Rishab Shetty: ನನ್ನ ಫೇವರಿಟ್‌ ಹೀರೋಯಿನ್‌ ಇವ್ರು; ಕಾಂತಾರ ನಟ ರಿಷಬ್‌ ಶೆಟ್ಟಿ ಹೇಳಿಕೆಗೆ ನಕ್ಕ ರಶ್ಮಿಕಾ ಮಂದಣ್ಣ-sandalwood news kantara actor rishab shetty calls shriya saran his favourite actress cinema news in kannada pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Rishab Shetty: ನನ್ನ ಫೇವರಿಟ್‌ ಹೀರೋಯಿನ್‌ ಇವ್ರು; ಕಾಂತಾರ ನಟ ರಿಷಬ್‌ ಶೆಟ್ಟಿ ಹೇಳಿಕೆಗೆ ನಕ್ಕ ರಶ್ಮಿಕಾ ಮಂದಣ್ಣ

Rishab Shetty: ನನ್ನ ಫೇವರಿಟ್‌ ಹೀರೋಯಿನ್‌ ಇವ್ರು; ಕಾಂತಾರ ನಟ ರಿಷಬ್‌ ಶೆಟ್ಟಿ ಹೇಳಿಕೆಗೆ ನಕ್ಕ ರಶ್ಮಿಕಾ ಮಂದಣ್ಣ

Sandalwood News: ರಿಷಬ್‌ ಶೆಟ್ಟಿ ಸೈಮಾ ವೇದಿಕೆಯಲ್ಲಿ ತನ್ನ ಫೇವರಿಟ್‌ ಹೀರೋಯಿನ್‌ "ಶ್ರಿಯಾ ಶರಣ್" ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ತನ್ನ ಪತ್ನಿ ಪ್ರಗತಿಗೂ ಕಾಂತಾರ ನಟ ಥ್ಯಾಂಕ್ಸ್‌ ಹೇಳಿದ್ದಾರೆ.

ಕಾಂತಾರ ನಟ ರಿಷಬ್‌ ಶೆಟ್ಟಿ ಮತ್ತು ಶ್ರೀಯಾ ಶರಣ್‌
ಕಾಂತಾರ ನಟ ರಿಷಬ್‌ ಶೆಟ್ಟಿ ಮತ್ತು ಶ್ರೀಯಾ ಶರಣ್‌

ಬೆಂಗಳೂರು: ದುಬೈನಲ್ಲಿ ಇತ್ತೀಚೆಗೆ ನಡೆದ 2023ನೇ ಸೈಮಾ ಸಿನಿಮಾ ಪ್ರಶಸ್ತಿ ಸಮಾರಂಭಕ್ಕೆ ಸಂಬಂಧಪಟ್ಟಂತೆ ಹಲವು ಆಸಕ್ತಿದಾಯಕ ವಿಚಾರಗಳು ಈಗ ಬೆಳಕಿಗೆ ಬರುತ್ತಿವೆ. ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ ಹೇಳಿಕೆಯೊಂದು ಮತ್ತೆ ಮುನ್ನಲೆಗೆ ಬಂದಿದೆ. ಪ್ರಶಸ್ತಿ ಸಮಾರಂಭದಲ್ಲಿ ಕಾಂತಾರ ನಟ ರಿಷಬ್‌ ಶೆಟ್ಟಿಯು ತನ್ನ ಅಚ್ಚುಮೆಚ್ಚಿನ ನಟಿಯ ಕುರಿತು ಹೇಳಿದ್ದಾರೆ. ತನ್ನ ಪತ್ನಿ ಮುಂದೆಯೇ ಈ ವಿಚಾರವನ್ನು ಅವರು ಹೇಳಿದ್ದಾರೆ. ಇವರ ಫೇವರಿಟ್‌ ಹೀರೋಯಿನ್‌ ಯಾರು ಎಂದು ತಿಳಿದಾಗ ರಶ್ಮಿಕಾ ಮಂದಣ್ಣ ಅಚ್ಚರಿಯಿಂದ ನಕ್ಕಿದ್ದಾರೆ.

