ಕನ್ನಡ ಸುದ್ದಿ  /  Entertainment  /  Sandalwood News Miscreants Who Used Bad Words About Producer Ashwini Puneeth Rajakumar Appu Fans Angry Mnk

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ತುಚ್ಯ ಪದ ಬಳಕೆ; ರೊಚ್ಚಿಗೆದ್ದ ಅಪ್ಪು ಫ್ಯಾನ್ಸ್‌ ಕಡೆಯಿಂದ ಕ್ಷಮೆಗೆ ಆಗ್ರಹ

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟ ಪದಗಳಲ್ಲಿ ನಿಂದಿಸಿದ ಪೋಸ್ಟ್‌ವೊಂದು ವೈರಲ್‌ ಆಗುತ್ತಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಅಪ್ಪು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಕೆಟ್ಟ ಪದ ಬಳಕೆ; ರೊಚ್ಚಿಗೆದ್ದ ಅಪ್ಪು ಫ್ಯಾನ್ಸ್‌ ಕಡೆಯಿಂದ ಕ್ಷಮೆಗೆ ಆಗ್ರಹ
ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಕೆಟ್ಟ ಪದ ಬಳಕೆ; ರೊಚ್ಚಿಗೆದ್ದ ಅಪ್ಪು ಫ್ಯಾನ್ಸ್‌ ಕಡೆಯಿಂದ ಕ್ಷಮೆಗೆ ಆಗ್ರಹ

Ashwini Puneeth Rajkumar: ಸೋಷಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್‌ ವಾರ್‌ ಈಗಿನದಲ್ಲ. ಆಗಾಗ ಒಂದಿಲ್ಲೊಂದು ವಿಚಾರಕ್ಕೆ ಫ್ಯಾನ್ಸ್‌ ವಾರ್‌ ನಡೆಯುತ್ತಲೇ ಇರುತ್ತದೆ. ಅದ್ಯಾವ ಮಟ್ಟಿಗೆ ಎಂದರೆ, ಜಗಳ, ಕಿತ್ತಾಟ ನಡೆದು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಉದಾಹರಣೆಗಳೂ ಇವೆ. ದರ್ಶನ್‌ ಫ್ಯಾನ್ಸ್‌ ಮತ್ತು ಸುದೀಪ್‌ ಫ್ಯಾನ್ಸ್‌, ದರ್ಶನ್‌ ಅಭಿಮಾನಿಗಳು ಮತ್ತು ಪುನೀತ್‌ ಅಭಿಮಾನಿಗಳ ನಡುವೆ ಆಗಾಗ ಜಾಲತಾಣದಲ್ಲಿ ಜಗಳ ನಡೆಯುತ್ತಿರುತ್ತದೆ. ಆ ವೇದಿಕೆಯಲ್ಲಿ ಯಾವುದೇ ಬೇಲಿ ಇಲ್ಲ ಎಂಬ ಕಾರಣಕ್ಕೆ ಮನಸಿಗೆ ಅನಿಸಿದ್ದನ್ನು ಹೇಳುತ್ತ, ನೆಚ್ಚಿನ ನಟನನ್ನು ಟೀಕಿಸಿದವರ ಮಾನ ಹಾನಿ ಮಾಡುವ ಕೆಲಸ ನಡೆಯುತ್ತಲೇ ಇದೆ. ಈಗ ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆಯೂ ಕೆಲ ಮಾನಹಾನಿ ಪೋಸ್ಟ್‌ಗಳು ವೈರಲ್‌ ಆಗಿವೆ.

ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಮತ್ತು ದರ್ಶನ್‌ ಅಭಿಮಾನಿಗಳ ನಡುವಿನ ಸೋಷಿಯಲ್‌ ಮೀಡಿಯಾ ವಾರ್‌, ದೊಡ್ಡ ಮಟ್ಟದಲ್ಲಿದೆ. ನೆಚ್ಚಿನ ನಟನ ಬಗ್ಗೆ ಏನಾದರು ಮಾತನಾಡಿದರೆ, ಎದುರಾಳಿ ನಟನನ್ನು ಕೆಟ್ಟದಾಗಿ ಬಿಂಬಿಸುವುದು ನಡೆಯುತ್ತಲೇ ಬಂದಿದೆ. ಈಗ ಇದೇ ಅದೇ ಕೆಲಸ ಮತ್ತೆ ಮುಂದುವರಿದಿದೆ. ದರ್ಶನ್‌ ಫ್ಯಾನ್‌ ಎಂದು ಹೇಳಿಕೊಳ್ಳುವ ಗಜಪಡೆ ಟ್ವಿಟರ್‌ ಖಾತೆಯಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆ ತುಚ್ಯ ಪದಗಳನ್ನು ಬಳಕೆ ಮಾಡಿ, ಪೋಸ್ಟ್‌ ಮಾಡಲಾಗಿದೆ. ಅಶ್ವಿನಿ ಅವರ ಬಗ್ಗೆ ಕೆಟ್ಟದಾಗಿ ಪೋಸ್ಟ್‌ ಮಾಡಲು ಕಾರಣವಾಗಿದ್ದು, ಐಪಿಎಲ್‌ನಲ್ಲಿ ಆರ್‌ಸಿಬಿಯ ಹೀನಾಯ ಸೋಲು!

