‘ಪ್ಲೀಸ್‌ ನಮ್‌ ಬಾಸ್‌ ಮರ್ಯಾದೆ ತೆಗೀಬೇಡಿ ಮೇಡಂ’; ಪುನೀತ್‌ ರಾಜ್‌ಕುಮಾರ್‌ ಪುತ್ರಿ ಧೃತಿ ಬಳಿ ಅಂಗಲಾಚಿದ ಫ್ಯಾನ್ಸ್‌, ಹೀಗಿದೆ ಕಾರಣ-sandalwood news puneeth rajkumar daughter drithi rajkumar shares latest photos on instagram appu fans reacts mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ಪ್ಲೀಸ್‌ ನಮ್‌ ಬಾಸ್‌ ಮರ್ಯಾದೆ ತೆಗೀಬೇಡಿ ಮೇಡಂ’; ಪುನೀತ್‌ ರಾಜ್‌ಕುಮಾರ್‌ ಪುತ್ರಿ ಧೃತಿ ಬಳಿ ಅಂಗಲಾಚಿದ ಫ್ಯಾನ್ಸ್‌, ಹೀಗಿದೆ ಕಾರಣ

‘ಪ್ಲೀಸ್‌ ನಮ್‌ ಬಾಸ್‌ ಮರ್ಯಾದೆ ತೆಗೀಬೇಡಿ ಮೇಡಂ’; ಪುನೀತ್‌ ರಾಜ್‌ಕುಮಾರ್‌ ಪುತ್ರಿ ಧೃತಿ ಬಳಿ ಅಂಗಲಾಚಿದ ಫ್ಯಾನ್ಸ್‌, ಹೀಗಿದೆ ಕಾರಣ

Drithi Rajkumar: ಪುನೀತ್‌ ರಾಜ್‌ಕುಮಾರ್‌ ಹಿರಿ ಮಗಳು ಧೃತಿ ರಾಜ್‌ಕುಮಾರ್‌ ಹಂಚಿಕೊಂಡ ಹೊಸ ಫೋಟೋಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಕೆಲವರು ಇಂಥ ಫೋಟೋಗಳನ್ನು ಶೇರ್‌ ಮಾಡಬೇಡಿ. ನಮ್ಮ ಬಾಸ್‌ ಮರ್ಯಾದೆ ತೆಗೀಬೇಡಿ ಎಂದೂ ಬೇಡಿಕೊಳ್ಳುತ್ತಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಧೃತಿ ರಾಜ್‌ಕುಮಾರ್‌ ಹಂಚಿಕೊಂಡ ಫೋಟೋ ಡಿಲಿಟ್‌ ಮಾಡುವಂತೆ ಅಪ್ಪು ಫ್ಯಾನ್ಸ್‌ ಮನವಿ
ಸೋಷಿಯಲ್‌ ಮೀಡಿಯಾದಲ್ಲಿ ಧೃತಿ ರಾಜ್‌ಕುಮಾರ್‌ ಹಂಚಿಕೊಂಡ ಫೋಟೋ ಡಿಲಿಟ್‌ ಮಾಡುವಂತೆ ಅಪ್ಪು ಫ್ಯಾನ್ಸ್‌ ಮನವಿ (Instagram Drithi Rajkumar)

