Jama Movie OTT: ಇದು ಕಾಲಿವುಡ್‌ನ ಕಾಂತಾರ, ಒಟಿಟಿಗೆ ಬಂತು ಜಮಾ; ಐಎಂಡಿಬಿಯಲ್ಲಿ 9.4 ರೇಟಿಂಗ್‌ ಪಡೆದ ಸಿನಿಮಾ-ott news tamil jama movie released in amazon prime video is it kollywood kantara movie watch now pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Jama Movie Ott: ಇದು ಕಾಲಿವುಡ್‌ನ ಕಾಂತಾರ, ಒಟಿಟಿಗೆ ಬಂತು ಜಮಾ; ಐಎಂಡಿಬಿಯಲ್ಲಿ 9.4 ರೇಟಿಂಗ್‌ ಪಡೆದ ಸಿನಿಮಾ

Jama Movie OTT: ಇದು ಕಾಲಿವುಡ್‌ನ ಕಾಂತಾರ, ಒಟಿಟಿಗೆ ಬಂತು ಜಮಾ; ಐಎಂಡಿಬಿಯಲ್ಲಿ 9.4 ರೇಟಿಂಗ್‌ ಪಡೆದ ಸಿನಿಮಾ

Tamil OTT Movie Jama: ಕಾಂತಾರ ಸಿನಿಮಾ ನೆನಪಿಸುವಂತಹ ತಮಿಳು ಚಲನಚಿತ್ರ ಜಾಮಾ ಅಮೆಜಾನ್‌ ಪ್ರೈಮ್‌ ವಿಡಿಯೋ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಇಪ್ಪತ್ತು ದಿನಗಳಲ್ಲಿ, ಈ ಥ್ರಿಲ್ಲರ್ ನಾಟಕದ ಚಲನಚಿತ್ರವು ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಚಿತ್ರಕ್ಕೆ ಐಎಂಡಿಬಿಯಲ್ಲಿ 9.4 ರೇಟಿಂಗ್ ದೊರಕಿದೆ.

Jama Movie OTT: ಒಟಿಟಿಯಲ್ಲಿ ಬಿಡುಗಡೆಗೊಂಡ ಜಮಾ ಸಿನಿಮಾ
Jama Movie OTT: ಒಟಿಟಿಯಲ್ಲಿ ಬಿಡುಗಡೆಗೊಂಡ ಜಮಾ ಸಿನಿಮಾ

ಬೆಂಗಳೂರು: ಒಂದು ಊರಿನ ಸಂಸ್ಕೃತಿ, ಕಲೆ, ಧಾರ್ಮಿಕ ಆಚಾರ ವಿಚಾರಗಳನ್ನು ಸಾರುವ ಕಾಂತಾರ ಸಿನಿಮಾ ದೇಶ-ವಿದೇಶಗಳಲ್ಲಿ ಪಡೆದ ಖ್ಯಾತಿ ಈಗ ಇತಿಹಾಸ. ಇದೇ ರೀತಿಯ ಸಿನಿಮಾವೊಂದು ಪಕ್ಕದ ತಮಿಳುನಾಡಿನಲ್ಲಿ ಇತ್ತೀಚೆಗೆ ರಿಲೀಸ್‌ ಆಗಿತ್ತು. ಜಮಾ ಎಂಬ ಸಿನಿಮಾವನ್ನು ಕಾಲಿವುಡ್‌ನ ಕಾಂತಾರವೆಂದೇ ಕರೆಯಲಾಗುತ್ತಿದೆ. ಈ ಸಿನಿಮಾ ಈಗ ಒಟಿಟಿಗೆ ಆಗಮಿಸಿದೆ. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಜಮಾ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ.

ಜಮಾವು ತಮಿಳುನಾಡಿನ ಅತ್ಯಂತ ಹಲೆಯ ಜನಪದ ಕಲೆಯದಾ ತೆರುಕುಟುವಿನ ಹಿನ್ನೆಲೆಯನ್ನು ಹೊಂದಿದೆ. ಭಾರತೀಯ ಪುರಾಣಗಳ ಜೊತೆಗೆ, ತಮಿಳು ದಂತಕಥೆಗಳು ಮತ್ತು ಇತಿಹಾಸವನ್ನು ಕಲಾವಿದರು ತೇರುಕುಟ್ಟು ಎಂಬ ಕಲಾ ಪ್ರಕಾರದ ಮೂಲಕ ಹೇಳುತ್ತಾರೆ. ಅಳಿವಿನಂಚಿನಲ್ಲಿರುವ ಈ ಕಲೆ ಮತ್ತು ಕಲಾವಿದರ ದುಸ್ಥಿತಿಯ ನೈಜ ಚಿತ್ರಣವನ್ನು ಈ ಸಿನಿಮಾ ನೀಡಿದೆ. ಹಲವು ಪ್ರಶಸ್ತಿಗಳನ್ನು ಈ ಸಿನಿಮಾ ಪಡೆದಿದೆ.

ಹೀರೋ ಕಮ್ ನಿರ್ದೇಶಕ

ಈ ಸಿನಿಮಾದ ಹೀರೋ ಮತ್ತು ನಿರ್ದೇಶಕ ಒಬ್ಬರೇ. ಕಾಂತಾರ ಸಿನಿಮಾವನ್ನು ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದರು. ಅದೇ ರೀತಿ ಜಮಾ ಸಿನಿಮಾದಲ್ಲಿ ಪಾರಿ ಎಳವಜಗನ್ ನಾಯಕನಾಗಿ ನಟಿಸಿದ್ದಾರೆ. ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಯಕ ಮತ್ತು ನಿರ್ದೇಶಕರಾಗಿ ಇದು ಅವರ ಮೊದಲ ಸಿನಿಮಾ ಎಂಬುದು ಗಮನಾರ್ಹ. ಈ ಚಿತ್ರದಲ್ಲಿ ಅಮ್ಮು ಅಭಿರಾಮಿ ಮತ್ತು ಚೇತನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಡ್ರಾಮಾ ಸಿನಿಮಾದಲ್ಲಿ ನಿಜವಾದ ತೇರುಕುಟ್ಟು ಕಲಾವಿದರು ಕೂಡ ನಟಿಸಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಈ ಕಿರುಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇಳಯರಾಜ ಅವರ ಹಾಡುಗಳು ಮತ್ತು ಬಿಜಿಎಂ ಈ ಸಿನಿಮಾದ ಪ್ರಮುಖ ಆಕರ್ಷಣೆ.

