್‌ ಅಂಬರೀಶ್‌ಗಾಗಿ ಈ ಬ್ಯಾಡ್‌ ಮ್ಯಾನರ್ಸ್‌ ಚಿತ್ರ ನಿರ್ಮಿಸಿದ್ದರು. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ತಕ್ಕಮಟ್ಟಿಗೆ ಗಳಿಕೆ ಮಾಡಿತ್ತು. ನಟ ದರ್ಶನ್‌ ಸೇರಿದಂತೆ ಅಭಿಷೇಕ್‌ ಆಪ್ತರೆಲ್ಲ ಈ ಸಿನಿಮಾದ ಪ್ರಚಾರಕ್ಕೆ ಕೈಜೋಡಿಸಿದ್ದರು.

ಇದೇ ಜೂನ್‌ ತಿಂಗಳಲ್ಲಿ ಕನ್ನಡ ನಟ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಅವರ ಫಸ್ಟ್‌ ಮ್ಯಾರೇಜ್‌ ಅನಿವರ್ಸರಿ ನಡೆದಿತ್ತು. ಮದುವೆಯಾದ ಒಂದು ವರ್ಷ ಕಳೆದ ಕೆಲವೇ ತಿಂಗಳಲ್ಲಿ ಸೀಮಂತ ಕಾರ್ಯಕ್ರಮದ ಸುದ್ದಿ ಹೊರಬಿದ್ದಿದೆ.

ಕನ್ನಡ ನಟ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಅವರ ಶುಭವಿವಾಹ ಜೂನ್‌ 5, 2023ರಂದು ಅದ್ಧೂರಿಯಾಗಿ ನಡೆದಿತ್ತು. ಜೂನ್‌ 7ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಿಸೆಪ್ಷನ್‌ ನಡೆದಿತ್ತು. ಅಭಿಷೇಕ್‌ ಅವರು ವಿದೇಶದಲ್ಲಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಅವಿವಾರನ್ನು ಲವ್‌ ಮಾಡಿದ್ದರು. ಬಳಿಕ ಕುಟುಂಬದ ಒಪ್ಪಿಗೆ ಪಡೆದು ವಿವಾಹವಾಗಿದ್ದರು.

ಅಭಿಷೇಕ್‌ ಅವರು 1992ರ ಅಕ್ಟೋಬರ್‌ 3ರಂದು ಜನಿಸಿದರು. 2019ರಲ್ಲಿ ಅಮರ್‌ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಅಮರ್‌ ಸಿನಿಮಾದಲ್ಲಿ ತಾನ್ಯ ಹೋಪ್‌ ನಾಯಕಿಯಾಗಿದ್ದರು. ಕಳೆದ ವರ್ಷ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾದಲ್ಲಿ ರುದ್ರನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು ಕಾಲಿ ಅನ್ನೋದು ಇವರ ಮುಂಬರುವ ಸಿನಿಮಾ.

ಅವಿವಾ ಬಿದ್ದಪ್ಪ ಬಗ್ಗೆ: ಇವರು ಜನಪ್ರಿಯ ಫ್ಯಾಷನ್‌ ಡಿಸೈನರ್‌. ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಓದಿದ ಬಳಿಕ ಲಂಡನ್‌ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಲಂಡನ್‌ ಅಕಾಡೆಮಿ ಆಫ್‌ ಮ್ಯೂಸಿಕ್‌ ಆಂಡ್‌ ಡ್ರಾಮ್ಯಾಟಿಕ ಆರ್ಟ್‌ಗೆ ಸೇರಿದ್ದರು. ಅಲ್ಲೇ ಇವರಿಗೆ ಅಭಿಷೇಕ್‌ ಅಂಬರೀಶ್‌ ಜತೆ ಲವ್‌ ಆಗಿತ್ತು.

ಇವರು ಪ್ರಸಾದ್‌ ಬಿದ್ದಪ್ಪ ಮಗಳು. ಫ್ಯಾಷನ್‌ ಇಂಡಸ್ಟ್ರಿಯಲ್ಲಿ ಪ್ರಸಾದ್‌ ಬಿದ್ದಪ್ಪ ಖ್ಯಾತ ವ್ಯಕ್ತಿ. ಇವರು ಕೋರಿಯೋಗ್ರಫರ್‌ ಆಗಿಯೂ ಜನಪ್ರಿಯತೆ ಪಡೆದಿದ್ದಾರೆ. ಅವಿವಾ ತಾಯಿ ಜುಡಿತ್‌ ಬಿದ್ದಪ್ಪ. ಅವಿವಾ ಸಹೋದರನ ಹೆಸರು ಆದಮ್‌ ಬಿದ್ದಪ್ಪ.