ರಿಷಬ್‌ ಶೆಟ್ಟಿ ಫೇವರಿಟ್‌ ಹೀರೋಯಿನ್‌

ರಿಷಬ್‌ ಶೆಟ್ಟಿ ಸೈಮಾ ವೇದಿಕೆಯಲ್ಲಿ ತನ್ನ ಫೇವರಿಟ್‌ ಹೀರೋಯಿನ್‌ "ಶ್ರಿಯಾ ಶರಣ್" ಎಂದು ಹೇಳಿದ್ದಾರೆ. "ಥ್ಯಾಂಕ್ಯು, ನನ್ನ ಅಪ್ಪ ಅಮ್ಮನಿಗೆ, ಅವರಿಗೆ ನನ್ನ ಮೇಲೆ ನಿಜಕ್ಕೂ ನಂಬಿಕೆ ಇರಲಿಲ್ಲ, ನಾನು ಸಿನಿಮಾ ಮಾಡ್ತಿನಿ ಅನ್ನೋ ನಂಬಿಕೆ ಅವರಿಗೆ ಇರಲಿಲ್ಲ. ಓದೋದನ್ನು ಬಿಟ್ಟು ಬೇರೆ ಏನೋ ಮಾಡ್ತಾ ಇದ್ದೀನಿ ಎಂದುಕೊಳ್ಳುತ್ತಿದ್ದರು. ಈಗ ಅವರಿಗೆ ಹೆಮ್ಮೆ ಅನಿಸಬಹುದು. ಈ ಪ್ರಶಸ್ತಿಯನ್ನು ಶ್ರೀಯಾ ಕೈಯಿಂದ ಪಡೆಯಲು ಬಹಳ ಖುಷಿಯಾಗುತ್ತಿದೆ. ನನ್ನ ಫೇವರಿಟ್‌ ಹೀರೋಯಿನ್‌ ಅವರು. ಥ್ಯಾಂಕ್ಯೂ" ಎಂದು ರಿಷಬ್‌ ಶೆಟ್ಟಿ ಹೇಳಿದಾಗ ಸಭೆಯಲ್ಲಿ ಜೋರಾದ ಚಪ್ಪಾಳೆ ಕೇಳಿಸುತ್ತದೆ. ಇದೇ ಸಂದರ್ಭದಲ್ಲಿ ಶ್ರೀಯಾ ಶರಣ್‌ ಅವರು ಖುಷಿಯಿಂದ ರಿಷಬ್‌ ಶೆಟ್ಟಿಯತ್ತ ಬರುತ್ತಾರೆ. ಈ ಸಂದರ್ಭದಲ್ಲಿ ಕಿರಿಕ್‌ ಪಾರ್ಟಿ ನಟಿ ರಶ್ಮಿಕಾ ಮಂದಣ್ಣರು ಅಚ್ಚರಿಯಿಂದ ಕಣ್ಣರಳಿಸುವ ದೃಶ್ಯವೂ ಈ ವಿಡಿಯೋ ಕ್ಲಿಪ್‌ನಲ್ಲಿದೆ.

ಪತ್ನಿ ಪ್ರಗತಿಗೆ ಧನ್ಯವಾದ ತಿಳಿಸಿದ ರಿಷಬ್‌ ಶೆಟ್ಟಿ

"ನನ್ನ ವೈಫ್‌ ಪ್ರಗತಿಗೂ ಧನ್ಯವಾದ. ನೀನು ನನ್ನ ಲೈಫ್‌ನಲ್ಲಿ ಬಂದ ಮೇಲೆ ಸಿನಿಮಾ ಯಶಸ್ಸಿನ ಜತೆ ಪ್ರಶಸ್ತಿಗಳು ಬರಲು ಆರಂಭವಾಗಿವೆ. ನಿನ್ನ ಲಕ್‌ ಇದೇ ರೀತಿ ಕಂಟಿನ್ಯೂ ಆಗಿ ಇನ್ನಷ್ಟು ಅವಾರ್ಡ್‌ ಬರಲಿ ಎಂದು ಹಾರೈಸುತ್ತೇನೆ" ಎಂದು ರಿಷಬ್‌ ಶೆಟ್ಟಿ ತನ್ನ ಪತ್ನಿಗೆ ಧನ್ಯವಾದ ಹೇಳಿದ್ದು ಕಾರ್ಯಕ್ರಮದಲ್ಲಿ ಹೃದಯಸ್ಪರ್ಶಿಯಾಗಿತ್ತು. ಸೈಮಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆದು ಹಲವು ದಿನ ಕಳೆದರೂ ಇದೀಗ ತನ್ನ ಫೇವರಿಟ್‌ ಹೀರೋಯಿನ್‌ ಕುರಿತು ರಿಷಬ್‌ ಶೆಟ್ಟಿ ಹೇಳಿರುವ ವಿಡಿಯೋ ವೈರಲ್‌ ಆಗುತ್ತಿದೆ.

