ಕನ್ನಡ ಸುದ್ದಿ  /  ಮನರಂಜನೆ  /  Uttarakaanda: ಉತ್ತರಕಾಂಡ ಸಿನಿಮಾಕ್ಕೆ ನಟಿ ಐಶ್ವರ್ಯಾ ರಾಜೇಶ್‌ ಆಯ್ಕೆ; ಶಿವರಾಜ್‌ಕುಮಾರ್‌ - ಡಾಲಿ ಧನಂಜಯ್‌ಗೆ ದುರ್ಗಿ ಬಲ

Uttarakaanda: ಉತ್ತರಕಾಂಡ ಸಿನಿಮಾಕ್ಕೆ ನಟಿ ಐಶ್ವರ್ಯಾ ರಾಜೇಶ್‌ ಆಯ್ಕೆ; ಶಿವರಾಜ್‌ಕುಮಾರ್‌ - ಡಾಲಿ ಧನಂಜಯ್‌ಗೆ ದುರ್ಗಿ ಬಲ

Aishwarya Rajesh: ಡಾ. ಶಿವರಾಜ್‌ಕುಮಾರ್‌ ನಟನೆಯ ಉತ್ತರಕಾಂಡ ಸಿನಿಮಾಕ್ಕೆ ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯಾ ರಾಜೇಶ್‌ ಎಂಟ್ರಿ ನೀಡಿದ್ದಾರೆ. ಈ ಸಿನಿಮಾದಲ್ಲಿ ನಟ ರಾಕ್ಷಸ ಡಾಲಿ ಧನಂಜಯ್‌ ಕೂಡ ನಟಿಸುತ್ತಿದ್ದಾರೆ.

ನಟಿ ಐಶ್ವರ್ಯಾ ರಾಜೇಶ್‌
ನಟಿ ಐಶ್ವರ್ಯಾ ರಾಜೇಶ್‌

ಬೆಂಗಳೂರು: ಉತ್ತರಕಾಂಡ ಸಿನಿಮಾ ತಂಡದಿಂದ ಹೊಸ ಅಪ್‌ಡೇಟ್‌ ಬಂದಿದೆ. ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯ ರಾಜೇಶ್ ಉತ್ತರಕಾಂಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಉತ್ತರಕಾಂಡ ಒಂದು ಬಹು ನಿರೀಕ್ಷಿತ ಚಿತ್ರವಾಗಿದ್ದು, ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಮತ್ತು ನಟರಾಕ್ಷಸ ಡಾಲಿ‌ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಟಿ ಐಶ್ವರ್ಯ ಚಿತ್ರದಲ್ಲಿ ಧನಂಜಯ ಅವರ‌ ಜೋಡಿಯಾಗಿ "ದುರ್ಗಿ" ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ದಿ ಗ್ರೇಟ್ ಇಂಡಿಯನ್ ಕಿಚನ್", "ದಿ ವರ್ಲ್ಡ್ ಫೇಮಸ್ ಲವರ್", "ವಡಾ‌ ಚೆನ್ನೈ", "ಕಾಕ ಮುತ್ತೈ" (ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ), ಜೋಮೋಂಟೇ ಸುವಿಶೇಷಂಗಳ್" ,"ಟಕ್ ಜಗದೀಶ್" , "ವಾನಂ ಕೊಟ್ಟಾಟುಂ" ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ಐಶ್ವರ್ಯ ತಮ್ಮ ಅಭಿನಯದ ಮೂಲಕ ಛಾಪನ್ನು ಮೂಡಿಸಿ,‌ಇದೀಗ ಉತ್ತರಕಾಂಡಕ್ಕೆ ಎಂಟ್ರಿ ನೀಡಿದ್ದಾರೆ.

ಪ್ರಸ್ತುತ ಚಿತ್ರದ ಪ್ರಥಮ ಶೆಡ್ಯೂಲ್ ಚಿತ್ರೀಕರಣ ವಿಜಯಪುರದಲ್ಲಿ ನಡೆಯುತ್ತಿದ್ದು, ಈ ಆಕ್ಷನ್ ಡ್ರಾಮಾಗೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದಾರೆ.ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಕೆ.ಆರ್.ಜಿ.ಸ್ಟೂಡಿಯೋಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. ಮಲಯಾಳಂ ನಟ ವಿಜಯ್ ಬಾಬು, ರಂಗಾಯಣ ರಘು, ಚೈತ್ರ ಜೆ ಆಚಾರ್, ಉಮಾಶ್ರೀ, ಯೋಗರಾಜ್ ಭಟ್, ದಿಗಂತ್ ಮಂಚಾಲೆ, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಬಹು ದೊಡ್ಡ ತಾರಾಬಳಗವನ್ನು ಚಿತ್ರ ಹೊಂದಿದೆ. ಬಾಲಿವುಡ್ ಗಾಯಕ ಹಾಗೂ ಸಂಗೀತ ಸಂಯೋಜಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ ಹಾಗೂ ವಿಶ್ವಾಸ್‌ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿರುತ್ತಾರೆ.

