ವಿನೇಶ್ ಫೋಗಟ್‌ಗೆ ಪದಕ ತಪ್ಪಿದ ಚಿಂತೆ; ಬನ್ನಿ ಒಟಿಟಿಯಲ್ಲಿ ಕುಸ್ತಿಗೆ ಸಂಬಂಧಪಟ್ಟ ಸಿನಿಮಾ ನೋಡೋಣವಂತೆ- ಪೈಲ್ವಾನ್‌ನಿಂದ ಮಯೂರನವರೆಗೆ-sandalwood news vinesh phogat disqualified in olympics watch wrestler theme movies in ott pailwan garadi etc ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ವಿನೇಶ್ ಫೋಗಟ್‌ಗೆ ಪದಕ ತಪ್ಪಿದ ಚಿಂತೆ; ಬನ್ನಿ ಒಟಿಟಿಯಲ್ಲಿ ಕುಸ್ತಿಗೆ ಸಂಬಂಧಪಟ್ಟ ಸಿನಿಮಾ ನೋಡೋಣವಂತೆ- ಪೈಲ್ವಾನ್‌ನಿಂದ ಮಯೂರನವರೆಗೆ

ವಿನೇಶ್ ಫೋಗಟ್‌ಗೆ ಪದಕ ತಪ್ಪಿದ ಚಿಂತೆ; ಬನ್ನಿ ಒಟಿಟಿಯಲ್ಲಿ ಕುಸ್ತಿಗೆ ಸಂಬಂಧಪಟ್ಟ ಸಿನಿಮಾ ನೋಡೋಣವಂತೆ- ಪೈಲ್ವಾನ್‌ನಿಂದ ಮಯೂರನವರೆಗೆ

Wrestler Movies in OTT: ಪ್ಯಾರಿಸ್‌ ಒಲಿಂಪಿಕ್ಸ್‌ 2024ರ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್‌ ತಲುಪಿದ ವಿನೇಶಾ ಫೋಗಟ್‌ ಅವರ ಅನರ್ಹತೆಯ ಸುದ್ದಿ ಕೇಳಿ ಎಲ್ಲರಿಗೂ ಬೇಸರವಾಗಿದೆ. ಸಿನಿಪ್ರಿಯರು ಈ ಸಂದರ್ಭದಲ್ಲಿ ದಂಗಲ್‌, ಗಟ್ಟ ಕುಸ್ತಿ, ಸುಲ್ತಾನ್‌, ಗೋಧಾ, ಲೈಗರ್‌, ಪೈಲ್ವಾನ್‌, ಕುಸ್ತಿ, ಖಿಲಾಡಿಯೋನ್‌, ಗರಡಿ ಸೇರಿದಂತೆ ಹಲವು ಸಿನಿಮಾಗಳನ್ನು ನೆನಪಿಸಿಕೊಳ್ಳಬಹುದು.

ವಿನೇಶ್ ಫೋಗಟ್‌ಗೆ ಪದಕ ತಪ್ಪಿದ ಚಿಂತೆ; ಬನ್ನಿ ಒಟಿಟಿಯಲ್ಲಿ ಕುಸ್ತಿಗೆ ಸಂಬಂಧಪಟ್ಟ ಸಿನಿಮಾ ನೋಡೋಣವಂತೆ- ಪೈಲ್ವಾನ್‌ನಿಂದ ಮಯೂರನವರೆಗೆ
ವಿನೇಶ್ ಫೋಗಟ್‌ಗೆ ಪದಕ ತಪ್ಪಿದ ಚಿಂತೆ; ಬನ್ನಿ ಒಟಿಟಿಯಲ್ಲಿ ಕುಸ್ತಿಗೆ ಸಂಬಂಧಪಟ್ಟ ಸಿನಿಮಾ ನೋಡೋಣವಂತೆ- ಪೈಲ್ವಾನ್‌ನಿಂದ ಮಯೂರನವರೆಗೆ