ಹೌದು, ಇತ್ತೀಚೆಗಷ್ಟೇ ಐಪಿಎಲ್‌ ಶುರುವಾಗಿದೆ. ಅದಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬ್ಯಾಂಗಲೋರ್‌ ಇದ್ದ ಹೆಸರನ್ನು ಬದಲಾವಣೆ ಮಾಡಲು, ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ ಆಯೋಜನೆ ಮಾಡಿತ್ತು. ಆ ಕಾರ್ಯಕ್ರಮದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎಂದು ಹೆಸರನ್ನು ಬದಲಿಸಲಾಗಿತ್ತು. ವಿಶೇಷ ಏನೆಂದರೆ, ಆ ಇವೆಂಟ್‌ಗೆ ದೊಡ್ಮನೆಯಿಂದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸಹ ಅತಿಥಿಯಾಗಿ ತೆರಳಿದ್ದರು. ಹೀಗೆ ಆ ಇವೆಂಟ್‌ನ ಭಾಗವಾಗಿದ್ದೇ ತಡ, ಕೆಲ ಕಿಡಿಗೇಡಿಗಳು ಅಶ್ವಿನಿ ಅವರು ಬಂದಿದ್ದಕ್ಕೇ ಆರ್‌ಸಿಬಿ ಮ್ಯಾಚ್‌ ಸೋಲುತ್ತಿದೆ ಎಂಬ ಪೋಸ್ಟ್‌ ಇದೀಗ ವೈರಲ್‌ ಆಗಿದೆ.

ಅಷ್ಟಕ್ಕೂ ಆ ಪೋಸ್ಟ್‌ನಲ್ಲೇನಿದೆ?

@GAJAPADE6 ಹೆಸರಿನ ಟ್ವಿಟರ್‌ ಖಾತೆಯಿಂದ, "ಶುಭ ಕಾರ್ಯಕ್ಕೆ ಮುತ್ತೈದೆಯರನ್ನು ಕರೆಯಬೇಕು. ಗಂಡ ಸತ್ತ ಮುಂ.. ಯರನ್ನು ಕರೀಬಾರದು. ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ಗೆ ಈ ಮುಂ...ಯನ್ನು ಕರೆದಿದ್ದಕ್ಕೆ ಎಲ್ಲ ಮ್ಯಾಚ್‌ ಸೋಲ್ತಾ ಇದ್ದಾರೆ" ಎಂದು #Yuvarajkumar #PuneethRajkumar #Yuva #Dboss #DevilTheHero ಎಂಬ ಹ್ಯಾಷ್‌ಟ್ಯಾಗ್‌ ಹಾಕಿ ಪೋಸ್ಟ್‌ ಮಾಡಿದ್ದಾರೆ.

X ಖಾತೆಯೇ ಮಾಯ!

ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರೇ ಹೊಣೆ ಎಂದು ಟ್ವಿಟರ್‌ನಲ್ಲಿ ಈ ರೀತಿಯ ಪೋಸ್ಟ್‌ ಶೇರ್‌ ಮಾಡುತ್ತಿದ್ದಂತೆ, ಟೀಕೆಗೆ ಗುರಿಯಾಗಿದೆ. ಪೋಸ್ಟ್‌ ನೋಡಿದವರಿಂದಲೂ ವಿರೋಧ ವ್ಯಕ್ತವಾಗಿದೆ. ಆ ಕೂಡಲೇ, ಗಜಪಡೆ ಎಂದಿದ್ದ ಹೆಸರನ್ನು ಸುದೀಪ್‌ ಅಭಿಮಾನಿ ಎಂದು ಹೆಸರು ಬದಲಾಯಿಸಿ, ಮೂಲ ಪೋಸ್ಟ್‌ ಡಿಲಿಟ್‌ ಮಾಡಿ, ಸ್ಕ್ರೀನ್‌ ಶಾಟ್‌ ಅನ್ನೇ ತಿದ್ದುಪಡಿ ಮಾಡಿ ಎಲ್ಲೆಡೆ ವೈರಲ್‌ ಮಾಡಲಾಗಿದೆ ಎಂದು ಯುವ ಟ್ರೆಂಡ್ಸ್‌ ಅಸಲಿ ವಿಚಾರವನ್ನು ಪೋಸ್ಟ್‌ ಮಾಡಿಕೊಂಡಿದೆ. ಇದೀಗ ಗಜಪಡೆ ಹೆಸರಿನ ಖಾತೆಯೂ ನಿಷ್ಕ್ರೀಯಗೊಂಡಿದೆ.

ಕ್ಷಮೆಗೆ ಆಗ್ರಹಿಸಿದ ಅಪ್ಪು ಅಭಿಮಾನಿಗಳು

ಇನ್ನು ಈ ಪೋಸ್ಟ್‌ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆ, ವ್ಯಾಪಕ ಟೀಕೆಯ ಜತೆಗೆ ವಿರೋಧವೂ ವ್ಯಕ್ತವಾಗಿದೆ. ಅದರಲ್ಲೂ ದೊಡ್ಮನೆ ಮತ್ತು ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು, ಈ ಕೃತ್ಯ ಎಸಗಿದವರು ಈ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ನಟ ದರ್ಶನ್‌ ಅವರೂ ಈ ಕೂಡಲೇ ಮೀಡಿಯಾ ಮುಂದೆ ಬಂದು ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿ ಎಂದೂ ಫ್ಯಾನ್ಸ್‌ ಆಗ್ರಹಿಸುತ್ತಿದ್ದಾರೆ.

IPL_Entry_Point