48ರಲ್ಲಿ 25ರ ಲುಕ್‌!; ಅಭಿಷೇಕ್ ಬಚ್ಚನ್ ಥರದ ಹೇರ್‌ ಸ್ಟೈಲ್ ಬೇಕು ಅಂದ್ರೆ ಈ ಟಿಪ್ಸ್ ಫಾಲೊ ಮಾಡಿ-fashion actor abhishek bachchan rocks a new haircut a trendy transformation at 48 uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  48ರಲ್ಲಿ 25ರ ಲುಕ್‌!; ಅಭಿಷೇಕ್ ಬಚ್ಚನ್ ಥರದ ಹೇರ್‌ ಸ್ಟೈಲ್ ಬೇಕು ಅಂದ್ರೆ ಈ ಟಿಪ್ಸ್ ಫಾಲೊ ಮಾಡಿ

48ರಲ್ಲಿ 25ರ ಲುಕ್‌!; ಅಭಿಷೇಕ್ ಬಚ್ಚನ್ ಥರದ ಹೇರ್‌ ಸ್ಟೈಲ್ ಬೇಕು ಅಂದ್ರೆ ಈ ಟಿಪ್ಸ್ ಫಾಲೊ ಮಾಡಿ

ಸಿನಿಮಾ ನಟ, ನಟಿಯರ ಫ್ಯಾಷನ್ ಅನುಕರಣೆ ಮಾಡುವವರು ಅನೇಕರು. ಹೇರ್‌ಸ್ಟೈಲ್ ಜಗತ್ತಿನಲ್ಲಿ ಸದ್ಯ ಸದ್ದು ಮಾಡುತ್ತಿರುವುದು ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹೇರ್‌ಸ್ಟೈಲ್‌. 48ರಲ್ಲಿ 25ರ ಲುಕ್‌ ನೀಡುವ ಅಭಿಷೇಕ್ ಬಚ್ಚನ್ ಥರದ ಹೇರ್‌ ಸ್ಟೈಲ್ ಬೇಕು ಅನ್ನೋದಾದರೆ ಈ ವರದಿ ಗಮನಿಸಿ.

48ರಲ್ಲಿ 25ರ ಲುಕ್‌!; ಅಭಿಷೇಕ್ ಬಚ್ಚನ್ ಥರದ ಹೇರ್‌ ಸ್ಟೈಲ್
48ರಲ್ಲಿ 25ರ ಲುಕ್‌!; ಅಭಿಷೇಕ್ ಬಚ್ಚನ್ ಥರದ ಹೇರ್‌ ಸ್ಟೈಲ್ (aalimhakim)

ಕಾಲಚಕ್ರ ಉರುಳಿ ಹೋಗುತ್ತಿರುವಂತೆ ವಯಸ್ಸು ಜಾರಿ ಹೋದಂತೆ ನವತರುಣ, ನವತರುಣಿಯಂತೆ ಕಾಣುವುದು ಸುಲಭವಲ್ಲ. ಆದರೆ ಮೇಕಪ್‌, ಹೇರ್‌ಸ್ಟೈಲ್‌ಗಳು ಸುರಸುಂದರರನ್ನು, ಸುರ ಸುಂದರಿಯರನ್ನಾಗಿಸುತ್ತವೆ. ಇಷ್ಟೆಲ್ಲ ಪೀಠಿಕೆ ಯಾಕೆ ಅಂತೀರಾ, ನಟ ಅಭಿಷೇಕ್ ಬಚ್ಚನ್ ಅವರ ಸ್ಟೈಲಿಶ್ ಹೇರ್ ಕಟ್ ಫೋಟೋ ವೈರಲ್ ಆಗಿದೆ.