Watch Wrestler Movies: ಪ್ಯಾರಿಸ್‌ ಒಲಿಂಪಿಕ್ಸ್‌ 2024ರ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್‌ ತಲುಪಿದ ವಿನೇಶಾ ಫೋಗಟ್‌ ಅವರ ಅನರ್ಹತೆಯ ಸುದ್ದಿ ಭಾರತೀಯರಿಗೆ ಆಘಾತ ತಂದಿದೆ. ದೇಹದಲ್ಲಿ 100 ಗ್ರಾಮ್‌ ತೂಕ ಹೆಚ್ಚಿದ ಕಾರಣಕ್ಕೆ ಪ್ರತಿಭಾನ್ವಿತ ಆಟಗಾರ್ತಿಯನ್ನು ಪಂದ್ಯದಿಂದ ಅನರ್ಹತೆಗೊಳಿಸಿದ್ದು ಕ್ರೀಡಾ ಪ್ರೇಮಿಗಳಿಗೆ ಕಣ್ಣೀರು ತರಿಸಿದೆ. ಒಲಿಂಪಿಕ್ಸ್‌ ಆಟ ನೋಡುತ್ತ ಸಾಕಷ್ಟು ಜನರಿಗೆ ಕುಸ್ತಿಯ ಕುರಿತು ವಿಶೇಷ ಅಭಿಮಾನ ಪ್ರೀತಿ ಮೂಡಿರಬಹುದು. ಈ ಸಮಯದಲ್ಲಿ ಸಿನಿಮಾ ಪ್ರಿಯರು ಒಟಿಟಿಗಳಲ್ಲಿ ಕುಸ್ತಿ ಸಿನಿಮಾಗಳನ್ನು ನೋಡಲು ಇಚ್ಚಿಸಬಹುದು. ದಂಗಲ್‌, ಗಟ್ಟ ಕುಸ್ತಿ, ಸುಲ್ತಾನ್‌, ಗೋಧಾ, ಲೈಗರ್‌, ಪೈಲ್ವಾನ್‌, ಕುಸ್ತಿ, ಖಿಲಾಡಿಯೋನ್‌, ಗರಡಿ ಸೇರಿದಂತೆ ಹಲವು ಸಿನಿಮಾಗಳು ಕುಸ್ತಿ ಪ್ರಿಯರಿಗೆ ಇಷ್ಟವಾಗಬಹುದು.

ಕುಸ್ತಿಗೆ ಸಂಬಂಧಪಟ್ಟ ಕನ್ನಡ ಸಿನಿಮಾಗಳು

ಪೈಲ್ವಾನ್‌

ಪೈಲ್ವಾನ್‌ ಅಂದಾಗ ಕಿಚ್ಚ ಸುದೀಪ್‌ ನೆನಪಿಗೆ ಬರುತ್ತಾರೆ. ಸುದೀಪ್‌, ಸುನೀಲ್‌ ಶೆಟ್ಟಿ, ಆಕಾಶಾ ಸಿಂಗ್‌ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಕುಸ್ತಿಯೇ ಪ್ರಮುಖ ವಿಷಯ. ಈ ಸಿನಿಮಾಕ್ಕಾಗಿ ಸುದೀಪ್‌ ತನ್ನ ದೇಹವನ್ನು ಸಾಕಷ್ಟು ಪಳಗಿಸಿಕೊಂಡಿದ್ದರು. ಕಠಿಣ ಡಯೆಟ್‌, ವರ್ಕೌಟ್‌ ಮೂಲಕ ತನ್ನ ಮೈಮಾಟ ಬದಲಾಯಿಸಿಕೊಂಡಿದ್ದರು. ಟೋನಿ ಎಂಬ ಪ್ರಖ್ಯಾತ ಬಾಕ್ಸರ್‌ನ ಮೋಸದ ವಿರುದ್ಧ ಸುದೀಪ್‌ ಹೋರಾಟ ಇದಾಗಿದೆ. ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಬಹುದು. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಈ ಸಿನಿಮಾ ಇದೆ. ಕನ್ನಡ ಮಾತ್ರವಲ್ಲದೆ ವಿವಿಧ ಭಾಷೆಗಳಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ.

ಗರಡಿ

ಯೋಗರಾಜ್‌ ಭಟ್‌ ನಿರ್ದೇಶನದ ಗರಡಿ ಸಿನಿಮಾವು ಕುಸ್ತಿಯ ಸೊಗಡಿನ ಸಿನಿಮಾ. ಈ ಸಿನಿಮಾದಲ್ಲಿ "ಮೈಯಲ್ಲಿ ಶಕ್ತಿ ಇದೆ ಎಂದು ಕ್ರಿಮಿನಲ್‌ ಕೆಲಸ ಮಾಡಬಾರದು ಪೈಲ್ವಾನ್‌ಗಳು. ಗರಡಿ ಮನೆ ಮರ್ಯಾದೆ ತೆಗಿಬಾರದು" ಎಂಬ ಸಂದೇಶವೂ ಇದೆ. ನಟ ಸೂರ್ಯ ಅವರು ಗರಡಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಪ್ರವೇಶ ಮಾಡಿದ್ದರು. ನಟ ದರ್ಶನ್‌ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಕಳೆದ ವರ್ಷ ನವೆಂಬರ್‌ 10ರಂದು ಈ ಸಿನಿಮಾ ರಿಲೀಸ್‌ ಆಗಿತ್ತು. ಸ್ಯಾಂಡಲ್‌ವುಡ್‌ನ ಬಾಕ್ಸ್‌ ಆಫೀಸ್‌ನಲ್ಲಿ ತಕ್ಕಮಟ್ಟಿಗೆ ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಗರಡಿ ಸಿನಿಮಾವು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿದೆ. ನೋಡದೆ ಇರುವವರು ನೋಡಬಹುದು.