ಇಪ್ಪತ್ತು ದಿನಗಳಲ್ಲಿ ಒಟಿಟಿಗೆ ಆಗಮನ

ಆಗಸ್ಟ್ 2 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಜಮಾ ಚಿತ್ರ ಕೇವಲ ಇಪ್ಪತ್ತು ದಿನಗಳಲ್ಲಿ ಒಟಿಟಿಗೆ ಆಗಮನಿಸಿದೆ. ಥಿಯೇಟರ್‌ಗಳಲ್ಲಿ ಕಾಂತಾರದಂತೆ ಬ್ಲಾಕ್‌ ಬ್ಲಸ್ಟರ್‌ ಸಿನಿಮಾವಾಗಿ ಹೊರಹೊಮ್ಮಲಿಲ್ಲ. ಕಥೆ, ಚಿತ್ರಕತೆ ಮತ್ತು ಟೇಕಿಂಗ್ ವಿಷಯದಲ್ಲಿ ಪ್ರಶಂಸೆಗಳನ್ನು ಪಡೆದಿದ್ದರೂ, ವಾಣಿಜ್ಯಿಕವಾಗಿ ಜಮಾ ಸಿನಿಮಾ ಫೇಮಸ್‌ ಆಗಲಿಲ್ಲ. ಬೀದಿ ನಾಟಕಗಳೊಂದಿಗೆ ಕಲಾತ್ಮಕ ಚಿತ್ರದಂತೆ ಕಥೆ ನಿಧಾನವಾಗಿ ಸಾಗುವುದು ಚಿತ್ರದ ಮೈನಸ್ ಪಾಯಿಂಟ್‌. ಹೊಸ ನಟರ ಉಪಸ್ಥಿತಿಯೂ ಕಲೆಕ್ಷನ್ ಕಡಿಮೆಯಾಗಲು ಕಾರಣವಾಗಿದೆ. ಆದರೆ ಕೆಲವರು ಜಾಮ ಚಿತ್ರವನ್ನು ಕಾಂತಾರ ಜೊತೆ ಹೋಲಿಸಿದ್ದಾರೆ. ಇದು ನೋಡಲೇಬೇಕಾದ ಸಿನಿಮಾ ಎನ್ನುತ್ತಾರೆ. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿರುವ ಈ ಸಿನಿಮಾ ನೋಡಿ ಕಾಂತಾರದಂತೆ ಇರುವುದೇ ಎಂದು ಪರಿಶೀಲಿಸಬಹುದು.

ಜಮಾ ಸಿನಿಮಾದ ಕಥೆ

ಕಲ್ಯಾಣಂ ಅವರ ತಂದೆ ತೇರುಕುಟ್ಟು ಕಲೆಯಲ್ಲಿ ಬಹಳ ಖ್ಯಾತಿ ಗಳಿಸುತ್ತಾರೆ. ಕಲ್ಯಾಣಂ ತನ್ನ ತಂದೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಾನೆ. ರಾಮಚಂದ್ರ ಅವರು ಕಲಾವಿದರಾಗಿ ನಾಟಕ ಸಭೆ ಸೇರುತ್ತಾರೆ. ಈ ತಂಡ ಪ್ರದರ್ಶಿಸುವ ನಾಟಕಗಳಲ್ಲಿ ಕಲ್ಯಾಣಂ ಅವರು ಸ್ತ್ರೀಪಾತ್ರಗಳನ್ನು ನಿರ್ವಹಿಸುತ್ತಾರೆ. ಈ ಹೆಣ್ಣಿನ ವೇಷ ಧರಿಸುವ ಕಾರಣ ಈತ ಹುಡುಗಿಯಂತೆ ಇರುತ್ತಾನೆ. ಇದರಿಂದ ಈತನನ್ನು ಮದುವೆಯಾಗಲು ಯಾರೂ ದೊರಕುವುದಿಲ್ಲ. ಈತನಿಗೆ ಪ್ರೀತಿ ದೊರಕುವುದೇ? ತನ್ನ ತಂದೆಯ ಹೆಸರು ಉಳಿಸುವಂತಹ ಕೆಲಸ ಮಾಡುವನೇ ಎನ್ನುವುದು ಸಿನಿಮಾದ ಕಥೆ.

ಜಮಾ ಸಿನಿಮಾದ ಟ್ರೇಲರ್‌ ನೋಡಿ

ಈ ಚಿತ್ರಕ್ಕೆ ಐಎಂಡಿಬಿಯಲ್ಲಿ 9.4 ರೇಟಿಂಗ್ ಸಿಕ್ಕಿರುವುದು ಗಮನಾರ್ಹ. ಆಗಸ್ಟ್‌ನಲ್ಲಿ ಬಿಡುಗಡೆಯಾದ ಚಲನಚಿತ್ರಗಳಲ್ಲಿ ಜಮಾಗೆ ಐಎಂಡಿಬಿಯಲ್ಲಿ ಅತ್ಯಧಿಕ ರೇಟಿಂಗ್‌ ದೊರಕಿದೆ.