Puneeth Rajkumar Daughter Drithi Rajkumar: ಸ್ಯಾಂಡಲ್‌ವುಡ್‌ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಇಲ್ಲವಾಗಿ ಕೆಲ ವರ್ಷಗಳೇ ಕಳೆದಿವೆ. ಆದರೂ, ಇಂದಿಗೂ ಅವರ ಅಭಿಮಾನಿಗಳು ಅಪ್ಪು ಸ್ಮರಣೆಯಲ್ಲಿದ್ದಾರೆ. ಪುನೀತ್‌ ಅವರ ಸಿನಿಮಾಗಳು, ಹಾಡುಗಳು, ಅವರ ಡೈಲಾಗ್‌ಗಳ ಮೂಲಕ ಸದಾ ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಅದರಲ್ಲೂ ಸೋಷಿಯಲ್‌ ಮೀಡಿಯಾದಲ್ಲಿ ಇಂದಿಗೂ ಪುನೀತ್‌ ಅವರ ಫ್ಯಾನ್ಸ್ ಕ್ರೇಜ್‌ ಕಡಿಮೆ ಆಗಿಲ್ಲ. ಕರ್ನಾಟಕ ರತ್ನ ಕಣ್ಮರೆಯಾದರೂ, ಅವರನ್ನು ಎತ್ತಿ ಮೆರೆಸುತ್ತಿದ್ದಾರೆ ಅವರ ಫ್ಯಾನ್ಸ್‌. ದೊಡ್ಮನೆ ಮೇಲೆ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತವರ ಮಕ್ಕಳ ಮೇಲೆಯೂ ಅಷ್ಟೇ ಗೌರವ ಇಟ್ಟುಕೊಂಡಿದ್ದಾರೆ ಅಪ್ಪು ಅಭಿಮಾನಿಗಳು. ಈ ನಡುವೆ ಪುನೀತ್‌ ಪುತ್ರಿ ಧೃತಿ ರಾಜ್‌ಕುಮಾರ್‌ ಅವರ ಹೊಸ ಫೋಟೋವೊಂದು ಫ್ಯಾನ್ಸ್‌ಗಳ ಬೇಸರಕ್ಕೆ ಕಾರಣವಾಗಿದೆ.

ಪುನೀತ್‌ ರಾಜ್‌ಕುಮಾರ್‌ಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬರು ಧೃತಿ ಮತ್ತೊಬ್ಬರು ವಂದನಾ. ಅಪ್ಪ ದೊಡ್ಡ ಸ್ಟಾರ್‌ ಆಗಿದ್ದರೂ, ಸಾರ್ವಜನಿಕವಾಗಿ ಈ ಇಬ್ಬರು ಹೆಣ್ಣು ಮಕ್ಕಳು ಕಾಣಿಸಿಕೊಳ್ಳುವುದೇ ಅಪರೂಪ. ಅಪ್ಪ ಪುನೀತ್‌ ರಾಜ್‌ಕುಮಾರ್‌ ನಿಧನದ ಬಳಿಕವಂತೂ ಎಲ್ಲದರಿಂದಲೂ ದೂರವೇ ಉಳಿದಿದ್ದ ಧೃತಿ ಮತ್ತು ವಂದಿತಾ, ವಿದ್ಯಾಭ್ಯಾಸದಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಇದ್ದರೂ, ಸಕ್ರಿಯರಿರುವುದು ತೀರಾ ಕಡಿಮೆ. ಆಗೊಂದು ಈಗೊಂದು ಪೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ ಧೃತಿ. ಇದೀಗ ಧೃತಿ ಶೇರ್‌ ಮಾಡಿರುವ ಎರಡು ಫೋಟೋಗಳಿಗೆ ಅಪ್ಪು ಫ್ಯಾನ್ಸ್‌ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಫೋಟೋ ಡಿಲಿಟ್‌ ಮಾಡಲು ಮನವಿ..

ಪುನೀತ್‌ ರಾಜ್‌ಕುಮಾರ್‌ ಮತ್ತು ಅಶ್ವಿನಿ ದಂಪತಿಯ ಹಿರಿಯ ಮಗಳು ಧೃತಿ, ಸದ್ಯ ನ್ಯೂಯಾರ್ಕ್‌ನಲ್ಲಿದ್ದಾರೆ. ಅಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಆಗೊಂದು ಈಗೊಂದು ಫೋಟೋ ಶೇರ್‌ ಮಾಡುತ್ತಿರುತ್ತಾರೆ. ಇದೀಗ ಸೆಲ್ಫಿ ಪೋಸ್‌ ನೀಡಿದ ಭಂಗಿಯಲ್ಲಿ ಎರಡು ಫೋಟೋಗಳನ್ನು ಶೇರ್‌ ಮಾಡುತ್ತಿದ್ದಂತೆ, ನೆಟ್ಟಿಗ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾದರೆ, ಇನ್ನು ಕೆಲವರು ದಯವಿಟ್ಟು ಫೋಟೋ ಡಿಲಿಟ್‌ ಮಾಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