ಕುಸ್ತಿ

ದುನಿಯಾ ವಿಜಯ್‌ ನಟನೆಯ ಕುಸ್ತಿ ಸಿನಿಮಾವನ್ನೂ ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದು. ರಘು ಶಿವಮೊಗ್ಗ ನಿರ್ದೇಶನದ, ದುನಿಯಾ ವಿಜಯ್‌ ನಿರ್ಮಾಣದ ಈ ಸಿನಿಮಾದಲ್ಲಿ ದುನಿಯಾ ವಿಜಯ್‌ ಮಗ ಸಮರ್ಥ್‌ ವಿಜಯ್‌ ಯುವ ಕುಸ್ತಿಪಟುವಾಗಿ ನಟಿಸಿದ್ದ.

ಹುಲಿಯ ಹಾಲಿನ ಮೇವು

ಉದಾಹರಣೆಗೆ ಡಾ. ರಾಜ್‌ಕುಮಾ ಅವರು ಹುಲಿಯ ಹಾಲಿನ ಮೇವು ಸಿನಿಮಾದಲ್ಲಿ ಕುಸ್ತಿಯಾಡಿದ್ದರು. ಈ ಸಿನಿಮಾದಲ್ಲಿ ಪೈಲ್ವಾನ್‌ ಗಡ್ಡಪ್ಪ ಎಂಬ ರಿಯಲ್‌ ಕುಸ್ತಿಪಟು ಜತೆ ಡಾ. ರಾಜ್‌ಕುಮಾರ್‌ ಕುಸ್ತಿಯಾಡಿದ್ದರು. ಅಣ್ಣಾವ್ರು ಇನ್ನೂ ಅನೇಕ ಸಿನಿಮಾಗಳಲ್ಲಿ ಜಗಜಟ್ಟಿಯಂತೆ ಕುಸ್ತಿಯಾಡಿದ ದೃಶ್ಯಗಳು ಈಗ ನಿಮ್ಮ ನೆನಪಿಗೆ ಬಂದಿರಬಹುದು.

ಮಯೂರ

ಟೈಗರ್‌ ಪ್ರಭಾಕರ್‌ ಮತ್ತು ಡಾ. ರಾಜ್‌ಕುಮಾರ್‌ ಕುಸ್ತಿಯಾಡಿದ ಸಿನಿಮಾದ ದೃಶ್ಯ ನಿಮಗೆ ನೆನಪಿದೆಯೇ? ಮಯೂರ ಸಿನಿಮಾದಲ್ಲಿ ಇಂತಹ ಕುಸ್ತಿ ಇತ್ತು. ಈ ಸಿನಿಮಾದಲ್ಲಿ ಜಗಜಟ್ಟಿ ಕುಸ್ತಿಪಟ್ಟುವಿಗೆ ಬ್ರಾಹ್ಮಣ ಪೂಜಾರಿ ಮಯೂರ ಶರ್ಮಾ ಸವಾಲು ಹಾಕುತ್ತಾನೆ. ಬಳಿಕ ಜಗಜಟ್ಟಿಯನ್ನು ಸೋಲಿಸುತ್ತಾನೆ. ಆ ಸೀನ್‌ ನೆನಪಿಸಿಕೊಳ್ಳಲು ಬಯಸಿದರೆ ಇಲ್ಲಿ ಕೆಳಗೆ ವಿಡಿಯೋ ನೀಡಲಾಗಿದೆ. ನೋಡಿ ಆನಂದಿಸಿ.

ಕನ್ನಡದ ಬಹುತೇಕ ಸಿನಿಮಾಗಳಲ್ಲಿ ಕುಸ್ತಿಯ ಸೊಗಡು ಇದೆ. ಡಾ. ರಾಜ್‌ಕುಮಾರ್‌, ವಿಷ್ಣುವರ್ಧನ್‌ ಸೇರಿದಂತೆ ಹಲವು ನಟರು ಸಿನಿಮಾದಲ್ಲಿ ಕುಸ್ತಿ ದೃಶ್ಯಗಳಲ್ಲಿ ನಟಿಸಿದ್ದಾರೆ. ಒಲಿಂಪಿಕ್ಸ್‌ನ ಕುಸ್ತಿ ಪ್ರಿಯರು . ದಂಗಲ್‌, ಗಟ್ಟ ಕುಸ್ತಿ, ಸುಲ್ತಾನ್‌, ಗೋಧಾ, ಲೈಗರ್‌, ಪೈಲ್ವಾನ್‌, ಕುಸ್ತಿ, ಖಿಲಾಡಿಯೋನ್‌, ಗರಡಿ ಮುಂತಾದ ಸಿನಿಮಾವನ್ನು ನೋಡಬಹುದು. ಇವುಗಳಲ್ಲಿ ಸಾಕಷ್ಟು ಸಿನಿಮಾಗಳು ಒಟಿಟಿಗಳಲ್ಲಿ, ಯೂಟ್ಯೂಬ್‌ಗಳಲ್ಲಿ ಲಭ್ಯ ಇವೆ. ನೋಡಿ ಆನಂದಿಸಿ.