ವಾವ್‌ ! 48ರಲ್ಲಿ 25ರ ಲುಕ್‌ ! ಎಂಥವರೂ ಒಮ್ಮೆ ಮರುಳಾಗಿಬಿಡಬೇಕು. ಇಂಥ ಹೇರ್‌ಸ್ಟೈಲ್ ಬೇಕು ಅನ್ನಿಸಿಬಿಡಬೇಕು ಹಾಗಿದೆ ಅವರ ಹೊಸ ಹೇರ್‌ಸ್ಟೈಲ್ ಮತ್ತು ಲುಕ್‌. ಸ್ಟೈಲಿಶ್ ಹೇರ್‌ಕಟ್‌ ಮೂಲಕ ಅಭಿಷೇಕ್ ಬಚ್ಚನ್ ಅವರ ವಯಸ್ಸು ಏನಿಲ್ಲ ಎಂದರೂ ಒಂದಿಪ್ಪತ್ತು ವರ್ಷ ಕಡಿಮೆಯಾದಂತೆ ಕಾಣಿಸ್ತಿರೋದು ಮಾತ್ರ ನಿಜ.

ನಿಮಗೆ ನೀವು ವಿಶೇಷವಾಗಿ ಕಾಣಬೇಕು ಎಂದು ಬಯಸುವುದಾದರೆ, ಈ ರೀತಿ ಸಿಂಪಲ್ ಹೇರ್‌ ಕಟ್‌ ಅನ್ನು ನೀವು ಕೂಡ ಪ್ರಯತ್ನಿಸಬಹುದು. ಸಿಂಪಲ್ ಆದ ಹೇರ್ ಕಟ್‌ ಕೂಡ ವ್ಯಕ್ತಿಯ ನೋಟವನ್ನು ಹೇಗೆ ಬದಲಾಯಿಸಬಲ್ಲದು ಎಂಬುದನ್ನು ಅಭಿಷೇಕ್ ಬಚ್ಚನ್ ಅವರ ಹೊಸ ಲುಕ್‌ನ ಫೋಟೋ ಸಾಕ್ಷಿ.

ಅಭಿಷೇಕ್ ಬಚ್ಚನ್ ಹೊಸ್ ಲುಕ್‌ನ ತೆರೆಮರೆ ಕಥೆ

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೀಮ್ ಹಕೀಮ್ ಅವರು ಅಭಿಷೇಕ್ ಬಚ್ಚನ್ ಅವರ ಹೊಸ ಹೇರ್ ಕಟ್ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸ್ಟೈಲಿಶ್ ಆಗಿ ಪಫ್ಡ್ ಫ್ರಂಟ್ ಸ್ಟೈಲ್ ಮತ್ತು ಅಚ್ಚುಕಟ್ಟಾಗಿ ಟ್ರಿಮ್ ಮಾಡಿದ ಬದಿಗಳೊಂದಿಗೆ ನಯವಾದ ಕಟ್ ಹೊಂದಿರುವ ಅಭಿಷೇಕ್ ಅವರ ಹೊಸ ಹೇರ್‌ ಸ್ಟೈಲ್‌ ಅವರಿಗೆ ಹೊಸ ಲುಕ್ ನೀಡಿದೆ.

ಅಚ್ಚುಕಟ್ಟಾಗಿ ಅಂದ ಮಾಡಿಕೊಂಡ ಗಡ್ಡದಿಂದಾಗಿ ಅವರು ತುಂಬಾ ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆ. ಇನ್ನು ಕಿವಿಗಳ ಮೇಲೆ ಕಪ್ಪು ಸ್ಟಡ್‌ಗಳು ಫ್ಯಾಷನ್‌ಗೆ ಮತ್ತೊಂದು ವ್ಯಾಖ್ಯಾನ ನೀಡಿದೆ.

ಈ ಲುಕ್‌ನಲ್ಲಿ ಅಭಿಷೇಕ್ ಟರ್ಟಲ್ ನೆಕ್ ಬ್ಲೂ ಕಲರ್ ಡ್ರೆಸ್ ಧರಿಸಿದ್ದು, ತುಂಬಾ ಸುಂದರ ಮತ್ತು ಲಕ್ಷಣವಾಗಿ ಕಾಣಿಸುತ್ತಿದ್ದಾರೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

ಅಭಿಮಾನಿಗಳ ಪ್ರತಿಕ್ರಿಯೆ ಹೀಗಿತ್ತು

ಆಲಿಮ್ ಹಕೀಮ್ ಅವರ ಪೋಸ್ಟ್‌ 1.25 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದ್ದು, 600 ಆಸುಪಾಸು ಕಾಮೆಂಟ್‌ಗಳನ್ನು ಗಿಟ್ಟಿಸಿಕೊಂಡಿದೆ.

