ಚಾಂಪಿಯನ್ಸ್ ಟ್ರೋಫಿ ಗೊಂದಲದ ನಡುವೆ ಪಾಕಿಸ್ತಾನ ತಂಡಕ್ಕೆ ಭಾರೀ ಆಘಾತ; ಸೌತ್ ಆಫ್ರಿಕಾ ಸರಣಿಗೂ ಮುನ್ನ ಹೆಡ್​ಕೋಚ್ ರಾಜೀನಾಮೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಚಾಂಪಿಯನ್ಸ್ ಟ್ರೋಫಿ ಗೊಂದಲದ ನಡುವೆ ಪಾಕಿಸ್ತಾನ ತಂಡಕ್ಕೆ ಭಾರೀ ಆಘಾತ; ಸೌತ್ ಆಫ್ರಿಕಾ ಸರಣಿಗೂ ಮುನ್ನ ಹೆಡ್​ಕೋಚ್ ರಾಜೀನಾಮೆ

ಚಾಂಪಿಯನ್ಸ್ ಟ್ರೋಫಿ ಗೊಂದಲದ ನಡುವೆ ಪಾಕಿಸ್ತಾನ ತಂಡಕ್ಕೆ ಭಾರೀ ಆಘಾತ; ಸೌತ್ ಆಫ್ರಿಕಾ ಸರಣಿಗೂ ಮುನ್ನ ಹೆಡ್​ಕೋಚ್ ರಾಜೀನಾಮೆ

Jason Gillespie: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗುವ ಮುನ್ನ ಪಾಕಿಸ್ತಾನ ತಂಡಕ್ಕೆ ಮುಖ್ಯ ಕೋಚ್ ಜೇಸನ್ ಗಿಲೆಸ್ಪಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹಂಗಾಮಿ ಕೋಚ್​ ಆಗಿ ಅಕೀಬ್ ಜಾವೆದ್ ನೇಮಕಗೊಂಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಗೊಂದಲದ ನಡುವೆ ಪಾಕಿಸ್ತಾನ ತಂಡಕ್ಕೆ ಭಾರೀ ಆಘಾತ; ಸೌತ್ ಆಫ್ರಿಕಾ ಸರಣಿಗೂ ಮುನ್ನ ಹೆಡ್​ಕೋಚ್ ಜೇಸನ್ ಗಿಲೆಸ್ಪಿ ರಾಜೀನಾಮೆ
ಚಾಂಪಿಯನ್ಸ್ ಟ್ರೋಫಿ ಗೊಂದಲದ ನಡುವೆ ಪಾಕಿಸ್ತಾನ ತಂಡಕ್ಕೆ ಭಾರೀ ಆಘಾತ; ಸೌತ್ ಆಫ್ರಿಕಾ ಸರಣಿಗೂ ಮುನ್ನ ಹೆಡ್​ಕೋಚ್ ಜೇಸನ್ ಗಿಲೆಸ್ಪಿ ರಾಜೀನಾಮೆ (REUTERS)

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಗೊಂದಲದ ನಡುವೆಯೇ ಪಾಕಿಸ್ತಾನ ಕ್ರಿಕೆಟ್​​​ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು, ದೊಡ್ಡ ಆಘಾತ ಎದುರಾಗಿದೆ. ಸೌತ್​ ಆಫ್ರಿಕಾ ವಿರುದ್ಧದ ಸರಣಿಗೂ ಮುನ್ನ ಟೆಸ್ಟ್​ ತಂಡದ ಹೆಡ್​ಕೋಚ್ ರಾಜೀನಾಮೆ ಕೊಟ್ಟಿದ್ದಾರೆ. ಹೌದು, ಟೆಸ್ಟ್ ತಂಡದ ಮುಖ್ಯ ಕೋಚ್ ಜೇಸನ್ ಗಿಲೆಸ್ಪಿ ರಾಜೀನಾಮೆ ಸಲ್ಲಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗಾಗಿ ಪಾಕ್​ ತಂಡದೊಂದಿಗೆ ಪ್ರಯಾಣ ಬೆಳೆಸಿಲ್ಲ. ಅವರು ದುಬೈನಿಂದ ದಕ್ಷಿಣ ಆಫ್ರಿಕಾಕ್ಕೆ ಹೋಗಬೇಕಿತ್ತು ಎಂದು ವರದಿಯಾಗಿದೆ. ಅಕೀಬ್ ಜಾವೆದ್ ಹಂಗಾಮಿ ಕೋಚ್​ ಆಗಿ ನೇಮಕಗೊಂಡಿದ್ದಾರೆ.

ಕ್ರಿಕ್​ಬಜ್ ಈ ಬಗ್ಗೆ ವರದಿ ಮಾಡಿದ್ದು, ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವುದರ ಬದಲಿಗೆ ಜೇಸನ್ ಗಿಲೆಸ್ಪಿ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಕಳೆದೊಂದು ವರ್ಷದಿಂದ ಕೋಚಿಂಗ್ ಸಿಬ್ಬಂದಿ, ಸೆಲೆಕ್ಷನ್ ಕಮಿಟಿ, ತಂಡದ ನಾಯಕತ್ವ ಸೇರಿದಂತೆ ಮಹತ್ವದ ಬದಲಾವಣೆಗಳನ್ನು ಮಾಡಿರುವ ಪಿಸಿಬಿ ತನ್ನ ಆಘಾತಕಾರಿ ನಿರ್ಧಾರಗಳಿಂದ ವಿವಾದಗಳಿಗೆ ಕಾರಣವಾಗಿದೆ. ಇತ್ತೀಚೆಗೆ ವೈಟ್​ಬಾಲ್ ತಂಡದ ಹೆಡ್​ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಅವರನ್ನು ವಜಾಗೊಳಿಸಿದ್ದ ಪಿಸಿಬಿ, ಇದೀಗ ಜೇಸನ್ ಗಿಲೆಸ್ಪಿ ಅವರ ಸೇವೆಯನ್ನೂ ಕಳೆದುಕೊಂಡಿದೆ.

