Chola Teaser: ಚೋಳ ಸಿನಿಮಾ ಮೂಲಕ ಚಂದನವನಕ್ಕೆ ಉತ್ತರ ಕರ್ನಾಟಕದ ಮತ್ತೊಬ್ಬ ನಾಯಕನ ಎಂಟ್ರಿ
ಕನ್ನಡ ಸುದ್ದಿ  /  ಮನರಂಜನೆ  /  Chola Teaser: ಚೋಳ ಸಿನಿಮಾ ಮೂಲಕ ಚಂದನವನಕ್ಕೆ ಉತ್ತರ ಕರ್ನಾಟಕದ ಮತ್ತೊಬ್ಬ ನಾಯಕನ ಎಂಟ್ರಿ

Chola Teaser: ಚೋಳ ಸಿನಿಮಾ ಮೂಲಕ ಚಂದನವನಕ್ಕೆ ಉತ್ತರ ಕರ್ನಾಟಕದ ಮತ್ತೊಬ್ಬ ನಾಯಕನ ಎಂಟ್ರಿ

ಈ ಹಿಂದೆ ಯರ್ರಾಬಿರ್ರಿ ಅನ್ನೋ ಸಿನಿಮಾ ಮೂಲಕ ಚಂದನವನಕ್ಕೆ ಬಂದಿದ್ದ ನಟ ರಂಜನ್‌, ಇದೀಗ ಚೋಳ ಚಿತ್ರದೊಂದಿಗೆ ಮಾಸ್‌ ಅವತಾರದಲ್ಲಿ ಆಗಮಿಸಿದ್ದಾರೆ. ಈ ಸಿನಿಮಾದ ಟೀಸರ್‌ ರಿಲೀಸ್‌ ಆಗಿದ್ದು, ಶೀಘ್ರದಲ್ಲಿ ತೆರೆಗೆ ಬರುವ ಸೂಚನೆ ನೀಡಿದೆ ಚಿತ್ರತಂಡ.

Chola Teaser: ಚೋಳ ಸಿನಿಮಾ ಮೂಲಕ ಚಂದನವನಕ್ಕೆ ಉತ್ತರ ಕರ್ನಾಟಕದ ಮತ್ತೊಬ್ಬ ನಾಯಕನ ಎಂಟ್ರಿ
Chola Teaser: ಚೋಳ ಸಿನಿಮಾ ಮೂಲಕ ಚಂದನವನಕ್ಕೆ ಉತ್ತರ ಕರ್ನಾಟಕದ ಮತ್ತೊಬ್ಬ ನಾಯಕನ ಎಂಟ್ರಿ

Chola Teaser: ಉತ್ತರ ಕರ್ನಾಟಕ ಮೂಲದ ಸಿನಿಮಾ ತಂಡವೀಗ ಚೋಳ ಚಿತ್ರದ ಮೂಲಕ ಚಿತ್ರಮಂದಿರಕ್ಕೆ ಆಗಮಿಸುವ ಸನಿಹದಲ್ಲಿದೆ. ರೂರಲ್‌ ಸ್ಟಾರ್‌ ಎಂದೇ ಸಂಬೋಧಿಸಿಕೊಂಡ ಅಂಜನ್‌, ಚೋಳ ಹೆಸರಿನ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಇದೀಗ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆದುಕೊಂಡಿದೆ. ಈ ಮೊದಲು ಇದೇ ಅಂಜನ್ ಯರ್ರಾಬಿರ್ರಿ‌ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ಚೋಳ ಅವರ ಎರಡನೇ ಸಿನಿಮಾ.