"ವಾವ್ವ್ವ್! ಇದು ಅವರು ನೋಡಿದ ಅತ್ಯುತ್ತಮವಾಗಿದೆ!" ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು, “ಈ ನೋಟ ಬಹಳ ಇಷ್ಟವಾಯಿತು ಮಿಸ್ಟರ್‌” ಎಂದು ಬರೆದುಕೊಂಡಿದ್ದಾರೆ.

ಇನ್ನು ಕೆಲವು ಅಭಿಮಾನಿಗಳು ತಮಾಷೆಯಾಗಿ, "ಇದು ಧೂಮ್ 4 ಗಾಗಿ" ಎಂದು ಕಾಲೆಳೆದಿದ್ದಾರೆ. ಆದರೆ ಇತರರು "ಲುಕಿಂಗ್ ಕಿಲ್ಲರ್" ಎಂದು ಅವರ ಸ್ಟೈಲ್ ಅನ್ನು ಹೊಗಳಿದ್ಧಾರೆ. ಅನೇಕ ಅಭಿಮಾನಿಗಳು ಬೆಂಕಿ ಮತ್ತು ಹೃದಯದ ಎಮೋಜಿಗಳನ್ನು ಬೀಳಿಸುವ ಮೂಲಕ ತಮ್ಮ ಅನುಮೋದನೆಯನ್ನು ವ್ಯಕ್ತಪಡಿಸಿರುವುದು ಕಂಡುಬಂದಿದೆ. ಅನೇಕರು ಆಲಿಮ್ ಹಕೀಮ್ ಅವರ ಕೆಲಸವನ್ನು ಶ್ಲಾಘಿಸಿದ್ದಾರೆ.

ಅಭಿಷೇಕ್ ಬಚ್ಚನ್ ಅವರು ಬಾಲಿವುಡ್‌ನ ಜನಪ್ರಿಯ ನಟ. ಬಾಲಿವುಡ್‌ನ ದಂತಕಥೆ ಬಿಗ್‌ ಬಿ ಎಂದೇ ಖ್ಯಾತರಾದ ಅಮಿತಾಭ್‌ ಬಚ್ಚನ್ ಮತ್ತು ನಟಿ ಜಯಾ ಬಚ್ಚನ್ ದಂಪತಿಯ ಪುತ್ರ. 1976ರ ಫೆ.5ರಂದು ಜನಿಸಿದರು. 2000 ರಲ್ಲಿ ರೆಫ್ಯೂಜಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಧೂಮ್, ಗುರು, ಬಂಟಿ ಔರ್ ಬಬ್ಲಿ, ಕಭಿ ಅಲ್ವಿದಾ ನಾ ಕೆಹನಾ, ಪಾ ಮುಂತಾದ ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿ ಪ್ರತಿಭಾನ್ವಿತ ನಟರಾಗಿ ಗುರುತಿಸಿಕೊಂಡರು.

ಅಭಿಷೇಕ್ ಬಚ್ಚನ್ ಅವರು ಸದ್ಯ, ಅಕ್ಷಯ್ ಕುಮಾರ್, ಅನಿಲ್ ಕಪೂರ್, ನಾನಾ ಪಾಟೇಕರ್, ರಿತೇಶ್ ದೇಶಮುಖ್ ಮತ್ತು ಚಂಕಿ ಪಾಂಡೆ ಮುಂತಾದ ಪ್ರಸಿದ್ಧ ತಾರಾಗಣದಲ್ಲಿ ತಯಾರಾಗುತ್ತಿರುವ ಹೌಸ್ ಫುಲ್ 5 ನಲ್ಲಿ ನಟಿಸುತ್ತಿದ್ದಾರೆ.

mysore-dasara_Entry_Point