ಕನ್ನಡ ಸುದ್ದಿ  /  ಮನರಂಜನೆ  /  ಪತಿ ಸುಕು ಪೂರ್ವಜ್‌ ಜತೆ ನಟಿ ಜ್ಯೋತಿ ರೈ ದೇಗುಲ ದರ್ಶನ; ವೈರಲ್‌ ವಿಡಿಯೋ ಬೆನ್ನಲ್ಲೆ ತಿರುಪತಿ, ಕಾಳಹಸ್ತಿ ದೇಗುಲಕ್ಕೆ ಭೇಟಿ ನೀಡಿದ ದಂಪತಿ

ಪತಿ ಸುಕು ಪೂರ್ವಜ್‌ ಜತೆ ನಟಿ ಜ್ಯೋತಿ ರೈ ದೇಗುಲ ದರ್ಶನ; ವೈರಲ್‌ ವಿಡಿಯೋ ಬೆನ್ನಲ್ಲೆ ತಿರುಪತಿ, ಕಾಳಹಸ್ತಿ ದೇಗುಲಕ್ಕೆ ಭೇಟಿ ನೀಡಿದ ದಂಪತಿ

ಕನ್ನಡ, ತೆಲುಗು ಕಿರುತೆರೆ ನಟಿ ಜ್ಯೋತಿ ಪೂರ್ವಜ್‌ (ಜ್ಯೋತಿ ರೈ) ತನ್ನ ಪತಿ ಸುಕು ಪೂರ್ವಜ್‌ ಜತೆ ತಿರುಪತಿ ವೆಂಕಟೇಶ್ವರ ಮತ್ತು ಕಾಳಹಸ್ತಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಅಶ್ಲೀಲ ವಿಡಿಯೋ ವೈರಲ್‌ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದ ನಟಿ ದೇಗುಲ ದರ್ಶನ ಮಾಡಿದ ಫೋಟೋ, ವಿಡಿಯೋ ಹಂಚಿಕೊಂಡಿದ್ದಾರೆ.

ಪತಿ ಸುಕು ಪೂರ್ವಜ್‌ ಜತೆ ನಟಿ ಜ್ಯೋತಿ ರೈ ದೇಗುಲ ದರ್ಶನ
ಪತಿ ಸುಕು ಪೂರ್ವಜ್‌ ಜತೆ ನಟಿ ಜ್ಯೋತಿ ರೈ ದೇಗುಲ ದರ್ಶನ

ಬೆಂಗಳೂರು: ಕಸ್ತೂರಿ ನಿವಾಸ, ಮೂರು ಗಂಟು, ಕಿನ್ನರಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿರುವ ನಟಿ ಜ್ಯೋತಿ ರೈ ಇತ್ತೀಚೆಗೆ ಅಶ್ಲೀಲ ವೈರಲ್‌ ವಿಡಿಯೋ ವಿಚಾರಕ್ಕೆ ಸುದ್ದಿಯಲ್ಲಿದ್ದರು. ಇದೀಗ ಜ್ಯೋತಿ ರೈ ತಮ್ಮ ಪತಿ ಸುಕು ಪೂರ್ವಜ್‌ ಮೂಲಕ ತಿರುಪತಿ ವೆಂಕಟೇಶ್ವರ ಮತ್ತು ಕಾಳಹಸ್ತಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಪತಿ ಜತೆ ದೇಗುಲ ದರ್ಶನ ಮಾಡಿರುವ ಜ್ಯೋತಿ ಪೂರ್ವಜ್‌ ಈ ಮೂಲಕ ಹಬ್ಬಿರುವ ಸುದ್ದಿಗಳಿಗೆ ಮಾರುತ್ತರ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪತಿ ಸುಕು ಪೂರ್ವಜ್‌ ಜತೆ ನಟಿ ಜ್ಯೋತಿ ರೈ ದೇಗುಲ ದರ್ಶನ