ಟಿ20, ಏಕದಿನ ಬಳಿಕ ಟೆಸ್ಟ್ ಸರಣಿ

ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಸದ್ಯಕ್ಕೆ ಉಭಯ ದೇಶಗಳ ನಡುವೆ ಟಿ20 ಸರಣಿ ನಡೆಯುತ್ತಿದೆ. ಇದರ ನಂತರ ಏಕದಿನ ಸರಣಿಯಲ್ಲಿ ಸೆಣಸಾಟ ನಡೆಸಲಿವೆ. ನಂತರ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಯ ಸಿದ್ಧತೆಗಾಗಿ, ಪಾಕಿಸ್ತಾನ ತಂಡವು ಗುರುವಾರ (ಡಿ 12) ದುಬೈ ಮೂಲಕ ದಕ್ಷಿಣ ಆಫ್ರಿಕಾಕ್ಕೆ ತೆರಳಬೇಕಿತ್ತು. ಅವರೊಂದಿಗೆ ಜೇಸನ್ ಗಿಲೆಸ್ಪಿ ಕೂಡ ಇರಬೇಕಿತ್ತು. ಆದರೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ದಕ್ಷಿಣ ಆಫ್ರಿಕಾಕ್ಕೆ ಹೋಗಲು ನಿರಾಕರಿಸಿದ್ದಾರೆ. ಏಕೆಂದರೆ ಅವರು ಮಂಡಳಿಯ ನಿರ್ಧಾರದಿಂದ ಅಸಮಾಧಾನಕ್ಕೆ ಒಳಗಾಗಿದ್ದಾರೆ.

ಪಿಸಿಬಿ ನಡೆಗೆ ರಾಜೀನಾಮೆ

ಗಿಲೆಸ್ಪಿ ಅವರನ್ನು ಈ ವರ್ಷ 2 ವರ್ಷಗಳ ಕಾಲ ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ಪಿಸಿಬಿ ನೇಮಿಸಿತ್ತು. ಅವರ ಕೋಚಿಂಗ್ ಅಡಿಯಲ್ಲಿ ಪಾಕ್ ತಂಡವು 2 ಸರಣಿಗಳನ್ನು ಆಡಿದೆ. ಅದರಲ್ಲಿ ಒಂದು ತಂಡವು ಬಾಂಗ್ಲಾದೇಶದಿಂದ ಕ್ಲೀನ್ ಸ್ವೀಪ್ ಸಾಧಿಸಿತು. ಆದರೆ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಪಾಕಿಸ್ತಾನವು 2-1 ರಿಂದ ಸೋಲು ಕಂಡಿತ್ತು. ಆದಾಗ್ಯೂ, ಗಿಲೆಸ್ಪಿ ಕೆಲವು ದಿನಗಳಿಂದ ಪಿಸಿಬಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಏಕೆಂದರೆ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ತವರು ಸರಣಿಗೆ ಕೆಲವು ನಿರ್ಧಾರಗಳಿಗೆ ಸಂಬಂಧಿಸಿ ತನ್ನ ಮನವಿಯನ್ನು ಪರಿಗಣಿಸಿರಲಿಲ್ಲ. ಸಹಾಯಕ ಕೋಚ್ ಟಿಮ್ ನೀಲ್ಸನ್ ಅವರ ಒಪ್ಪಂದ ನವೀಕರಿಸದೆ ಪಿಸಿಬಿಗೆ ಸೂಚಿಸಿದ್ದರೂ ಹೊಸ ವಿಷಯವನ್ನು ಕೈಗೆತ್ತಿಕೊಂಡಿದೆ. ಇದು ಪಿಸಿಬಿ ಅಸಮಾಧಾನಕ್ಕೆ ಕಾರಣವಾಗಿದೆ.

6 ತಿಂಗಳಲ್ಲೇ ರಾಜೀನಾಮೆ ಕೊಟ್ಟ ಗ್ಯಾರಿ ಕರ್ಸ್ಟನ್

ಪಿಸಿಬಿ ಕೆಲವೊಂದು ಆಂತರಿಕ ವಿಚಾರಗಳಿಗೆ ಸಂಬಂಧಿಸಿ ಅಸಮಾಧಾನ ಹೊಂದಿದ್ದ ಹಿನ್ನೆಲೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಗ್ಯಾರಿ ಕರ್ಸ್ಟನ್ ತಾನು ಅಧಿಕಾರಕ್ಕೇರಿದ 6 ತಿಂಗಳಲ್ಲಿ ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ್ದರು. ಕೋಚ್ ಆಗಿ ತಂಡವನ್ನು ಸೆಲೆಕ್ಟ್ ಮಾಡುವ ಆಯ್ಕೆ ಮಾಡುವ ಹಕ್ಕನ್ನು ಪಿಸಿಬಿ ಕಿತ್ತುಕೊಂಡಿತ್ತು. ಇದು ಬೇಸರಕ್ಕೆ ಕಾರಣವಾಗಿತ್ತು. ಪಿಸಿಬಿ ಮತ್ತು ಕೋಚ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದ ಕಾರಣ ತನ್ನ ಹುದ್ದೆಯನ್ನು ತೊರೆದಿದ್ದರು. ಇದೀಗ ಗಿಲೆಸ್ಪಿಯೂ ಪದತ್ಯಾಗ ಮಾಡಿದ್ದಾರೆ.

Whats_app_banner