ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಮತ್ತೆ ತುಚ್ಛ ಹೇಳಿಕೆ, ವಿಜಯಲಕ್ಷ್ಮಿ ದರ್ಶನ್‌ ಬಗ್ಗೆಯೂ ಕೆಟ್ಟ ಪೋಸ್ಟ್‌, ಕ್ರಮಕ್ಕೆ ಆಗ್ರಹ-sandalwood news social media abuse words about ashwini puneeth rajkumar vijayalaxmi darshan non stop fans war pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಮತ್ತೆ ತುಚ್ಛ ಹೇಳಿಕೆ, ವಿಜಯಲಕ್ಷ್ಮಿ ದರ್ಶನ್‌ ಬಗ್ಗೆಯೂ ಕೆಟ್ಟ ಪೋಸ್ಟ್‌, ಕ್ರಮಕ್ಕೆ ಆಗ್ರಹ

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಮತ್ತೆ ತುಚ್ಛ ಹೇಳಿಕೆ, ವಿಜಯಲಕ್ಷ್ಮಿ ದರ್ಶನ್‌ ಬಗ್ಗೆಯೂ ಕೆಟ್ಟ ಪೋಸ್ಟ್‌, ಕ್ರಮಕ್ಕೆ ಆಗ್ರಹ

Social Media Abuse: ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ದೊರಕಿರುವ ಕುರಿತು ಚರ್ಚೆಗಳಾಗುತ್ತಿರುವ ಸಂದರ್ಭದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಮತ್ತೆ ಆನ್‌ಲೈನ್‌ ನಿಂದನೆ ಆರಂಭವಾಗಿದೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತು ವಿಜಯಲಕ್ಷ್ಮಿ ದರ್ಶನ್‌ ಕುರಿತು ತುಚ್ಛ ಪೋಸ್ಟ್‌ಗಳು ಆರಂಭವಾಗಿವೆ.

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತು ವಿಜಯಲಕ್ಷ್ಮಿ ದರ್ಶನ್‌
ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತು ವಿಜಯಲಕ್ಷ್ಮಿ ದರ್ಶನ್‌

ಬೆಂಗಳೂರು: ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಸೆಲೆಬ್ರಿಟಿಗಳ ಕುರಿತು ಆನ್‌ಲೈನ್‌ನಲ್ಲಿ ಅವಹೇಳನ, ನಿಂದನೆ ಮಾಡುವವರು ಇನ್ನೂ ಕಡಿಮೆಯಾಗಿಲ್ಲ. ದರ್ಶನ್‌ ಫ್ಯಾನ್‌ ಎಂದು ಹೇಳಿಕೊಂಡಿರುವ ಯೋಗೇಂದ್ರ ಪ್ರಸಾದ್‌ ಎಂಬಾತ ಎಕ್ಸ್‌ (ಟ್ವಿಟ್ಟರ್‌) ಖಾತೆಯಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಕುರಿತ ಕೆಟ್ಟದ್ದಾಗಿರುವ ಪೋಸ್ಟ್‌ ಹಂಚಿಕೊಂಡಿದ್ದಾನೆ. ಕೆಲವು ಡಿಬಾಸ್‌ ಅಭಿಮಾನಿ ಖಾತೆಗಳು ಈ ಪೋಸ್ಟ್‌ ಅನ್ನು ಹಂಚಿಕೊಂಡು ಸಂಭ್ರಮಿಸಿವೆ. ಇದಕ್ಕೆ ಪ್ರತಿಯಾಗಿ ಅಪ್ಪು ಅಭಿಮಾನಿ ಖಾತೆಯಿಂದಲೂ ವಿಜಯಲಕ್ಷ್ಮಿ ದರ್ಶನ್‌ರನ್ನು ಗುರಿಯಾಗಿಸಿ ಇಂತಹದ್ದೇ ಕೆಟ್ಟ ಪೋಸ್ಟ್‌ ಹಂಚಿಕೊಳ್ಳಲಾಗಿದೆ. ದಿವಂಗತ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಈ ಪೋಸ್ಟ್‌ ಕುರಿತು ಪೊಲೀಸರ ಗಮನ ಸೆಳೆದಿದ್ದಾರೆ. ಬೆಂಗಳೂರು ಪೊಲೀಸ್‌ ಟ್ವಿಟ್ಟರ್‌ ಖಾತೆಗೆ ಟ್ಯಾಗ್‌ ಮಾಡಿದ್ದಾರೆ. ಒಟ್ಟಾರೆ, ನಕಲಿ ಖಾತೆಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್‌ ವಾರ್‌ ಮುಂದುವರೆದಿದೆ. ಇಂತಹ ಪೋಸ್ಟ್‌ಗಳ ಮೂಲ ಹುಡುಕಿ ತಕ್ಷಣವೇ ಕ್ರಮಕೈಗೊಳ್ಳಬೇಕಿದೆ. 

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಕುರಿತು ತುಚ್ಛ ಪೋಸ್ಟ್‌

ಯೋಗೇಂದ್ರ ಪ್ರಸಾದ್‌ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಈ ರೀತಿ ಬರೆಯಲಾಗಿದೆ. "ಗಂಡ ಸತ್ತ ಮುಂ* Ashwini_PRKಗೆ ಬಾಳು ಕೊಡಲು ನಿರ್ಧರಿಸಿದ್ದೇನೆ. 29 October 2024 ರಂದು ನಾನು ವಿವಾಹವಾಗಲಿದ್ದೇನೆ. ದಯವಿಟ್ಟು ಅಪ್ಪು ಬಾಸ್ ಅಭಿಮಾನಿಗಳು ರಾಜವಂಶ ಅಭಿಮಾನಿಗಳು ಎಲರೂ ಬಂದು ಆಶೀರ್ವಾದ ಮಾಡಬೇಕು ಎಂದು ನಮ್ಮ ಸವಿನಯ ಆಮಂತ್ರಣ . ಸ್ಥಳ : ಶ್ರೀ ಕಂಠೀರವನಗರ ಸ್ಟುಡಿಯೋಸ್ , ನಾರ್ತ್ ವೆಸ್ಟ್ ಬೆಂಗಳೂರು" ಎಂದು ಪೋಸ್ಟ್‌ ಮಾಡಲಾಗಿದೆ.

