ಶಿವರಾಜ್‌ ಕುಮಾರ್‌ ನಟನೆಯ ಭೈರತಿ ರಣಗಲ್‌ಗೆ ಕಾಯುತ್ತಿದ್ದವರಿಗೆ ನಾಳೆ ಗುಡ್‌ನ್ಯೂಸ್‌, ಬಡವರ ಬದುಕನು ಕಾಯಲು ನಿಂತ ಸಿಂಹ ಕೇಸರಿ ಬಾ-sandalwood news shivarajkumar bhairathi ranagal kannada movie title trach release date august 10 fans waiting ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಶಿವರಾಜ್‌ ಕುಮಾರ್‌ ನಟನೆಯ ಭೈರತಿ ರಣಗಲ್‌ಗೆ ಕಾಯುತ್ತಿದ್ದವರಿಗೆ ನಾಳೆ ಗುಡ್‌ನ್ಯೂಸ್‌, ಬಡವರ ಬದುಕನು ಕಾಯಲು ನಿಂತ ಸಿಂಹ ಕೇಸರಿ ಬಾ

ಶಿವರಾಜ್‌ ಕುಮಾರ್‌ ನಟನೆಯ ಭೈರತಿ ರಣಗಲ್‌ಗೆ ಕಾಯುತ್ತಿದ್ದವರಿಗೆ ನಾಳೆ ಗುಡ್‌ನ್ಯೂಸ್‌, ಬಡವರ ಬದುಕನು ಕಾಯಲು ನಿಂತ ಸಿಂಹ ಕೇಸರಿ ಬಾ

Bhairathi Ranagal: ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ನಟನೆಯ ಭೈರತಿ ರಣಗಲ್‌ ಸಿನಿಮಾದ ಬಿಡುಗಡೆಗೆ ಸಾಕಷ್ಟು ಸಿನಿಪ್ರೇಮಿಗಳು ಕಾಯುತ್ತಿರಬಹುದು. ಇದೀಗ ಚಿತ್ರತಂಡ ಶಿವಣ್ಣನ ಫ್ಯಾನ್ಸ್‌ಗೆ ಹೊಸ ಅಪ್‌ಡೇಟ್‌ ನೀಡಿದೆ. ಭೈರತಿ ರಣಗಲ್‌ ಸಿನಿಮಾದ ಟೈಟಲ್‌ ಸಾಂಗ್‌ ಆಗಸ್ಟ್‌ 10ರಂದು ರಿಲೀಸ್‌ ಮಾಡುವುದಾಗಿ ತಿಳಿಸಿದೆ.

ಶಿವರಾಜ್‌ ಕುಮಾರ್‌ ನಟನೆಯ ಭೈರತಿ ರಣಗಲ್‌ಗೆ ಕಾಯುತ್ತಿದ್ದವರಿಗೆ ನಾಳೆ ಗುಡ್‌ ನ್ಯೂಸ್‌
ಶಿವರಾಜ್‌ ಕುಮಾರ್‌ ನಟನೆಯ ಭೈರತಿ ರಣಗಲ್‌ಗೆ ಕಾಯುತ್ತಿದ್ದವರಿಗೆ ನಾಳೆ ಗುಡ್‌ ನ್ಯೂಸ್‌

ಬೆಂಗಳೂರು: ಭೈರತಿ ರಣಗಲ್‌ ಸಿನಿಮಾ ಬಿಡುಗಡೆಗೆ ಶಿವಣ್ಣನ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಸಿನಿಮಾದ ಕುರಿತು ಚಿತ್ರತಂಡ ಅಪ್‌ಡೇಟ್‌ವೊಂದನ್ನು ನೀಡಿದ್ದು, ಅಭಿಮಾನಿಗಳ ಕುತೂಹಲ ಕೆರಳಿದೆ. ನಾಳೆ ಅಂದ್ರೆ ಆಗಸ್ಟ್‌ 10ರಂದು ಶಿವರಾಜ್‌ ಕುಮಾರ್‌ ನಟನೆಯ ಭೈರತಿ ರಣಗಲ್‌ ಸಿನಿಮಾದ ಮೊದಲ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಲಿದೆ. ಬಡವರ ಬದುಕನು ಕಾಯಲು ನಿಂತ ಸಿಂಹ ಕೇಸರಿ ಬಾ ಎಂಬ ಹಾಡು ನಾಳೆ ರಿಲೀಸ್‌ ಆಗಲಿದೆ.

ಭೈರತಿ ರಣಗಲ್‌ ಸಿನಿಮಾದಲ್ಲಿ ಶಿವಣ್ಣ ಲಾಯರ್‌ ಪಾತ್ರದಲ್ಲಿ ನಟಿಸುವ ಸೂಚನೆಯನ್ನು ಚಿತ್ರತಂಡ ಈ ಹಿಂದೆಯೇ ನೀಡಿದೆ. ನಾಳೆ ಸಂಜೆ 5 ಗಂಟೆಗೆ ಈ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಲಿದೆ. ಈ ವರ್ಷ ಬಿಡುಗಡೆಯಾಗಲಿರುವ ಶಿವ ರಾಜ್‌ಕುಮಾರ್‌ ನಟನೆಯ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಭೈರತಿ ರಣಗಲ್‌ ಒಂದಾಗಿದೆ.

