ಕಾಂತಾರ ಚಾಪ್ಟರ್‌ 1 ಸಿನಿಮಾದ 4ನೇ ಹಂತದ ಶೂಟಿಂಗ್‌ ಶೆಡ್ಯೂಲ್‌ ಮುಂದಿನ ವಾರ ಆರಂಭ, ಸಾಹಸ ದೃಶ್ಯಗಳಿಗೆ ರಿಷಬ್‌ ಶೆಟ್ಟಿ ರೆಡಿ-sandalwood news rishab shetty kantara chapter 1 shooting 4th schedule next week august action packed scenes pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕಾಂತಾರ ಚಾಪ್ಟರ್‌ 1 ಸಿನಿಮಾದ 4ನೇ ಹಂತದ ಶೂಟಿಂಗ್‌ ಶೆಡ್ಯೂಲ್‌ ಮುಂದಿನ ವಾರ ಆರಂಭ, ಸಾಹಸ ದೃಶ್ಯಗಳಿಗೆ ರಿಷಬ್‌ ಶೆಟ್ಟಿ ರೆಡಿ

ಕಾಂತಾರ ಚಾಪ್ಟರ್‌ 1 ಸಿನಿಮಾದ 4ನೇ ಹಂತದ ಶೂಟಿಂಗ್‌ ಶೆಡ್ಯೂಲ್‌ ಮುಂದಿನ ವಾರ ಆರಂಭ, ಸಾಹಸ ದೃಶ್ಯಗಳಿಗೆ ರಿಷಬ್‌ ಶೆಟ್ಟಿ ರೆಡಿ

Kantara Chapter 1 ಸಿನಿಮಾದ ನಾಲ್ಕನೇ ಹಂತದ ಶೂಟಿಂಗ್‌ ಶೆಡ್ಯೂಲ್‌ ಈ ಆಗಸ್ಟ್‌ ತಿಂಗಳ ಕೊನೆಯವಾರದಲ್ಲಿ ಆರಂಭವಾಗಲಿದೆ ಎಂದು ಪಿಂಕ್‌ವಿಲ್ಲಾ ವರದಿ ಮಾಡಿದೆ. ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಫ್ರೀಕ್ವೆಲ್‌ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಕಾಂತಾರ ಚಾಪ್ಟರ್‌ 1 ಸಿನಿಮಾದ 4ನೇ ಹಂತದ ಶೂಟಿಂಗ್‌ ಶೆಡ್ಯೂಲ್‌ ಮುಂದಿನ ವಾರ ಆರಂಭ
ಕಾಂತಾರ ಚಾಪ್ಟರ್‌ 1 ಸಿನಿಮಾದ 4ನೇ ಹಂತದ ಶೂಟಿಂಗ್‌ ಶೆಡ್ಯೂಲ್‌ ಮುಂದಿನ ವಾರ ಆರಂಭ

ಬೆಂಗಳೂರು: ರಿಷಬ್‌ ಶೆಟ್ಟಿ ನಟನೆಯ ಕಾಂತಾರ ಚಾಪ್ಟರ್‌ 1 ಶೂಟಿಂಗ್‌ನ ನಾಲ್ಕನೇ ಹಂತ ಮುಂದಿನ ವಾರದಿಂದ ಆರಂಭವಾಗಲಿದೆ ಎಂದು ವರದಿಗಳು ತಿಳಿಸಿವೆ. ಕರಾವಳಿ ದೈವಗಳ ಕಥೆ ಹೊಂದಿರುವ ಈ ಸಿನಿಮಾದ ನಾಲ್ಕನೇ ಹಂತದಲ್ಲಿ ಆಕ್ಷನ್‌ ದೃಶ್ಯಗಳ ಶೂಟಿಂಗ್‌ ಹೆಚ್ಚಿರಲಿದೆ ಎನ್ನಲಾಗುತ್ತಿದೆ. ರಿಷಬ್‌ ಶೆಟ್ಟಿ ಟೀಮ್‌ ಕಡೆಯಿಂದ ಈ ಕುರಿತು ಯಾವುದೇ ಅಧಿಕೃತ ಅಪ್‌ಡೇಟ್‌ ಬಂದಿಲ್ಲ. ಆದರೆ, ಕೆಲವು ವರದಿಗಳ ಪ್ರಕಾರ ನಾಲ್ಕನೇ ಹಂತದ ಶೂಟಿಂಗ್‌ ಶೆಡ್ಯೂಲ್‌ನಲ್ಲಿ ಆಕ್ಷನ್‌ ಪ್ಯಾಕ್ಡ್‌ ದೃಶ್ಯಗಳ ಚಿತ್ರೀಕರಣ ಹೆಚ್ಚಿರಲಿದೆಯಂತೆ.

ಕಾಂತಾರ ಚಾಪ್ಟರ್‌ 1ರಲ್ಲಿ ದೊಡ್ಡಮಟ್ಟದ ಸಾಹಸ ದೃಶ್ಯಗಳ ಶೂಟಿಂಗ್‌ ಬಾಕಿಯದಿದೆ. ಇದಕ್ಕಾಗಿ ದೊಡ್ಡಮಟ್ಟದ ಪ್ರೊಡಕ್ಷನ್‌ ಕೆಲಸಗಳು ಇರಲಿವೆ. ಇತ್ತೀಚೆಗೆ ರಿಷಬ್‌ ಶೆಟ್ಟಿ ಕಲರಿ ಪಯಟ್ಟು ಕಲಿಯುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ತನ್ನ ಅಭಿಮಾನಿಗಳಿಗೆ ಕಾಂತಾರ ಚಾಪ್ಟರ್‌ 1ರ ಮೂಲಕ ಅದ್ಭುತ ಅನುಭವ ನೀಡಲು ರಿಷಬ್‌ ಶೆಟ್ಟಿ ಪ್ರಯತ್ನಿಸುತ್ತಿದ್ದಾರೆ. ಈ ಬಾರಿ ನಿರೀಕ್ಷೆ ಅತಿಯಾಗಿರುವುದರಿಂದ ಚಾಪ್ಟರ್‌ 1ನ್ನು ಅದ್ಭುತವಾಗಿಸಲು ಶತಾಯಗತಾಯ ಚಿತ್ರತಂಡ ಪ್ರಯತ್ನಿಸುತ್ತಿದೆ.