ಶ್ರಿಯಾ ಶರಣ್ (11 ಸೆಪ್ಟೆಂಬರ್ 1982 ರಂದು ಶ್ರಿಯಾ ಶರಣ್ ಭಟ್ನಾಗರ್ ಎಂದು ಜನನ), ಶ್ರಿಯಾ , ಭಾರತೀಯ ನಟಿ ಮತ್ತು ರೂಪದರ್ಶಿಯಾಗಿದ್ದು, ದಕ್ಷಿಣ ಭಾರತೀಯ ಚಿತ್ರರಂಗ ಮತ್ತು ಅಮೇರಿಕನ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಡೆಹ್ರಾಡೂನ್ನಲ್ಲಿ ಜನಿಸಿದ ಮತ್ತು ಹರಿದ್ವಾರದಲ್ಲಿ ತನ್ನ ಬಾಲ್ಯದ ಬಹುಭಾಗವನ್ನು ಕಳೆದರು.ನಂತರ 2001 ರಲ್ಲಿ, ಅವಳ ನೃತ್ಯದ ಮಾಸ್ಟರ್ ಅವರು ರೆನು ನಾಥನ್ ಅವರ ಚೊಚ್ಚಲ ಸಂಗೀತ ವೀಡಿಯೋ "ತಿರ್ಕಿ ಕ್ಯುನ್ ಹವಾ" ದಲ್ಲಿ ಕಾಣಿಸಿಕೊಳ್ಳಲು ಅವಕಾಶವನ್ನು ನೀಡಿದರು, ಇದು ಸರನ್ ಅವರನ್ನು ಅನೇಕ ಭಾರತೀಯ ಚಿತ್ರ ನಿರ್ಮಾಪಕರ ಗಮನಕ್ಕೆ ತಂದಿತು.[೩]

ಶ್ರೀಯಾ ಶರಣ್‌ ಯಾರು?

ಶ್ರಿಯಾ ಶರಣ್ ಭಟ್ನಾಗರ್ ಉತ್ತರ ಭಾರತದ ಹರಿದ್ವಾರದಲ್ಲಿ 1982ರಲ್ಲಿ ಜನಿಸಿದರು. ಶ್ರೀಯಾ ಶರಣ್‌/ಸರಣ್‌ ಅವರು ಮೊದಲ ಬಾರಿಗೆ 2001ರಲ್ಲಿ ತೆಲುಗು ಚಿತ್ರ ಇಷ್ಟಮ್‌ನಲ್ಲಿ ನಟಿಟಿಸರು. 2002ರ ಸಂತೋಷಮ್‌ ಚಿತ್ರವೂ ಯಶಸ್ಸು ಪಡೆದಿದೆ. ಬಳಿಕ ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡರು. 2007ರಲ್ಲಿ ತಮಿಳಿನ ಶಿವಾಜಿ ಚಿತ್ರದಲ್ಲಿ ನಟಿಸಿದ್ದು, ಇವರ ಜನಪ್ರಿಯತೆ ಹೆಚ್ಚಿಸಿತ್ತು. ಬಾಲಿವುಡ್‌ನಲ್ಲಿ ಅವರಪಾನ್‌ ನಟನೆಗೆ ವಿಮರ್ಶಾತ್ಮಕ ಮೆಚ್ಚುಗೆಯೂ ದೊರಕಿತು. ದಿ ಅದರ್ ಎಂಡ್ ಆಫ್ ದಿ ಲೈನ್ ಎಂಬ ಇಂಗ್ಲಿಷ್‌ ಚಿತ್ರದಲ್ಲಿಯೂ ನಟಿಸಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನ ಆರಂಭದ ಎರಡು ಋತುಗಳಲ್ಲಿ ಇವರು ಬ್ರ್ಯಾಂಡ್‌ ರಾಯಭಾರಿಯಾಗಿದ್ದರು.

mysore-dasara_Entry_Point