ಭೈರತಿ ರಣಗಲ್‌ ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಶಿವಣ್ಣನಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್‌ ನಟಿಸಿದ್ದಾರೆ. ಶಿವರಾಜ್‌ ಕುಮಾರ್‌ ನಟನೆಯ ಭೈರತಿ ಸಿನಿಮಾವು ಮಫ್ತಿ ಸಿನಿಮಾದ ಕಥೆಯ ತುಣುಕಿನ ಮುಂದುವರೆದ ಭಾಗವಾಗಿದೆ. ಇದು ಮಫ್ತಿಯ ಪ್ರೀಕ್ವೆಲ್‌ ಅಲ್ಲದೆ ಇದ್ದರೂ ಅಲ್ಲಿನ ಪಾತ್ರವೊಂದು ಮತ್ತೊಂದು ಸಿನಿಮಾವಾಗಿ ಹೊರಹೊಮ್ಮುತ್ತಿದೆ. ಮಫ್ತಿ ಸಿನಿಮಾದಲ್ಲಿ ಭೈರತಿ ರಣಗಲ್‌ನ ಸಣ್ಣಕಥೆಯನ್ನು ಇಲ್ಲಿ ಬೆಳೆಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

"ಈ ಹಿಂದೆ ಬಿಡುಗಡೆಯಾಗಿದ್ದ ಮಫ್ತಿ ಚಿತ್ರದಲ್ಲಿ ಭೈರತಿ ರಣಗಲ್‌ ಪಾತ್ರ ಗಟ್ಟಿಯಾಗಿತ್ತು. ಅದೊಂದು ತೂಕದ ಪತ್ರವಾಗಿತ್ತು. ಮಫ್ತಿಯಲ್ಲಿದ್ದ ಭೈರತಿ ಸಿನಿಪ್ರಿಯರಿಗೆ ಸಾಕಾಗಿರಲಿಲ್ಲ. ಈತನ ಹಿನ್ನೆಲೆಯ ಕಥೆ ಭೈರತಿ ರಣಗಲ್‌ನಲ್ಲಿ ಇರಲಿದೆ" ಎಂದು ಚಿತ್ರತಂಡ ಮಾಹಿತಿ ನೀಡಿದೆ. ಈ ಸಿನಿಮಾದಲ್ಲಿ ಶಿವಣ್ಣ ಲಾಯರ್‌ ಆಗಿರುತ್ತಾರೆ ಎಂಬ ಸುಳಿವು ಇತ್ತೀಚೆಗೆ ಬಿಡುಗಡೆ ಮಾಡಿದ ಪೋಸ್ಟರ್‌ನಲ್ಲಿ ದೊರಕಿದೆ. ಈ ಚಿತ್ರದ ಉದ್ದಕ್ಕೂ ಲಾಯರ್‌ ಆಗಿರ್ತಾರ? ಒಂದು ಸಂದರ್ಭದಲ್ಲಿ ಮಾತ್ರ ಲಾಯರ್‌ ಆಗಿ ವಾದ ಮಾಡ್ತಾರ ಎಂಬ ಕುತೂಹಲವೂ ಪ್ರೇಕ್ಷಕರಲ್ಲಿದೆ.

ಭೈರತಿ ರಣಗಲ್‌ ಸಿನಿಮಾದ ಜತೆಗೆ ಈ ವರ್ಷ ಉತ್ತರಕಾಂಡ ಎಂಬ ಸಿನಿಮಾವೂ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಶಿವರಾಜ್‌ ಕುಮಾರ್‌ ಮತ್ತು ಡಾಲಿ ಧನಂಜಯ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ., ಭಾವನಾ ಮೆನನ್‌, ಐಶ್ವರ್ಯ ರಾಜೇಶ್‌, ದಿಗಂತ್‌, ಚೈತ್ರಾ ಜೆ ಆಚಾರ್‌ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಮುಂದಿನ ವರ್ಷವೂ ಶಿವಣ್ಣ ನಟನೆಯ ಹಲವು ಸಿನಿಮಾಗಳು ರಿಲೀಸ್‌ ಆಗಲಿದೆ. ಸಪ್ತ ಸಾಗರದಾಚೆ ಎಲ್ಲೋ ನಿರ್ದೇಶಕ ಹೇಮಂತ್‌ ರಾವ್‌ ಈ ಸಿನಿಮಾಕ್ಕೆ ಡೈರೆಕ್ಷನ್‌ ಮಾಡಲಿದ್ದಾರೆ. ಇದು ಮುಂದಿನ ವರ್ಷ ರಿಲೀಸ್‌ ಆಗಲಿದೆ. ಈ ಸಿನಿಮಾದಲ್ಲಿ ಶಿವಣ್ಣ ಇದೇ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.