ಕೆಲವು ವಾರಗಳ ಕಾಲ ಕರ್ನಾಟಕದ ವಿವಿಧೆಡೆ ಭಾರಿ ಮಳೆಯಾಗಿತ್ತು. ಕುಂದಾಪುರ ಭಾಗದಲ್ಲೂ ಮಳೆ ಹೆಚ್ಚಿತ್ತು. ಈ ಸಮಯದಲ್ಲಿ ರಿಷಬ್‌ ಶೆಟ್ಟಿ ಕಾಂತಾರ ಚಿತ್ರೀಕರಣವನ್ನು ಸ್ವಲ್ಪದಿನ ಸ್ಥಗಿತಗೊಳಿಸಿದ್ದರು. ಕಲರಿಪಟ್ಟು ಕಲಿಯುವ ಮೂಲಕ ರಿಷಬ್‌ ಶೆಟ್ಟಿ ಮುಂದಿನ ಸಾಹಸಮಯ ದೃಶ್ಯಗಳಿಗೆ ರೆಡಿಯಾಗುತ್ತಿದ್ದಾರೆ.

ಕಳೆದ ವರ್ಷವೇ ರಿಷಬ್‌ ಶೆಟ್ಟಿ ಕ್ಯಾರೆಕ್ಟರ್‌ ಕುರಿತು ಸಣ್ಣ ಗ್ಲಿಂಪ್ಸ್‌ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ರಿಷಬ್‌ ಶೆಟ್ಟಿ ಅವರು ಭಯಾನಕ ಅವತಾರದಲ್ಲಿ ಕಾಣಿಸಿಕೊಂಡಿದ್ದರು.

ಇತ್ತೀಚೆಗೆ ರಿಷಬ್‌ ಶೆಟ್ಟಿಗೆ ಕಾಂತಾರ ಸಿನಿಮಾದ ನಟನೆಗೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ದೊರಕಿತ್ತು. ಇದಾದ ಬಳಿಕ ಮಾಧ್ಯಮಗಳೊಂದಿಗೆ ರಿಷಬ್‌ ಶೆಟ್ಟಿ ಮಾತನಾಡಿ ಖುಷಿ ವ್ಯಕ್ತಪಡಿಸಿದ್ದರು. "ಈ ಪ್ರಶಸ್ತಿ ದೊರಕಿರುವುದಕ್ಕೆ ಖುಷಿಯಾಗಿದೆ. ಈ ಪ್ರಶಸ್ತಿಯನ್ನು ನನ್ನ ಚಿತ್ರತಂಡದ ಎಲ್ಲಾ ಸದಸ್ಯರಿಗೂ ಅರ್ಪಿಸುತ್ತೇನೆ. ಕಲಾವಿದರು, ಟೆಕ್ನಿಷಿಯನ್‌, ಹೊಂಬಾಳೆ ಫಿಲ್ಮ್ಸ್‌ ಸೇರಿದಂತೆ ಕಾಂತಾರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ" ಎಂದು ಅವರು ಹೇಳಿದ್ದಾರೆ.

"ಈ ಪ್ರಶಸ್ತಿಯು ನನಗೆ ಜವಾಬ್ದಾರಿ ಹೆಚ್ಚಿಸಿದೆ. ನಮ್ಮ ಸಿನಿಮಾ ಪ್ರೇಕ್ಷಕರಿಗೆ ಇನ್ನೂ ಅತ್ಯುತ್ತಮ ಸಿನಿಮಾ ನೀಡಲು ಪ್ರಯತ್ನಿಸುವೆ. ಇನ್ನಷ್ಟು ಕಠಿಣ ಪರಿಶ್ರಮದ ಮೂಲಕ ಪ್ರೇಕ್ಷಕರಿಗೆ ಅತ್ಯುತ್ತಮ ಸಿನಿಮಾ ಅನುಭವ ನೀಡಲು ಪ್ರಯತ್ನಿಸುವೆ. ಈ ಪ್ರಶಸ್ತಿಯನ್ನು ಕನ್ನಡ ವೀಕ್ಷಕರಿಗೆ, ದೈವ ನರ್ತಕರಿಗೆ, ಅಪ್ಪು ಸರ್‌ಗೆ ಅರ್ಪಿಸಲು ಬಯಸುವೆ" ಎಂದು ಅವರು ಹೇಳಿದ್ದರು.

ಇತ್ತೀಚೆಗೆ ಕಾಂತಾರ ನಟ ರಿಷಬ್‌ ಶೆಟ್ಟಿ ಕಳರಿ ಪಟ್ಟು ಆಕ್ಷನ್‌ನಲ್ಲಿರುವ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಈ ಮೂಲಕ ಕಾಂತಾರ ಚಾಪ್ಟರ್‌ 1 ಸಿನಿಮಾದ ಯುದ್ಧದ ದೃಶ್ಯದ ಶೂಟಿಂಗ್‌ಗೆ ರೆಡಿಯಾಗುತ್ತಿರುವ ಸೂಚನೆ ನೀಡಿದ್ದರು.