ತಿರುಮಲ ತಿರುಪತಿ ಮತ್ತು ಶ್ರೀ ಕಾಳಹಸ್ತಿ ದೇಗುಲದಲ್ಲಿ ದೇವರ ದರ್ಶನ ಮಾಡಿದೆ. ಓಂ ನಮಃ ಶಿವಾಯ, ಓಂ ನಮೋ ವೆಂಕಟೇಶ್ವರ ಎಂದು ಜ್ಯೋತಿ ಪೂರ್ವಜ್‌ ಫೋಟೋ, ವಿಡಿಯೋಗಳಿಗೆ ಕ್ಯಾಪ್ಷನ್‌ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ಪೋಸ್ಟ್‌ಗೆ ಕಾಮೆಂಟ್‌ ಆಯ್ಕೆಯನ್ನು ಆಫ್‌ ಮಾಡಿಟ್ಟಿದ್ದಾರೆ. ಕಾರಿನಲ್ಲಿ ತಿರುಪತಿ ದೇಗುಲಕ್ಕೆ ಪ್ರಯಾಣಿಸುತ್ತಿರುವ ವಿಡಿಯೋ, ಗೋಶಾಲೆಯಲ್ಲಿ ಗೋವುಗಳಿಂದ ಆಶೀರ್ವಾದ ಪಡೆಯುವ ವಿಡಿಯೋ, ಜತೆಗೆ ಪತಿ ಸುಕು ಪೂರ್ವಜ್‌ ಮತ್ತು ತನ್ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಇನ್ನಷ್ಟು ಫೋಟೋ ಮತ್ತು ವಿಡಿಯೋಗಳನ್ನು ಜ್ಯೋತಿ ಪೂರ್ವಜ್‌ ಹಂಚಿಕೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ಕೆಲವು ಅಶ್ಲೀಲ ವಿಡಿಯೋಗೆ ಸಂಬಂಧಪಟ್ಟಂತೆ ಜ್ಯೋತಿ ಪೂರ್ವಜ್‌ ಸುದ್ದಿಯಲ್ಲಿದ್ದರು. ವೈರಲ್‌ ಆದ ವಿಡಿಯೋಗಳ ಕುರಿತು ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕೆಲವು ಹತಾಶ, ಕೆಲಸವಿಲ್ಲದ, ಅಶಿಕ್ಷಿತ ಟೈಂಪಾಸ್‌ ಚಿಲ್ಲರೆ ಫೆಲೋಗಳಿಗಾಗಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬೇರೊಂದು ವಿಡಿಯೋ ಪೋಸ್ಟ್‌ ಮಾಡಿದ್ದಾರೆ.

ಪದ್ಮಶ್ರೀ ಕಿನ್ನೇರ ಮೊಗಲಯ್ಯ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರೂ, ಆರ್ಥಿಕವಾಗಿ ದುರ್ಬಲರು. ಅವರ ಸಹಾಯಕ್ಕೆ ನಟಿ ಜ್ಯೋತಿ ರೈ ಸಾಥ್‌ ನೀಡಿದ್ದಾರೆ. ಬರೋಬ್ಬರಿ 50 ಸಾವಿರ ಹಣಕಾಸಿನ ಸಹಾಯ ಮಾಡಿದ್ದರು. ಈ ವಿಡಿಯೋ ಹಂಚಿಕೊಂಡು "ಈ ವಿಡಿಯೋ ವೈರಲ್‌ ಮಾಡುವ ಧೈರ್ಯ ನಿಮಗಿದೆಯೇ?" ಎಂದು ಸವಾಲು ಹಾಕಿದ್ದರು.

"ನಾನು ಒಂದಿಷ್ಟು ಸವಾಲಿನ ಸಮಯದಲ್ಲಿದ್ದೆ. ಈದೇ ಸಮಯದಲ್ಲಿ ಪದ್ಮಶ್ರೀ ಮೊಗಲಯ್ಯರ ಕಷ್ಟದ ಸ್ಥಿತಿ ತಿಳಿಯಿತು. ನನ್ನ ಮನಸ್ಸು ಅವರ ಕಷ್ಟಕ್ಕೆ ಕರಗಿತು. ಅವರನ್ನು ಮನೆಗೆ ಕರೆಸಿಕೊಂಡು, ಅವರಿಗೆ ಊಟೋಪಚಾರ ನೀಡಿ, ಅವರ ಕಲೆಗೆ ಬೆಂಬಲವಾಗಿ ನಿಂತು ನನಗೆ ಸಾಧ್ಯವಿರುವಷ್ಟುಸಹಾಯ ಮಾಡಿದ್ದೇನೆ. ನೀವೂ ಇವರ ಕಷ್ಟಕ್ಕೆ ಕೈ ಜೋಡಿಸಿ" ಎಂದು ಹೇಳಿದ್ದಾರೆ.

ಜ್ಯೋತಿ ಪೂರ್ವಜ್‌ ಅವರು ಜೋಗುಳ, ಕನ್ಯಾದಾನ, ಕಸ್ತೂರಿ ನಿವಾಸ, ಗೆಜ್ಜೆಪೂಜೆ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಎರಡನೇ ವಿವಾಹವಾಗಿದ್ದರು. ನಿರ್ದೇಶಖ ಸುಕು ಪೂರ್ಜರ್‌ರನ್ನು ವಿವಾಹವಾಗಿದ್ದರು. ಈ ಮೂಲಕ ಜ್ಯೋತಿ ರೈ ಆಗಿದ್ದವರು ಜ್ಯೋತಿ ಪೂರ್ವಜ್‌ ಆಗಿದ್ದರು.

IPL_Entry_Point