ಉತ್ತರಕಾಂಡ ಶೂಟಿಂಗ್‌ ಆರಂಭ

ಶಿವಣ್ಣ - ಡಾಲಿ ಧನಂಜಯ್‌ ನಟನೆಯ ಉತ್ತರಕಾಂಡ ಸಿನಿಮಾದ ಶೂಟಿಂಗ್‌ ಈಗಾಗಲೇ ಆರಂಭಗೊಂಡಿದೆ. ಇದೇ ಏಪ್ರಿಲ್‌ 15ರಂದು ಚಿತ್ರೀಕರಣ ಆರಂಭಿಸಲಾಗಿತ್ತು. ಉತ್ತರಕಾಂಡದ 15 ದಿನಗಳ ಪ್ರಥಮ ಶೆಡ್ಯೂಲ್‌ ವಿಜಯಪುರದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಶಿವರಾಜ್‌ ಕುಮಾರ್‌, ಡಾಲಿ ಧನಂಜಯ್‌ ನಟನೆಯ ಉತ್ತರಕಾಂಡ ಸಿನಿಮಾದ ಕುರಿತು ಚಿತ್ರಪ್ರೇಕ್ಷಕರು ಬಹುನಿರೀಕ್ಷೆ ಹೊಂದಿದ್ದಾರೆ.

"ಉತ್ತರಕಾಂಡ" ಸಿನಿಮಾದ ಮುಹೂರ್ತ 2022ರಲ್ಲಿಯೇ ಆಗಿತ್ತು. ‌ ಬಯಲುಸೀಮೆಯ ಸಂಸ್ಕೃತಿಯನ್ನು ಹಿನ್ನೆಲೆಯೊಂದಿಗೆ ಈ ಚಿತ್ರ ಮೂಡಿಬರಲಿದೆ. ಈ ಸಿನಿಮಾ ಉತ್ತರಕರ್ನಾಟಕದ ಆಡುಭಾಷೆಯನ್ನು ಹೊಂದಿರುವುದರಿಂದ ಚಿತ್ರಕ್ಕೆ ನಿಖರವಾದ ಸಂಶೋಧನೆ ಮತ್ತು ಪ್ಲಾನಿಂಗ್‌ಗೆ ಶೂಟಿಂಗ್‌ ತಡವಾಗಿತ್ತು. ಈಗ ಎಲ್ಲಾ ಕೆಲಸಗಳು ಮುಗಿದಿದ್ದು, ಶೂಟಿಂಗ್‌ ಆರಂಭಿಸಲಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಉತ್ತರಕಾಂಡ ಸಿನಿಮಾಕ್ಕೆ ರೋಹಿತ್ ಪದಕಿ ನಿರ್ದೇಶನವಿದೆ. ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ನಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ನಿರ್ಮಿಸುತ್ತಿದ್ದಾರೆ. ಖ್ಯಾತ ಬಾಲಿವುಡ್ ಗಾಯಕ ಹಾಗೂ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಚಿತ್ರಕ್ಕೆ ಮ್ಯೂಸಿಕ್‌ ಡೈರೆಕ್ಟರ್‌ ಆಗಿದ್ದಾರೆ. ಚಿತ್ರಕ್ಕೆ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ (ಡಿಸೈನ್)ಮಾಡಲಿದ್ದಾರೆ. ಇದೀಗ ಚಿತ್ರತಂಡವು ಡಾಲಿಗೆ ನಾಯಕಿಯಾಗಿ ಐಶ್ವರ್ಯಾ ರಾಜೇಶ್‌ ಅವರನ್ನು ಸ್ಯಾಂಡಲ್‌ವುಡ್‌ಗೆ ಕರೆತಂದಿದೆ.

IPL_Entry_Point