Leelavathi Death: ಲೀಲಾವತಿಯವರು ನನ್ನ ತಾಯಿ ಪಾತ್ರ ಮಾಡಬೇಕೆಂಬ ಆಸೆ ಇತ್ತು; ಹಿರಿಯ ನಟ ದ್ವಾರಕೀಶ್‌ ಮನದಾಳ
ಕನ್ನಡ ಸುದ್ದಿ  /  ಮನರಂಜನೆ  /  Leelavathi Death: ಲೀಲಾವತಿಯವರು ನನ್ನ ತಾಯಿ ಪಾತ್ರ ಮಾಡಬೇಕೆಂಬ ಆಸೆ ಇತ್ತು; ಹಿರಿಯ ನಟ ದ್ವಾರಕೀಶ್‌ ಮನದಾಳ

Leelavathi Death: ಲೀಲಾವತಿಯವರು ನನ್ನ ತಾಯಿ ಪಾತ್ರ ಮಾಡಬೇಕೆಂಬ ಆಸೆ ಇತ್ತು; ಹಿರಿಯ ನಟ ದ್ವಾರಕೀಶ್‌ ಮನದಾಳ

Leelavathi Death: ತಾಯಿ ಕಳೆದುಕೊಂಡ ನೋವು ಏನಂದು ನಮಗೆ ಗೊತ್ತು. ದೇವರು ಅವರ ಮಗ ವಿನೋದ್‌ ರಾಜ್‌ಗೆ ದುಃಖ ಭರಿಸುವ ಶಕ್ತಿ ನೀಡಲಿ. ಲೀಲಾವತಿ ಅವರು ನನ್ನ ತಾಯಿ ಪಾತ್ರದಲ್ಲಿ ನಟಿಸಬೇಕೆಂಬ ಆಸೆ ನನಗೆ ಇತ್ತು. ಆದ್ದರಿಂದ ಕುಳ್ಳ ಕುಳ್ಳಿ, ಇಂದಿನ ರಾಮಾಯಣ ಸೇರಿದಂತೆ ಕೆಲವೊಂದು ಚಿತ್ರಗಳಲ್ಲಿ ಅವರಿಗೆ ನಾನು ತಾಯಿ ಪಾತ್ರ ಕೊಟ್ಟಿದ್ದೆ.

ಲೀಲಾವತಿ ಜೊತೆಗಿನ ಒಡನಾಟ ನೆನೆದ ದ್ವಾರಕೀಶ್
ಲೀಲಾವತಿ ಜೊತೆಗಿನ ಒಡನಾಟ ನೆನೆದ ದ್ವಾರಕೀಶ್

Leelavathi Death: ಲೀಲಾವತಿ ಅವರ ನಿಧನಕ್ಕೆ ಸ್ಯಾಂಡಲ್‌ವುಡ್‌ ಗಣ್ಯರು, ರಾಜಕೀಯ ನಾಯಕರು, ಚಿತ್ರಪ್ರೇಮಿಗಳು ಕಂಬನಿ ಮಿಡಿದಿದ್ದಾರೆ. ಸುಮಾರು 5 ದಶಕಗಳ ಕಾಲ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಲೀಲಾವತಿಯವರು ಶುಕ್ರವಾರ ಕಣ್ಮುಚ್ಚಿದ್ದಾರೆ. ಸಿಎಂ ಕೂಡಾ ಲೀಲಾವತಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಲೀಲಾವತಿ ಅವರನ್ನು ನೆನೆದ ದ್ವಾರಕೀಶ್

ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಲೀಲಾವತಿ ಅವರ ಒಡನಾಟನ್ನು ಸ್ಮರಿಸಿದ್ದಾರೆ. ಕರ್ನಾಟಕದ ಕುಳ್ಳ ಎಂದೇ ಹೆಸರಾದ ದ್ವಾರಕೀಶ್‌ ಅವರು ಲೀಲಾವತಿ ಅವರ ಬಗ್ಗೆ ನ್ಯೂಸ್‌ 18 ಕನ್ನಡ ವಾಹಿನಿಯೊಂದಿಗೆ ಮಾತನಾಡಿದ್ದಾರೆ. ಲೀಲಾವತಿಯವರು ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ನಟಿ. ಲೀಲಾವತಿ ಹಾಗೂ ರಾಜ್‌ಕುಮಾರ ಜೊತೆಯಾಗಿ ನಟಿಸಿದ ಸಿನಿಮಾಗಳು ಅತ್ಯಂತ ಯಶಸ್ವಿಯಾಗಿದೆ. ನಾಯಕಿಯಾಗಿ ಮಾತ್ರವಲ್ಲದೆ, ಲೀಲಾವತಿಯವರು ಪೋಷಕ ನಟಿಯಾಗಿ ಕೂಡಾ ಬಹಳ ಜನಪ್ರಿಯರಾಗಿದ್ದರು. ತಾಯಿ ಪಾತ್ರ ಅವರಿಗೆ ಹೇಳಿ ಮಾಡಿಸಿದಂತೆ ಇತ್ತು. ‌