 

ಈತನ ಖಾತೆಯ ಐಡಿ Harshaa_g ಎಂದಿದ್ದು, ಈತನ ಪ್ರೊಫೈಲ್‌ನಲ್ಲಿ "ರಾಜವಂಶದ ಅಭಿಮಾನಿ ಮತ್ತು ಚಿತ್ರನಟ ಹಾಗೂ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ ಬಿನ್ನಿಪೇಟೆ ಅಧ್ಯಕ್ಷ" ಎಂಬ ವಿವರ ಇದೆ. ರಾಜವಂಶದ ಅಭಿಮಾನಿ ಎಂದು ಬರೆದಿರುವ ಈತ ಈ ಪೋಸ್ಟ್‌ ಹಂಚಿಕೊಂಡಿರುವುದೇಕೆ? ಇದು ಬೇರೆ ಯಾರಾದರೂ ಹಂಚಿಕೊಂಡಿರುವ ಪೋಸ್ಟ್‌ ಆಗಿರಬಹುದೇ? ಈ ಫೋಟೋದಲ್ಲಿರುವ ವ್ಯಕ್ತಿ ಯಾರು ಎನ್ನುವ ಕುರಿತು ಇನ್ನೂ ಸ್ಪಷ್ಟ ಮಾಹಿತಿ ದೊರಕಿಲ್ಲ.

ಪೊಲೀಸರಿಗೆ ಟ್ಯಾಗ್‌ ಮಾಡಿದ ಅಪ್ಪು ಫ್ಯಾನ್ಸ್‌

ಈ ಪೋಸ್ಟ್‌ಗೆ ಅಪ್ಪು ಲೋಕಲ್‌ ಖಾತೆಯಿಂದ ತಕ್ಷಣ ರಿಪ್ಲೈ ದೊರಕಿದೆ. ಬೆಂಗಳೂರು ಸಿಟಿ ಪೊಲೀಸರಿಗೆ ಈ ಪೋಸ್ಟ್‌ ಅನ್ನು ಟ್ಯಾಗ್‌ ಮಾಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಆದರೆ, ಪೊಲೀಸರಿಂದ ಇನ್ನೂ ಪ್ರತಿಕ್ರಿಯೆ ದೊರಕಿಲ್ಲ. ನಿನ್ನೆ ರಾತ್ರಿ ಮಾಡಿರುವ ಪೋಸ್ಟ್‌ ಆಗಿರುವ ಕಾರಣ ಇಂದು ಪೊಲೀಸರು ಕ್ರಮಕೈಗೊಳ್ಳುವ ನಿರೀಕ್ಷೆಯಿದೆ.

ವಿಜಯಲಕ್ಷ್ಮಿ ದರ್ಶನ್‌ ವಿರುದ್ಧವೂ ಕೆಟ್ಟ ಪೋಸ್ಟ್‌

ಇದೇ ಸಮಯದಲ್ಲಿ ವಿಜಯಲಕ್ಷ್ಮಿ ವಿರುದ್ಧವೂ ಇದೇ ರೀತಿಯ ಪೋಸ್ಟ್‌ ಮಾಡಲಾಗಿದೆ. ವಿಜಯಲಕ್ಷ್ಮಿ ದರ್ಶನ್‌ ಫೋಟೋ ಜತೆ ಇನ್ನೊಬ್ಬರ ಫೋಟೋ ಹಂಚಿಕೊಂಡಿದ್ದಾನೆ.   ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ದೊರಕುತ್ತಿರುವ ಕುರಿತು ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಫ್ಯಾನ್‌ ವಾರ್‌ ಆರಂಭವಾಗುತ್ತಿದೆ.

 

ನಿಲ್ಲದ ಆನ್‌ಲೈನ್‌ ನಿಂದನೆ

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಈ ಹಿಂದೆಯೂ ಸೋಷಿಯಲ್‌ ಮೀಡಿಯಾದಲ್ಲಿ ನಿಂದನಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿತ್ತು. ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ಆಹ್ವಾನಿಸಿದ್ದಕ್ಕೆ ""ಶುಭ ಕಾರ್ಯಕ್ಕೆ ಮುತ್ತೈದೆಯರನ್ನು ಕರೆಯಬೇಕು. ಗಂಡ ಸತ್ತ ಮುಂ.. ಯರನ್ನು ಕರೀಬಾರದು. ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ಗೆ ಈ ಮುಂ...ಯನ್ನು ಕರೆದಿದ್ದಕ್ಕೆ ಎಲ್ಲ ಮ್ಯಾಚ್‌ ಸೋಲ್ತಾ ಇದ್ದಾರೆ" ಎಂದು ಗಜಪಡೆ ಸೋಷಿಯಲ್‌ ಮೀಡಿಯಾ ಖಾತೆಯಿಂದ ಪೋಸ್ಟ್‌ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಮತ್ತೆ ಇದೇ ರೀತಿಯ ಪೋಸ್ಟ್‌ಗಳು ಆರಂಭವಾಗುತ್ತಿರುವುದಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.