ಸುರೇಶ್ ಡಿ.ಎಂ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೋಳ ಸಿನಿಮಾ ನೀವಂದುಕೊಂಡಂತೆ ಐತಿಹಾಸಿಕ ಚಿತ್ರವಲ್ಲ. ಪಕ್ಕ ಕಮರ್ಷಿಯಲ್‌ ಅಂಶಗಳನ್ನಿಟ್ಟುಕೊಂಡು ನಿರ್ಮಾಣ ಮಾಡಿರುವ ಸಿನಿಮಾ. ಹಾಗಾದರೆ ಈ ಚೋಳ ಶೀರ್ಷಿಕೆಯ ಹಿನ್ನೆಲೆ ಏನು? ಇದನ್ನು ಸಿನಿಮಾದಲ್ಲಿಯೇ ನೋಡಿ ಎಂಬುದು ನಿರ್ದೇಶಕರ ಮಾತು.

ಸೃಷ್ಟಿ ಎಂಟರ್‍ಪ್ರೈಸಸ್ ಬ್ಯಾನರಿನಡಿಯಲ್ಲಿ ಸ್ವತಃ ನಿರ್ದೇಶಕ ಸುರೇಶ್ ಡಿ.ಎಂ ಅವರೇ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಪ್ರಯಾಣಿಕರ ಗಮನಕ್ಕೆ, ರಣಹೇಡಿ ಸಿನಿಮಾ ನಿರ್ಮಾಣ ಮಾಡಿದ್ದರು. ಇದೀಗ ವಿಭಿನ್ನ ಕಥಾನಕದೊಂದಿಗೆ ಚೋಳ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಇದರಲ್ಲಿ ಗ್ರಾಮೀಣ ಪ್ರತಿಭೆ ರೂರಲ್ ಸ್ಟಾರ್ ಅಂಜನ್‍ರನ್ನು ನಾಯಕನನ್ನಾಗಿಸುವ ಮೂಲಕ, ಅವರ ಕನಸುಗಳಿಗೆ ಜೊತೆಯಾಗಿದ್ದಾರೆ.

ಸುರೇಶ್ ಡಿ.ಎಂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಮಾಸ್‌ ಅಂಶಗಳನ್ನೂ ಕೊಂಚ ಹೇರಳವಾಗಿಯೇ ಬೆರೆಸಿದ್ದಾರೆ ನಿರ್ದೇಶಕರು. ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಸಾಹಸ ದೃಶ್ಯಗಳ ಹೂರಣವನ್ನೇ ನೀಡಿದ್ದಾರೆ. ಸೃಷ್ಟಿ ಎಂಟರ್‌ಪ್ರೈಸಿಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಚೋಳ ಸಿನಿಮಾದಲ್ಲಿ ಉತ್ತರ ಕರ್ನಾಟಕ ಭಾಗದ ಹಲವು ಕಲಾವಿದರು ನಟಿಸಿದ್ದಾರೆ.

ದಿಶಾ ಪಾಂಡೆ ಮತ್ತು ಪ್ರತಿಭ ನಾಯಕಿಯರಾಗಿದ್ದು, ದಿನೇಶ್ ಮಂಗಳೂರು ಮತ್ತು ಬಲ ರಾಜವಾಡಿ ಖಳನಾಯಕರಾಗಿದ್ದಾರೆ. ತುಳುವಿನಲ್ಲಿ ಸೂಪರ್ ಹಿಟ್ ಆಗಿರುವ, ರೂಪೇಶ್ ಶೆಟ್ಟಿ ನಿರ್ದೇಶನದ ಸರ್ಕಸ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಲಾಯ್ ವ್ಯಾಲೆಂಟೈನ್ ಸಲ್ಡಾನ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನಟ ವರ್ಧನ್, ಮಜಾ ಭಾರತ ಖ್ಯಾತಿಯ ಜಗಪ್ಪ, ಮಿಂಚು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಸಂದೀಪ್ ಹೊನ್ನಾಳ್ಳಿ ಛಾಯಾಗ್ರಹಣ, ಶಿವಕುಮಾರ್ ಎ. ಸಂಕಲನ ಈ ಚಿತ್ರಕ್ಕಿದೆ.

Whats_app_banner