ಧೃತಿ ಫೋಟೋಗಳಿಗೆ ನೆಟ್ಟಿಗರ ಕಾಮೆಂಟ್‌

ತುಂಡು ಉಡುಗೆಯಲ್ಲಿ ಸೆಲ್ಫಿ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಧೃತಿ ಶೇರ್‌ ಮಾಡಿದ್ದಾರೆ. ಅದಕ್ಕೆ ಸಾಕಷ್ಟು ಮಂದಿ ಬಗೆಬಗೆ ರೀತಿಯ ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಬಹುತೇಕರು, ಪುನೀತ್‌ ಅವರನ್ನೇ ನೋಡಿದ ಹಾಗಾಯ್ತು ಎಂದು ಕಾಮೆಂಟ್‌ ಮಾಡಿದರೆ, ನಾವು ಅಪ್ಪು sir ನಾ ನಿಮ್ಮಲ್ಲಿ ಕಾಣುತ್ತಿದ್ದೇವೆ... ಅವರನ್ನು ಅವರಿಚ್ಛೇಯಂತೆ ಇರಲು ಬಿಡಿ.. ಲವ್‌ಲೀ ಸಿಸ್ಟರ್‌.. ಲುಕ್ಕಿಂಗ್‌ ಬ್ಯೂಟಿಫುಲ್‌ ಎಂಬಂಥ ಕಾಮೆಂಟ್‌ಗಳೇ ಹೆಚ್ಚಾಗಿವೆ.

ಮೆಚ್ಚುಗೆ ಜತೆಗೆ ಫ್ಯಾನ್ಸ್‌ ಕಳಕಳ

ಇನ್ನು ಕೆಲವರು, ದಯವಿಟ್ಟು ಇಂಥ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಬೇಡಿ ಮೇಡಂ ಎಂದು ಬೇಡಿಕೊಂಡಿದ್ದಾರೆ. ಪೋಸ್ಟ್‌ನ ಡಿಲಿಟ್‌ ಮಾಡಿ, ನಾನು ನಿಮ್ಮಪ್ಪನ ಫ್ಯಾನ್‌ ಎಂದರೆ, ಇನ್ನು ಕೆಲವು ನೆಟ್ಟಿಗರು, ಮೇಡಂ ಫೋಟೋ ಆ ಥರ ಹಾಕ್ಬೇಡಿ. ಮೇಡಂ ನೀವು ನಮ್ ಬಾಸ್ ಮಗಳು ಮೇಡಮ್. ಇಡೀ ಸ್ಟೇಟ್ ಅಲ್ಲಿ ಒಂದು ಬೆಲೆ ಇದೆ ಮೇಡಂ ಪ್ಲೀಸ್ ಮೇಡಂ ಪ್ಲೀಸ್ ಫೋಟೋನ ಡಿಲೀಟ್ ಮಾಡಿ ಮೇಡಂ. ನಮ್ ಬಾಸ್ ಗೆ ಹೇಗೆ ಗೌರವ ಕೊಡ್ತೀವೋ, ನಾವು ಹಾಗೆ ನಿಮಗೂ ನಿಮ್ಮ ಫ್ಯಾಮಿಲಿಗೂ ಅಷ್ಟೇ ಗೌರವ ಇದೆ ಮೇಡಂ ಎಂದು ಅಂಗಲಾಚಿದ್ದಾರೆ.

mysore-dasara_Entry_Point