ನಮಗಾಗಿ ಊಟ, ತಿಂಡಿ ತರುತ್ತಿದ್ದರು

ಲೀಲಾವತಿ ಅವರಿಗೂ ನಮಗೂ ಬಹಳ ಒಡನಾಟವಿದೆ. ಚೆನ್ನೈನಲ್ಲಿ ಇಬ್ಬರ ಮನೆಯೂ ಸಮೀಪದಲ್ಲೇ ಇತ್ತು. ಅವರ ಮಗನೊಂದಿಗೆ ನಾನು 2 ಸಿನಿಮಾಗಳನ್ನು ಮಾಡಿದ್ದೇನೆ. ಡ್ಯಾನ್ಸ್‌ ರಾಜಾ ಡ್ಯಾನ್ಸ್‌ ಹಾಗೂ ಕೃಷ್ಣ ನೀ ಕುಣಿದಾಗ ಎಂಬ 2 ಸಿನಿಮಾಗಳನ್ನು ವಿನೋದ್‌ ರಾಜ್‌ಗಾಗಿ ಮಾಡಿದ್ದೆ. ಲೀಲಾವತಿಯವರು ನಟನೆಗೆ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅವರ ಡೈಲಾಗ್‌ ಡೆಲಿವರಿ ಬಹಳ ಚೆನ್ನಾಗಿತ್ತು. ಪುಟ್ಟಣ್ಣ ಕಣಗಾಲ್‌ ಅವರ ಹೆಚ್ಚಿನ ಚಿತ್ರಗಳಲ್ಲಿ ಲೀಲಾವತಿ ಅವರನ್ನು ನೋಡಬಹುದು. ಅವರು ಅಷ್ಟು ಯಶಸ್ವಿ ನಟಿಯಾಗಿದ್ದರು. ಅವರು ಎಲ್ಲರೊಂದಿಗೂ ಬಹಳ ಆತ್ಮೀಯರಾಗಿದ್ದರು. ಚಿತ್ರೀಕರಣದ ಸಮಯದಲ್ಲಿ ಎಲ್ಲರಿಗಾಗಿ ಊಟ, ತಿಂಡಿ ತರುತ್ತಿದ್ದರು.

ಲೀಲಾವತಿ ನನ್ನ ತಾಯಿ ಪಾತ್ರದಲ್ಲಿ ನಟಿಸಿದ್ದರು

ಲೀಲಾವತಿ ಅವರ ಒಂದು ತೋಟ ಚೆನ್ನೈನಲ್ಲಿತ್ತು. ಅದನ್ನು ಅವರು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಲೀಲಾವತಿ ಅವರಿಗೆ ತೋಟ, ನಾಯಿ, ಬೆಕ್ಕು ಎಂದರೆ ಬಹಳ ಪ್ರೀತಿ. ಲೀಲಾವತಿ ಇನ್ನೂ ಇರಬೇಕಿತ್ತು, ಆದರೆ ಅನಾರೋಗ್ಯದಿಂದ ಅವರನ್ನು ಕಳೆದುಕೊಂಡಿದ್ದೇವೆ. ತಾಯಿ ಕಳೆದುಕೊಂಡ ನೋವು ಏನಂದು ನಮಗೆ ಗೊತ್ತು. ದೇವರು ಅವರ ಮಗ ವಿನೋದ್‌ ರಾಜ್‌ಗೆ ದುಃಖ ಭರಿಸುವ ಶಕ್ತಿ ನೀಡಲಿ. ಲೀಲಾವತಿ ಅವರು ನನ್ನ ತಾಯಿ ಪಾತ್ರದಲ್ಲಿ ನಟಿಸಬೇಕೆಂಬ ಆಸೆ ನನಗೆ ಇತ್ತು. ಆದ್ದರಿಂದ ಕುಳ್ಳ ಕುಳ್ಳಿ, ಇಂದಿನ ರಾಮಾಯಣ ಸೇರಿದಂತೆ ಕೆಲವೊಂದು ಚಿತ್ರಗಳಲ್ಲಿ ಅವರಿಗೆ ನಾನು ತಾಯಿ ಪಾತ್ರ ಕೊಟ್ಟಿದ್ದೆ, ಅದೆಲ್ಲವನ್ನೂ ಅವರು ಬಹಳ ಯಶಸ್ವಿಯಾಗಿ ನಿಭಾಯಿಸಿದ್ದರು ಎಂದು ಹಿರಿಯ ನಟ ದ್ವಾರಕೀಶ್‌, ಲೀಲಾವತಿ ಅವರನ್ನು ನೆನೆದಿದ್ದಾರೆ.

Whats_app_banner